For Quick Alerts
ALLOW NOTIFICATIONS  
For Daily Alerts

ಹಾಲು, ಕರಿಬೇವು, ತುಳಸಿ ಎಲೆಗಳ ನೈಸರ್ಗಿಕ ಫೇಸ್ ಪ್ಯಾಕ್

By Deepu
|

ಸುಂದರವಾದ ತ್ವಚೆಯನ್ನು ಹೊಂದಬೇಕು, ಸುಂದರವಾಗಿ ಕಾಣಿಸಿಕೊಳ್ಳಬೇಕು, ನೋಡುಗರ ಗಮನ ಸೆಳೆಯಬೇಕು ಎಂಬ ಹಂಬಲ ಎಲ್ಲರಿಗೂ ಇರುತ್ತದೆ. ಆದರೆ ಈ ಸೌಂದರ್ಯವನ್ನು ನೀವು ಪಡೆಯಬೇಕು ಎಂದರೆ ನೀವು ಹಲವಾರು ರೀತಿಯಲ್ಲಿ ನಿಮ್ಮ ತ್ವಚೆಯ ಕುರಿತು ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದರಲ್ಲಿಯೂ ತ್ವಚೆಯ ಸ್ವಚ್ಛತೆಯ ಬಗ್ಗೆ ಯಾವುದೇ ರಾಜಿಯಿಲ್ಲದೆ ಕಾಳಜಿಯನ್ನು ತೆಗೆದುಕೊಳ್ಳಬೇಕು.

ಯಾವ ಸಮಯದಲ್ಲಾದರು ನಾವು ಮಾಡುವ ಉದಾಸೀನತೆಯಿಂದ ನಮ್ಮ ತ್ವಚೆಯಲ್ಲಿ ಮೊಡವೆಗಳು, ಕಲೆಗಳು, ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನೀವು ನಿಮ್ಮ ತ್ವಚೆಯನ್ನು ಶುದ್ಧವಾಗಿ ಇರಿಸಿಕೊಂಡರ ಸಾಕು, ತ್ವಚೆಯ ಸಮಸ್ಯೆಗಳು ತನ್ನಿಂದ ತಾನೇ ದೂರ ಉಳಿಯುತ್ತವೆ. ಇದಕ್ಕಾಗಿ ಏನು ಮಾಡಬೇಕು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆಯೇ? ಬನ್ನಿ ಅದಕ್ಕಾಗಿ ನಾವು ಇಂದು ನಿಮಗಾಗಿ ಹಾಲು, ತುಳಸಿ ಮತ್ತು ಕರಿ ಬೇವಿನ ಕ್ಲೀನ್ಸರ್ ಕುರಿತು ತಿಳಿಸುತ್ತಿದ್ದೇವೆ.

Milk, curry leaves and basil herbal cleanser for glowing and clear skin

ಕರಿಬೇವು ಮತ್ತು ತುಳಸಿ ಎಲೆಗಳು ತ್ವಚೆಯ ಮೇಲೆ ಮೊಡವೆಗಳು ಕಾಣಿಸಿಕೊಳ್ಳದಂತೆ ತಡೆಯುತ್ತವೆ ಮತ್ತು ಪಿಗ್‌ಮೆಂಟೇಶನ್ ಅನ್ನು ಕಡಿಮೆ ಮಾಡುತ್ತವೆ ಹಾಗು ವಯಸ್ಸಿನ ಕಲೆಗಳು ಸಹ ತ್ವಚೆಯಲ್ಲಿ ಕಾಣಿಸಿಕೊಳ್ಳದಂತೆ ತಡೆಯುತ್ತವೆ. ಇವುಗಳು ಆಂಟಿ-ಆಕ್ಸಿಡೆಂಟ್, ಉರಿಬಾವು ನಿರೋಧಕ ಗುಣಗಳನ್ನು ತ್ವಚೆಯ ಮೇಲೆ ಉಳಿಸುತ್ತವೆ. ಅದರಲ್ಲಿಯೂ ಇವು ಸ್ವಾಭಾವಿಕ ಮೊಯಿಶ್ಚರೈಸಿಂಗ್ ಅಂಶಗಳನ್ನು ಹೊಂದಿರುವುದರಿಂದ ತ್ವಚೆಗೆ ವರದಾನವಾಗಿ ಪರಿಣಮಿಸುತ್ತವೆ.

ಈ ಕ್ಲೀನ್ಸರ್ ಅನ್ನು ನಿಮ್ಮ ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ತ್ವಚೆಯು ಹೊಳಪಿನಿಂದ ಕಂಗೊಳಿಸುತ್ತದೆ ಮತ್ತು ಅದರ ಬಣ್ಣವು ಸಹ ಹೆಚ್ಚುತ್ತದೆ. ಈ ಕ್ಲೀನ್ಸರ್ ಅನ್ನು ತಯಾರಿಸಲು ತಾಜಾ ಎಲೆಗಳನ್ನು ಬಳಸಿ, ಇವುಗಳನ್ನು ನೀರಿನೊಂದಿಗೆ ಬೆರೆಸಿ ಒಂದು ಮೃದುವಾದ ಪೇಸ್ಟ್ ಆಗಿ ತಯಾರಿಸಿಕೊಳ್ಳಿ ಅಥವಾ ಪುಡಿ ಮಾಡಿದ ಎಲೆಗಳನ್ನು ಗಾಳಿಯಾಡದ ಜಾಡಿಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. ಈ ಪುಡಿಯನ್ನು ನೀವು ಹಾಲಿನ ಜೊತೆಗೆ ಅಥವಾ ನೀರಿನ ಜೊತೆಗೆ ಬೆರೆಸಿ ಕ್ಲೀನ್ಸರ್ ಆಗಿ ಬಳಸಬಹುದು. ಬನ್ನಿ ಈ ಕ್ಲೀನ್ಸರ್ ಅನ್ನು ಹೇಗೆ ತಯಾರಿಸುವುದು ಎಂದು ತಿಳಿದುಕೊಳ್ಳೋಣ.

ತಯಾರಿಸುವ ವಿಧಾನ
*5-6 ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆದುಕೊಳ್ಳಿ ಮತ್ತು ಅದರ ಜೊತೆಗೆ 5-6 ಕರಿ ಬೇವು ಎಲೆಗಳನ್ನು ಸೇರಿಸಿಕೊಂಡು ಒಂದು ಬಟ್ಟಲಿನಲ್ಲಿ ಇಟ್ಟುಕೊಳ್ಳಿ.
*ಕಾಯಿಸಿದ ಹಾಲನ್ನು ಅರ್ಧ ಕಪ್ ತೆಗೆದುಕೊಳ್ಳಿ, ಅದು ಆರಲು ಬಿಡಿ. ನಂತರ ಎಲೆಗಳನ್ನು ಇದಕ್ಕೆ ಸೇರಿಸಿ, ಅರ್ಧ ಗಂಟೆ ನೆನೆಯಲು ಬಿಡಿ.
*ಈ ಮಿಶ್ರಣವನ್ನು ಶೋಧಿಸಿಕೊಳ್ಳಿ, ಆಗ ನಿಮ್ಮ ಮುಂದೆ ಫೇಶಿಯಲ್ ಕ್ಲೀನ್ಸರ್ ತಯಾರಾಗಿರುತ್ತದೆ. ಈ ಕ್ಲೀನ್ಸರ್ ಮೂಲಕ ನೀವು ಮುಖ, ಕುತ್ತಿಗೆಯ ತ್ವಚೆಯನ್ನು ಶುದ್ಧಗೊಳಿಸಿಕೊಳ್ಳಬಹುದು. ಇದನ್ನು ಮುಖ ಮತ್ತು ಕುತ್ತಿಗೆಗೆ ಲೇಪಿಸಿ 2-3 ನಿಮಿಷ ಮಸಾಜ್ ಮಾಡಿ.


*ನಂತರ ಹತ್ತಿಯ ಉಂಡೆಗಳಿಂದ ಇದನ್ನು ಒರೆಸಿ.
*ನಿಮ್ಮ ಮುಖ ಈಗ ತಾಜಾ ಆಗಿ ಕಂಗೊಳಿಸುತ್ತದೆ ಮತ್ತು ನಿಮ್ಮ ತ್ವಚೆಯಿಂದ ಧೂಳು, ಕೊಳೆ ಹೊರಟು ಹೋಗಿರುವುದನ್ನು ನೀವು ಗಮನಿಸಬಹುದು.
English summary

Milk, curry leaves and basil herbal cleanser for glowing and clear skin

Cleansing is a crucial part of your skin-care regime. When you don’t cleanse you are only allowing all the oil, sweat and dirt to penetrate into the skin and cause breakouts. With an antiseptic and antibacterial cleanser, you can make sure that your skin is free of acne, rashes and infections. Here is a cleanser made of holy basil and curry leaves that have all these properties.
Story first published: Tuesday, February 2, 2016, 20:13 [IST]
X
Desktop Bottom Promotion