Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಮೈ ಕಾಂತಿ ಹೆಚ್ಚಿಸಬೇಕೇ? ಬಾದಾಮಿ ಫೇಸ್ ಮಾಸ್ಕ್ ಪ್ರಯತ್ನಿಸಿ
ಸಾಮಾನ್ಯವಾಗಿ ಅಡುಗೆಯಲ್ಲಿ ಬಾದಾಮಿಯ ಬಳಕೆ ಖಾದ್ಯಗಳ ಸ್ವಾದ ಹಾಗೂ ರುಚಿ ಹೆಚ್ಚಿಸಲು ಬಳಸಲಾಗುತ್ತದೆ. ಸಿಹಿಖಾದ್ಯ, ಬಿರಿಯಾನಿ, ಪಲಾವ್ ಮೊದಲಾದವುಗಳ ರುಚಿಯನ್ನೂ, ನೋಡಲಿಕ್ಕೆ ಚೆನ್ನಾಗಿರುವಂತೆಯೂ ಉಪಯೋಗಿಸಲಾಗುತ್ತದೆ. ಆರೋಗ್ಯಕ್ಕೆ ತುಂಬಾ ಉತ್ತಮವಾಗಿರುವ ಕಾರಣ ಕೆಲವೊಮ್ಮೆ ಹಾಲಿನ ಬದಲಾಗಿಯೂ ಬಳಸಲಾಗುತ್ತದೆ.
ನಮಗೆಲ್ಲರಿಗೂ ಗೊತ್ತಿರುವ ಹಾಗೆ ಒಣಫಲಗಳೆಲ್ಲವೂ ಆರೋಗ್ಯಕ್ಕೆ ಉತ್ತಮ. ಅವುಗಳಲ್ಲಿ ಬಾದಾಮಿಯದ್ದು ಅಗ್ರಸ್ಥಾನವಾಗಿದ್ದು ಇದರ ಪೋಷಕಾಂಶಗಳು ಹಲವು ರೀತಿಯಲ್ಲಿ ದೇಹಕ್ಕೆ ಪೋಷಣೆಯನ್ನು ನೀಡುತ್ತವೆ. ಅಷ್ಟೇ ಅಲ್ಲ, ಚರ್ಮ ಮತ್ತು ಕೂದಲ ಆರೈಕೆಗೂ ಅತ್ಯುತ್ತಮವಾಗಿವೆ. ತ್ವಚೆಯ ಕಾಂತಿ ಹೆಚ್ಚಲು ಬಾದಾಮಿಯನ್ನು ಬಳಸಿ ತಯಾರಿಸಿದ ಮುಖಲೇಪಗಳು ಬಹಳ ಹಿಂದಿನಿಂದ ಆಚರಿಸಿಕೊಂಡು ಬರಲಾಗಿರುವ ವಿಧಾನವಾಗಿದ್ದು ತಾಜಾತನವನ್ನು ಹೆಚ್ಚು ಕಾಲ ಉಳಿಸಿಕೊಳ್ಳಲು ನೆರವಾಗುತ್ತದೆ.
ಬಾದಾಮಿಯನ್ನು ಮುಖದ ಚರ್ಮದ ಆರೈಕೆಗೆ ಬಳಸುವ ಮೂಲಕ ವೃದ್ಧಾಪ್ಯದ ಚಿಹ್ನೆಯನ್ನು ನಿಧಾನಗೊಳಿಸಲು ಹಾಗೂ ಮೃದುವಾದ ಮತ್ತು ಕಲೆರಹಿತವಾದ ತ್ವಚೆಯನ್ನು ಹೊಂದಲು ಸಾಧ್ಯವಾಗುತ್ತದೆ. ಇಷ್ಟೆಲ್ಲಾ ಗುಣಗಳಿರುವ ಬಾದಾಮಿಯನ್ನು ಮುಖಲೇಪದ ರೂಪದಲ್ಲಿ ಹೇಗೆ ಬಳಸಬಹುದು ಎಂಬುದನ್ನು ಇಂದು ಪ್ರಸ್ತುತಪಡಿಸಲಾಗುತ್ತಿದ್ದು ಇವು ಸುಲಭವಾಗಿ ಮನೆಯಲ್ಲಿಯೇ ಆಚರಿಸಬಹುದಾಗಿವೆ...

ನೈಸರ್ಗಿಕ ತೇವಕಾರಕ (ಮಾಯಿಶ್ಚರೈಸರ್)
ಬಾದಾಮಿಯಲ್ಲಿ ಹೇರಳವಾಗಿರುವ ಕೊಬ್ಬಿನ ಆಮ್ಲಗಳು ಚರ್ಮದ ಆಳಕ್ಕೆ ಇಳಿದು ಅಗತ್ಯವಿರುವ ಆರ್ದ್ರತೆಯನ್ನು ನೀಡಲು ಸಕ್ಷಮವಾಗಿವೆ. ಬಾದಾಮಿಯನ್ನು ಚರ್ಮದ ಮೇಲೆ ಬಳಸುವುದರಿಂದ ಇದೊಂದು ನೈಸರ್ಗಿಕ ತೇವಕಾರಕದಂತೆ ಕಾರ್ಯ ನಿರ್ವಹಿಸುತ್ತದೆ. ಈ ಮೂಲಕ ಚರ್ಮ ಆರೋಗ್ಯಕರ ಹಾಗೂ ಮೃದುವಾಗಿರುತ್ತದೆ.

ವೃದ್ಧಾಪ್ಯದ ಚಿಹ್ನೆಗಳನ್ನು ತಡೆಯುತ್ತದೆ
ಬಾದಾಮಿಯಲ್ಲಿರುವ ವಿಟಮಿನ್ ಇ ಹಾಗೂ ಆಂಟಿಆಕ್ಸಿಡೆಂಟುಗಳು ದೇಹದಲ್ಲಿರುವ ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳ ವಿರುದ್ಧ ಹೋರಾಡುತ್ತವೆ. ಈ ಕಣಗಳು ಚರ್ಮವನ್ನು ಘಾಸಿಗೊಳಿಸಿ ಸಹಜ ಸೌಂದರ್ಯವನ್ನು ಕಸಿಯುತ್ತದೆ. ಬಾದಾಮಿಯನ್ನು ಚರ್ಮದ ಮೇಲೆ ಹಚ್ಚಿಕೊಳ್ಳುವ ಮೂಲಕ ಈ ಕಣಗಳ ಪ್ರಭಾವವನ್ನು ನಿಷ್ಕ್ರಿಯಗೊಳಿಸಿ ಮುಖದ ಚರ್ಮದ ಮೇಲೆ ಬೀಳುವ ಸೂಕ್ಷ್ಮ ಗೆರೆಗಳನ್ನು ಹಾಗೂ ನೆರಿಗೆಗಳನ್ನು ಮೂಡದಂತೆ ತಡೆಯಬಹುದು.

ಇದನ್ನು ಹೇಗೆ ತಯಾರಿಸುವುದು....
ಇದಕ್ಕಾಗಿ ಕೆಲವು ಬಾದಾಮಿಗಳನ್ನು ನುಣ್ಣಗೆ ಅರೆದು ಒಂದು ಚಿಕ್ಕ ಚಮಚ ಅರಿಶಿನ ಪುಡಿ ಹಾಗೂ ಒಂದು ಚಿಕ್ಕಚಮಚ ಗುಲಾಬಿ ನೀರಿನೊಂದಿಗೆ ಚೆನ್ನಾಗಿ ಬೆರೆಸಿ ಲೇಪ ತಯಾರಿಸಿ. ಈ ಲೇಪವನ್ನು ಈಗತಾನೇ ತೊಳೆದುಕೊಂಡ ಮುಖದ ಮೇಲೆ ತೆಳುವಾಗಿ ಹಚ್ಚಿ ಒಣಗಲು ಬಿಡಿ. ಈ ಪದರ ಒಣಗಿ ಬಿರುಕು ಬಿಡಲು ಪ್ರಾರಂಭಿಸಿದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಸೂರ್ಯನ ಪ್ರಖರ ಕಿರಣಗಳಿಂದ ರಕ್ಷಿಸುತ್ತದೆ
ಕೆಲವು ಬಾದಾಮಿಗಳನ್ನು ಕೊಂಚ ಹಸಿಹಾಲಿನಲ್ಲಿ ಇಡಿಯರಾತ್ರಿ ನೆನೆಸಿಡಿ. ಮರುದಿನ ಈ ಬಾದಾಮಿಗಳನ್ನು ನುಣ್ಣಗೆ ಅರೆದು ಎರಡು ಚಿಕ್ಕ ಚಮಚ ಗ್ಲಿಸರಿನ್ ದ್ರವವನ್ನು ಬೆರೆಸಿ. ಈ ಮಿಶ್ರಣವನ್ನು ಈಗತಾನೇ ತೊಳೆದುಕೊಂಡ ಮುಖಕ್ಕೆ ಹಚ್ಚಿ ಒಣಗಲು ಬಿಡಿ. ಒಣಗಿದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ಮುಖಲೇಪದ ನಿಯಮಿತ ಬಳಕೆಯಿಂದ ಬಿಸಿಲಿಗೆ ಚರ್ಮ ಕಪ್ಪಗಾಗುವುದನ್ನು ತಡೆಯಬಹುದು ಹಾಗೂ ಈಗಾಗಲೇ ಘಾಸಿಗೊಂಡಿದ್ದ ಚರ್ಮವನ್ನು ಪುನಃಶ್ಚೇತನಗೊಳಿಸಬಹುದು.

ಕಣ್ಣ ಕೆಳಗಿನ ಕಪ್ಪು ವರ್ತುಲಗಳಿಗೆ
ಒಂದು ಚಿಕ್ಕ ಚಮಚ ಬಾದಾಮಿಯನ್ನು ಅರೆದ ಲೇಪ ಹಾಗೂ ಒಂದು ಚಿಕ್ಕ ಚಮಚ ಬಾದಾಮಿ ಎಣ್ಣೆಯನ್ನು ಬೆರೆಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕಣ್ಣ ಕೆಳಗಿನ ಕಪ್ಪಗಾಗಿರುವ ಭಾಗಕ್ಕೆ ತೆಳುವಾಗಿ ನಯವಾದ ಮಸಾಜ್ ಮೂಲಕ ಹಚ್ಚಿ. ಉಳಿದ ಭಾಗಕ್ಕೂ ತೆಳುವಾಗಿ ಹಚ್ಚಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಉರಿಯುತ್ತಿರುವ ಚರ್ಮವನ್ನು ಶಮನಗೊಳಿಸುತ್ತದೆ
ಒಂದು ವೇಳೆ ಮುಖದ ಚರ್ಮ ಉರಿಯುತ್ತಿರುವಂತೆ ಅನ್ನಿಸಿದರೆ ಸುಮಾರು ಎರಡರಿಂದ ಮೂರು ಚಮಚ ಬಾದಾಮಿ ಅರೆದ ಲೇಪ ಹಾಗೂ ಒಂದು ಚಿಕ್ಕ ಚಮಚ ಲಿಂಬೆರಸ ಮತ್ತು ಒಂದು ಚಿಕ್ಕ ಚಮಚ ಮೊಸರು ಬೆರೆಸಿ ಮಿಶ್ರಣ ಮಾಡಿ. ಈ ಲೇಪವನ್ನು ಮುಖಕ್ಕೆ ದಪ್ಪನಾಗಿ ಹಚ್ಚಿ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.



Click it and Unblock the Notifications