For Quick Alerts
ALLOW NOTIFICATIONS  
For Daily Alerts

  ಮೂಗಿನ ಮೇಲೆ ಮೂಡಿದ ಬ್ಲ್ಯಾಕ್ ಹೆಡ್ ಸಮಸ್ಯೆಗೆ ಪವರ್ ಫುಲ್ ಮನೆಮದ್ದುಗಳು

  By Arshad
  |

  ಕಪ್ಪುತಲೆ ಅಥವಾ ಬ್ಲ್ಯಾಕ್ ಹೆಡ್ ಎಂದು ಕರೆಯುವ ಕಪ್ಪು ಚುಕ್ಕೆಗಳು ಮುಖದಲ್ಲಿ ಮೂಡುವುದು ಇಂದು ಸಾಮಾನ್ಯವಾಗಿ ಹೋಗಿದ್ದು ಇದಕ್ಕೆ ಒಂದಕ್ಕಿಂತ ಹೆಚ್ಚು ಕಾರಣಗಳಿವೆ. ಎಲ್ಲಕ್ಕಿಂತ ಪ್ರಮುಖ ಕಾರಣವೆಂದರೆ ಗಾಳಿಯ ಪ್ರದೂಶಣೆ. ಗಾಳಿಯಲ್ಲಿ ಸೇರಿ ಹೋಗಿರುವ ವಾಹನದ ಹೊಗೆಯ ಕಣಗಳು ಇದಕ್ಕೆ ಮೊದಲ ಕಾಣಿಕೆ. ಇದರ ಹೊರತಾಗಿ ಅಸ್ತವ್ಯಸ್ತವಾದ ಜೀವನಶೈಲಿ, ಅಪಾಯಕಾರಿ ರಾಸಾಯನಿಕಗಳಿಂದ ಕೂಡಿದ ಪ್ರಸಾದನಗಳು ಈ ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಿಸುತ್ತವೆ. ಇವುಗಳ ಬಳಕೆಯಿಂದ ಕಪ್ಪುತಲೆಯೊಂದಿಗೇ ಚರ್ಮದ ಅವಶ್ಯಕ ತೈಲಗಳನ್ನೂ ಹೀರಿಕೊಂಡು ಚರ್ಮವನ್ನು ನಿಸ್ತೇಜವಾಗಿಸುತ್ತವೆ.

  ಅಂದಕ್ಕೆ ಕಪ್ಪು ಚುಕ್ಕೆಯಾದೀತು ಬ್ಲಾಕ್ ಹೆಡ್!

  ಕೊಳೆಯಿಂದ ಚರ್ಮದ ಸೂಕ್ಷ್ಮರಂಧ್ರಗಳು ತುಂಬಿಕೊಂಡು ಒಳಗಿನ ತೈಲ ಹಾಗೂ ಬೆವರು ಹೊರಬರದೇ ಒಳಗೇ ಗಟ್ಟಿಯಾಗಿಬಿಡುತ್ತದೆ. ಹೀಗೆ ಗಟ್ಟಿಯಾದ ಭಾಗ ನಿಧಾನವಾಗಿ ದೊಡ್ಡದಾಗುತ್ತಾ ಸೂಕ್ಷ್ಮರಂಧ್ರದ ಗಾತ್ರವನ್ನು ಕೋನಾಕಾರದಲ್ಲಿ ಹೆಚ್ಚಿಸುತ್ತಾ ಹೋಗುತ್ತದೆ. ಒಳಗಿನ ಕೊಳೆ ಈಗ ಸ್ಪಷ್ಟವಾಗಿ ಹೊರಗೆ ಕಾಣತೊಡಗುತ್ತದೆ. ಇಲ್ಲಿ ಗಾಳಿಯೊಡನೆ ಸಂಪರ್ಕ ಪಡೆದ ಬಳಿಕ ಕಪ್ಪು ಅಥವಾ ಗಾಢಕಂದು ಬಣ್ಣದಲ್ಲಿ ಗೋಚರಿಸುತ್ತದೆ. ಇದೇ ಕಪ್ಪು ತಲೆ.

  ಇದನ್ನು ನಿವಾರಿಸಲು ಬಹುತೇಕ ಪ್ರತಿಯೊಬ್ಬರೂ ಕೈಗೊಳ್ಳುವ ಕ್ರಮವೆಂದರೆ ಎರಡು ಬೆರಳುಗಳ ಉಗುರಿನಿಂದ ಚಿವುಟಿ ತಲೆಯನ್ನು ಹೋಗಲಾಡಿಸಲು ಯತ್ನಿಸುವುದು. ಇದು ಅತ್ಯಂತ ತಪ್ಪಾದ ಕ್ರಮವಾಗಿದೆ. ಏಕೆಂದರೆ ಕಪ್ಪುತಲೆಯ ಹೊರಭಾಗ ಮಾತ್ರ ದೊಡ್ಡದಾಗಿರುತ್ತದೆಯೇ ವಿನಃ ಇದರ ಒಳಭಾಗ ಕೋನಾಕೃತಿಯಲ್ಲಿದ್ದು ತಳ ಚೂಪಾಗಿರುತ್ತದೆ. ಹೇಗೆ ಚಿವುಟಿದಾಗ ಕೇವಲ ತಲೆಯ ಭಾಗ ತುಂಡರಿಸಿ ಹೋಗುತ್ತದೆ, ಆದರೆ ಒಳಭಾಗ ಹಾಗೇ ಉಳಿದುಕೊಳ್ಳುತ್ತದೆ. ಖಾಲಿಯಾದ ತಲೆಯ ಭಾಗ ಕೆಲವೇ ದಿನಗಳಲ್ಲಿ ಮತ್ತೆ ತುಂಬಿಕೊಳ್ಳುತ್ತದೆ. ಇದನ್ನು ನಿವಾರಿಸಬೇಕಾದರೆ ಒಳಗಿನ ಕೊಳೆಯನ್ನೂ ಸಡಿಲಿಸಿ ಬುಡದಿಂದ ಹೊರದೂಡಬೇಕಾಗುತ್ತದೆ. ಈ ಕೆಲಸವನ್ನು ಕೆಲವು ನೈಸರ್ಗಿಕ ಸಾಮಾಗ್ರಿಗಳು ಸಮರ್ಥವಾಗಿ ನಿರ್ವಹಿಸುತ್ತವೆ. ಇಂತಹ ಸಮರ್ಥವಾದ ಹದಿನೇಳು ಮನೆಮದ್ದುಗಳನ್ನು ಇಂದು ಸಂಗ್ರಹಿಸಲಾಗಿದ್ದು ನಿಮಗೆ ಅತ್ಯಂತ ಸೂಕ್ತವೆನಿಸಿದನ್ನು ಪ್ರಯತ್ನಿಸಿ ನೋಡಬಹುದು.

  1) ಅಡುಗೆ ಸೋಡಾ:

  1) ಅಡುಗೆ ಸೋಡಾ:

  ಕಪ್ಪುತಲೆಗಳನ್ನು ಬುಡದಿಂದ ನಿವಾರಿಸಲು ಅಡುಗೆ ಸೋಡಾ ಉತ್ತಮ ಆಯ್ಕೆಯಾಗಿದೆ. ಇದರ ಗುಣಪಡಿಸುವ ಗುಣ ಹಾಗೂ ಚರ್ಮದ ಪಿಎಚ್ (ಆಮ್ಲೀಯ ಕ್ಷಾರೀಯ ಮಟ್ಟದ ಸೂಚ್ಯಂಕ) ಮಟ್ಟವನ್ನು ಸುಸ್ಥಿತಿಯಲ್ಲಿರಿಸಲು ನೆರವಾಗುತ್ತದೆ. ಇದರಿಂದ ಕಪ್ಪುತಲೆ ನಿರ್ಮಾಣಗೊಳ್ಳಲು ಅಗತ್ಯವಿದ್ದ ಪರಿಸ್ಥಿತಿಯೇ ಇಲ್ಲವಾಗಿ ಕಪ್ಪುತಲೆ ಬುಡದಿಂದ ನಿವಾರಣೆಯಾಗುತ್ತದೆ. ಸಾಮಾನ್ಯ ಗಾತ್ರಕ್ಕೆ ವಾರಕ್ಕೊಂದು ಬಾರಿ, ತೀರಾ ಹೆಚ್ಚಿದ್ದರೆ ವಾರಕ್ಕೆರಡು ಬಾರಿ ಕೊಂಚ ಅಡುಗೆ ಸೋಡಾವನ್ನು ನೀರಿನೊಂದಿಗೆ ಬೆರೆಸಿ ದಪ್ಪನೆಯ ಲೇಪನದಂತಾಗಿಸಿ ಮುಖಕ್ಕೆ ಹಚ್ಚಿಕೊಂಡು ಕೊಂಚ ಹೊತ್ತಿನ ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳುವುದರಿಂದ ಕಪ್ಪುತಲೆಗಳು ಮಾತ್ರವಲ್ಲ ಸತ್ತ ಜೀವಕೋಶಗಳೂ ನಿವಾರಣೆಯಾಗುತ್ತದೆ.

  2) ದಾಲ್ಚಿನ್ನಿ:

  2) ದಾಲ್ಚಿನ್ನಿ:

  ದಾಲ್ಚಿನ್ನಿ ಪುಡಿಯನ್ನು ನಿತ್ಯವೂ ಕೊಂಚವಾಗಿ ಸೇವಿಸುತ್ತಾ ಬಂದರೆ ಉತ್ತಮ ಪ್ರಯೋಜನ ಪಡೆಯಬಹುದು. ಇದಕ್ಕಾಗಿ ಸಮಪ್ರಮಾಣದಲ್ಲಿ ದಾಲ್ಚಿನ್ನಿ ಪುಡಿ ಹಾಗೂ ಜೇನನ್ನು ಮಿಶ್ರಣ ಮಾಡಿ ಲೇಪನವನ್ನು ತಯಾರಿಸಿ ಇದನ್ನು ಈಗ ತಾನೇ ತಣ್ಣೀರಿನಲ್ಲಿ ತೊಳೆದುಕೊಂಡ ಮುಖಕ್ಕೆ ತೆಳುವಾಗಿ ಹಚ್ಚಿಕೊಳ್ಳಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಂಡು ಬಳಿಕ ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ. ಬಳಿಕ ನಿಮ್ಮ ನಿತ್ಯದ ತೇವಕಾರಕ (ಮಾಯಿಶ್ಚರೈಸರ್) ಹಾಕಿ ನಯವಾಗಿ ಮಸಾಜ್ ಮಾಡಿ. ಈ ವಿಧಾನದಿಂದ ಲೇಪನದ ಬ್ಯಾಕ್ಟೀರಿಯಾ ನಿವಾರಕ ಗುಣ ಚರ್ಮದ ಆಳದಿಂದ ಕೊಳೆಯನ್ನು ದೂಡಲು ನೆರವಾಗುತ್ತದೆ. ಹಾಗೂ ಕಪ್ಪುತಲೆಗಳಿಲ್ಲದ ನಯವಾದ ತ್ವಚೆ ಪಡೆಯಲು ಸಾಧ್ಯವಾಗುತ್ತದೆ.

  3) ಸೇಬಿನ ಶಿರ್ಕಾ -Apple cider vinegar (ACV)

  3) ಸೇಬಿನ ಶಿರ್ಕಾ -Apple cider vinegar (ACV)

  ಈ ಶಿರ್ಕಾ ಉತ್ತಮ ನೈಸರ್ಗಿಕ ಸ್ವಚ್ಛಕಾರಕ ದ್ರಾವಣವಾಗಿದೆ. ಇದರಲ್ಲಿರುವ ಸಿಟ್ರಿಕ್ ಆಮ್ಲ ಕಪ್ಪುತಲೆ ಮೂಡಿರುವ ರಂಧ್ರಗಳಲ್ಲಿ ಇಳಿದು ಕೊಳೆಯನ್ನು ಸಡಿಲಿಸುತ್ತದೆ ಹಾಗೂ ಚರ್ಮವನ್ನು ಒಳಗಿನಿಂದ ಸ್ವಚ್ಛಗೊಳಿಸುವ ಮೂಲಕ ಮತ್ತೊಮ್ಮೆ ಬ್ಯಾಕ್ಟೀರಿಯಾಗಳು ಬರದಂತೆ ಮಾಡುತ್ತದೆ. ಇದಕ್ಕಾಗಿ ಕೊಂಚ ಶಿರ್ಕಾವನ್ನು ಹತ್ತಿಯುಂಡೆಯಲ್ಲಿ ಮುಳುಗಿಸಿ ಚರ್ಮವನ್ನು ಹೆಚ್ಚಿನ ಒತ್ತಡವಿಲ್ಲದೇ ಒರೆಸಿಕೊಳ್ಳಿ. ಕೊಂಚ ಹೊತ್ತಿನ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಒಂದು ವೇಳೆ ನಿಮ್ಮ ಚರ್ಮ ಸೂಕ್ಷ್ಮ ಸಂವೇದಿಯಾಗಿದ್ದರೆ ಶಿರ್ಕಾವನ್ನು ಕೊಂಚ ನೀರಿನಲ್ಲಿ ಬೆರೆಸಿ ತೆಳುವಾಗಿಸಿಕೊಳ್ಳಬೇಕು.

  4) ಓಟ್ಸ್ ರವೆ:

  4) ಓಟ್ಸ್ ರವೆ:

  ಓಟ್ಸ್ ರವೆಯಿಂದ ಮುಖಲೇಪವನ್ನು ತಯಾರಿಸಲು ಎರಡು ದೊಡ್ಡ ಚಮಚ ಓಟ್ಸ್ ರವೆ ಹಾಗೂ ಮೂರು ದೊಡ್ಡಚಮಚ ಮೊಸರನ್ನು ಬೆರೆಸಿ ಮಿಶ್ರಣ ಮಾಡಿ. ಇದಕ್ಕೆ ಕೊಂಚ ಲಿಂಬೆರಸ ಬೆರೆಸಿ ಈಗತಾನೇ ತೊಳೆದುಕೊಂಡ ಮುಖದ ಮೇಲೆ ದಪ್ಪನಾಗಿ ಹಚ್ಚಿ. ಕೊಂಚ ಹೊತ್ತಿನ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಓಟ್ಸ್ ರವೆಯಲ್ಲಿರುವ ಪೋಷಕಾಂಶಗಳು ಮುಚ್ಚಿದ್ದ ಸೂಕ್ಷ್ಮರಂಧ್ರಗಳನ್ನು ತೆರೆದು ಚರ್ಮದಡಿಯಲ್ಲಿ ಸಿಲುಕಿಕೊಂಡಿದ್ದ ತೈಲಗಳನ್ನು ಹೊರಬರಲು ನೆರವಾಗುತ್ತದೆ. ಪರಿಣಾಮವಾಗಿ ಕಪ್ಪುತಲೆಗಳೂ ಬುಡದಿಂದ ಹೊರಹಾಕಲ್ಪಡುತ್ತವೆ.

  5)ಲಿಂಬೆ ರಸ:

  5)ಲಿಂಬೆ ರಸ:

  ಲಿಂಬೆರಸದಲ್ಲಿರುವ ಸಿಟ್ರಿಕ್ ಆಮ್ಲವೂ ಕಪ್ಪುತಲೆಗಳನ್ನು ನಿವಾರಿಸಲು ಉತ್ತಮ ಆಯ್ಕೆಯಾಗಿದೆ. ಇದು ಕೊಳೆಯನ್ನು ನಿವಾರಿಸುತ್ತದೆ ಹಾಗೂ ಚರ್ಮದಡಿಯಲ್ಲಿ ಉಂಟಾಗಿದ್ದ ಕೀವನ್ನು ಹೊರಹಾಕುತ್ತದೆ. ತನ್ಮೂಲಕ ಕಪ್ಪುತಲೆಯನ್ನೂ ಬುಡದಿಂದ ಹೊರಹಾಕಲು ನೆರವಾಗುತ್ತದೆ. ಕಪ್ಪುತಲೆ ಹೆಚ್ಚಿದ್ದರೆ ಲಿಂಬೆರಸವನ್ನು ನೇರವಾಗಿ ಹಚ್ಚಿಕೊಳ್ಳಬೇಕು. ಹೆಚ್ಚಿಲ್ಲದಿದ್ದರೆ ಸಮಪ್ರಮಾಣದ ಮೊಸರಿನಲ್ಲಿ ಬೆರೆಸಿಕೊಂಡು ಇದಕ್ಕೆ ಕೊಂಚವೇ ಉಪ್ಪು ಬೆರೆಸಿ ಹಚ್ಚಿಕೊಂಡು ಕೊಂಚ ಹೊತ್ತಿನ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳುವ ಮೂಲಕ ಕಪ್ಪುತಲೆಗಳ ಜೊತೆಗೇ ಸತ್ತ ಜೀವಕೋಶಗಳನ್ನೂ ನಿವಾರಿಸಬಹುದು.

  6) ಹಸಿರು ಟೀ:

  6) ಹಸಿರು ಟೀ:

  ಹಸಿರು ಟೀಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಕಲ್ಮಶಗಳನ್ನು ಹೀರಿಕೊಳ್ಳಲು ಸಮರ್ಥವಾಗಿವೆ ಹಾಗೂ ತನ್ಮೂಲಕ ಆರೋಗ್ಯಕರ ತ್ವಚೆಯನ್ನು ಪಡೆಯಲು ನೆರವಾಗುತ್ತವೆ. ಒಂದು ಕಪ್ ಬಿಸಿನೀರಿನಲ್ಲಿ ಕೊಂಚ ಹಸಿರು ಟೀ ಕುದಿಸಿ ಚರ್ಮಕ್ಕೆ ಹಚ್ಚಿಕೊಳ್ಳಲು ಸಾಧ್ಯವಾಗುವಷ್ಟು ತಣಿದ ಬಳಿಕ ಹತ್ತಿಯುಂಡೆಯನ್ನು ಈ ಟೀ ಯಲ್ಲಿ ಮುಳುಗಿಸಿ ಚರ್ಮದ ಮೇಲೆ ಹೆಚ್ಚಿನ ಒತ್ತಡವಿಲ್ಲದೇ ಹಚ್ಚಿಕೊಳ್ಳಿ. ಕೊಂಚ ಒಣಗಲು ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಒಂದು ವೇಳೆ ಕಪ್ಪು ತಲೆಗಳು ವಿಪರೀತವಾಗಿದ್ದರೆ ಹಸಿರು ಟೀಪುಡಿಯನ್ನು ಕೊಂಚವೇ ನೀರಿನಲ್ಲಿ ಕುದಿಸಿ ತಣಿಸಿ ಈ ಟೀಪುಡಿಯನ್ನೇ ಲೇಪನದಂತೆ ಚರ್ಮದ ಮೇಲೆ ದಪ್ಪನಾಗಿ ಹಚ್ಚಿಕೊಂಡು ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

  7) ಜೇನು:

  7) ಜೇನು:

  ಜೇನಿನಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಸೂಕ್ಷ್ಮರಂಧ್ರಗಳ ಒಳಗಿನಿಂದ ಕೊಳೆಯನ್ನು ಹೊರತೆಗೆಯಲೂ ನೆರವಾಗುತ್ತದೆ. ಇದೇ ಗುಣ ಕಪ್ಪುತಲೆಯನ್ನು ಬುಡಸಹಿತ ಹೊರದೂಡಲು ನೆರವಾಗುತ್ತದೆ. ಇದಕ್ಕಾಗಿ ಕೊಂಚ ಜೇನನ್ನು ಉಗುರುಬೆಚ್ಚಗಾಗುವಷ್ಟು ಬಿಸಿ ಮಾಡಿ ಈಗ ತಾನೇ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡ ಮುಖಕ್ಕೆ ನೇರವಾಗಿ ಹಚ್ಚಿ ನಯವಾಗಿ ಮಸಾಜ್ ಮಾಡಿ ಕೊಂಚ ಹೊತ್ತು ಹಾಗೇ ಇರಲು ಬಿಡಿ. ಹತ್ತು ನಿಮಿಷಗಳ ಬಳಿಕ ಉಗುರುಬೆಚ್ಚನೆಯ ನೀರಿನಲ್ಲಿ ಮುಳುಗಿಸಿ ಹಿಂಡಿದ ದಪ್ಪ ಟವೆಲ್ಲಿನಿಂದ ಕೊಂಚವೇ ಒತ್ತಡದಿಂದ ಒರೆಸಿಕೊಳ್ಳಿ. ಕಪ್ಪು ತಲೆಗಳೆಲ್ಲವೂ ಸಡಿಲವಾಗಿ ಟವೆಲ್ಲಿನ ಮೇಲೆ ಬಂದಿರುವುದನ್ನು ಗಮನಿಸಿ.

  8) ಎಪ್ಸಂ ಉಪ್ಪು (Epsom salt)

  8) ಎಪ್ಸಂ ಉಪ್ಪು (Epsom salt)

  ಈ ಉಪ್ಪಿಗೆ ಕೊಳೆಯಿಂದ ಮುಚ್ಚಿಕೊಂಡಿರುವ ಚರ್ಮದ ಸೂಕ್ಷ್ಮರಂಧ್ರಗಳನ್ನು ತೆರೆದು ಸ್ವಚ್ಛಗೊಳಿಸುವ ಗುಣವಿದೆ. ಅರ್ಧ ಕಪ್ ಬಿಸಿನೀರಿನಲ್ಲಿ ಒಂದು ಚಿಕ್ಕ ಚಮಚ ಉಪ್ಪು ಹಾಗೂ ನಾಲ್ಕು ತೊಟ್ಟು ಐಯೋಡಿನ್ ದ್ರಾವಣವನ್ನು ಬೆರೆಸಿ ಚೆನ್ನಾಗಿ ಕಲಕಿ ತಣಿಯಲು ಬಿಡಿ. ಇದು ಉಗುರುಬೆಚ್ಚಗಾಗುವಷ್ಟು ತಣಿದ ಬಳಿಕ ಈ ನೀರಿನಿಂದ ಮುಖವನ್ನು ನಯವಾಗಿ ಮಸಾಜ್ ಮಾಡಿ ಕೊಂಚ ಹೊತ್ತು ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

  9) ಜೆಲಾಟಿಲ್ ಲೇಪ (Gelatin peel)

  9) ಜೆಲಾಟಿಲ್ ಲೇಪ (Gelatin peel)

  ಜೆಲಾಟಿನ್ ಎಂಬ ವಸ್ತುವನ್ನು ಕರಗಿಸಿ ಹಚ್ಚಿಕೊಂಡಾಗ ಇದು ಒಣಗಿ ಸಿಪ್ಪೆಯಂತೇಳುತ್ತದೆ. ಈ ಸಿಪ್ಪೆಯನ್ನು ಎಳೆದು ನಿವಾರಿಸುವಾಗ ಇದಕ್ಕೆ ಕಪ್ಪುತಲೆಗಳೂ ಅಂಟಿಕೊಂಡು ಬರುತ್ತವೆ. ಈ ವಿಧಾನವನ್ನು ಅನುಸರಿಸಲು ಒಂದು ದೊಡ್ಡ ಚಮಚ ಸ್ವಾದರಹಿತ ಜಿಲಾಟಿನ್ ಅನ್ನು ಕೊಂಚ ನೀರಿನಲ್ಲಿ ಎರಡು ಬಾರಿ ಕುದಿಸಿ (ಅಂದರೆ ಒಮ್ಮೆ ತಣಿಸಿ ಮತ್ತೊಮ್ಮೆ ಕುದಿಸಿ) ಅಥವಾ ಮೈಕ್ರೋವೇವ್ ನಲ್ಲಿ ಎರಡು ಬಾರಿ ಬಿಸಿ ಮಾಡಿ. ಇದಕ್ಕೆ ಅರ್ಧ ದೊಡ್ಡಚಮಚ ಹಾಲು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವಷ್ಟು ದಪ್ಪನಾಗಿಸಿ. ಈ ಲೇಪನವನ್ನು ಈಗತಾನೇ ತೊಳೆದುಕೊಂಡ ಮುಖಕ್ಕೆ ಹಚ್ಚಿ ಒಣಗಲು ಬಿಡಿ. ಇದಕ್ಕೆ ಸುಮಾರು ಅರ್ಧ ಘಂಟೆ ಬೇಕಾಗಬಹುದು. ಬಳಿಕ ನಿಧಾನವಾಗಿ ಸಿಪ್ಪೆ ಸುಲಿದಂತೆ ಎಳೆದು ತೆಗೆಯಿರಿ. ಈ ವಿಧಾನ ದೊಡ್ಡ ಕಪ್ಪುತಲೆಗಳಿಗೆ ಹೆಚ್ಚು ಅನ್ವಯವಾಗುತ್ತದೆ. ಚಿಕ್ಕಗಾತ್ರಕ್ಕೆ ಅಷ್ಟು ಪ್ರಯೋಜನಕಾರಿಯಲ್ಲ.

  10) ಮೆಂತೆ:

  10) ಮೆಂತೆ:

  ಮೆಂತೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಾಗೂ ಮೃದುವಾಗಿಸುವ ಗುಣ ಕಪ್ಪುತಲೆಗಳನ್ನು ಬುಡದಿಂದ ಸಡಿಲಿಸಿ ನಿವಾರಿಸಲು ನೆರವಾಗುತ್ತದೆ. ಮೆಂತೆಯ ಬೀಜ ಹಾಗೂ ಇದರ ಎಲೆ ಯಾವುದನ್ನೂ ಬಳಸಬಹುದು. ಮೆಂತೆಕಾಳುಗಳನ್ನು ನೆನೆಸಿಟ್ಟು ಅರೆದು ಅಥವಾ ತಾಜಾ ಎಲೆಗಳನ್ನು ಅರೆದು ಮುಖಕ್ಕೆ ಹಚ್ಚಿಕೊಳ್ಳುವಷ್ಟು ದಪ್ಪನೆಯ ಲೇಪನ ತಯಾರಿಸಿ ಮುಖಕ್ಕೆ ಹಚ್ಚಿ ಸುಮಾರು ಹತ್ತು ನಿಮಿಷದ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

  11) ಸ್ಟ್ರಾಬೆರಿ

  11) ಸ್ಟ್ರಾಬೆರಿ

  ಈ ಹಣ್ಣುಗಳು ಕ್ಷಾರೀಯವಾಗಿವೆ ಹಾಗೂ ಸತ್ತ ಜೀವಕೋಶಗಳನ್ನು ನಿವಾರಿಸಲು ನೈಸರ್ಗಿಕ ಔಷಧಿಯೂ ಆಗಿದೆ. ಚರ್ಮದ ಸೂಕ್ಷ್ಮರಂಧ್ರಗಳನ್ನು ಸ್ವಚ್ಛಗೊಳಿಸಲು ಹಾಗೂ ಕಪ್ಪುತಲೆಗಳನ್ನು ಹೊರದೂಡಲೂ ಇದು ಉತ್ತಮವಾಗಿದೆ. ಇದಕ್ಕಾಗಿ ಒಂದು ಚೆನ್ನಾಗಿ ಹಣ್ಣಾದ ಸ್ಟ್ರಾಬೆರಿಯನ್ನು ಚೆನ್ನಾಗಿ ಕಿವುಚಿ ಇದಕ್ಕೆ ತಲಾ ಅರ್ಧ ಚಿಕ್ಕ ಚಮಚದಷ್ಟು ಜೇನು ಹಾಗೂ ಲಿಂಬೆರಸವನ್ನು ಬೆರೆಸಿ ನುಣ್ಣನೆಯ ಲೇಪನವಾಗಿಸಿ. ಈ ಲೇಪನವನ್ನು ಈಗತಾನೇ ತೊಳೆದುಕೊಂಡ ಮುಖಕ್ಕೆ ಹಚ್ಚಿ ಇಪ್ಪತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ.

  12) ಬಾದಾಮಿ ಪುಡಿ

  12) ಬಾದಾಮಿ ಪುಡಿ

  ಇದರಲ್ಲಿರುವ ವಿಟಮಿನ್ನುಗಳು ಹಾಗೂ ಖನಿಜಗಳು ಚರ್ಮದ ಆರೈಕೆಗೆ ಅತ್ಯುತ್ತಮವಾಗಿವೆ. ವಿಶೇಷವಾಗಿ ಚರ್ಮದ ಹೊರಪದರದ ಸೆಳೆತ ಹೆಚ್ಚುವ ಮೂಲಕ ಕಾಂತಿ ಹೆಚ್ಚುತ್ತದೆ. ತಲಾ ಒಂದು ದೊಡ್ಡಚಮಚ ಬಾದಾಮಿ ಪುಡಿ ಹಾಗೂ ಒಂದರಿಂದ ಎರಡು ದೊಡ್ಡಚಮಚ ಜೇನನ್ನು ಬೆರೆಸಿ ಲೇಪನ ತಯಾರಿಸಿ. ಈ ಲೇಪನವನ್ನು ಮುಖಕ್ಕೆ ಹಚ್ಚಿ ಕೊಂಚ ಹೊತ್ತು ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೋಯಿಸಿಕೊಂಡು ಲೇಪನವನ್ನು ಕೆರೆದು ಸ್ವಚ್ಛಗೊಳಿಸಿ. ಕಪ್ಪು ತಲೆ ನಿವಾರಣೆಯ ಜೊತೆಗೇ ತ್ವಚೆಯ ಕಾಂತಿ ಹೆಚ್ಚುವ ಬೋನಸ್ ಸಹಾ ಲಭ್ಯವಾಗುತ್ತದೆ.

  13) ಅರಿಶಿನ

  13) ಅರಿಶಿನ

  ಅರಿಶಿನ ಯಾವುದಕ್ಕೆ ಔಷಧಿಯಲ್ಲ? ಕಪ್ಪುತಲೆ ನಿವಾರಣೆಗೂ ಇದರಲ್ಲಿರುವ ಕುರ್ಕುಮಿನ್ ಸಮರ್ಥವಾಗಿದೆ. ವಿಶೇಷವಾಗಿ ಸೂಕ್ಷ್ಮರಂಧ್ರಗಳು ಕೊಳೆಯಿಂದ ತುಂಬಿ ಮುಚ್ಚಿಹೋಗಿದ್ದರೆ ಇದರಲ್ಲಿ ಆಶ್ರಯ ಪಡೆದಿದ್ದ ಬ್ಯಾಕ್ಟೀರಿಯಾಗಳನ್ನು ವಿವಾರಿಸುವ ಮೂಲಕ ಹೆಚ್ಚಿನ ಘಾಸಿಯುಂಟಾಗುವುದರಿಂದ ರಕ್ಷಿಸುತ್ತದೆ. ಅರಿಶಿನ ಎಲ್ಲಾ ಬಗೆಯ ತ್ವಚೆಯವರಿಗೂ ಸೂಕ್ತವಾಗಿದ್ದು ನಿತ್ಯವೂ ಉಪಯೋಗಿಸಬಹುದು. ಒಂದು ದೊಡ್ಡ ಚಮಚ ಅರಿಶಿನಪುಡಿ ಹಾಗೂ ಎರಡು ದೊಡ್ಡ ಚಮಚ ಪುದಿನಾ ಎಲೆಗಳನ್ನು ಅರೆದು ಹಿಂಡಿದ ರಸವನ್ನು ಬೆರೆಸಿ ಲೇಪನ ತಯಾರಿಸಿ. ಇದನ್ನು ದಪ್ಪನೆ ಹಚ್ಚಿ ಹತ್ತು ನಿಮಿಷಗಳ ಬಳಿಕ ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ.

  14) ಮೊಟ್ಟೆಯ ಬಿಳಿಭಾಗ:

  14) ಮೊಟ್ಟೆಯ ಬಿಳಿಭಾಗ:

  ಒಂದು ತಾಜಾ ಮೊಟ್ಟೆಯ ಬಿಳಿಭಾಗವನ್ನು ಬೇರ್ಪಡಿಸಿ ಇದನ್ನು ತೆಳುವಾಗಿ ಒಂದು ಬ್ರಶ್ ಮೂಲಕ ಹಚ್ಚಿ ಬಳಿಕ ಮುಖದ ಮೇಲೆ ಫೇಶಿಯಲ್ ಟಿಶ್ಯೂ ಒಂದನ್ನಿರಿಸಿ. ಕೊಂಚ ಹೊತ್ತು ಒಣಗಲು ಬಿಡಿ. ಬಳಿಕ ಇನ್ನೊಮ್ಮೆ ಇದರ ಮೇಲೆ ಇನ್ನೊಂದು ಪದರ ಮೊಟ್ಟೆಯ ಬಿಳಿಭಾಗವನ್ನು ಹಚ್ಚಿ ಇದನ್ನೂ ಒಣಗಲು ಬಿಡಿ. ಚೆನ್ನಾಗಿ ಒಣಗಿದ ಬಳಿಕ ಸಿಪ್ಪೆ ಸುಲಿದಂತೆ ಇದನ್ನು ಎಳೆದು ನಿವಾರಿಸಿ. ಕಪ್ಪುತಲೆಗಳು ಅಂಟಿಕೊಂಡು ಬರುತ್ತವೆ. ಇದರಿಂದ ಚರ್ಮದ ಕಪ್ಪುತಲೆಗಳು ನಿವಾರಣೆಯಾಗುವುದರ ಜೊತೆಗೇ ಸೂಕ್ಷ್ಮರಂಧ್ರಗಳೂ ಬಿಗಿಯಾಗಿ ಇನ್ನಷ್ಟು ಕೊಳೆ ಹೋಗದಂತೆ ತಡೆಯುತ್ತದೆ. ಇದರಿಂದ ಚರ್ಮದೊಳಗೆ ಕೀವಾಗುವುದು ತಪ್ಪುತ್ತದೆ.

  15) ಸಕ್ಕರೆ

  15) ಸಕ್ಕರೆ

  ಸಕ್ಕರೆ ಒಂದು ಉತ್ತಮವಾದ ಸತ್ತ ಜೀವಕೋಶಗಳನ್ನು ನಿವಾರಿಸುವ ಸಾಮಾಗ್ರಿಯಾಗಿದ್ದು ಕಪ್ಪು ತಲೆಗಳನ್ನು ನಿವಾರಿಸಲೂ ಸಮರ್ಥವಾಗಿದೆ. ಕೊಂಚ ಹೋಹೋಬಾ ಎಣ್ಣೆಯೊಂದಿಗೆ (jojoba oil) ಬೆರೆಸಿ ಉಪಯೋಗಿಸಿದರೆ ಇದರ ಗುಣಗಳು ಇನ್ನಷ್ಟು ಹೆಚ್ಚುತ್ತವೆ. ಒಂದು ಕಪ್ ಸಕ್ಕರೆಗೆ ನಾಲ್ಕು ದೊಡ್ಡಚಮಚ ಹೋಹೋಬಾ ಎಣ್ಣೆ ಹಾಕಿ ಚೆನ್ನಾಗಿ ಬೆರೆಸಿ ಲೇಪನ ತಯಾರಿಸಿ. ಇದನ್ನು ಈಗತಾನೇ ತೊಳೆದುಕೊಂಡು ಒದ್ದೆಯಾಗಿರುವ ಮುಖಕ್ಕೆ ಹಚ್ಚಿ ನಯವಾಗಿ ಮಸಾಜ್ ಮಾಡಿ. ಕೊಂಚ ಹೊತ್ತಿನ ಬಳಿಕ ತಣ್ಣನೆಯ ನೀರಿನಿಂದ ತೊಳೆದುಕೊಂಡು ಬಳಿಕ ನಿಮ್ಮ ನಿತ್ಯದ ತೇವಕಾಕರವನ್ನು (ಮಾಯಿಶ್ಚರೈಸರ್) ಹಚ್ಚಿಕೊಳ್ಳಿ.

  16) ಹಾಲು

  16) ಹಾಲು

  ಹಾಲು ಮತ್ತು ಜೇನಿನ ಸೇವನೆ ಆರೋಗ್ಯಕ್ಕೆಷ್ಟು ಒಳ್ಳೆಯದೋ ಅಂತೆಯೇ ಕಪ್ಪುತಲೆ ನಿವಾರಣೆಗೂ ಉಪಯುಕ್ತವಾಗಿದೆ. ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಚರ್ಮವನ್ನು ಮೃದುವಾಗಿಸಿ ತೆರೆದ ಸೂಕ್ಷ್ಮರಂಧ್ರದಲ್ಲಿ ಉಂಟಾದ ಉರಿಯನ್ನು ಶಮನಗೊಳಿಸುತ್ತದೆ. ಸಮಪ್ರಮಾಣದ ಹಾಲು ಜೇನಿನ ಮಿಶ್ರಣವನ್ನು ಕೊಂಚ ಬಿಸಿಮಾಡಿ ಬಳಿಕ ಮುಖಕ್ಕೆ ಹಚ್ಚಿಕೊಳ್ಳಿ. ಹತ್ತಿಯನ್ನು ಅಗಲವಾಗಿ ಹರಡಿ ಒಂದು ಪಟ್ಟಿಯಂತೆ ತಯಾರಿಸಿ ಇದನ್ನು ಲೇಪನದ ಮೇಲೆ ಆವರಿಸುವಂತೆ ಇರಿಸಿ. ಈ ಲೇಪನ ಒಣಗಿದ ಬಳಿಕ ಸಿಪ್ಪೆ ಸುಲಿದಂತೆ ಸುಲಿದು ನಿವಾರಿಸಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

  17) ಮೆಕ್ಕೆ ಜೋಳದ ಹಿಟ್ಟು

  17) ಮೆಕ್ಕೆ ಜೋಳದ ಹಿಟ್ಟು

  ಇದು ಒಂದು ರೀತಿಯಲ್ಲಿ ಅಪಘರ್ಷಕ ಅಥವಾ ಸ್ಯಾಂಡ್ ಪೇಪರ್ ನಂತೆ ಕೆಲಸ ಮಾಡುತ್ತದೆ. ಇದು ನುಣುಪಾಗಿದ್ದು ಚರ್ಮಕ್ಕೆ ಯಾವುದೇ ಘಾಸಿಯಾಗಂತೆ ಕಪ್ಪುತಲೆಗಳನ್ನು ನಿವಾರಿಸುತ್ತದೆ. ತಲಾ ಒಂದು ದೊಡ್ಡಚಮಚದಷ್ಟು ಮೆಕ್ಕೆಜೋಳದ ಹಿಟ್ಟು, ಟೊಮಾಟೋ ಹಣ್ಣಿನ ತಿರುಳು, ಲಿಂಬೆರಸ ಹಾಗೂ ಒಂದು ಚಿಕ್ಕ ಚಮಚ ಜೇನು ಬೆರೆಸಿ ಮಿಶ್ರಣ ಮಾಡಿ. ಇದಕ್ಕೆ ಕೊಂಚ ಗುಲಾಬಿ ನೀರನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ಕೊಂಚ ಹೊತ್ತು ನಯವಾಗಿ ಮಸಾಜ್ ಮಾಡಿಕೊಳ್ಳಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

  English summary

  17 Home Remedies for Treating Blackheads at Home

  Blackheads are pretty common nowadays and the reasons for it are not just one but many. The ever-increasing pollution, the hectic lifestyle, and the chemicals in the cosmetic products are some of the factors contributing to it. These literally take a toll on the skin and make it look lifeless. The pores in the skin get clogged with the dirt, impurities, and oil from one’s own skin. These clogged pores create a bump. On exposure to air, the bump turns black or reddish-brown.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more