For Quick Alerts
ALLOW NOTIFICATIONS  
For Daily Alerts

ಕಣ್ಣಿನ ಸುತ್ತಲಿರುವ ಕಪ್ಪು ಕಲೆ ನಿವಾರಣೆಗೆ ನೈಸರ್ಗಿಕ ಪರಿಹಾರ

By Manjula Balaraj
|

ಕಣ್ಣಿನ ಸುತ್ತ ಕಪ್ಪು ಸುತ್ತಿರುವುದರಿಂದ ಮುಖವು ಮಾಸಿದ ಹಾಗೂ ನಿರ್ಜೀವವಾಗಿ ಕಾಣುವ ಸಾಧ್ಯತೆಯಿದೆ. ಇದಕ್ಕೆಲ್ಲಾ ಅನಾರೋಗ್ಯಕರವಾದ ಜೀವನ ಶೈಲಿಯು ಒಂದು ಕಾರಣವಾಗಬಹುದು. ಕಣ್ಣಿನ ಸುತ್ತ ಇರುವ ಕಪ್ಪು ಹಾಗೂ ಮಾಸಿದ ಬಣ್ಣವು ಮುಖದ ಅಂದವನ್ನು ಹೆಚ್ಚಿಸುವ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಕಣ್ಣಿನ ಸುತ್ತದ ಈ ಕಲೆಗೆ ಕಾರಣ ವಯಸ್ಸು, ವಂಶಪಾರಂಪರ್ಯ, ಆಯಾಸ ಮತ್ತು ಒತ್ತಡ ಮುಂತಾದುವುಗಳೂ ಕಾರಣವಾಗಬಹುದು. ಟೊಮೇಟೊ, ಲಿಂಬೆ ಬಳಸಿ ಮುಖದ ಕಪ್ಪು ಕಲೆ ದೂರ ಓಡಿಸಿ

Try These Ultimate Remedies To Get Rid Of Dark Circles, Really Fast!

ನಮ್ಮಲ್ಲಿ ಅನೇಕರು ಈ ಕಣ್ಣ ಸುತ್ತಲಿನ ಕಪ್ಪು ಕಲೆಯ ವೃತ್ತವನ್ನು ಮುಚ್ಚಿಡಲು ದುಬಾರಿ ಸೌಂದರ್ಯ ವರ್ಧಕಗಳನ್ನು ಬಳಸುತ್ತಾರೆ. ಆದರೂ ಕೂಡ ಈ ಕಲೆಗಳು ಗಾಢವಾಗಿ ಆವರಿಸಿರುವುದರಿಂದ ಅಷ್ಟು ಸುಲಭವಾಗಿ ಇದು ಹೋಗುವುದಿಲ್ಲ. ಆದುದರಿಂದ ಈ ಸಮಸ್ಯೆಯಿಂದ ಪಾರಾಗಲು ನೈಸರ್ಗಿಕ ಉಪಾಯಗಳನ್ನು ಬಳಸುವುದು ಸೂಕ್ತ.

ಬೋಲ್ಡ್ ಸ್ಕೈ ಕೆಲವೊಂದು ನೈಸರ್ಗಿಕ ಹಾಗೂ ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ತಯಾರಿಸಬಹುದಾದ ಮದ್ದಿನಿಂದ ಕಣ್ಣ ಸುತ್ತಲಿನ ಕಪ್ಪು ವೃತ್ತದಂತಹ ತೊಂದರೆಗಳಿಗೆ ರಾಮಬಾಣವಾಗಬಹುದಾದ ಪರಿಹಾರಗಳನ್ನು ಸೂಚಿಸುತ್ತದೆ. ಹಾಗಾಗಿ, ಗಾಢವಾದ ಕಲೆಗಳಿಂದ ಒಂದು ನಿಮಿಷದಲ್ಲಿ ಮುಕ್ತಿ ಪಡೆಯಬೇಕೆಂದಿದ್ದರೆ ನೈಸರ್ಗಿಕ ಪರಿಹಾರಗಳನ್ನು ಉಪಯೋಗಿಸಿ. ಇದು 100% ಸುರಕ್ಷಿತ ಮತ್ತು ಆರೋಗ್ಯದಾಯಕ. ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಪುರುಷರಿಗೆ ಸಲಹೆಗಳು

ಸೌತೆಕಾಯಿ
ಈ ತರಕಾರಿಯು ಬೇಸಿಗೆಗೆ ದೇಹವನ್ನು ತಂಪಾಗಿ ಇಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದರಲ್ಲೂ ಕೂಡ ಕೆಲವು ಬಣ್ಣವನ್ನು ಬೆಳ್ಳಗಾಗಿಸುವ ಅಂಶಗಳಿವೆ ಮತ್ತು ಈ ಅಂಶಗಳು ಕಣ್ಣಸುತ್ತಲಿರುವ ಕಪ್ಪು ಕಲೆಯನ್ನು ಕಡಿಮೆ ಮಾಡುವಲ್ಲಿ ಸಹಾಯಕಾರಿಯಾಗಿರುತ್ತದೆ. ಎರಡು ದಪ್ಪಗಿರುವ ಸೌತೆಕಾಯಿಯ ತುಂಡುಗಳನ್ನು ತೆಗೆದುಕೊಂಡು ಅದನ್ನು ಒಂದು ಗಂಟೆಗಳಕಾಲ ಫ್ರಿಡ್ಜ್ ನಲ್ಲಿ ಇಡಬೇಕು. ನಂತರ ಫ್ರಿಡ್ಜ್ ನಿಂದ ತೆಗೆದು ಈ ತುಂಡುಗಳನ್ನು ಕಪ್ಪಾಗಿರುವ ಕಣ್ಣಿನ ಸುತ್ತ ಸಾಧಾರಣ 20 ನಿಮಿಷಗಳ ಕಾಲ ಇಟ್ಟು ನಂತರ ತಂಪಾದ ನೀರಿನಲ್ಲಿ ತೊಳೆಯಬೇಕು. ಹೀಗೆ ಮಾಡುವುದರಿಂದ ಕಣ್ಣಿನ ಸುತ್ತದ ಚರ್ಮದಲ್ಲಿನ ಬಣ್ಣದಲ್ಲಿ ವ್ಯತ್ಯಾಸ ಕಾಣಬಹುದಾಗಿದೆ. ಮುಖದ ಸೌಂದರ್ಯಕ್ಕೆ ಸೌತೆಕಾಯಿಯ ಫೇಸ್ ಪ್ಯಾಕ್

ಆಲೂಗಡ್ಡೆ

ಹಸಿ ಆಲೂಗಡ್ಡೆ ಒಂದು ಉತ್ತಮವಾದ ಬ್ಲೀಚಿಂಗ್ ಅಂಶವಿರುವ ತರಕಾರಿ ಎಂಬುದರಲ್ಲಿ ಸಂಶಯವಿಲ್ಲ. ಇದರ ಬಳಕೆಯಿಂದ ಕಪ್ಪುಕಲೆ ತಕ್ಷಣ ಮಾಯವಾಗುತ್ತದೆ. ಇದರ ರಸ ತೆಗೆದು ಹತ್ತಿಯ ಸಣ್ಣ ಉಂಡೆ ಮಾಡಿಕೊಂಡು ಅದರಲ್ಲಿ ಅದ್ದಿ ಕಪ್ಪಾಗಿರುವ ಜಾಗಕ್ಕೆ ಹಚ್ಚಬೇಕು ಅಥವಾ 2 ಆಲೂಗಡ್ಡೆ ಯನ್ನು ಎರಡು ವೃತ್ತಾಕಾರವಾಗಿ ಕತ್ತರಿಸಿ ಕಣ್ಣಿನ ಕಪ್ಪಾದ ಜಾಗದಲ್ಲಿ ಇಡುವುದರಿಂದ ಕಪ್ಪು ಕಲೆಯನ್ನು ಹೋಗಲಾಡಿಸಬಹುದಾಗಿದೆ. ಇದರಲ್ಲಿರುವ ಬ್ಲೀಚಿಂಗ್‌ನ ಗುಣವು ಚರ್ಮದ ಕಾಂತಿಯನ್ನು ಉತ್ತಮಗೊಳಿಸುತ್ತದೆ. ಮತ್ತು ತ್ವಚೆಯಲ್ಲಿ ತಾಜಾತನ ಬರುವಲ್ಲಿ ಸಹಾಯಕಾರಿಯಾಗಿದೆ. ಆಲೂಗಡ್ಡೆ ಜ್ಯೂಸ್ ಬಳಸಿ ಮುಖದ ಸುಕ್ಕು ನಿವಾರಿಸಿ...

ಮಂಜುಗಡ್ಡೆ (ಐಸ್ ಕ್ಯೂಬ್)
ಕಣ್ಣಿನ ಸುತ್ತಲಿನ ಕಪ್ಪುಕಲೆಯನ್ನು ಹೋಗಲಾಡಿಸಲು ಐಸ್ ಕ್ಯೂಬ್‌ನ ಬಳಕೆಯು ಎಲ್ಲರಿಗೂ ತಿಳಿದಿರುವಂತಹ ವಿಧಾನ. ಎರಡರಿಂದ ಮೂರು ಐಸ್ ತುಂಡುಗಳನ್ನು ಸ್ವಚ್ಚವಾದ ಒಂದು ಬಟ್ಟೆಯಲ್ಲಿ ಸುತ್ತಿ ಅದನ್ನು ಕಪ್ಪಾದ ಜಾಗದಲ್ಲಿ ನಿಧಾನಕ್ಕೆ ಒತ್ತಬೇಕು. ಹೀಗೆ ಸುಮಾರು 15-20 ನಿಮಿಷಗಳ ಕಾಲ ಮಾಡುವುದರಿಂದ ಕಣ್ಣಿನ ಸುತ್ತಲಿನ ಕಪ್ಪಾದ ಕಲೆಯನ್ನು ಹೋಗಲಾಡಿಸಬಹುದು.

ವಿ ಸೂ: ಕಣ್ಣಿನ ಜಾಗಕ್ಕೆ ಇಂತಹ ಚಿಕಿತ್ಸೆ ಮಾಡುವಾಗ ತುಂಬಾ ಜಾಗರೂಕರಾಗಿರಬೇಕು. ಇಂತಹ ಚಿಕಿತ್ಸೆ ಮಾಡುವ ಮೊದಲು ಸ್ವಲ್ಪ ಬೇರೆ ಜಾಗಕ್ಕೆ ಹಚ್ಚಿ ನೋಡಿಕೊಂಡು ಯಾವುದೇ ತೊಂದರೆ ಇಲ್ಲ ಎಂದು ಖಾತ್ರಿಯಾದ ನಂತರ ಬಳಸಿ.

English summary

Try These Ultimate Remedies To Get Rid Of Dark Circles, Really Fast!

Formation of dark circles under your eyes can make you appear dull, exhausted and lifeless. Often a result of unhealthy lifestyle and routine, the discolouration of the skin under your eyes can bring down your beauty quotient to a great extent. In fact, there are other factors that could cause the skin under your eyes to become dark like ageing, heredity, stress, etc.
Story first published: Saturday, July 9, 2016, 10:34 [IST]
X
Desktop Bottom Promotion