For Quick Alerts
ALLOW NOTIFICATIONS  
For Daily Alerts

  ಶುಷ್ಕ ತ್ವಚೆಯೆ? ಈ ಸುಲಭವಾದ ಬೆಣ್ಣೆ ಮಿಶ್ರಣಗಳನ್ನು ಬಳಸಿ ನೋಡಿ

  By Anuradha Yogesh
  |

  ಈಗಾಗಲೇ ಚಳಿಗಾಲದ ಪರಿಣಾಮ ಶುರುವಾಗಿದೆ, ಅಲ್ಲಲ್ಲಿ ತ್ವಚೆ ಒಣಗಿ ಬಿರುಕು ಬಿಡುವುದು ಸಾಮಾನ್ಯವಾಗಿ ಎಲ್ಲರ ಅನುಭವಕ್ಕೆ ಬರುತ್ತಿರಬಹುದು. ಅನೇಕ ಬಾರಿ ಈ ಪರಿಸ್ಥಿತಿಯು 'ಎಕ್ಸೆಮಾ' ಎಂಬ ಸ್ಥಿತಿಯನ್ನು ತಂದೊಡ್ಡುತ್ತದೆ. ಇದು ಬಹಳ ಕಿರಿ ಕಿರಿ ಉಂಟುಮಾದುವದು. ಕೆಲವೊಮ್ಮೆ ವೈದ್ಯರು ಈ ಸ್ಥಿತಿ ನಿಭಾಯಿಸಲು ಸ್ಟೀರಾಯ್ಡ್ ಕೂಡ ಕೊಟ್ಟುಬಿಡುವರು. ಇದಂತು ಅತ್ಯಂತ ಅಪಾಯಕಾರಿಯಾದದ್ದು. ಮಹಿಳೆಯರಂತು ಶುಷ್ಕ ತ್ವಚೆ ನಿವಾರಣೆಗೆ ಎಷ್ಟು ಫಜೀತಿ ಪಡುವರೋ ದೇವರಿಗೇ ಗೊತ್ತು! ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ತರಹದ ಮಾಯಿಶ್ಚರೈಸರ್ ಉಪಯೋಗಿಸಿದರೂ ಕೆಲವೊಮ್ಮೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುವದಿಲ್ಲ. ಕೇವಲ ನಮ್ಮ ದುಡ್ಡು ದಂಡವಾಗುವದೇ ಹೊರತು ಪರಿಹಾರ ದೊರಕುವದೇ ಇಲ್ಲ.

  ಶುಷ್ಕ ತ್ವಚೆಯ ರಕ್ಷಣೆಗಾಗಿ ಕೋಕೋ ಬಟರ್!

  ನಮಗೆಲ್ಲ ಗೊತ್ತಿರುವಂತೆ ಬೆಣ್ಣೆ ಎಂದಕೂಡಲೇ ನೆನಪಾಗುವದು ದಾವಣಗೆರೆ ಬೆಣ್ಣೆ ದೋಸೆ...! ಅಲ್ಲ ಮಾರಾಯರೆ ಕೃಷ್ಣನ ಬೆಣ್ಣೆ ಬಿಟ್ಟು ಬೇರೆ ತರಹದ ಬೆಣ್ಣೆಗಳೂ ಇವೆ. ಓದಿ ನೋಡಿ. ಬೆಣ್ಣೆಯ ಮುಖ್ಯವಾದ ಅಂಶ 'ಜಿಡ್ಡು'. ಇದೇ ತ್ವಚೆಯ ಶುಷ್ಕತೆ ಹೋಗಲಾಡಿಸಲು ಬೇಕಾದ ಪ್ರಮುಖ ಅಂಶವಲ್ಲವೆ? ಹಲವಾರು ತರಹದ ಬೆಣ್ಣೆಗಳನ್ನು ಉಪಯೋಗಿಸಿಕೊಂಡು ಶುಷ್ಕ ತ್ವಚೆಯ ನಿವಾರಣೆಯನ್ನು ಮಾಡಿಕೊಳ್ಳುವದು ಅತಿ ಸುಲಭ ಎಂದರೆ ನಂಬುವಿರಾ? ಇದು ಸತ್ಯ, ಕೆಳಕಂಡ ವಿಧಾನಗಳನ್ನು ಪ್ರಯತ್ನಿಸಿ ನೋಡಿ ನಿಮಗೆ ಒಳ್ಳೆಯ ಪರಿಣಾಮ ದೊರಕುವದರಲ್ಲಿ ಸಂಶಯವೇ ಇಲ್ಲ....

  ರೆಸಿಪಿ

  ರೆಸಿಪಿ

  ಬೇಕಾದ ಸಾಮಗ್ರಿಗಳು

  *2 ಚಮಚ ಕೊಬ್ಬರಿ ಎಣ್ಣೆ

  *1 ಚಮಚ ಶೇ ಬಟ್ಟರ್

  *4-5 ಹನಿ ಜೋಜೋಬಾಎಣ್ಣೆ

  ರೆಸಿಪಿ-3

  ರೆಸಿಪಿ-3

  ಬೇಕಾದ ಸಾಮಗ್ರಿಗಳು:

  *1ಚಮಚ ಕೋಕಂ ಬೆಣ್ಣೆ

  *4-5 ಹನಿ ಲ್ಯಾವೆಂಡರ್ ಎಣ್ಣೆ

  *1 ಚಮಚ ಬಾದಾಮಿ ಎಣ್ಣೆ

  ವಿಧಾನ:

  ಬಿಸಿನೀರಿನ ಸ್ನಾನ ಮಾಡಿದ ಕೂಡಲೆ, ತ್ವಚೆಯನ್ನು ಸಂಪೂರ್ಣವಾಗಿ ಒಣಗುವಂತೆ ಒರೆಸಿಕೊಳ್ಳಿ. ನಂತರ ಈ ಮೇಲೆ ಹೇಳಿದ ಮಿಶ್ರಣವನ್ನು ತ್ವಚೆಗೆ ಲೇಪಿಸಿಕೊಳ್ಳಿ. ನಿಮಗೆ ಯಾವದೇ ಮಾಯಿಶ್ಚರೈಸರ್ ಕೂಡ ಬೇಕಾಗುವದೇ ಇಲ್ಲ. ಇದನ್ನು ವಾರದಲ್ಲಿ 3 ರಿಂದ 4 ಬಾರಿ ಪ್ರಯೋಗಿಸಿದರೆ ಸಾಕು, ಅದ್ಭುತವಾದ ಪರಿಣಾಮ ಕಂಡುಬರುವದು.

  ರೆಸಿಪಿ-4

  ರೆಸಿಪಿ-4

  ಬೇಕಾದ ಸಾಮಗ್ರಿಗಳು

  *2 ಚಮಚ ಕೋಕೋ ಬಟ್ಟರ್

  *2 ಚಮಚ ಲೋಳೆ ಸರದ ಜೆಲ್(ಮಾರುಕಟ್ಟೆಯಲ್ಲಿ ಸಿಗುವದು, ಇಲ್ಲವೆಂದರೆ ನೀವೆ ಲೋಳೆಸರದ ಎಲೆಯಿಂದ ಮನೆಯಲ್ಲೇ ಪಡೆದುಕೊಳ್ಳಬಹುದು)

  *1/2 ಚಮಚ ರೋಸ್ ವಾಟರ್

  *1 ಚಮಚ ಆಲಿವ್ ಎಣ್ಣೆ

  ವಿಧಾನ

  ಮೇಲೆ ಹೇಲಿದ ಸಾಮಗ್ರಿಗಳನ್ನು ಚೆನ್ನಾಗಿ ಕಲೆಸಿಕೊಳ್ಳಿ. ಬಿಸಿನೀರಿನ ಸ್ನಾನದ ನಂತರ, ಈ ಮಿಶ್ರಣವನ್ನು ಬಿರುಕು ಬಿಟ್ಟು ಒಣಗಿರುವ ತ್ವಚೆಗೆ ನಿಧಾನವಾಗಿ ಲೇಪಿಸಿಕೊಳ್ಳಿ.

  ವಾರದಲ್ಲಿ 3-4 ಬಾರಿ ಈ ವಿಧಾನ ಅನುಸರಿಸಿದರೆ ಸಾಕು ಕೋಮಲವಾದ ಹೊಳಪುಳ್ಳ ತ್ವಚೆ ನಿಮ್ಮದಾಗುವದರಲ್ಲಿ ಸಂಶಯವೇ ಇಲ್ಲ!

  ರೆಸಿಪಿ-5

  ರೆಸಿಪಿ-5

  ಬೇಕಾದ ಸಾಮಗ್ರಿಗಳು

  ಚಮಚ ಸೆಣಬಿನ ಬೀಜದ ಎಣ್ಣೆ

  ಚಮಚ ವಿಟಮಿನ್ ಈ ಎಣ್ಣೆ

  3 ರಿಂದ 4 ಹನಿ ಗ್ಲಿಸೆರಿನ್

  ಸೆಣಬು ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ, ಅಷ್ಟೇ ತ್ವಚೆಯ ರಕ್ಷಣೆಗೂ ಉತ್ತಮ ಎಂಬುದು ನಿಮಗೆ ಗೊತ್ತಿತ್ತಾ?

  ಈ ಎಲ್ಲ ಸಾಮಗ್ರಿಗಳ ಮಿಶ್ರಣವನ್ನು ತಯಾರಿಸಿಟ್ಟು, ಬಿಸಿನೀರಿನಲ್ಲಿ ಸ್ನಾನ ಮಾಡಿಕೊಳ್ಳಿ. ನಂತರ ಒಣಗಿದ ಚರ್ಮ ಇರುವ ಕಡೆಯೆಲ್ಲ ಈ ಹೆಡಸುಭರಿತ ಬೆಣ್ಣೆಯ ಮಿಶ್ರಣವನ್ನು ಚೆನ್ನಾಗಿ ಲೇಪಿಸಿಕೊಳ್ಳಿ. ಇದು ಅತ್ಯಂತ ಶುಷ್ಕತೆ ತರುವ ಎಕ್ಸೆಮಾಗೆ ಕೂಡ ನಿವಾರಣೆಯನ್ನು ಒದಗಿಸುತ್ತದೆ.

  ರೆಸಿಪಿ-5

  ರೆಸಿಪಿ-5

  ಬೇಕಾದ ಸಾಮಗ್ರಿಗಳು

  1 ಚಮಚ ಮಾವಿನ ಗೊಟ್ಟದಿಂದ ತಯಾರಿಸಿದ ಎಣ್ಣೆ(ಮಾರುಕಟ್ಟೆಯಲ್ಲಿ ಲಭ್ಯವಿದೆ)

  .2 ಚಮಚ

  .3 ಚಮಚ ಸಾಸಿವೆ ಎಣ್ಣೆ

  . 1/2 ಚಮಚ ರೋಸ್ ವಾಟರ್

  . 3 ರಿಂದ 4 ಹನಿ ಜೆರೇನಿಯಂ ಸಾರಭೂತ ಎಣ್ಣೆ

  ನಮ್ಮ ಹಣ್ಣುಗಳ ರಾಜನ ಕಾರುಬಾರು ನೋಡಿ ಹೇಗಿದೆ? ತಿನ್ನಲಂತೂ ಎಲ್ಲರೂ ಮುಗಿಬೀಳುವರೆ, ಆದರೆ ಪಾಪ ಅದರ ಗೊರಟವನ್ನು ಕಡೆಗಣಿಸಿ ಎಸೆದುಬಿಡುತ್ತೇವೆ. ಆದರೆ ಗೊರಟದಿಂದ ತಯಾರಿಸಿದ ಎಣ್ಣೆ ಕೂಡ ಫಲಕಾರಿ ಎಂದರೆ ಇದು ಕಲ್ಪವೃಕ್ಷ ಎನಿಸಿಕೊಳ್ಳುವ ತೆಂಗಿಗೆ ಒಳ್ಳೆಯ ಸ್ಪರ್ಧೆ ಕೊಡುತ್ತದಲ್ಲವೆ?

  ಇರಲಿ, ವಿಧಾನ ತಿಳಿಯೋಣ ಬನ್ನಿ. ಮೇಲಿನ ಎಲ್ಲ ಸಾಮಗ್ರಿಗಳನ್ನು ಚೆನ್ನಾಗಿ ಬೆರೆಸಿಕೊಳ್ಳಿ. ಸ್ನಾನದ ನಂತರ ಶುಷ್ಕ ತ್ವಚೆಗೆ ಚೆನ್ನಾಗಿ ಲೇಪಿಸಿಕೊಳ್ಳಿ. ಈ ಮಾಯಿಶ್ಚರೈಸರ್ ಮಾಡುವ ಮಾಜಿಕ್ ಒಮ್ಮೆ ಈ ವಿಧಾನ ಅನುಸರಿಸಿಯೇ ತಿಳಿಯಿರಿ.

  ರೆಸಿಪಿ-6

  ರೆಸಿಪಿ-6

  ಬೇಕಾದ ಸಾಮಗ್ರಿಗಳು

  2 ಚಮಚ ಬದಾಮಿನ ಎಣ್ಣೆ

  2 ಚಮಚ ಗಟ್ಟಿ ಮೊಸರು

  2 ಚಮಚ ಕೊಬ್ಬರಿ ಎಣ್ಣೆ

  ವಿಧಾನ

  ಬದಾಮಿ ಸೇವನೆಯಿಂದ ಹೇಗೆ ಹೃದಯದ ಆರೋಗ್ಯ ಸುಧಾರಿಸುವದೋ, ಹಾಗೆಯೇ ಅದರಲ್ಲಿನ ಎಣ್ಣೆಯ ಅಂಶ ಶುಷ್ಕತೆಯನ್ನು ನಿವಾರಿಸುವದಲ್ಲೇನು ಕಡಿಮೆಯಿಲ್ಲ.

  ಮೇಲೆ ಹೇಳಿದ ಸಾಮಗ್ರಿಗಳ ಮಿಶ್ರಣವನ್ನು ತಯಾರಿಸಿಕೊಳ್ಳಿ. ಸ್ನಾನದ ನಂತರ ತ್ವಚೆಗೆ ಚೆನ್ನಾಗಿ ಲೇಪಿಸಿಕೊಳ್ಳಿ. ವಾರದಲ್ಲಿ ಮೂರ್ನಾಲ್ಕು ಬಾರಿ ಮಾಡಿಕೊಂಡರೂ ಸಾಕು ತ್ವಚೆ ಕೋಮಲವಾಗಿರುವದು.

  ರೆಸಿಪಿ-7

  ರೆಸಿಪಿ-7

  ಬೇಕಾದ ಸಾಮಗ್ರಿಗಳು

  2 ಚಮಚ ಶೇ ಬಟರ್

  1 ಚಮಚ ಹಾಲಿನ ಮೇಲಿನ ತಾಜ ಕೆನೆ

  2ಚಮಚ ಆಲಿವ್ ಎಣ್ಣೆ

  4 ರಿಂದ5ಹನಿಗಳಷ್ಟು ಕಿತ್ತಳೆಯ ಸಾರಭೂತ ಎಣ್ಣೆ

  ಈ ಕಿತ್ತಳೆಯ ಸಾರಭೂತ ಎಣ್ಣೆಯನ್ನು, ಕಿತ್ತಳೆಯ ಜೂಸ್ ತಯಾರಿಸುವಾಗ ಉಪ ಉತ್ಪನ್ನವಾದ ಅದರ ಸಿಪ್ಪೆಗಳಿಂದ ತಯಾರಿಸಲಾಗುತ್ತದೆ. ಹಣ್ಣು ತಿನ್ನುವಾಗ ತೊಳೆಗಳ ಕಡೆಗೆ ಮಾತ್ರ ನಮ್ಮ ಗಮನವಿರುತ್ತದೆ, ಆದರೆ ಹಣ್ಣಿನ ಸಿಪ್ಪೆಯಲ್ಲಿರುವ ಘಮ ಒಮ್ಮೆ ಆಘ್ರಾಣಿಸಿ ನೋಡಿ, ನಿಮಗೇ ತಿಳಿಯುವದು ಅದರ ಬೆಲೆ.

  ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಚೆನ್ನಾಗಿ ಕಲೆಸಿಕೊಳ್ಳಿ. ಸ್ನಾನದ ನಾಂತರ ದೇಹಕ್ಕೆ ಚೆನ್ನಾಗಿ ಲೇಪಿಸಿಕೊಳ್ಳಿ,ಎಷ್ಟು ಫ್ರೆಶ್ ಅನಿಸುವದೋ, ಅಷ್ಟೇ ತ್ವಚೆ ಬೆಣ್ಣೆಯ ಹಾಗೆ ಕೋಮಲ ಎನಿಸುವದು. ಮೇಲೆ ಹೇಳಿದ ವಿಧಾನಗಳೆಲ್ಲ ನಾವು ಉಪಯೋಗವೇ ಇಲ್ಲ ಎಂದುಕೊಂಡ ನೈಸರ್ಗಿಕವಾಗಿ ಸುಲಭವಾಗಿ ಸಿಗುವ ಸಾಮಗ್ರಿಗಳಿಂದಲೇ ತಯಾರಿಸಿದ್ದು. ಈ ಚಳಿಗಾಲ ಪೂರ್ತಿ ನಿಮ್ಮ ಮಾಯಿಶ್ಚರೈಸರ್ ಖರ್ಚು ಉಳಿಸಿದ್ದಕ್ಕಾಗಿ ನೀವು ಬೋಲ್ಡ್ ಸ್ಕೈ ತಂಡಕ್ಕೆ ಧನ್ಯವಾದ ಹೇಳುವದನ್ನು ಮರೆಯಬೇಡಿ!

  English summary

  All Natural Body Butter Recipes For Extremely Dry Skin

  Women suffering from this type of problem, often rely heavily on body lotions and moisturizers to ensure that their skin does not get too flaky. However, a majority of such beauty products turn out to be ineffective in preventing the dry scaly patches from occurring on your skin. In case you’re looking for an effective substitute, then we recommend you to try out body butters, especially the homemade ones. Today, at Boldsky, we’ve compiled a list of body butter recipes that can be used for treating this annoying skin condition.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more