For Quick Alerts
ALLOW NOTIFICATIONS  
For Daily Alerts

ಮುಖದ ಸೌಂದರ್ಯಕ್ಕೆ ಕ್ಯಾರೆಟ್ ಮತ್ತು ಹಾಲಿನ ಫೇಸ್‌ಪ್ಯಾಕ್

By Jaya subramanya
|

ಸೌಂದರ್ಯವೆಂಬುದು ಹೆಣ್ಣಿಗೆ ಕಲಶಪ್ರಾಯದಂತೆ. ಆಕೆಯ ಸುಂದರ ಮುಖಾರವಿಂದ, ಆಕರ್ಷಕ ನಗು, ಪ್ರಜ್ವಲಿಸುವ ಕಣ್ಣುಗಳು ಹೀಗೆ ಹೆಣ್ಣಿನ ಸೌಂದರ್ಯದ ಝಲಕು ಎಲ್ಲರನ್ನೂ ಹಿಡಿದಿಡುವಂತೆ ಮಾಡುತ್ತದೆ. ಆದರೆ ಸೌಂದರ್ಯವನ್ನು ವೃದ್ಧಿಸುವುದು ಎಂದರೆ ಅದಕ್ಕಾಗಿ ನೀವು ಕೆಲವೊಂದು ನೈಸರ್ಗಿಕ ವಿಧಾನಗಳನ್ನು ಪಾಲಿಸಬೇಕಾಗುತ್ತದೆ. ರಾಸಾಯನಿಕ ಉತ್ಪನ್ನಗಳು ದಿಢೀರ್ ಆಗಿ ಪರಿಣಾಮವನ್ನು ಬೀರಿದರೂ ಇದು ಶಾಶ್ವತವಾಗಿ ಇರುವುದಿಲ್ಲ. ಸಮೃದ್ಧ ಪೋಷಕಾಂಶಗಳ ಆಗರ- ಕ್ಯಾರೆಟ್ ಜ್ಯೂಸ್

ಆದರೆ ನೈಸರ್ಗಿಕ ಸೌಂದರ್ಯ ಪರಿಹಾರಗಳು ಶಾಶ್ವತವಾಗಿ ನಿಮ್ಮ ಸೌಂದರ್ಯ ತೊಂದರೆಗಳನ್ನು ನಿವಾರಿಸಲಿವೆ. ಅದೂ ಕೂಡ ಆರೋಗ್ಯಕರವಾಗಿ ಇವುಗಳು ಪರಿಣಾಮಗಳನ್ನು ಬೀರುವಂತಿದ್ದು ನಿಮ್ಮ ಸೌಂದರ್ಯವನ್ನು ಉಜ್ವಲಗೊಳಿಸುವುದು ಖಂಡಿತ. ಪ್ರದೂಷಿತ ವಾತಾವರಣ, ಧೂಳು, ಅಂತೆಯೇ ಸಮಯದ ಅಭಾವ ನಿಮ್ಮ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಂತಿದೆ. ನಿಮ್ಮ ತ್ವಚೆಯಲ್ಲಿ ಉಂಟಾಗುವ ಕಪ್ಪು ಕಲೆ, ಮೊಡವೆ, ನೆರಿಗೆಗಳಿಗೆ ಇವುಗಳೂ ಕಾರಣವಾಗಿವೆ. ಕ್ಯಾರೆಟ್ ಫೇಸ್ ಪ್ಯಾಕ್-ತ್ವಚೆಯ ಸುಕ್ಕುಗಳಿಗೆ ಗೇಟ್ ಪಾಸ್!

ನಿಮ್ಮ ತ್ವಚೆಯ ಕುಂದುಕೊರತೆಗಳ ಬಗ್ಗೆ ಯಾರಾದರೂ ಆಡಿಕೊಂಡರೆ ಎಷ್ಟು ಕೋಪ ಬರುತ್ತದೆ ಅಲ್ಲವೇ? ಅಂತೆಯೇ ನಮ್ಮ ಮೇಲೆಯೇ ನಮಗೆ ಅಸಹನೆ ಉಂಟಾಗುತ್ತದೆ ಇಂತಹ ಪರಿಣಾಮಗಳನ್ನು ನಿವಾರಿಸಿಕೊಳ್ಳಬೇಕು ಎಂದಾದಲ್ಲಿ ನೀವು ಸ್ವಲ್ಪ ಸಮಯವನ್ನು ವಿನಿಯೋಗಿಸಲೇ ಬೇಕು. ಅದಕ್ಕಾಗಿ ನೀವು ಕೆಲವೊಂದು ಫೇಸ್ ಮಾಸ್ಕ್‌ಗಳನ್ನು ಅನುಸರಿಸಬೇಕಾಗುತ್ತದೆ. ಅದೇನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ. ಈ ಫೇಸ್ ಮಾಸ್ಕ್ ಕ್ಯಾರೆಟ್ ಮತ್ತು ಹಾಲಿನದ್ದಾಗಿದ್ದು ನಿಮಗೆ ಉತ್ತಮ ತ್ವಚೆ ಅಂತೆಯೇ ತ್ವಚೆಯ ಸಮಸ್ಯೆಗಳನ್ನು ನಿವಾರಿಸುವ ವರವಾಗಿ ಕೂಡ ಪರಿಣಮಿಸಲಿದೆ. ಬನ್ನಿ ಅವುಗಳನ್ನು ನೋಡೋಣ...

ವಿಕಿರಣ ಮೈಬಣ್ಣ

ವಿಕಿರಣ ಮೈಬಣ್ಣ

ಕ್ಯಾರೆಟ್ ಮತ್ತು ಹಾಲಿನ ಮಿಶ್ರಣವು ವಿಟಮಿನ್ ಸಿಯಿಂದ ಕೂಡಿದ್ದು ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿದೆ. ನಿಮ್ಮ ತ್ವಚೆಯ ಕೋಶಗಳನ್ನು ಇವು ಪೋಷಿಸುವುದರ ಮೂಲಕ ಅವುಗಳನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಹಾಗಾಗಿ ನೀವು ಮಾಡಬೇಕಾದದು ಇಷ್ಟೇ, ಕ್ಯಾರೆಟ್ ಅನ್ನು ಚೆನ್ನಾಗಿ ತುರಿದು, ಹಾಲಿನೊಂದಿಗೆ ಮಿಕ್ಸ್ ಮಾಡಿಕೊಂಡು ದಿನಕ್ಕೆ ಎರಡು ಬಾರಿಯಂತೆ ಮುಖಕ್ಕೆ ಹಚ್ಚಿಕೊಂಡು, 15 ನಿಮಿಷದ ನಂತರ ತಣ್ಣೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ.

ಕಲೆರಹಿತ ತ್ವಚೆ

ಕಲೆರಹಿತ ತ್ವಚೆ

ಕ್ಯಾರೆಟ್ ಮತ್ತು ಹಾಲಿನ ಮಿಶ್ರಣ ಮೊಡವೆ, ಕಪ್ಪು ಕಲೆಗಳನ್ನು ನಿವಾರಿಸುತ್ತದೆ ಅಂತೆಯೇ ವರ್ಣದ್ರವ್ಯಗಳನ್ನು ತಗ್ಗಿಸುತ್ತದೆ. ಹೊಳೆಯುವ ಆರೋಗ್ಯಪೂರ್ಣ ತ್ವಚೆಯನ್ನು ನೈಸರ್ಗಿಕವಾಗಿ ಪಡೆದುಕೊಳ್ಳಲು ಇದೊಂದು ಸಲಹೆಯಾಗಿದೆ.

ಯುವತ್ವ ತ್ವಚೆ

ಯುವತ್ವ ತ್ವಚೆ

ಕ್ಯಾರೆಟ್ ಮತ್ತು ಹಾಲು ನಿಮ್ಮ ತ್ವಚೆಯ ಕೋಶಗಳನ್ನು ಪುನರ್ಯೌವನಗೊಳಿಸುತ್ತದೆ. ತ್ವಚೆಯ ಜೀವಕೋಶಗಳನ್ನು ವರ್ಧಿಸಿ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರಿಂದ ಚರ್ಮದ ಸ್ಥಿತಿಸ್ಥಾಪಕತ್ವ ಸುಧಾರಣೆಯನ್ನು ಉತ್ತಮಗೊಳಿಸುತ್ತದೆ ಹಾಗೂ ನಿಮ್ಮ ಯುವತ್ವ ತ್ವಚೆಯನ್ನು ದಯಪಾಲಿಸುತ್ತದೆ.

ಒಣ ತ್ವಚೆ ನಿವಾರಣೆ

ಒಣ ತ್ವಚೆ ನಿವಾರಣೆ

ಕ್ಯಾರೆಟ್‌ನಲ್ಲಿರುವ ವಿಟಮಿನ್ ಸಿ ಅಂಶ ಹಾಗೂ ಹಾಲಿನ ಹೈಡ್ರೇಟಿಂಗ್ ಅಂಶವು ಮೈಬಣ್ಣವನ್ನು ಮಾಯಿಶ್ಚರೈಸ್ ಮಾಡುತ್ತದೆ ಹಾಗೂ ಒಣ ಚರ್ಮವನ್ನು ಕಡಿಮೆ ಮಾಡುವ ಮೂಲಕ ಎಲ್ಲಾ ಸಮಯವೂ ಮೃದುವಾಗಿರಿಸುತ್ತದೆ

ನೈಸರ್ಗಿಕ ಸನ್ ಸ್ಕ್ರೀನ್

ನೈಸರ್ಗಿಕ ಸನ್ ಸ್ಕ್ರೀನ್

ಸೂರ್ಯನ ಅಪಾಯಕಾರಿ ಯುವಿಎ ಮತ್ತು ಯುವಿಬಿ ಕಿರಣಗಳಿಂದ ತ್ವಚೆಯನ್ನು ರಕ್ಷಿಸುವ ಮೂಲಕ ನೈಸರ್ಗಿಕ ಸನ್ ಸ್ಕ್ರೀನ್ ಆಗಿ ಈ ಮಿಶ್ರಣ ಕಾರ್ಯನಿರ್ವಹಿಸುತ್ತದೆ. ಚರ್ಮದ ತೊಂದರೆಗಳು, ಟ್ಯಾನಿಂಗ್ ಮತ್ತು ವರ್ಣದ್ರವ್ಯಗಳ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.

ತ್ವಚೆಯ ಕಿರಿಕಿರಿ ನಿವಾರಣೆ

ತ್ವಚೆಯ ಕಿರಿಕಿರಿ ನಿವಾರಣೆ

ಕ್ಯಾರೆಟ್ ಮತ್ತು ಹಾಲಿನ ನೈಸರ್ಗಿಕ ಮಿಶ್ರಣ ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿದ್ದು ತ್ವಚೆಯ ಗಾಯಗಳನ್ನು ಇದು ನಿವಾರಣೆ ಮಾಡುತ್ತದೆ ಹಾಗೂ ತ್ವಚೆಗೆ ಆರಾಮವನ್ನು ನೀಡುತ್ತದೆ.

ತ್ವಚೆಯ ಆರೋಗ್ಯ ಸುಧಾರಣೆ

ತ್ವಚೆಯ ಆರೋಗ್ಯ ಸುಧಾರಣೆ

ಕ್ಯಾರೆಟ್ ವಿಟಮಿನ್ ಎ ಯನ್ನು ಒಳಗೊಂಡಿದ್ದು ಹಾಲಿನಲ್ಲಿರುವ ಪ್ರೋಟೀನ್‌ ಇವೆರಡರ ಸಂಮಿಶ್ರಣ ತ್ವಚೆಯ ಹಲವಾರು ಸಮಸ್ಯೆಗಳನ್ನು ನಿವಾರಿಸುವ ನೈಸರ್ಗಿಕ ಮದ್ದಾಗಿ ಪರಿಣಮಿಸಲಿದೆ. ಮೊಡವೆ, ಎಸ್ಜಿಮಾ, ದದ್ದುಗಳನ್ನು ಇದು ನಿವಾರಿಸುತ್ತದೆ.

ಮುಖದ ಕೂದಲುಗಳ ನಿವಾರಣೆ

ಮುಖದ ಕೂದಲುಗಳ ನಿವಾರಣೆ

ಹಾಲು ಮತ್ತು ಕ್ಯಾರೆಟ್ ಮಿಶ್ರಣಕ್ಕೆ ಸ್ವಲ್ಪ ಅರಿಶಿನವನ್ನು ಬರೆಸಿಕೊಂಡರೆ ಇದು ಫೇಶಿಯಲ್ ಮಾಸ್ಕ್ ಆಗಿ ಕೆಲಸ ಮಾಡಿ ಮುಖದಲ್ಲಿನ ಬೇಡದೇ ಇರುವ ಕೂದಲುಗಳನ್ನು ನಿವಾರಿಸುತ್ತದೆ. ಅಂತೆಯೇ ಮೃದುವಾದ ತ್ವಚೆಯನ್ನು ನಿಮಗೆ ದಯಪಾಲಿಸುತ್ತದೆ.

English summary

What Happens When You Apply Carrot And Milk On Your Skin?

It is said that, "The first impression is the best impression". This is quite true in most cases. And what are some of the first things people notice about you? Yes, your face, complexion and your smile. So, if you want to make a memorable first impression, it is important for you to have a healthy and radiant complexion, which can make your friends envious!
X
Desktop Bottom Promotion