For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಬೆಣ್ಣೆ ಹಣ್ಣಿನಲ್ಲಿದೆ-ಬೆಣ್ಣೆಯಂತಹ ಸೌಂದರ್ಯ!

By Arshad
|

ಬೆಣ್ಣೆಹಣ್ಣು ಒಂದು ಆರೋಗ್ಯಕರ ಫಲವಾಗಿದ್ದು ಇದರ ಎಣ್ಣೆಯೂ ಉತ್ತಮ ಸೌಂದರ್ಯವರ್ಧಕವಾಗಿದೆ. ಇದರಲ್ಲಿರುವ ವಿಟಮಿನ್ A, B1, B2 ಮತ್ತು D, ಲಿಸೈಥಿನ್, ಪೊಟ್ಯಾಶಿಯಂ ಮತ್ತು ವಿಟಮಿನ್ ಇ ಚರ್ಮಕ್ಕೆ ಅಗತ್ಯವಾದ ಪೋಷಣೆಯನ್ನು ನೀಡುತ್ತವೆ. ಅಲ್ಲದೇ ಇದರಲ್ಲಿ ಉತ್ತಮ ಪ್ರಮಾಣದ ಪ್ರೋಟೀನು ಮತ್ತು 20% ರಷ್ಟು ಅವಶ್ಯಕ ಕೊಬ್ಬಿನ ತೈಲವೂ ಇದೆ. ಈ ಎಲ್ಲಾ ಪೋಷಕಾಂಶಗಳು ಚರ್ಮದ ಆರೈಕೆಗೆ ಅತ್ಯಂತ ಅಗತ್ಯವಾಗಿದ್ದು ಚರ್ಮಕ್ಕೆ ಆರ್ದ್ರತೆ ಮತ್ತು ಉತ್ತಮ ಪೋಷಣೆ ನೀಡುತ್ತವೆ. ಸೌಂದರ್ಯದ ಸಕಲ ಸಮಸ್ಯೆಗಳಿಗೂ-ಬೆಣ್ಣೆ ಹಣ್ಣಿನ ಚಿಕಿತ್ಸೆ

1991ರಲ್ಲಿ Technion Israel Institute of Technology ಎಂಬ ಸಂಸ್ಥೆಯ ಇಂಜಿನಿಯರಿಂಗ್ ಮತ್ತು ಜೈವಿಕ ತಂತ್ರಜ್ಞಾನ ವಿಭಾಗದ ವಿಜ್ಞಾನಿಗಳು ಬೆಣ್ಣೆಹಣ್ಣಿನ ಎಣ್ಣೆಯಲ್ಲಿ ಚರ್ಮದಲ್ಲಿರುವ ಕೊಲ್ಯಾಜೆನ್ ಎಂಬ ಕಣಗಳನ್ನು ನಿರ್ಮಿಸುವ ಶಕ್ತಿ ಇದೆ ಎಂದು ಕಂಡುಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಸಿಗುವ ವೃದ್ದಾಪ್ಯ ದೂರವಾಗಿಸುವ ಪ್ರಸಾಧನಗಳಲ್ಲಿ ಬೆಣ್ಣೆಹಣ್ಣನ್ನು ಪ್ರಮುಖವಾಗಿ ಬಳಸುವುದಕ್ಕೆ ಇವೆಲ್ಲವೂ ಕಾರಣವಾಗಿವೆ.

Homemade Avocado Face Mask Recipes

ಬೆಣ್ಣೆಹಣ್ಣು ಒಂದು ಉತ್ತಮ ತೇವಕಾರಕವೂ ಹೌದು, ಚರ್ಮಕ್ಕೆ ಆಳದಿಂದ ಪೋಷಣೆ ನೀಡುವ ಸೌಂದರ್ಯವರ್ಧಕವೂ ಹೌದು. ಈ ಗುಣಗಳು ಒಣಚರ್ಮಕ್ಕೆ ಹೇಳಿ ಮಾಡಿಸಿದ ಗುಣಗಳಾಗಿವೆ. ಎಕ್ಸಿಮಾ, ಸೋರಿಯಾಸಿಸ್ ಮೊದಲಾದ ಚರ್ಮದ ರೋಗಗಳಿಂದ ಬಳಲುತ್ತಿರುವವರಿಗೆ ಬೆಣ್ಣೆಹಣ್ಣು ಚರ್ಮಕ್ಕೆ ಆರ್ದ್ರತೆ ಮತ್ತು ತಂಪು ನೀಡುವ ಮೂಲಕ ಹೊಸ ಚರ್ಮ ಬೆಳೆಯಲು ಹಾಗೂ ಉರಿ ತಡೆಯಲು ನೆರವಾಗುತ್ತದೆ.

ಬೆಣ್ಣೆಹಣ್ಣಿನ ತಿರುಳು ಹಾಗೂ ಎಣ್ಣೆ ಸಿಹಿಯಾಗಿದ್ದು ಸೂಕ್ಷ್ಮಸಂವೇದಿ ಚರ್ಮದವರಿಗೂ ಸೂಕ್ತವಾಗಿದೆ. ಬೆಣ್ಣೆಹಣ್ಣಿನಲ್ಲಿ ಚರ್ಮದ ತೊಂದರೆಗಳನ್ನು ಶೀಘ್ರವಾಗಿ ಗುಣಪಡಿಸುವ ಗುಣವಿದ್ದು ಸಸ್ಯಜನ್ಯ ಸ್ಟೆರಾಯ್ಡ್ ಅಥವಾ ಸ್ಟೆರೋಲಿನ್ ಎಂಬ ರಾಸಾಯನಿಕವಿದೆ. ಈ ರಾಸಾಯನಿಕಕ್ಕೆ ವೃದ್ಧಾಪ್ಯದ ಚಿಹ್ನೆಗಳನ್ನು ನಿವಾರಿಸುವ, ಗಾಯದ ಗುರುತುಗಳನ್ನು ಮಾಗಿಸುವ ಶಕ್ತಿಯಿದೆ. ಒಣಚರ್ಮ ಹಾಗೂ ಎಣ್ಣೆಚರ್ಮದವರಿಗೂ ಬಳಸಬಹುದಾದ ಇಂತಹ ಅದ್ಭುತ ಸೌಂದರ್ಯವರ್ಧಕವನ್ನು ಹೇಗೆ ತಯಾರಿಸಿಕೊಳ್ಳಬಹುದು ಎಂಬುದನ್ನು ನೋಡೋಣ:

ಒಣಚರ್ಮದವರಿಗಾಗಿ: ಬೆಣ್ಣೆಹಣ್ಣು+ಬಾದಾಮಿ ಎಣ್ಣೆ
*1/2 ಬೆಣ್ಣೆಹಣ್ಣು
*1 ಚಿಕ್ಕಚಮಚ ಬಾದಾಮಿ ಎಣ್ಣೆ

ತಯಾರಿಸುವ ವಿಧಾನ
1) ಬೆಣ್ಣೆಹಣ್ಣಿನ ತಿರುಳನ್ನು ಸಂಗ್ರಹಿಸಿ ಇದನ್ನು ಚೆನ್ನಾಗಿ ಕಿವುಚಿ ಬಳಿಕ ಬಾದಾಮಿ ಎಣ್ಣೆಯನ್ನು ಮಿಶ್ರಣ ಮಾಡಿ
2) ಈ ಮಿಶ್ರಣವನ್ನು ಈಗತಾನೇ ತೊಳೆದು ಒರೆಸಿಕೊಂಡ ಮುಖಕ್ಕೆ ದಪ್ಪನಾಗಿ ಹಚ್ಚಿ. ಆದರೆ ಕಣ್ಣಿನ ಒಳಗೆ ಹೋಗದಂತೆ ಎಚ್ಚರವಹಿಸಿ.
3) ಹದಿನೈದು ನಿಮಿಷ ಒಣಗಲು ಬಿಟ್ಟು ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.

ಒಣಚರ್ಮದವರಿಗಾಗಿ: ಬೆಣ್ಣೆಹಣ್ಣು+ಜೇನು+ಮೊಟ್ಟೆಯ ಹಳದಿ ಭಾಗ
*ದೊಡ್ಡಚಮಚ ಬೆಣ್ಣೆಹಣ್ಣಿನ ತಿರುಳು
*ದೊಡ್ಡಚಮಚ ಜೇನು
*ಮೊಟ್ಟೆಯ ಹಳದಿಭಾಗ ಮೃದು ಮತ್ತು ಹೊಳಪಿನ ತ್ವಚೆಗೆ ಬೆಣ್ಣೆ ಹಣ್ಣಿನ ಪೋಷಣೆ

ವಿಧಾನ:
1) ಮೊದಲು ಬೆಣ್ಣೆಹಣ್ಣಿನ ತಿರುಳನ್ನು ಒಂದು ಬೋಗುಣಿಯಲ್ಲಿ ಸಂಗ್ರಹಿಸಿ ಇದಕ್ಕೆ ಜೇನು ಮತ್ತು ಮೊಟ್ಟೆಯ ಹಳದಿಭಾಗ ಹಾಕಿ ಚೆನ್ನಾಗಿ ಕಲಕಿ.
2) ಈ ಮಿಶ್ರಣವನ್ನು ಈಗತಾನೇ ತೊಳೆದು ಒರೆಸಿಕೊಂಡ ಮುಖಕ್ಕೆ ಮತ್ತು ಕುತ್ತಿಗೆಯ ಭಾಗಕ್ಕೆ ದಪ್ಪನಾಗಿ ಹಚ್ಚಿ. ಆದರೆ ಕಣ್ಣಿನ ಒಳಗೆ ಹೋಗದಂತೆ ಎಚ್ಚರವಹಿಸಿ.
3) ಹದಿನೈದು ನಿಮಿಷ ಒಣಗಲು ಬಿಟ್ಟು ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.

ಎಣ್ಣೆ ಚರ್ಮದವರಿಗಾಗಿ: ಬೆಣ್ಣೆಹಣ್ಣು+ಮೊಟ್ಟೆಯ ಬಿಳಿಭಾಗ+ಲಿಂಬೆರಸ
*1 ಬೆಣ್ಣೆಹಣ್ಣು
*1 ಮೊಟ್ಟೆಯ ಬಿಳಿಭಾಗ
*1 ಚಿಕ್ಕಚಮಚ ಈಗತಾನೇ ಹಿಂಡಿದ ಲಿಂಬೆಯ ರಸ

ವಿಧಾನ:
1) ಒಂದು ಬೋಗುಣಿಯಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಹಾಕಿ ಮಿಶ್ರಣ ಮಾಡಿ. ಬಳಿಕ ಮಿಕ್ಸರಿನ ಚಿಕ್ಕ ಜಾರ್‌ನಲ್ಲಿ ಹಾಕಿ ಗೊಟಾಯಿಸಿ.
2) ಈ ಮಿಶ್ರಣವನ್ನು ಈಗತಾನೇ ತೊಳೆದುಕೊಂಡ ಮುಖಕ್ಕೆ ಬೆರಳುಗಳಿಂದ ಹಚ್ಚಿ. ವಿಶೇಷವಾಗಿ ಎಣ್ಣೆಜಿಡ್ಡು ಹೆಚ್ಚು ಇರುವಲ್ಲಿ ಹೆಚ್ಚು ದಪ್ಪನಾಗಿ ಹಚ್ಚಿ.
3) ಹದಿನೈದು ನಿಮಿಷ ಒಣಗಲು ಬಿಟ್ಟು ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಬಳಿಕ ತೇವಕಾರಕ ಮತ್ತು ಟೋನರ್ ನಿಂದ ಸ್ವಚ್ಛಗೊಳಿಸಿ.

English summary

Homemade Avocado Face Mask Recipes

Avocados and avocado oil are used in skin care products as these contain vitamins A, B1, B2 and D, lecithin, potassium and vitamin E as well. They also contain protein and more than 20% of essential fatty acids. These are very much in demand as skincare ingredients as these have so much to offer.
Story first published: Friday, June 10, 2016, 10:10 [IST]
X
Desktop Bottom Promotion