Latest Updates
-
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ
ಆಲೂಗಡ್ಡೆ ಜ್ಯೂಸ್ ಬಳಸಿ ಮುಖದ ಸುಕ್ಕು ನಿವಾರಿಸಿ...
ಸ್ತ್ರೀಯರನ್ನು ಕಾಡುವ ಸಮಸ್ಯೆಗಳಲ್ಲಿ ಸೌಂದರ್ಯ ಸಮಸ್ಯೆ ಕೂಡ ಒಂದಾಗಿದ್ದು ಇದನ್ನು ಉಪಚರಿಸಲು ನಾವು ಹೆಚ್ಚಿನ ಮುತುವರ್ಜಿಯನ್ನು ವಹಿಸಿಕೊಳ್ಳಬೇಕಾಗುತ್ತದೆ. ತಲೆಕೂದಲು ಉದುರುವುದು, ಮೊಡವೆ, ಕಪ್ಪು ಚುಕ್ಕೆಗಳು, ಮುಖದ ನೆರಿಗೆಗಳು, ಹೀಗೆ ಸೌಂದರ್ಯ ಸಮಸ್ಯೆಗಳನ್ನು ಗಮನಿಸುತ್ತಾ ಹೋದರೆ ಅದಕ್ಕಾಗಿ ಒಂದು ಪಟ್ಟಿಯೇ ತಯಾರುಗೊಳ್ಳಬಹುದೋ ಏನೋ? ಈ ಸಮಸ್ಯೆಗಳನ್ನು ಆಗಿಂದಾಗ್ಗೆ ಮನೆಮದ್ದುಗಳ ಮೂಲಕ ನೀವು ಪರಿಹರಿಸಿಕೊಳ್ಳುತ್ತಾ ಹೋದರೆ ಇದು ತಂದೊಡ್ಡುವ ಅಪಾಯವನ್ನೇ ನಿಮಗೆ ನಿಯಂತ್ರಣದಲ್ಲಿಟ್ಟುಕೊಳ್ಳಬಹುದಾಗಿದೆ.

ಈ ಮನೆಮದ್ದುಗಳಲ್ಲೊಂದಾದ ಬೇಯಿಸಿ ಹಿಸುಕಿದ ಆಲಗಡ್ಡೆಯ ಪ್ರಯೋಜನವನ್ನೇ ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಮುಖದ ಸುಕ್ಕುಗಳನ್ನು ನಿವಾರಿಸಿ ಫೇಸ್ ಮಾಸ್ಕ್ನಂತೆ ಕಾರ್ಯನಿರ್ವಹಿಸುವ ಆಲೂಗಡ್ಡೆಯ ಅತ್ಯದ್ಭುತ ಪ್ರಯೋಜನಗಳನ್ನು ನೀವಿಲ್ಲಿ ಅರಿತುಕೊಳ್ಳಬಹುದಾಗಿದೆ. ಇದೊಂದು ಪಿಷ್ಟವುಳ್ಳ ತರಕಾರಿಯಾಗಿರುವುದರಿಂದ ಸೂಕ್ತ ಅಲಂಕಾರಿಕ ಉತ್ಪನ್ನ ಕೂಡ ಹೌದು. ಆಲೂಗಡ್ಡೆಯು ನೈಸರ್ಗಿಕವಾಗಿದ್ದು ಹೆಚ್ಚು ದುಬಾರಿ ಬೆಲೆಯದ್ದೇನಲ್ಲ ಅಂತೆಯೇ ತ್ವಚೆಯ ಹಲವಾರು ಸಮಸ್ಯೆಗಳನ್ನು ನಿವಾರಿಸುವಲ್ಲಿ ರಾಮಬಾಣದಂತೆ ಕೆಲಸ ಮಾಡುತ್ತದೆ. ತ್ವಚೆಗೆ ಉಪಯೋಗಕಾರಿಯಾಗುವಂತಹ ಹಲವಾರು ಅಂಶಗಳು ಆಲೂಗಡ್ಡೆಯಲ್ಲಿದೆ.
ಮೊದಲನೆಯದಾಗಿ ಇದರಲ್ಲಿರುವ ವಿಟಮಿನ್ ಸಿ ಅಂಶವು ತ್ವಚೆಯ ಸ್ಥಿತಿಸ್ಥಾಪಕತ್ವ ಮತ್ತು ಭದ್ರತೆಯನ್ನು ಮಾಡುವ ನೈಸರ್ಗಿಕ ಸಂಯುಕ್ತವಾಗಿರುವ ಕಾಲಜನ್ ಸಂಶ್ಲೇಷಣೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಬೇಗನೆ ವಯಸ್ಸಾಗುವುದನ್ನು ತಡೆಗಟ್ಟಿ ಬಾಹ್ಯ ಪ್ರಭಾವಗಳಿಂದ ಚರ್ಮವನ್ನು ಸಂರಕ್ಷಿಸುತ್ತದೆ. ಆಲೂಗಡ್ಡೆಗಳಲ್ಲಿ ನಿರ್ದಿಷ್ಟ ಪೋಷಕಾಂಶಗಳಿದ್ದು ಹೊರಚರ್ಮದ ಜೀವಕೋಶಗಳ ಮರುಜನ್ಮ ಪ್ರಕ್ರಿಯೆ ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ ಅಂತೆಯೇ ಗಾಯಗಳ ಮತ್ತು ಬಿರುಕುಗಳ ಚಿಕಿತ್ಸೆಯನ್ನು ಮಾಡುತ್ತದೆ. ಇದರಲ್ಲಿರುವ ಜಿಂಕ್ ಮತ್ತು ತಾಮ್ರ ತ್ವಚೆಯ ಸುಕ್ಕುಗಳನ್ನು ಮೃದುಗೊಳಿಸುತ್ತದೆ, ಅಂತೆಯೇ ಆಲೂಡ್ಡೆ ಮಾಸ್ಕ್ ಅನ್ನು
ಹಚ್ಚಿಕೊಳ್ಳುವುದರಿಂದ ಬೇಗನೇ ವಯಸ್ಸಾಗುವಿಕೆ ಸಮಸ್ಯೆ ದೂರವಾಗುತ್ತದೆ. ನಿಮಗೆ ಎರಡು ಚಮಚದಷ್ಟು ಆಲೂಗಡ್ಡೆ ಮತ್ತು ಪಿಷ್ಟವನ್ನು ತೆಗೆದುಕೊಂಡು ಅದಕ್ಕೆ ಉಗುರು ಬಿಸಿ ನೀರನ್ನು ಸೇರಿಸಿ ಮಾಸ್ಕ್ ತಯಾರಿಸಿಕೊಳ್ಳಬಹುದು.ಕಣ್ಣಿನ ಸುತ್ತ ಹಾಗೂ ಕುತ್ತಿಗೆಯ ಮುಂಭಾಗಕ್ಕೆ ಈ ಮಾಸ್ಕ್ ಅನ್ನು ಹಚ್ಚಿಕೊಳ್ಳಬೇಡಿ. 20 ನಿಮಷಗಳ ತರುವಾಯ, ಮುಖವನ್ನು ತೊಳೆದುಕೊಳ್ಳಿ.
ಸಲಹೆ #1:
ಆಲೂಗಡ್ಡೆ ಪಿಷ್ಟದ ಮಾಸ್ಕ್ ರಂಧ್ರಗಳನ್ನು ಬಿಗಿಗೊಳಿಸುತ್ತದೆ ಮತ್ತು ರಕ್ತ ಪ್ರಚೋಧನೆಯನ್ನು ಮಾಡುತ್ತದೆ ಹಾಗೂ ತ್ವಚೆಯನ್ನು ಮೃದುವಾಗಿಸುತ್ತದೆ. ಆದ್ದರಿಂದ ಆಗಾಗ್ಗೆ ಈ ಮಾಸ್ಕ್ ಅನ್ನು ಹಚ್ಚಿಕೊಳ್ಳುವುದು ಸೂಕ್ತವಾಗಿದೆ. ಆಲೂಗಡ್ಡೆಯ ಸಿಪ್ಪೆಯನ್ನು ಕೈಗಳನ್ನು ಮೃದುವಾಗಿಸಲು ಬಳಸಿಕೊಳ್ಳಬಹುದಾಗಿದೆ. ಇದಕ್ಕಾಗಿ 2-3 ಆಲೂಡ್ಡೆಯನ್ನು ತೆಗೆದುಕೊಳ್ಳಿ ಇದಕ್ಕೆ 3-4 ಚಮಚದಷ್ಟು ಬಿಸಿ ಹಾಲು ಮತ್ತು ನೀರು ಬೇಕು. ಸುಲಿದ ಆಲೂಗಡ್ಡೆಯನ್ನು ನಿಮ್ಮ ಕೈಗಳಿಗೆ ಹಚ್ಚಿಕೊಳ್ಳಿ ಮತ್ತು ಅರ್ಧ ಗಂಟೆಯ ನಂತರ ತೊಳೆದುಕೊಳ್ಳಿ.
ಸಲಹೆ #2:
ಡಿಕಾಕ್ಷನ್ ಮಾಡಿಕೊಂಡು ಅದು ತಣಿಯುವವರೆಗೆ ಕಾಯಿರಿ, ನಂತರ ಹಾಲಿನೊಂದಿಗೆ ಇದನ್ನು ಮಿಶ್ರ ಮಾಡಿಕೊಳ್ಳಿ. ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ ಅಂತೆಯೇ ಈ ಹಚ್ಚುವಿಕೆ ವೃತ್ತಾಕಾರ ಮಾದರಿಯಲ್ಲಿರಲಿ. 10-15 ನಿಮಿಷಗಳ ಕಾಲ ಇದನ್ನು ಹಾಗೆಯೇ ಬಿಡಿ ನಂತರ ತೊಳೆದುಕೊಳ್ಳಿ. ಇದು ಬೇಗ ವಯಸ್ಸಾಗುವುದನ್ನು ತಡೆಯುತ್ತದೆ.
ಜಿಡ್ಡಿನ ಮುಖಕ್ಕಾಗಿ ಲೋಶನ್



Click it and Unblock the Notifications













