ಮುಖದ ಕಂದು ಕಲೆ ನಿವಾರಣೆಗೆ ಮನೆಮದ್ದುಗಳು

Posted By: hemanth
Subscribe to Boldsky

ತುಂಬಾ ಸುಂದರವಾಗಿರುವ ಮಹಿಳೆಯರ ಮುಖದ ಮೇಲೆ ಕಂದು ಕಲೆಗಳು ಬಂದುಬಿಡುತ್ತದೆ. ಏನಪ್ಪಾ, ಅಷ್ಟು ಸುಂದರ ಹುಡುಗಿ ಮುಖದ ಮೇಲೆ ಕಲೆ ಎಂದು ಎಲ್ಲರಿಗೂ ಅನಿಸುವುದು ಇದೆ. ಇಂತಹ ಕಂದು ಕಲೆಗಳ ಸಮಸ್ಯೆಗೆ ನೀವು ಗುರಿಯಾಗಿದ್ದರೆ ಅದರ ಪರಿಹಾರಕ್ಕಾಗಿ ಹಲವಾರು ರೀತಿಯ ಕ್ರೀಮ್ ಮತ್ತು ಕಲೆ ಹೋಗುವಂತಹ ಔಷಧಿಗಳನ್ನು ಬಳಸಿ ನೋಡಿ ಸುಸ್ತಾಗಿದ್ದಾರಾ? ಹಾಗಾದರೆ ಬೋಲ್ಡ್ ಸ್ಕೈ ನಿಮಗೆ ಈ ಕಲೆಗಳನ್ನು ನಿವಾರಿಸುವಂತಹ ನೈಸರ್ಗಿಕ ವಿಧಾನ ತಿಳಿಸಲಿದೆ.

ಇದು ಕಪ್ಪು ಕಲೆಗಳನ್ನು ನಿವಾರಣೆ ಮಾಡಿ ಚರ್ಮದ ಬಣ್ಣವನ್ನು ಕಾಪಾಡುವುದು. ಆದರೆ ಮದ್ದಿಗೆ ಮೊದಲು ಕಂದುಕಲೆಗಳು ಬರುವುದು ಹೇಗೆ ಎಂದು ತಿಳಿದುಕೊಂಡರೆ ಅದರಿಂದ ನಿಮಗೂ ಅನುಕೂಲವಾಗಲಿದೆ. ಕೆಲವೊಂದು ಬಾಹ್ಯ ಹಾಗೂ ಆಂತರಿಕ ಕಾರಣಗಳಿಂದಾಗಿ ಕಂದುಕಲೆಗಳು ಮುಖದ ಮೇಲೆ ಮೂಡಬಹುದು. ಸೂರ್ಯನ ಬಿಸಿಲಿಗೆ ಮೈಯೊಡ್ಡುವುದು, ವಿಟಮಿನ್ ಕೊರತೆ ಮತ್ತು ಒತ್ತಡ ಕಂದು ಕಲೆಗಳಿಗೆ ಮುಖ್ಯ ಕಾರಣ.

ಕಂದುಕಲೆಗಳಿಂದ ಯಾವುದೇ ಹಾನಿಯಿಲ್ಲದಿದ್ದರೂ ಮುಖದ ಸೌಂದರ್ಯ ಕೆಡುವುದು. ಬ್ಲೀಚಿಂಗ್ ಗುಣಗಳನ್ನು ಹೊಂದಿರುವ ಕೆಲವೊಂದು ನೈಸರ್ಗಿಕ ಮನೆಮದ್ದನ್ನು ಬಳಸಿಕೊಂಡರೆ ಅದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಇಲ್ಲ. ಕಂದುಕಲೆಗಳ ನಿವಾರಣೆ ಮಾಡುವಂತಹ ಕೆಲವೊಂದು ನೈಸರ್ಗಿಕ ಮದ್ದುಗಳ ಬಗ್ಗೆ ತಿಳಿಯಲು ಓದುತ್ತಾ ಸಾಗಿ.... 

ಆ್ಯಪಲ್ ಸೀಡರ್ ವಿನೇಗರ್

ಆ್ಯಪಲ್ ಸೀಡರ್ ವಿನೇಗರ್

*ಸ್ವಲ್ಪ ಆ್ಯಪಲ್ ಸೀಡರ್ ವಿನೇಗರ್ ಗೆ ಆವೀಕರಿಸಿದ ನೀರನ್ನು ಹಾಕಿ.

*ಇದರಲ್ಲಿ ಹತ್ತಿ ಉಂಡೆ ಅದ್ದಿಕೊಳ್ಳಿ ಮತ್ತು ಮುಖದ ಮೇಲಿನ ಕಂದುಕಲೆಗಳ ಮೇಲೆ ಅದನ್ನು ಹಚ್ಚಿ.

*10-15 ನಿಮಿಷ ಕಾಲ ಮುಖದಲ್ಲಿ ಹಾಗೆ ಇರಲಿ. ಬಳಿಕ ತಣ್ಣೀರಿನಿಂದ ತೊಳೆಯಿರಿ.

*ಕಂದುಕಲೆಗಳ ನಿವಾರಣೆ ಮಾಡಲು ವಾರದಲ್ಲಿ 3-4 ಸಲ ಇದನ್ನು ಬಳಸಿ.

ಮಜ್ಜಿಗೆ

ಮಜ್ಜಿಗೆ

*ತಾಜಾ ಮಜ್ಜಿಗೆಗೆ ಒಂದು ಹತ್ತಿ ಉಂಡೆಯನ್ನು ಅದ್ದಿಕೊಳ್ಳಿ.

*ಹತ್ತಿ ಉಂಡೆಯನ್ನು ಕಂದುಕಲೆಗಳ ಮೇಲಿಡಿ ಮತ್ತು 15 ನಿಮಿಷ ಕಾಲ ಹಾಗೆ ಇರಲಿ.

*ಸ್ವಲ್ಪ ಸಮಯ ಬಿಟ್ಟು ಹಗುರ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

*ಪರಿಣಾಮಕಾರಿ ಫಲಿತಾಂಶ ಪಡೆಯಬೇಕಾದರೆ ಈ ಮನೆಮದ್ದನ್ನು ವಾರದಲ್ಲಿ 2-3 ಸಲ ಬಳಸಿಕೊಳ್ಳಿ.

ಹರಳೆಣ್ಣೆ

ಹರಳೆಣ್ಣೆ

*ಹರಳೆಣ್ಣೆ ತೆಗೆದುಕೊಂಡು ಅದನ್ನು ಬಾಧಿತ ಪ್ರದೇಶಕ್ಕೆ ಹಚ್ಚಿಕೊಳ್ಳಿ.

*10-15 ನಿಮಿಷ ಕಾಲ ಹಾಗೆ ಬಿಡಿ.

* ಬಳಿಕ ಮುಖವನ್ನು ತಣ್ಣೀರಿನಿಂದ ತೊಳೆಯಿರಿ.

*ವಾರದಲ್ಲಿ ಮೂರು ಸಲ ಇದನ್ನು ಬಳಸಿದರೆ ಕಂದುಕಲೆ ಮಾಯ.

ಟೊಮೆಟೋ

ಟೊಮೆಟೋ

*ತಾಜಾ ಟೊಮೆಟೋದ ತಿರುಳನ್ನು ತೆಗೆದು ಅದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ.

*20-25 ನಿಮಿಷ ಕಾಲ ಇದನ್ನು ಒಣಗಲು ಬಿಡಿ.

*ಒಣಗಿದ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

*ಪ್ರತಿನಿತ್ಯ ಇದನ್ನು ಬಳಸಿದರೆ ಕಲೆಗಳು ಮುಖದಿಂದ ಮಾಯವಾಗುವುದು.

ಲಿಂಬೆ

ಲಿಂಬೆ

*ತಾಜಾ ಲಿಂಬೆರಸ ತೆಗೆದುಕೊಂಡು ಮುಖದ ಮೇಲಿರುವ ಕಂದು ಕಲೆಗಳ ಮೇಲೆ ಅದನ್ನು ಹಚ್ಚಿಕೊಳ್ಳಿ.

*10-15 ನಿಮಿಷ ಕಾಲ ಮುಖದಲ್ಲಿ ಅದನ್ನು ಹಾಗೆ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆಯಿರಿ.

*ಒಳ್ಳೆಯ ಫಲಿತಾಂಶ ಬೇಕಾದರೆ ವಾರದಲ್ಲಿ 4-5 ಸಲ ಇದನ್ನು ಬಳಸಿ.

ಶ್ರೀಗಂಧದ ಹುಡಿ

ಶ್ರೀಗಂಧದ ಹುಡಿ

*ಒಂದು ಚಮಚ ರೋಸ್ ವಾಟರ್ ಗೆ ಒಂದು ಚಮಚ ಶ್ರೀಗಂಧದ ಹುಡಿ ಹಾಕಿ.

*ಮುಖದ ಮೇಲಿರುವ ಕಂದು ಕಲೆಗಳ ಮೇಲೆ ಈ ಪೇಸ್ಟ್ ನ್ನು ಹಚ್ಚಿಕೊಳ್ಳಿ.

*15 ನಿಮಿಷ ಕಾಲ ಮುಖದ ಮೇಲೆ ಹಾಗೆ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆಯಿರಿ.

*ಈ ಮನೆಮದ್ದನ್ನು ವಾರದಲ್ಲಿ 2-3 ಸಲ ಬಳಸಿದರೆ ಒಳ್ಳೆಯ ಫಲಿತಾಂಶ ಸಿಗುವುದು.

ಮೊಸರು

ಮೊಸರು

*ಚರ್ಮದ ಮೇಲಿರುವ ಕಂದು ಕಲೆಗಳ ಮೇಲೆ ಮೊಸರನ್ನು ಹಚ್ಚಿಕೊಳ್ಳಿ.

*ಒಳ್ಳೆಯ ಫಲಿತಾಂಶಕ್ಕೆ 10-15 ನಿಮಿಷ ಕಾಲ ಹಾಗೆ ಬಿಡಿ.

*ಇದರ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ ಮತ್ತು ಮೊಶ್ವಿರೈಸರ್ ಹಚ್ಚಿಕೊಳ್ಳಿ.

*ಈ ಮನೆಮದ್ದನ್ನು ದಿನಾಲೂ ಬಳಸಿದರೆ ಫಲಿತಾಂಶ ಖಚಿತ.

ಅಲೋವೆರಾ

ಅಲೋವೆರಾ

*ತಾಜಾ ಅಲೋವೆರಾ ಜೆಲ್ ತೆಗೆದುಕೊಂಡು ಅದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ.

*10-15 ನಿಮಿಷ ಕಾಲ ಮುಖದ ಮೇಲೆ ಜೆಲ್ ಇರಲಿ.

*ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

*ಒಳ್ಳೆಯ ಫಲಿತಾಂಶಕ್ಕಾಗಿ ದಿನದಲ್ಲಿ ಹಲವಾರು ಸಲ ಇದನ್ನು ಬಳಸಬಹುದು.

English summary

Amazing Remedies To Get Rid Of Brown Spots On Skin

Do you have prominent brown spots on your skin? Have you already tried a majority of spot-correcting creams and patches? Are you still looking for a way to get rid of these spots? If you answered yes to all of the aforementioned questions, then do read on. As today at Boldsky, we've zeroed in on some of the most effective remedies for getting rid of stubborn brown spots. Here, we've listed those remedies that can abate the prominence of brown spots on your skin:
Story first published: Wednesday, January 10, 2018, 18:15 [IST]