For Quick Alerts
ALLOW NOTIFICATIONS  
For Daily Alerts

ಚಳಿಗಾಲದ ಶುಷ್ಕ ತ್ವಚೆಗೆ ಅದ್ಭುತವಾದ ಮನೆ ಔಷಧಿಯ ಆರೈಕೆ

By Divya Pandith
|

ಈಗಾಗಲೇ ಚಳಿಗಾಲ ಪ್ರಾರಂಭವಾಗಿದೆ. ಶುಷ್ಕವಾದ ವಾತಾವರಣ, ಚರ್ಮ ಒಡೆಯುವುದು, ಉರಿಯೂತ, ತ್ವಚೆಯ ಮೇಲೆ ನಿರ್ಜೀವ ಜೀವ ಕೋಶ ಹೆಚ್ಚುವುದು ಹೀಗೆ ಅನೇಕ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಶುಷ್ಕವಾದ ವಾತಾವರಣ ನಮ್ಮ ಚರ್ಮದಲ್ಲಿರುವ ತೇವಾಂಶವನ್ನು ಬಹುಬೇಗ ಬರಿದಾಗಿಸುತ್ತದೆ. ಜೊತೆಗೆ ನಿರ್ಜೀವ ಜೀವಕೋಶಗಳ ಉತ್ಪಾದನೆಗೆ ಕಾರಣವಾಗುತ್ತದೆ. ಹಾಗಾಗಿ ಚಳಿಗಾಲದಲ್ಲಿ ಚರ್ಮದ ಕುರಿತು ಸೂಕ್ತ ರೀತಿಯ ಆರೈಕೆಯನ್ನು ಮಾಡಬೇಕಾಗುವುದು.

ಚಳಿಗಾಲದಲ್ಲಿ ಚರ್ಮವು ಹೆಚ್ಚು ಸೂಕ್ಷ್ಮವಾಗಿರುತ್ತದೆ. ತೇವಾಂಶ ಹಾಗೂ ಎಣ್ಣೆಯಂಶವನ್ನು ಕಳೆದುಕೊಂಡು ನಿರ್ಜೀವ ಸ್ಥಿತಿಯನ್ನು ತಲುಪುವುದು. ಜೊತೆಗೆ ಚರ್ಮದ ಮೇಲೆ ಬಿಳಿಯ ಪದರಗಲಂತಹ ಜೀವಕೋಶಗಳು ಸೃಷ್ಟಿಯಾಗುವವು. ಚರ್ಮದ ಮೇಲಿರುವ ತೈಲ ಗ್ರಂಥಿಗಳು ಕಡಿಮೆ ಸಕ್ರಿಯವಾಗಿರುತ್ತದೆ. ಆಗ ಕಡಿಮೆ ಪ್ರಮಾಣದಲ್ಲಿಯೇ ತೈಲವನ್ನು ಸ್ರವಿಸುತ್ತದೆ ಎನ್ನಲಾಗುತ್ತದೆ. ಆಗ ಚರ್ಮದ ಮೇಲೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುವುದು.

ಚಳಿಗಾಲದ ಬ್ಯೂಟಿ ಟಿಪ್ಸ್: ಅಡುಗೆಮನೆಯಲ್ಲಿಯೇ ಒಂದು ರೌಂಡಪ್!

ಚಳಿಗಾಲದಲ್ಲಿ ಉಂಟಾಗುವ ತ್ವಚೆಯ ಸಮಸ್ಯೆಯಿಂದ ತ್ವಚೆಯಲ್ಲಿ ತುರಿಕೆ, ಉರಿ, ಉಣ್ಣೆ ಬಟ್ಟೆ ಧರಿಸಲು ಅನಾನುಕೂಲವಾಗುತ್ತದೆ. ಚರ್ಮದ ಮೇಲೆ ಬಿರುಕು ಬಿಡುವುದರಿಂದ ಸೂಕ್ಷ್ಮ ಜೀವಿಗಳು ಬಲು ಸುಲಭವಾಗಿ ದೇಹವನ್ನು ಪ್ರವೇಶಿಸುತ್ತವೆ. ಶುಷ್ಕ ವಾತಾವರಣ ಅಥವಾ ಚಳಿಗಾಲದಲ್ಲಿ ಚರ್ಮದ ಮೇಲೆ ಹಾನಿ ಉಂಟಾಗುವುದು ಸಹಜ. ಹಾಗಾಗಿ ಅಂತಹ ಸಮಯದಲ್ಲಿ ನಮ್ಮ ತ್ವಚೆಯು ಹೆಚ್ಚು ಆರೋಗ್ಯ ಪೂರ್ಣವಾಗಿ ಹೊಳೆಯುತ್ತಿರಬೇಕು ಎಂದರೆ ಕೆಲವು ನೈಸರ್ಗಿಕ ಉತ್ಪನ್ನಗಳ ಆರೈಕೆಗೆ ಒಳಗಾಗಬೇಕು....

ಅಲೋವೆರಾ

ಅಲೋವೆರಾ

ಈ ನೈಸರ್ಗಿಕ ಉತ್ಪನ್ನದ ಬಳಕೆ ಇಲ್ಲದೆ ಯಾವುದೇ ತ್ವಚೆಯ ಆರೋಗ್ಯ ವೃದ್ಧಿ ಔಷಧಿಗಳು ಪೂರ್ಣಗೊಂಡಿಲ್ಲ ಎನ್ನಬಹುದು. ಅಲೋ ವೆರಾ ಆಳವಾದ ಆದ್ರತೆ ಗುಣಗಳನ್ನು ಹೊಂದಿದೆ, ಚರ್ಮವು ಅದರ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರ ತೇವಾಂಶದ ಗುಣಲಕ್ಷಣಗಳು ವಾತಾವರಣದಿಂದ ಚರ್ಮಕ್ಕೆ ತೇವಾಂಶವನ್ನು ಸೆಳೆಯಲು ಸಹಾಯ ಮಾಡುತ್ತದೆ. ಇದು ಕಠಿಣ ಮಾರುತಗಳ ವಿರುದ್ಧ ಚರ್ಮವನ್ನು ರಕ್ಷಿಸುತ್ತದೆ.ನಿಮ್ಮ ಕೈ ಮತ್ತು ಮುಖದ ಮೇಲೆ ತಾಜಾ ಅಲೋ ವೆರಾ ಜೆಲ್ ಅನ್ನು ಅನ್ವಯಿಸಿ. 5 ನಿಮಿಷಗಳ ಕಾಲ ಅದನ್ನು ಆರಲು ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ.

ಪಪ್ಪಾಯ

ಪಪ್ಪಾಯ

ಪಪ್ಪಾಯ ಹಣ್ಣು ತ್ವಚೆಯ ಸವಕಳಿಯನ್ನು ನಿಯಂತ್ರಿಸುವ ಉತ್ತಮ ದಿವ್ಯ ಔಷಧ. ಇದು ಸತ್ತ ಜೀವಕೋಶಗಳನ್ನು ಬಲು ಸುಲಭವಾಗಿ ತೊಡೆದುಹಾಕುವುದು. ಇದರಲ್ಲಿ ವಿಟಮಿನ್ ಎ, ಸಿ ಮತ್ತು ಇ ಸಮೃದ್ಧವಾಗಿವೆ. ಇದು ಒಣಗಿದ ಮತ್ತು ಹಾನಿಗೊಳಗಾದ ಚರ್ಮವನ್ನು ತೇವಗೊಳಿಸಿ ದುರಸ್ತಿ ಮಾಡುತ್ತದೆ. ಪಾಪೈನ್ ಎಂಬ ಕಿಣ್ವ ಕೂಡ ಕೋಶದ ನವೀಕರಣವನ್ನು ಉತ್ತೇಜಿಸುತ್ತದೆ. ಕಳಿತ ಪಪ್ಪಾಯಿಯನ್ನು ಕಿವುಚಿ ಒಂದು ಪೇಸ್ಟ್ ಆಗಿ ಮಾಡಿ , ಒಣ ಚರ್ಮಕ್ಕೆ ಅದನ್ನು ಅನ್ವಯಿಸಿ. 15 ನಿಮಿಷಗಳ ಕಾಲ ಅದನ್ನು ಆರಲು ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ.

ಆವಕಾಡೊ/ ಬೆಣ್ಣೆ ಹಣ್ಣು

ಆವಕಾಡೊ/ ಬೆಣ್ಣೆ ಹಣ್ಣು

ಆವಕಾಡೊ/ ಬೆಣ್ಣೆ ಹಣ್ಣು ಕೆನೆ ಮತ್ತು ನೈಸರ್ಗಿಕವಾಗಿ ಕೊಬ್ಬಿನ ಆಮ್ಲಗಳೊಂದಿಗೆ ತುಂಬಿರುತ್ತವೆ. ಅದು ಚರ್ಮದ ನೈಸರ್ಗಿಕ ತೇವಾಂಶವನ್ನು ಪುನಃಸ್ಥಾಪಿಸುತ್ತದೆ. ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಿ ಚರ್ಮದ ವಿನ್ಯಾಸವನ್ನು ಸುಧಾರಿಸುತ್ತದೆ.

ಒಂದು ಬಟ್ಟಲಿನಲ್ಲಿ ಕಿವುಚಿದ ಬೆಣ್ಣೆ ಹಣ್ಣಿಗೆ 2 ಟೇಬಲ್ ಚಮಚ ಆಲಿವ್ ಎಣ್ಣೆ ಸೇರಿಸಿ ಮಿಶ್ರಗೊಳಿಸಿ. ಚರ್ಮಕ್ಕೆ ಅದನ್ನು ಅನ್ವಯಿಸಿ 15 ನಿಮಿಷಗಳ ಕಾಲ ಅದನ್ನು ಆರಲು ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ.

ಸೌತೆಕಾಯಿ

ಸೌತೆಕಾಯಿ

ಸೌತೆಕಾಯಿ ಶೇ. 80% ನೀರಿನಂಶದಿಂದ ಕೂಡಿರುತ್ತದೆ. ಇದು ಒಣ ಚರ್ಮಕ್ಕಾಗಿ ಆದರ್ಶವಾದಿಯಾಗಿದೆ. ಚರ್ಮದ ಹಾನಿಯ ದುರಸ್ತಿ ಮತ್ತು ಅದರ ನೈಸರ್ಗಿಕ ತೇವಾಂಶ ಮಟ್ಟವನ್ನು ಪುನಃಸ್ಥಾಪಿಸುತ್ತದೆ. ಅದರಲ್ಲಿನ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಮೃದುಗೊಳಿಸುತ್ತವೆ ಮತ್ತು ಸೂರ್ಯನ ಹಾನಿಗಳಿಂದ ರಕ್ಷಿಸುತ್ತವೆ. ಕೆಲವು ಶೀತಲವಾಗಿರುವ ಸೌತೆಕಾಯಿ ಚೂರುಗಳನ್ನು ನಿಮ್ಮ ಮುಖದ ಮೇಲೆ ಮತ್ತು ನಿಮ್ಮ ದೇಹದಲ್ಲಿ ಒಣ ತೇಪೆಗಳ ಮೇಲೆ ಇರಿಸಿ. ದಿನದಲ್ಲಿ ಹಲವು ಬಾರಿ ಹೀಗೆ ಮಾಡುವುದರಿಂದ ಉತ್ತಮ ಪರಿಹಾರ ಪಡೆದುಕೊಳ್ಳುವಿರಿ.

ಬೇವಿನ ಎಣ್ಣೆ

ಬೇವಿನ ಎಣ್ಣೆ

ಬೇವಿನ ಎಣ್ಣೆ ಅತ್ಯುತ್ತಮವಾದ ನಂಜುನಿರೋಧಕ ಮತ್ತು ಅದರ ತೈಲವು ಆರ್ಧ್ರಕ ಗುಣಲಕ್ಷಣಗಳಿಂದ ತುಂಬಿರುತ್ತದೆ. ಇದು ಯಾವುದೇ ಕೆರಳಿಕೆ ಮತ್ತು ತುರಿಕೆ ಚರ್ಮವನ್ನು ಬಲು ಸುಲಭವಾಗಿ ಆರೈಕೆ ಮಾಡುತ್ತದೆ. ಇದು ಚರ್ಮದ ಮೇಲೆ ಇರುವ ಬ್ಯಾಕ್ಟೀರಿಯಾವನ್ನು ಸಹ ಕೊಲ್ಲುತ್ತದೆ. ಅನೇಕ ಸೊಂಕುಗಳಿಂದ ನಿಮ್ಮನ್ನು ಇದು ದೂರ ಇರಿಸುವುದು. ಮಾರುಕಟ್ಟೆಯಲ್ಲಿ ಬೇವಿನ ಎಣ್ಣೆ ಸುಲಭವಾಗಿ ದೊರೆಯುವುದು. ಇದನ್ನು ನಿಮ್ಮ ಚರ್ಮದ ಮೇಲೆ ನಿಯಮಿತವಾಗಿ ಬಳಸಿ. ಬಾಹ್ಯ ಚಿಕಿತ್ಸೆಯ ಹೊರತಾಗಿ ಚರ್ಮಕ್ಕೆ ಸಹ ಪೋಷಣೆಯ ಅಗತ್ಯವಿರುತ್ತದೆ. ಸರಿಯಾದ ಆಹಾರವು ಒಣ ಚರ್ಮದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಸಾಕಷ್ಟು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಒಳಗೊಂಡಂತೆ ಚರ್ಮದ ಕೋಶಗಳು ಬಲವಾದ ಮತ್ತು ಪೋಷಕಾಂಶವನ್ನು ಉಂಟುಮಾಡುತ್ತವೆ. ಇದು ಚರ್ಮದ ಶುಷ್ಕತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಈ ಕೊಬ್ಬಿನ ಆಮ್ಲಗಳು ಚರ್ಮದ ಉರಿಯೂತವನ್ನು ತಗ್ಗಿಸುತ್ತವೆ. ನಿಮಗೆ ಸ್ಪಷ್ಟವಾದ, ನಯವಾದ ಮತ್ತು ಹೆಚ್ಚು ಆರೋಗ್ಯಕರವಾದ ಚರ್ಮವನ್ನು ಹೊಂದಲು ಸಹಾಯಮಾಡುತ್ತದೆ.

ಹೆಸರು ಬೇಳೆ

ಹೆಸರು ಬೇಳೆ

ಹೆಸರು ಬೇಳೆಯ ಪೇಸ್ಟ್ ಅನ್ನು ತ್ವಚೆಯ ಮೇಲೆ ನೇರವಾಗಿ ಲೇಪಿಸಿಕೊಳ್ಳುವ ಪ್ರಕ್ರಿಯೆಯು ಶುಷ್ಕ ತ್ವಚೆಗೆ ಚೇತೋಹಾರಿಯಾಗಿರುತ್ತದೆ ಹಾಗೂ ತನ್ಮೂಲಕ ತ್ವಚೆಯು ಕಳೆದುಕೊ೦ಡಿದ್ದ ತೇವಾ೦ಶವನ್ನು ಹಿಡಿದಿಟ್ಟುಕೊಳ್ಳುವುದು ಸಾಧ್ಯವಾಗುತ್ತದೆ. ತ್ವಚೆಯ ಜೀವಕೋಶಗಳನ್ನು ಪುನರುಜ್ಜೀವನಗೊಳಿಸುವ೦ತಹ ಜೀವಸತ್ವಗಳು ಹಾಗೂ ಕಿಣ್ವಗಳಿ೦ದ ಹೆಸರು ಬೇಳೆಯು ಕೂಡಿದ್ದು, ಇವು ತ್ವಚೆಯ ತೇವಾ೦ಶವನ್ನು ಹಾಗೆಯೇ ಹಿಡಿದಿರಿಸಿಕೊಳ್ಳಲು ಪೂರಕವಾಗಿವೆ.

ಬಳಕೆಯ ವಿಧಾನ

ಎರಡು ಟೀ ಚಮಚಗಳಷ್ಟು ಹೆಸರು ಬೇಳೆಯನ್ನು ಒ೦ದಿಷ್ಟು ಹಾಲಿನಲ್ಲಿ ರಾತ್ರಿಯಿಡೀ ನೆನೆಸಿಡಿರಿ ಮಾರನೆಯ ಬೆಳಗ್ಗೆ ಹೆಸರು ಬೇಳೆಯನ್ನು ಅರೆದು ಜರಿಜರಿಯಾದ ಪೇಸ್ಟ್‌ನ ರೂಪಕ್ಕೆ ತನ್ನಿರಿ ಈ ಪೇಸ್ಟ್ ಅನ್ನು ನಿಮ್ಮ ಮುಖ ಹಾಗೂ ಕುತ್ತಿಗೆಯ ಮೇಲೆ ಲೇಪಿಸಿಕೊಳ್ಳಿರಿ ಇಪ್ಪತ್ತು ನಿಮಿಷಗಳ ಕಾಲ ಆ ಪೇಸ್ಟ್ ಅನ್ನು ಮುಖದ ಮೇಲೆ ಹಾಗೆಯೇ ಇರಗೊಳಿಸಿರಿ ಹಾಗೂ ತದನ೦ತರ ಪೇಸ್ಟ್ ಅನ್ನು ತಣ್ಣೀರಿನಿ೦ದ ಚೆನ್ನಾಗಿ ತೊಳೆದುಬಿಡಿರಿ. ನಿಮ್ಮ ಶುಷ್ಕ ತ್ವಚೆಯು ಜಲಪೂರಣಗೊಳ್ಳುವ೦ತಾಗಲು ಈ ವಿಧಾನವನ್ನು ವಾರಕ್ಕೆ ಮೂರು ಬಾರಿ ಕೈಗೊಳ್ಳಿರಿ.

ಹಾಲಿನ ಪುಡಿಯ ಫೇಸ್ ಪ್ಯಾಕ್‌

ಹಾಲಿನ ಪುಡಿಯ ಫೇಸ್ ಪ್ಯಾಕ್‌

ಹಾಲಿನ ಪುಡಿಯ ಫೇಸ್ ಪ್ಯಾಕ್‌ ವಿಶೇಷವಾಗಿ ಶುಷ್ಕ ತ್ವಚೆಯುಳ್ಳವರಿಗೆ ಇದು ಅತ್ಯ೦ತ ಪೋಷಕ ಗುಣವುಳ್ಳ ಒ೦ದು ಫೇಸ್ ಪ್ಯಾಕ್‌ ಆಗಿರುತ್ತದೆ. ಸಾಮಗ್ರಿಗಳು

*ಹಾಲಿನ ಪುಡಿ

*ಕಡ್ಲೆಹಿಟ್ಟು

*ಬಾದಾಮಿ ಪುಡಿ

*ಅರಿಶಿನ

*ಹಾಲಿನ ಕೆನೆ

*ಲಿ೦ಬೆರಸ

*ಪನ್ನೀರು

*ಆಲಿವ್ ಎಣ್ಣೆ

ಹಾಲಿನ ಪುಡಿಯ ಫೇಸ್ ಪ್ಯಾಕ್‌

ಎರಡು ಟೇಬಲ್ ಚಮಚಗಳಷ್ಟು ಹಾಲಿನ ಪುಡಿ, ಎರಡು ಟೇಬಲ್ ಚಮಚಗಳಷ್ಟು ಕಡ್ಲೆಹಿಟ್ಟು, ಹಾಗೂ ಎರಡು ಟೇಬಲ್ ಚಮಚಗಳಷ್ಟು ಬಾದಾಮಿ ಪುಡಿಗಳನ್ನು ಮಿಶ್ರಗೊಳಿಸಿರಿ. ಈಗ ಒ೦ದು ಟೇಬಲ್ ಚಮಚದಷ್ಟು ಹಾಲಿನ ಕೆನೆ ಹಾಗೂ ಒ೦ದು ಟೇಬಲ್ ಚಮಚದಷ್ಟು ಲಿ೦ಬೆಯ ರಸಗಳನ್ನು ಈ ಮಿಶ್ರಣಕ್ಕೆ ಸೇರಿಸಿರಿ ಹಾಗೂ ಜೊತೆಗೆ ಕೆಲವು ಹನಿಗಳಷ್ಟು ಪನ್ನೀರು ಹಾಗೂ ಆಲಿವ್ ಎಣ್ಣೆಯನ್ನೂ ಸೇರಿಸಿರಿ. ಈ ಮಿಶ್ರಣವನ್ನು ಒ೦ದು ಪೇಸ್ಟ್ ನ ರೂಪಕ್ಕೆ ತ೦ದು, ಅದನ್ನು ನಿಮ್ಮ ಮುಖ ಹಾಗೂ ನಿಮ್ಮ ಮೈಮೇಲೆಲ್ಲಾ ಹದವಾದ ಮಾಲೀಸಿನೊ೦ದಿಗೆ ಲೇಪಿಸಿಕೊಳ್ಳಿರಿ. ಈ ಪ್ಯಾಕ್ ಅನ್ನು ಮೈಮೇಲೆ ಹಾಗೆಯೇ ಕೆಲಕಾಲ ಒಣಗಲು ಬಿಡಿರಿ ಹಾಗೂ ತದನ೦ತರ ಉಗುರುಬೆಚ್ಚಗಿನ ನೀರಿನಿ೦ದ ಅದನ್ನು ತೊಳೆದು ತೆಗೆಯಿರಿ. ಈ ಪ್ಯಾಕ್‌ನ ಗರಿಷ್ಟ ಲಾಭವನ್ನು ಪಡೆದುಕೊಳ್ಳುವ೦ತಾಗಲು ಈ ನೈಸರ್ಗಿಕವಾದ "ಸೌ೦ದರ್ಯ ಮಿಶ್ರಣ" ವನ್ನು ವಾರಕ್ಕೆ ಕನಿಷ್ಟ ಮೂರು ಬಾರಿಯಾದರೂ ಹಚ್ಚಿಕೊಳ್ಳಿರಿ.

English summary

Amazing Home Remedies To Cure Dry Skin

Winter is near and chances are your skin is already giving you signals regarding it. Dry, itchy and flaky skin are common woes of the winter season. The dry weather strips away the moisture from our skin, making it dull and lifeless. Our skin is very delicate. It contains a top layer of oils and moisture, which protect the inner layers of the skin. The harsh dry wind in this season causes the moisture to evaporate from the top layers, making the skin dry and itchy. Our oil glands are also less active and secrete less oil, adding to our winter woes.
X
Desktop Bottom Promotion