ಸರಳ ಬ್ಯೂಟಿ ಟಿಪ್ಸ್: ಬೆಣ್ಣೆಹಣ್ಣಿನ ಬೆಣ್ಣೆಯಂತಹ ಸೌಂದರ್ಯ!

By: Arshad
Subscribe to Boldsky

ಬೆಣ್ಣೆಹಣ್ಣಿನ (ಆವಕಾಡೊ) ಹಲವಾರು ಆರೋಗ್ಯಕರ ಪ್ರಯೋಜನಗಳ ಬಗ್ಗೆ ಈಗಾಗಲೇ ಅರಿತಿದ್ದೀರಿ. ಈ ಹಣ್ಣನ್ನು ನಿತ್ಯವೂ ಸೇವಿಸುವ ಮೂಲಕ ತ್ವಚೆಗೆ ಹಲವು ರೀತಿಯ ಪ್ರಯೋಜನಗಳಿವೆ. ಆದರೆ ಈ ಹಣ್ಣಿನ ತಿರುಳನ್ನು ಮುಖಕ್ಕೆ ಹಚ್ಚಿಕೊಳ್ಳುವ ಮೂಲಕ ತಕ್ಷಣವೇ ತ್ವಚೆ ಕಾಂತಿಯುಕ್ತವಾಗುತ್ತದೆ ಎಂಬುದು ನಿಮಗೆ ತಿಳಿದಿತ್ತೇ?  ಬೆಣ್ಣೆ ಹಣ್ಣು ತಿನ್ನಿ, ವೈದ್ಯರಿಂದ ದೂರವಿರಿ! 

ಬೆಣ್ಣೆಹಣ್ಣಿನಲ್ಲಿ ಉತ್ತಮ ಪ್ರಮಾಣದ ಕೊಬ್ಬಿನ ಆಮ್ಲಗಳಿವೆ. ಈ ಕೊಬ್ಬು ಯಾವುದೇ ಉರಿ ಉಂಟುಮಾಡದೇ ಚರ್ಮಕ್ಕೆ ಅಗತ್ಯವಾದ ಆರ್ದ್ರತೆಯನ್ನು ಒದಗಿಸಲು ನೆರವಾಗುತ್ತದೆ. ವಾಸ್ತವದಲ್ಲಿ ಬೆಣ್ಣೆಹಣ್ಣು ತ್ವಚೆಗೆ ಎದುರಾಗುವ ಉರಿಯೂತವನ್ನು ತಣಿಸುವ ಕೆಲಸ ಮಾಡುತ್ತದೆ. ಈ ಗುಣ ಅತಿ ಸೂಕ್ಷ್ಮ ಸಂವೇದಿ ತ್ವಚೆಯುಳ್ಳ ವ್ಯಕ್ತಿಗಳಿಗೆ ವರದಾನವಾಗಿದೆ. ಇಂದೇ ಸುಪರ್ ಮಾರ್ಕೆಟ್ ನಿಂದ ಕೆಲವು ಬೆಣ್ಣೆಹಣ್ಣುಗಳನ್ನು ಕೊಂಡು ತನ್ನಿ ಹಾಗೂ ತ್ವಚೆಗೆ ಸೂಕ್ತವಾದ ಮುಖಲೇಪಗಳನ್ನು ಮನೆಯಲ್ಲಿಯೇ ತಯಾರಿಸಿಕೊಂಡು ಸೌಂದರ್ಯವನ್ನು ವೃದ್ದಿಸಿಕೊಳ್ಳಿ... 

ಸಾಮಾನ್ಯ ತ್ವಚೆಗೆ

ಸಾಮಾನ್ಯ ತ್ವಚೆಗೆ

ಸಾಮಾನ್ಯ ತ್ವಚೆಗೆ ಮೊಸರು ಮತ್ತು ಬೆಣ್ಣೆಹಣ್ಣಿನ ತಿರುಳು ಉತ್ತಮ ಆಯ್ಕೆಯಾಗಿದೆ. ಈ ಮುಖಲೇಪಕ್ಕೆ ಸತ್ತ ಜೀವಕೋಶಗಳನ್ನು ಸಡಿಲಿಸಿ ನಿವಾರಿಸುವ ಗುಣವಿದೆ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಮತ್ತು ಬೆಣ್ಣೆಹಣ್ಣಿನಲ್ಲಿರುವ ಹೆಚ್ಚಿನ ಪ್ರಮಾಣದ ವಿಟಮಿನ್ ಬಿ ಈ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತವೆ.

* ಇದಕ್ಕಾಗಿ ಅರ್ಧ ಕಪ್ ಮೊಸರು ಮತ್ತು ಒಂದೂವರೆ ಕಪ್ ಬೆಣ್ಣೆಹಣ್ಣಿನ ತಿರುಳನ್ನು ಚೆನ್ನಾಗಿ ಮಿಶ್ರಣ ಮಾಡಿ ಇದಕ್ಕೆ ಕಾಲು ಕಪ್ ಜೇನನ್ನು ಬೆರೆಸಿ. ಈ ಲೇಪನವನ್ನು ಮುಖಕ್ಕೆ ತೆಳುವಾಗಿ ಹಚ್ಚಿ ಇಪ್ಪತ್ತು ನಿಮಿಷಗಳ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಒಣಚರ್ಮಕ್ಕಾಗಿ

ಒಣಚರ್ಮಕ್ಕಾಗಿ

ಈ ಬಗೆಯ ಚರ್ಮದವರಿಗೆ ಬೆಣ್ಣೆಹಣ್ಣು, ಮಾವಿನ ಹಣ್ಣು ಮತ್ತು ಜೇನಿನ ಮುಖಲೇಪ ಸೂಕ್ತ ಆಯ್ಕೆಯಾಗಿದೆ. ಜೇನು ಆದ್ರತೆಯನ್ನು ಹಿಡಿದಿಟ್ಟುಕೊಳ್ಳಲು ನೆರವಾದರೆ ಮಾವಿನಲ್ಲಿರುವ ವಿಟಮಿನ್ ಸಿ ಚರ್ಮದ ಕಾಂತಿ ಹೆಚ್ಚಿಸಲು ಮತ್ತು ಬೆಣ್ಣೆಹಣ್ಣಿನ ಪೋಷಕಾಂಶಗಳು ಹೆಚ್ಚಿನ ಪೋಷಣೆ ನೀಡುತ್ತವೆ. ಇದಕ್ಕೆ ಕೊಂಚವೇ ಆಲಿವ್ ಎಣ್ಣೆಯನ್ನು ಬೆರೆಸಿದರೆ ಆದ್ರತೆ ನೀಡುವ ಕ್ಷಮತೆ ಇನ್ನಷ್ಟು ಹೆಚ್ಚುತ್ತದೆ.

* ಇದಕ್ಕಾಗಿ ಎರಡು ದೊಡ್ಡಚಮಚ ಬೆಣ್ಣೆಹಣ್ಣಿನ ತಿರುಳು ಮತ್ತು ಎರಡು ದೊಡ್ಡಚಮಚ ಜೇನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

* ಇದಕ್ಕೆ ಒಂದು ದೊಡ್ಡ ಚಮಚ ಮಾವಿನ ಹಣ್ಣಿನ ತಿರುಳು ಬೆರೆಸಿ

* ಬಳಿಕ ಕೆಲವು ಹನಿ ಆಲಿವ್ ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

* ಈ ಮಿಶ್ರಣವನ್ನು ಮುಖದ ಮೇಲೆ ಹಚ್ಚಿ ಸುಮಾರು ಇಪ್ಪತ್ತು ನಿಮಿಷದ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಮೃದು ಮತ್ತು ಹೊಳಪಿನ ತ್ವಚೆಗೆ ಬೆಣ್ಣೆ ಹಣ್ಣಿನ ಪೋಷಣೆ

ಸಂಯುಕ್ತ ಹಾಗೂ ಎಣ್ಣೆಚರ್ಮದವರಿಗೆ

ಸಂಯುಕ್ತ ಹಾಗೂ ಎಣ್ಣೆಚರ್ಮದವರಿಗೆ

ಈ ಮುಖಲೇಪ ಸಂಯುಕ್ತ ಬಗೆಯ ಮತ್ತು ಮೊಡವೆ ಸುಲಭವಾಗಿ ಮೂಡುವ ಎಣ್ಣೆಚರ್ಮದವರಿಗೆ ಸೂಕ್ತವಾಗಿದೆ. ಈ ವಿಧಾನದಲ್ಲಿ ಲೋಳೆಸರ, ಕೊಬ್ಬರಿ ಎಣ್ಣೆ ಮತ್ತು ಬೆಣ್ಣೆಹಣ್ಣನ್ನು ಬಳಸಲಾಗಿದೆ.

* ಅರ್ಧ ಬೆಣ್ಣೆಹಣ್ಣಿನ ತಿರುಳನ್ನು ಚೆನ್ನಾಗಿ ಕಿವುಚಿ ಒಂದು ಚಿಕ್ಕಚಮಚ ಕೊಬ್ಬರಿ ಎಣ್ಣೆ ಮತ್ತು ಒಂದು ಚಿಕ್ಕಚಮಚ ಲೋಳೆಸರದ ಜೆಲ್ ಬೆರೆಸಿ.

ಸಂಯುಕ್ತ ಹಾಗೂ ಎಣ್ಣೆಚರ್ಮದವರಿಗೆ

ಸಂಯುಕ್ತ ಹಾಗೂ ಎಣ್ಣೆಚರ್ಮದವರಿಗೆ

* ಎಲ್ಲವನ್ನೂ ಒಂದು ಬೋಗುಣಿಯಲ್ಲಿ ಹಾಕಿ ಚೆನ್ನಾಗಿ ಬೆರೆಸಿ.

* ಈ ಲೇಪವನ್ನು ಈಗತಾನೇ ತಣ್ಣೀರಿನಿಂದ ತೊಳೆದುಕೊಂಡು ತೇವವಾಗಿದ್ದ ಮುಖಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಲ್ಲಿ ಮುಳುಗಿಸಿ ಹಿಂಡಿರುವ ಟವೆಲ್ಲೊಂದರ ಮೂಲಕ ಒರೆಸಿಕೊಳ್ಳಿ. ಸೌಂದರ್ಯದ ಸಕಲ ಸಮಸ್ಯೆಗಳಿಗೂ-ಬೆಣ್ಣೆ ಹಣ್ಣಿನ ಚಿಕಿತ್ಸೆ

English summary

Avocado face masks to get glowing skin

Avocados contain fatty acids that keep the skin persistently hydrated without causing any irritation. In fact, avocados can calm inflammation and are perfect for sensitive skin. So hit the supermarket for avocados and try these beautifying recipes...
Please Wait while comments are loading...
Subscribe Newsletter