For Quick Alerts
ALLOW NOTIFICATIONS  
For Daily Alerts

ಮೊಡವೆ ಕಲೆಗಳನ್ನು ಹೋಗಲಾಡಿಸಲು ಈ ಮನೆಮದ್ದುಗಳು ಸಾಕು

By Jaya Subramanya
|

ಮುಖವು ಸ್ವಚ್ಛವಾಗಿ ಕಲೆ ಮೊಡವೆರಹಿತವಾಗಿದ್ದರೆ ಎಷ್ಟು ಹಾಯ್ ಅನಿಸುತ್ತದೆ ಅಲ್ಲವೇ? ಇಂದು ಮಾರುಕಟ್ಟೆಯಲ್ಲಿ ಬರುತ್ತಿರುವ ಹೆಚ್ಚಿನ ಸೌಂದರ್ಯ ಉತ್ಪನ್ನಗಳು ಮುಖದ ಮೇಲೆ ಹಾನಿಯನ್ನುಂಟು ಮಾಡುತ್ತವೆ. ನಮಗೆ ಇರುವ ಕಡಿಮೆ ಸಮಯದಿಂದ ನಾವು ಮನೆಮದ್ದುಗಳನ್ನು ಮಾಡುಲು ಹೋಗುವುದಿಲ್ಲ. ಫೇಸ್‌ ಪ್ಯಾಕ್, ಕ್ಲೆನ್ಸರ್‌ಗಳನ್ನು ಮನೆಯಲ್ಲೇ ಸಿದ್ಧಪಡಿಸಿ ಅದನ್ನು ನಾವು ಹಚ್ಚಿಕೊಳ್ಳುವುದರಿಂದ ತ್ವಚೆಯ ಎಷ್ಟೋ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.

ಹೆಚ್ಚಿನ ಜಿಡ್ಡಿನಂಶವು ರಂಧ್ರಗಳಲ್ಲಿ ಬೆರೆತಾಗ ಮೊಡವೆಗಳು ಉಂಟಾಗುತ್ತವೆ ಮತ್ತು ಈ ಮೊಡವೆಗಳನ್ನು ಚಿವುಟದರಿಂದ ಅವುಗಳು ಕಲೆಗಳಾಗಿ ಮಾರ್ಪಡುತ್ತವೆ. ಮೃತ ಕೋಶಗಳು, ವಾತಾವರಣದ ಕಲುಷಿತ ಗಾಳಿಯಿಂದಾಗಿ ಕೂಡ ಮೊಡವೆ ಏಳುತ್ತದೆ. ಇದಕ್ಕಾಗಿ ವಿಪರೀತ ಖರ್ಚು ಮಾಡಿ ಇತರ ವಸ್ತುಗಳನ್ನು ಬಳಸುವುದಕ್ಕಿಂತ ಮನೆಯಲ್ಲೇ ಮೊಡವೆಯನ್ನು ಹೋಗಲಾಡಿಸುವ ಉತ್ಪನ್ನಗಳನ್ನು ಸಿದ್ಧಪಡಿಸಿ.

Pimple

ಹಾಗಿದ್ದರೆ ಮೊಡವೆಯನ್ನು ದೂರಮಾಡುವುದಕ್ಕೆ ದೊರೆಯುವ ಮನೆಯಲ್ಲೇ ಸಿದ್ಧಪಡಿಸುವ ಉತ್ಪನ್ನಗಳಾವುವು ಎಂಬುದು ನಿಮ್ಮ ಸಂದೇಹವಾಗಿದ್ದರೆ ಇಂದಿನ ಲೇಖನದಲ್ಲಿ ನಾವು ಅದನ್ನು ತಿಳಿಸಿಕೊಡುತ್ತಿದ್ದೇವೆ. ಹಿಂದಿನಿಂದಲೂ ಮೊಡವೆ ನಿವಾರಣೆಗಾಗಿ ಈ ಮನೆಔಷಧಗಳನ್ನು ಬಳಸುತ್ತಿದ್ದು ಇಂದಿಗೂ ಇವುಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ.

ಆಪಲ್ ಸೀಡರ್ ವಿನೇಗರ್
ಪಿಂಪಲ್ ಕಲೆಗಳನ್ನು ಹೋಗಲಾಡಿಸಲು ಆಪಲ್ ಸೀಡರ್ ವಿನೇಗರ್ ಉತ್ತಮವಾಗಿದೆ. ಇದು ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ ಮತ್ತು ರಂಧ್ರಗಳನ್ನು ಸ್ವಚ್ಛಗೊಳಿಸುತ್ತದೆ.
ಬಳಸುವ ವಿಧಾನ
2 ಹನಿಗಳಷ್ಟು ಆಪಲ್ ಸೀಡರ್ ವಿನೇಗರ್ ಅನ್ನು 1 ಚಮಚ ಡಿಸ್ಟಿಲ್‌ಡ್ ನೀರಿಗೆ ಬೆರೆಸಿಕೊಳ್ಳಿ. ಈ ದ್ರಾವಣದಲ್ಲಿ ಹತ್ತಿಯನ್ನು ಅದ್ದಿಕೊಂಡು ಮೊಡವೆ ಕಲೆ ಇರುವ ಜಾಗದಲ್ಲಿ ಹಚ್ಚಿ. ವಾರದಲ್ಲಿ 3-4 ಬಾರಿ ಈ ಕ್ರಿಯೆಯನ್ನು ಅನುಸರಿಸಿ.

ಐಸ್ ಕ್ಯೂಬ್ಸ್
ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ನಿವಾರಿಸಲು ಐಸ್ ಕ್ಯೂಬ್ಸ್ ಸಹಕಾರಿಯಾಗಿದೆ.
ಬಳಸುವ ವಿಧಾನ
ಸ್ವಚ್ಛವಾದ ಬಟ್ಟೆಯಲ್ಲಿ ಐಸ್ ಕ್ಯೂಬ್‌ಗಳನ್ನು ಇರಿಸಿಕೊಂಡು ಹಾನಿಯಾಗಿರುವ ಸ್ಥಳದಲ್ಲಿ ಇಡಿ. ನಿಮ್ಮ ಮುಖವನ್ನು ತೊಳೆಯುವ ಮುನ್ನ ಒತ್ತಿಹಿಡಿದುಕೊಳ್ಳಿ. ಆಗಾಗ್ಗೆ ಈ ಕ್ರಿಯೆಯನ್ನು ಪುನರಾವರ್ತಿಸಿ.

ಬೇಕಿಂಗ್ ಸೋಡಾ
ಬೇಕಿಂಗ್ ಸೋಡಾದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಅಂಶವು ಪಿಂಪಲ್ ಕಲೆಗಳನ್ನು ನಿವಾರಿಸುತ್ತದೆ.
ಬಳಸುವ ವಿಧಾನ
1/2 ಚಮಚ ನೀರಿನೊಂದಿಗೆ ಬೇಕಿಂಗ್ ಸೋಡಾವನ್ನು ಮಿಶ್ರ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮೊಡವೆ ಬ್ರೇಕ್‌ಔಟ್ ಇರುವ ಭಾಗಕ್ಕೆ ಹಚ್ಚಿ, 5 ನಿಮಿಷ ಹಾಗೆಯೇ ಬಿಡಿ ತಣ್ಣೀರಿನಿಂದ ಇದನ್ನು ತೊಳೆದುಕೊಳ್ಳಿ.

ಮುಲ್ತಾನಿ ಮಿಟ್ಟಿ
ಇದರಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ನಿರ್ದಿಷ್ಟ ತ್ವಚೆಯ ಸಮಸ್ಯೆಗೆ ಉತ್ತಮ ಮದ್ದಾಗಿದೆ. ಇದು ಮೊಡವೆಗಳನ್ನು ನಿವಾರಿಸುತ್ತದೆ ಮತ್ತು ಪಿಂಪಲ್ ಬ್ರೇಕ್‌ಔಟ್‌ಗಳನ್ನು ತಡೆಗಟ್ಟುತ್ತದೆ.
ಬಳಸುವ ವಿಧಾನ
ಮುಲ್ತಾನಿ ಮಿಟ್ಟಿಯನ್ನು ರೋಸ್ ವಾಟರ್‌ನೊಂದಿಗೆ ಬೆರೆಸಿ ಮತ್ತು ಹಾನಿಯಾಗಿರುವ ಭಾಗಕ್ಕೆ ಹಚ್ಚಿ. ಇದನ್ನು ಹಾಗೆಯೇ ಬಿಡಿ 10 ನಿಮಿಷ ಕಳೆದು ತಣ್ಣೀರಿನಿಂದ ತೊಳೆದುಕೊಳ್ಳಿ. ವಾರದಲ್ಲಿ 2-3 ಬಾರಿ ಇದನ್ನು ಬಳಸಿ ನೋಡಿ.

ಇಪ್ಸಮ್ ಸಾಲ್ಟ್
ಉತ್ಕರ್ಷಣ ನಿರೋಧಿ ಅಂಶಗಳನ್ನು ಈ ಉಪ್ಪು ಹೊಂದಿದ್ದು, ಇದು ಮೊಡವೆ ಸಮಸ್ಯೆಯನ್ನು ಬುಡದಿಂದಲೇ ನಿವಾರಿಸುತ್ತದೆ.
ಬಳಸುವ ವಿಧಾನ
ಚಿಟಿಕೆಯಷ್ಟು ಕಲ್ಲುಪ್ಪನ್ನು 1 ಚಮಚ ರೋಸ್ ವಾಟರ್‌ನೊಂದಿಗೆ ಮಿಶ್ರ ಮಾಡಿಕೊಳ್ಳಿ. ಮೊಡವೆ ಇರುವ ಭಾಗಕ್ಕೆ ಹಚ್ಚಿಕೊಳ್ಳಿ. 3-4 ನಿಮಿಷ ಹಾಗೆಯೇ ಬಿಡಿ ನಂತರ ತಣ್ಣೀರಿನಿಂದು ಇದನ್ನು ತೊಳೆದುಕೊಳ್ಳಿ. ವಾರಕ್ಕೊಮ್ಮೆ ಈ ಪರಿಹಾರವನ್ನು ಅನುಸರಿಸಿ.

ಟ್ರೀ ಟ್ರೀ ಆಯಿಲ್
ಆಂಟಿ ಬ್ಯಾಕ್ಟೀರಿಯಲ್ ಅಂಶವನ್ನು ಇದು ಒಳಗೊಂಡಿದ್ದು ಎಕ್ಸ್‌ಫೋಲಿಯೇಟಿಂಗ್ ಅಂಶವನ್ನು ಹೊಂದಿದೆ ಮತ್ತು ಬ್ಯಾಕ್ಟೀರಿಯಾವನ್ನು ಇದು ನಿವಾರಿಸುತ್ತದೆ.
ಬಳಸುವ ವಿಧಾನ
2 ಹನಿಗಳಷ್ಟು ಟಿ ಟ್ರಿ ಆಯಿಲ್ ಅನ್ನು 1/2 ಚಮಚ ತೆಂಗಿನೆಣ್ಣೆಯೊಂದಿಗೆ ಮಿಶ್ರ ಮಾಡಿ ಮತ್ತು ಇದನ್ನು ಮೊಡವೆ ಬ್ರೇಕ್‌ಔಟ್ ಇರುವ ಭಾಗಕ್ಕೆ ಹಚ್ಚಿ. 3-4 ನಿಮಿಷಗಳ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ವಾರಕ್ಕೊಮ್ಮೆ ಈ ವಿಧಾನವನ್ನು ಅನುಸರಿಸಿ.

ಅರಿಶಿನ
ಇದು ಪ್ರಬಲ ಉತ್ಕರ್ಷಣ ಅಂಶಗಳನ್ನು ಒಳಗೊಂಡಿದ್ದು ನಿಮ್ಮ ಮುಖವನ್ನು ಮೊಡವೆರಹಿತವನ್ನಾಗಿ ಮಾಡುವಲ್ಲಿ ಇದು ನಿಷ್ಣಾತವಾಗಿದೆ.
ಬಳಸುವ ವಿಧಾನ:
ಚಿಟಿಕೆಯಷ್ಟು ಅರಿಶಿನವನ್ನು 1 ಚಮಚ ರೋಸ್ ವಾಟರ್‌ನೊಂದಿಗೆ ಮಿಶ್ರಮಾಡಿ. ಇದನ್ನು ಕಲೆ ಇರುವ ಭಾಗಕ್ಕೆ ಹಚ್ಚಿ. 5 ನಿಮಿಷ ಹಾಗೆಯೇ ಬಿಡಿ ಮತ್ತು ಇದನ್ನು ತೊಳೆಯಲು ತಣ್ಣೀರನ್ನು ಬಳಸಿ. ವಾರಕ್ಕೊಮ್ಮೆ ಈ ಪ್ರಭಾವೀ ಮನೆಔಷಧವನ್ನು ಬಳಸಿ.

ಹಾಲು
ಇದು ಬ್ಯಾಕ್ಟೀರಿಯಾ ವಿರೋಧಿ ಅಂಶವನ್ನು ತನ್ನಲ್ಲಿ ಒಳಗೊಂಡಿದ್ದು ಇದು ಮೊಡವೆಯನ್ನು ನಿವಾರಿಸುವಲ್ಲಿ ನಿಷ್ಣಾತವಾಗಿದೆ. ಅಂತೆಯೇ ಮೊಡವೆಯನ್ನು ನಿವಾರಿಸುತ್ತದೆ
ಬಳಸುವ ವಿಧಾನ
ತಣ್ಣನೆಯ ಹಾಲನ್ನು ಮೊಡವೆ ಇರುವ ಭಾಗಕ್ಕೆ ಹಚ್ಚಿಕೊಳ್ಳಿ. ನಿಮ್ಮ ಮುಖದಲ್ಲಿ ಸ್ವಲ್ಪ ಸಮಯ ಇದನ್ನು ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ವಾರಕ್ಕೊಮ್ಮೆ ಬಳಸಿ ಮತ್ತು 3-4 ಬಾರಿ ಹಚ್ಚಿ ಉತ್ತಮ ಪ್ರತಿಫಲ ಪಡೆದುಕೊಳ್ಳಿ.

English summary

Beat Pimple Breakouts With These Home Remedies

This type of unsightly breakout occurs when the oils glands in your skin become overactive and clog up the pores. Apart from excess oil, dead skin cells, toxins and impurities can also block the skin pores, thereby causing pimples. This type of unsightly breakout occurs when the oils glands in your skin become overactive and clog up the pores. Apart from excess oil, dead skin cells, toxins and impurities can also block the skin pores, thereby causing pimples.
Story first published: Saturday, November 18, 2017, 19:27 [IST]
X
Desktop Bottom Promotion