ಬರೀ ಐದೇ ದಿನಗಳಲ್ಲಿ ಮೊಡವೆ ಕಾಟದಿಂದ ಮುಕ್ತಿ!

By Arshad
Subscribe to Boldsky

ನೀವು ಬಹಳ ದಿನಗಳಿಂದ ಕಾಯುತ್ತಿದ್ದ ಪ್ರಮುಖ ಸಮಾರಂಭ ಅಥವಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸಾಹದಿಂದ ತಯಾರಾಗುತ್ತಿರುವ ಸಮಯದಲ್ಲಿ ಮೇಕಪ್ ಮಾಡಿಕೊಳ್ಳುವಾಗ ಮುಖದಲ್ಲಿ ಮೊಡವೆಯೊಂದು ಕಂಡುಬಂದರೆ ಹೇಗಾಗಬೇಡ? ಇದನ್ನು ಮರೆಮಾಚಲು ಮೇಕಪ್ ಪ್ರಮಾಣವನ್ನು ಹೆಚ್ಚಿಸಿದರೂ ಸಮುದ್ರದ ನಡುವೆ ಎದ್ದ ನಡುಗಡ್ಡೆಯಂತೆ ತೋರುವ ಮೊಡವೆ ನಿಮ್ಮ ಸೌಂದರ್ಯವನ್ನು ಕುಂದಿಸುತ್ತಿದೆ ಎಂಬ ಅಳುಕು ನಿಮ್ಮ ಸ್ಥೈರ್ಯವನ್ನೆಲ್ಲಾ ಉಡುಗಿಸಿಬಿಡಬಹುದು.   ಬ್ಯೂಟಿ ಟಿಪ್ಸ್: ಬರೀ ಒಂದೇ ವಾರದಲ್ಲಿ 16ರ ಸೌಂದರ್ಯ!

ನಮ್ಮ ಮುಖದ ಚರ್ಮ ದೇಹದ ಇತರ ಚರ್ಮಕ್ಕಿಂತಲೂ ಹೆಚ್ಚು ಸೂಕ್ಷ್ಮವಾಗಿದ್ದು ವಿಶೇಷವಾಗಿ ಕೆನ್ನೆಯ ಚರ್ಮದ ಆಳದಲ್ಲಿ ಸ್ರವಿಸುವ ತೈಲಕ್ಕೆ ಹೊರಬರಲು ದಾರಿ ಇಲ್ಲದೇ ಒಳಗೇ ಸಂಗ್ರಹವಾಗುವುದೇ ಮೊಡವೆಗಳಿಗೆ ಮುಖ್ಯ ಕಾರಣವಾಗಿದೆ. ಮುಖದ ಚರ್ಮದ ಹೊರತಾಗಿ ಮೊಡವೆಗಳು ಬೆನ್ನಿನ ಮೇಲ್ಭಾಗ, ಭುಜ, ಹಣೆ, ಗಲ್ಲ, ಕುತ್ತಿಗೆಯಲ್ಲಿಯೂ ಕಾಣಿಸಿಕೊಳ್ಳಬಹುದು. ಎಲ್ಲಿ ಕಾಣಿಸಿಕೊಂಡರೂ ಇದು ಸೌಂದರ್ಯದ ಜೊತೆಗೇ ಆತ್ಮವಿಶ್ವಾಸವನ್ನೂ ಕದಡುವುದರಿಂದ ಇದನ್ನು ನಿವಾರಿಸಲು ಎಲ್ಲರೂ ಚಿವುಟಿಯೇ ಯತ್ನಿಸುತ್ತಾರೆ. ಆದರೆ ಇದು ಸರಿಯಾದ ಕ್ರಮವಲ್ಲ.

Try This Simple Natural Face Pack To Reduce Acne In 5 Days!
 

ಚಿವುಟುವುದರಿಂದ ಮೊಡವೆಯ ತುದಿಭಾಗ ತೆರೆದು ಅಲ್ಲಿಂದ ಕೀವು ಹೊರಬಂದಂತೆ ಅನ್ನಿಸಿದರೂ ಗಟ್ಟಿಯಾಗಿದ್ದ ಬುಡದಲ್ಲಿ ಇನ್ನಷ್ಟೂ ಸೋಂಕು ತುಂಬಿಕೊಳ್ಳಲು ಕಾರಣವಾಗುತ್ತದೆ. ಅಲ್ಲದೇ ಒಡೆದ ಮೊಡವೆಗಳ ಅಕ್ಕಪಕ್ಕ ಇನ್ನಷ್ಟು ಮೊಡವೆಗಳು ಮೂಡಲು ಕಾರಣವಾಗುತ್ತದೆ. ಒಡೆಯುವ ಬದಲಿಗೆ ಈ ನೈಸರ್ಗಿಕ ಮುಖಲೇಪವನ್ನು ಬಳಸಿದರೆ ಐದೇ ದಿನಗಳಲ್ಲಿ ಮೊಡವೆಗಳು ಮೂಲದಿಂದ ಉಚ್ಛಾಟನೆಯಾಗುತ್ತವೆ. ಬನ್ನಿ, ಈ ಅದ್ಭುತ ಮುಖಲೇಪ ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ:   ಮೊಡವೆ ಕಾಟಕ್ಕೆ, ಟೊಮೆಟೊ ಹಣ್ಣಿನ ಫೇಸ್ ಪ್ಯಾಕ್

ಅಗತ್ಯವಿರುವ ಸಾಮಾಗ್ರಿಗಳು:

*ಈರುಳ್ಳಿ ರಸ: ಎರಡು ದೊಡ್ಡಚಮಚ

*ಆಲಿವ್ ಎಣ್ಣೆ: ಒಂದು ಚಿಕ್ಕ ಚಮಚ

Try This Simple Natural Face Pack To Reduce Acne In 5 Days!
 

*ಸಾಮಾನ್ಯವಾಗಿ ಬಾಧಿಸುವ ಮಧ್ಯಮ ಗಾತ್ರದ ಮೊಡವೆಗಳಿಗೆ ನೀರುಳ್ಳಿ ರಸ ಮತ್ತು ಆಲಿವ್ ಎಣ್ಣೆಯ ಮಿಶ್ರಣ ಅತ್ಯಂತ ಸೂಕ್ತವಾಗಿದ್ದು ಮೊಡವೆಗಳು ಹೇಗೆ ಬಂದವೋ ಹಾಗೇ ಉಡುಗಿ ಹೋಗುತ್ತವೆ. ಇದರಿಂದ ಚರ್ಮದಲ್ಲಿ ಕಲೆಯೂ ಉಳಿಯದೇ ಅಕ್ಕಪಕ್ಕಕ್ಕೂ ಹರಡದೇ ನಯವಾಚ ಚರ್ಮ ಪಡೆಯಲು ಸಾಧ್ಯವಾಗುತ್ತದೆ. 

*ಈರುಳ್ಳಿ ರಸ ಒಂದು ಅತ್ಯುತ್ತಮವಾದ ಬ್ಯಾಕ್ಟೀರಿಯಾ ನಿರೋಧಕವಾಗಿದ್ದು ಚರ್ಮದ ಸೂಕ್ಷ್ಮರಂಧ್ರಗಳ ಮೂಲಕ ಚರ್ಮದ ಆಳಕ್ಕೆ ಇಳಿದು ಅಲ್ಲಿ ಸಂಗ್ರಹವಾಗಿದ್ದ ಬ್ಯಾಕ್ಟೀರಿಯಾ ಮತ್ತು ಇದರ ಕಾರಣ ಉಂಟಾಗಿದ್ದ ಸೋಂಕು ನಿವಾರಿಸಲು ಸಮರ್ಥವಾಗಿದೆ. ಈ ಬ್ಯಾಕ್ಟೀರಿಯಾಗಳು ಸತ್ತ ಬಳಿಕ ಚರ್ಮ ತನ್ನ ಮೊದಲಿನ ಸ್ಥಿತಿಯನ್ನು ಪಡೆಯಲು ನಮ್ಮ ಜೀವನಿರೋಧಕ ಶಕ್ತಿಗೆ ಸುಲಭವಾಗುತ್ತದೆ. ಇದರಿಂದ ಮೂಡಿದ್ದ ಮೊಡವೆ ಹಾಗೇ ಇಳಿದುಹೋಗುತ್ತದೆ.    ಮೊಡವೆ ಕಮ್ಮಿಯಾಗಲು ಪಾಲಿಸಬೇಕಾದ ವಿಧಾನಗಳು

ಇದರಿಂದಾಗಿ ಹೊರಚರ್ಮ ಹರಿದು ಇದನ್ನು ರಿಪೇರಿ ಮಾಡಿದ ಬಳಿಕ ಉಂಟಾಗುವ ಕುಳಿ ಅಥವಾ ಕಪ್ಪು ಕಲೆ ಇಲ್ಲವಾದ ಕಾರಣ ಚರ್ಮ ಕಲೆಯಿಲ್ಲದೇ ಸಹಜವರ್ಣ ಪಡೆಯಲು ಸಾಧ್ಯವಾಗುತ್ತದೆ. ಈ ಕೆಲಸಕ್ಕೆ ಆಲಿವ್ ಎಣ್ಣೆ ಸಹಕರಿಸುತ್ತದೆ. ಚರ್ಮದ ಜೀವಕೋಶಗಳು ಮತ್ತೆ ಬೆಳೆಯಲು ಮತ್ತು ಇನ್ನೊಮ್ಮೆ ಈ ಮೊಡವೆಗೆ ಕಾರಣವಾಗುವ ಬ್ಯಾಕ್ಟೀರಿಯಾಗಳ ವಿರುದ್ದ ಹೋರಾಡುವ ಶಕ್ತಿಯನ್ನು ಬೆಳೆಸಲೂ ಆಲಿವ್ ಎಣ್ಣೆ ನೆರವಾಗುತ್ತದೆ. ತನ್ಮೂಲಕ ಮುಂದಿನ ದಿನಗಳಲ್ಲಿ ಮೊಡವೆಗಳಾಗದಂತಿರಲು ಸಾಧ್ಯವಾಗುತ್ತದೆ.

Try This Simple Natural Face Pack To Reduce Acne In 5 Days!
 

ಮುಖಲೇಪ ತಯಾರಿಸುವ ವಿಧಾನ:

1) ಒಂದು ಅಥವಾ ಎರಡು ಈರುಳ್ಳಿಗಳನ್ನು ಸಿಪ್ಪೆ ಸುಲಿದು ಬುಡವನ್ನು ನಿವಾರಿಸಿ ಚಿಕ್ಕದಾಗಿ ಕೊಚ್ಚಿ ಮಿಕ್ಸಿಯ ಬ್ಲೆಂಡರಿನಲ್ಲಿ ಹಾಕಿ ನುಣ್ಣಗೆ ಕಡೆಯಿರಿ.

2) ಬಳಿಕ ತೆಳ್ಳಗಿನ ಬಟ್ಟೆಯೊಂದರಲ್ಲಿ ಸುರಿದು ಹಿಂಡಿ ರಸ ಸಂಗ್ರಹಿಸಿ.

3) ಎರಡು ದೊಡ್ಡಚಮಚದಷ್ಟು ಈ ರಸವನ್ನು ಒಂದು ಚಿಕ್ಕ ಚಮಚ ಆಲಿವ್ ಎಣ್ಣೆಯೊಂದಿಗೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

4) ಈ ಮಿಶ್ರಣವನ್ನು ಈಗತಾನೇ ತಣ್ಣೀರಿನಲ್ಲಿ ಅಥವಾ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡ ಮುಖಕ್ಕೆ ಲೇಪಿಸಿ

5) ಮೊಡವೆಗಳಿರುವ ಸ್ಥಳದಲ್ಲಿ ನಾಲ್ಕಾರು ಬಾರಿ ಹಚ್ಚಿ ದಪ್ಪನಾಗಿ ಲೇಪಿಸಿ.

6) ಸುಮಾರು ಹದಿನೈದು ನಿಮಿಷ ಹಾಗೇ ಒಣಗಲು ಬಿಡಿ. ಕೊಂಚ ಉರಿ ಅನ್ನಿಸಬಹುದು, ಆದರೆ ಮೊಡವೆಗಳ ನಿವಾರಣೆಗೆ ಈ ಉರಿ ತಡೆದುಕೊಳ್ಳುವುದು ಅನಿವಾರ್ಯ.

Try This Simple Natural Face Pack To Reduce Acne In 5 Days!

7) ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಸೋಪು ಬಳಸಬೇಡಿ. ತೊಳೆದ ಬಳಿಕ ಟವೆಲ್ ಒತ್ತಿಕೊಂಡು ಮಾತ್ರ ಒಣಗಿಸಿಕೊಳ್ಳಿ. ಸರ್ವಥಾ ಒತ್ತಡದಲ್ಲಿ ಒರೆಸಬೇಡಿ. ಒರೆಸುವ ಭರದಲ್ಲಿ ಸಡಿಲವಾಗಿದ್ದ ಮೊಡವೆಯ ಹೊರತುದಿ ತುಂಡಾಗಬಹುದು. ಹೀಗಾದರೆ ಸೋಂಕು ಹೆಚ್ಚಾಗುತ್ತದೆ.

8) ಈ ವಿಧಾನವನ್ನು ಪ್ರತಿದಿನವೂ ಒಂದೇ ಸಮಯದಲ್ಲಿ ಸತತವಾಗಿ ಐದು ದಿನ ಪುನರಾವರ್ತಿಸಿ. ಮೊಡವೆಗಳು ಈ ಸಮಯದಲ್ಲಿ ಬಹುತೇಕ ಇಲ್ಲವಾಗಿರುತ್ತವೆ.

9) ಬಳಿಕವೂ ಕೆಲದಿನಗಳ ಕಾಲ ಈ ವಿಧಾನವನ್ನು ಮುಂದುವರೆಸಿ, ಆದರೆ ನೀರುಳ್ಳಿರಸದ ಪ್ರಮಾಣವನ್ನು ಕಾಲುಭಾಗಕ್ಕಿಳಿಸಿ.   ಈ ವಿಧಾನದಿಂದ ಮೊಡವೆ ಕಲೆ ಹೋಗಲಾಡಿಸಬಹುದು

For Quick Alerts
ALLOW NOTIFICATIONS
For Daily Alerts

    English summary

    Try This Simple Natural Face Pack To Reduce Acne In 5 Days!

    Imagine a situation in which you are getting all dressed up to go to a party and you are putting on makeup, but you notice that the acne and pimples on your skin are making your skin look uneven, even with makeup on! Acne is one of the most common skin conditions; and it can make the affected person feel quite dejected, as acne can make us lose a lot of confidence when it comes to our appearance.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more