For Quick Alerts
ALLOW NOTIFICATIONS  
For Daily Alerts

ಮೊಡವೆಯ ಕಲೆಗೆ ಚಿಟಿಕೆಯಷ್ಟು ಅಡುಗೆ ಸೋಡಾ ಸಾಕು...

By Deepa
|

ಮೊಡವೆಗಳು ಸೌಂದರ್ಯದ ಶತ್ರುಗಳು, ಇವುಗಳು ಬಂದರೆ, ಅದು ಕೇವಲ ಒಂದು ನೋವು ಮಾತ್ರ ಎಂದು ನೀವು ಭಾವಿಸಿದರೆ, ಅಲ್ಲಿಗೆ ಅದು ಮುಗಿದು ಹೋಗುವುದಿಲ್ಲ. ಮೊಡವೆ ಪರಿಹಾರವಾದ ಮೇಲೆ ಸಹ ಅದರ ಕಲೆಗಳು ನಮ್ಮ ಮುಖದಲ್ಲಿ ಹಠ ಹಿಡಿದು ಕುಳಿತುಬಿಡುತ್ತವೆ. ಜಪ್ಪಯ್ಯಾ ಎಂದರು ಸಹ ಹೋಗದ ಈ ಕಲೆಗಳಿಗೆ ಯಾವ ಕ್ರೀಮ್ ಹಚ್ಚಿದರು ಸಹ ಹೋಗುವುದಿಲ್ಲ. ಅಂತಹ ಅನಿರ್ದಿಷ್ಟಾವಧಿ ಕಾಲದ ಮುಷ್ಕರ ಇವುಗಳದು. ಅದಕ್ಕಾಗಿ ನೀವು ಎಷ್ಟೇಷ್ಟೋ ಪ್ರಯತ್ನಗಳನ್ನು ಮತ್ತು ಪರಿಹಾರಗಳನ್ನು ಮಾಡಿದ್ದೀರಲ್ಲವೇ?

ಅದಕ್ಕಾಗಿ ನಿಮಗೆ ಇಂದು ಸಹಾಯ ಮಾಡಲು ಬೋಲ್ಡ್‌ಸ್ಕೈ ನಿಮಗೆ ಒಂದು ಗ್ಯಾರಂಟಿ ಪರಿಹಾರವನ್ನು ತಂದಿದೆ. ಅದೇ ಅಡುಗೆ ಸೋಡಾ ಪರಿಹಾರ, ಈ ಪರಿಹಾರವನ್ನು ಬಳಸಿ, ಮೊಡವೆ ಕಲೆಗಳಿಗೆ ಸೋಡಾ ಚೀಟಿಯನ್ನು ನೀಡಿ. ನಾವು ಅಡುಗೆಗೆ ಬಳಸುವ ಈ ಸೋಡಾವನ್ನು ಸೌಂದರ್ಯಕ್ಕೆ ತುಂಬಾ ಹಿಂದಿನಿಂದಲೂ ಬಳಸಿಕೊಂಡು ಬರುತ್ತಿದ್ದಾರೆ. ಈ ಅಡುಗೆ ಸೋಡಾವು ತ್ವಚೆಗೆ ಪುನಃಶ್ಚೇತನವನ್ನು ನೀಡುವ ಗುಣಗಳನ್ನು ಒಳಗೊಂಡಿದೆ. ಇದು ತ್ವಚೆಗೆ ಕಡಿಮೆ ಅವಧಿಯಲ್ಲಿ ನಿಮ್ಮ ತ್ವಚೆಗೆ ಹೊಳಪನ್ನು ನೀಡುವುದರ ಜೊತೆಗೆ ಅದಕ್ಕೆ ಆರೋಗ್ಯವನ್ನು ಸಹ ನೀಡುತ್ತದೆ.

ಹೈಪರ್‌‌ಪಿಗ್‌ಮೆಂಟೇಶನ್. ಅಡುಗೆ ಸೋಡಾವು ಎಕ್ಸ್‌ಫೋಲಿಯೇಟ್ ಮಾಡುವಂತಹ ಅಂಶಗಳನ್ನು ಒಳಗೊಂಡಿದೆ. ಇದು ನಿಮ್ಮ ತ್ವಚೆಯಿಂದ ನಿರ್ಜೀವ ಕೋಶಗಳನ್ನು ಹೋಗಲಾಡಿಸುತ್ತದೆ ಮತ್ತು ತ್ವಚೆಯ ಕೋಶಗಳಿಂದ ಎಣ್ಣೆಯಂಶವನ್ನು ನಿವಾರಿಸುತ್ತದೆ. ಇದು ತ್ವಚೆಯಲ್ಲಿ ಪಿಎಚ್ ಪ್ರಮಾಣವನ್ನು ಸಮತೋಲನದಲ್ಲಿಡುತ್ತದೆ. ಹಾಗಾಗಿ ಇದು ಮೊಡವೆಗಳ ಕಲೆಗಳನ್ನು ಹೋಗಲಾಡಿಸಲು ಹೇಳಿ ಮಾಡಿದ ಪರಿಹಾರವೆಂದು ಹೇಳಬಹುದು. ಅದಕ್ಕಾಗಿ ಈ ಅಂಕಣದಲ್ಲಿ ನಾವು ಅಡುಗೆ ಸೋಡಾವನ್ನು ನಿಮ್ಮ ಮುಖದ ಸೌಂದರ್ಯವನ್ನು ಇಮ್ಮಡಿಗೊಳಿಸಲು ಹೇಗೆ ಬಳಸಬಹುದು ಎಂಬುದನ್ನು ತಿಳಿಸಿದ್ದೇವೆ ಮುಂದೆ ಓದಿ.

Treat Pesky Scars With Baking Soda!

ಅಡುಗೆ ಸೋಡಾ ಮತ್ತು ಆಲೀವ್ ಎಣ್ಣೆ
ಆಲೀವ್ ಎಣ್ಣೆಯಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಮತ್ತು ಉಪಶಮನಕಾರಿ ಗುಣಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಈ ಮಿಶ್ರಣವು ನಿಮ್ಮ ಮುಖದ ಮೇಲೆ ಇರುವ ಕಲೆಯನ್ನು ಹೋಗಲಾಡಿಸುತ್ತದೆ. ಆಲೀವ್ ಎಣ್ಣೆಯನ್ನು ಅಡುಗೆ ಸೋಡಾದ ಜೊತೆಗೆ ಬೆರೆಸಿದಾಗ ಅದು ಮೊಡವೆಗಳ ಕಲೆಯನ್ನು ತಿಳಿ ಬಣ್ಣಕ್ಕೆ ತಿರುಗಿಸುವ ಗುಣವನ್ನು ಪಡೆಯುತ್ತದೆ ಮತ್ತು ನಿರ್ಜೀವ ಕೋಶಗಳನ್ನು ತೊಲಗಿಸುತ್ತದೆ. ಜೊತೆಗೆ ಇದು ನಿಮ್ಮ ತ್ವಚೆಯನ್ನು ಮೃದುಗೊಳಿಸುತ್ತದೆ. ಅಡುಗೆ ಸೋಡಾ ನೀಡುತ್ತೆ ಅಂದದ ತ್ವಚೆ

ಅಡುಗೆ ಸೋಡಾ ಮತ್ತು ಅಡುಗೆಪುಡಿ
ಬೇಕಿಂಗ್ ಸೋಡಾವನ್ನು ಅಡುಗೆ ಪುಡಿಯ ಜೊತೆಗೆ ಬೆರೆಸಿಕೊಂಡು ಬಳಸಿದರೆ, ಅದು ಮೊಡವೆಗಳ ಕಲೆಯನ್ನು ಹೋಗಲಾಡಿಸುವ ದಿವ್ಯೌಷಧವಾಗುತ್ತದೆ. ಇದಕ್ಕಾಗಿ 3 ಟೀ ಚಮಚ ಅಡುಗೆ ಸೋಡಾ ಜೊತೆಗೆ 1 ಟೀಸ್ಪೂನ್ ಬೇಕಿಂಗ್ ಪುಡಿಯನ್ನು ಬೆರೆಸಿಕೊಳ್ಳಿ. ಇದನ್ನು ಬಳಸಿಕೊಂಡು ನೀರಿನೊಂದಿಗೆ ಬೆರೆಸಿ ಒಂದು ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ನಿಮ್ಮ ಮುಖದಲ್ಲಿ ಮೊಡವೆಗಳಿರುವ ಜಾಗಕ್ಕೆ ಲೇಪಿಸಿ, ನಂತರ ತೊಳೆಯಿರಿ.

ಅಲೋವಿರಾ ಜೊತೆಗೆ ಅಡುಗೆ ಸೋಡಾ
ಬೇಕಿಂಗ್ ಸೋಡಾ ಜೊತೆಗೆ ಅಲೋವಿರಾವನ್ನು ಬೆರೆಸಿಕೊಂಡರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಅಲೋವಿರಾದಲ್ಲಿರುವ ಉರಿಬಾವು ನಿರೋಧಕ ಗುಣಗಳು ಮೊಡವೆಗಳ ಕಲೆಯನ್ನು ಸಹ ಶೀಘ್ರವಾಗಿ ಗುಣಮುಖ ಮಾಡುತ್ತದೆ. ಇದಕ್ಕಾಗಿ ಅಲೋವಿರಾ ಜೆಲ್ ಜೊತೆಗೆ ಅಗತ್ಯ ಪ್ರಮಾಣದಲ್ಲಿ ಅಡುಗೆ ಸೋಡಾವನ್ನು ಬೆರೆಸಿಕೊಳ್ಳಿ. ಈ ಪೇಸ್ಟ್ ಅನ್ನು ನಿಮ್ಮ ತ್ವಚೆಗೆ ಲೇಪಿಸಿ, ನಂತರ ತೊಳೆಯಿರಿ. ಗೌರವರ್ಣದ ತ್ವಚೆಗಾಗಿ ಚಿಟಿಕೆಯಷ್ಟು ಅಡುಗೆ ಸೋಡಾ ಸಾಕು

ವಿನೇಗರ್ ಜೊತೆಗೆ ಅಡುಗೆ ಸೋಡಾ
ಮೊಡವೆಗಳ ಕಲೆಯನ್ನು ನಿವಾರಿಸಿಕೊಳ್ಳಲು ಇದು ಅತ್ಯುತ್ತಮವಾದ ಮನೆ ಮದ್ದಾಗಿದೆ. ಇದಕ್ಕಾಗಿ ಅಡುಗೆ ಸೋಡಾವನ್ನು ವಿನೇಗರ್ ಜೊತೆಗೆ ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಲೇಪಿಸಿ. ಸ್ವಲ್ಪ ಸಮಯ ಒಣಗಲು ಬಿಟ್ಟು, ನಂತರ ಅದನ್ನು ತೊಳೆಯಿರಿ. ಈ ಪರಿಹಾರವನ್ನು ನಿಮ್ಮ ಮುಖದಲ್ಲಿರುವ ಕಲೆಗಳು ಹೋಗುವವರೆಗೆ ಪ್ರಯೋಗಿಸುತ್ತಾ ಇರಿ.

English summary

Treat Pesky Scars With Baking Soda!

Acne scars are those stubborn pesky marks that leave a bad impression on the face. Acne scars take a very long time to fade from the skin. Sometimes, they don't fade even after using tons of remedies. In this article, we will be listing out some of the best ways to use baking soda to get a clear skin. Read on.
Story first published: Friday, January 29, 2016, 9:40 [IST]
X
Desktop Bottom Promotion