For Quick Alerts
ALLOW NOTIFICATIONS  
For Daily Alerts

ವಿನಾಕಾರಣ ಸೌಂದರ್ಯಕ್ಕೆ ಹಣ ಖರ್ಚು ಮಾಡಬೇಡಿ!

ನೈಸರ್ಗಿಕ ಫೇಸ್ ಪ್ಯಾಕ್‌ನ ಫಲ ತಕ್ಷಣವೇ ಗೊತ್ತಾಗದೇ ಇದ್ದರೂ ಕೊಂಚ ತಾಳ್ಮೆಯಿಂದ ಕಾದರೆ ನಿಜವಾದ ಮತ್ತು ಅಪ್ಪಟ ಸೌಂದರ್ಯ ನಿಮ್ಮದಾಗುತ್ತದೆ....

By Manu
|

ನಾಲ್ಕು ಜನರ ಮುಂದೆ ಸುಂದರವಾಗಿ ಕಾಣಬೇಕು. ಅವರು ತನ್ನ ಸೌಂದರ್ಯ ಹಾಗೂ ತ್ವಚೆಯನ್ನು ಪ್ರಶಂಸಿಸಬೇಕು ಎನ್ನುವ ಆಸೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಅದರಲ್ಲೂ ಮಹಿಳೆಯರಲ್ಲಿ ಇದು ಹೆಚ್ಚು. ಇದನ್ನೇ ಬಂಡವಾಳ ಮಾಡಿಂಡಿರುವ ಕಂಪನಿಗಳು ಕೂಡ ಹಲವಾರು ರೀತಿಯ ಸೌಂದರ್ಯ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುತ್ತಲೇ ಇರುತ್ತದೆ. ಹೊಸ ಹೊಸ ಕ್ರೀಮ್‌ಗಳ ಬಗ್ಗೆ ಜಾಹೀರಾತು ಕೂಡ ನೋಡುತ್ತಾ ಇರುತ್ತೇವೆ. ನೈಸರ್ಗಿಕ ಫೇಸ್ ಪ್ಯಾಕ್-ಕಡಿಮೆ ವೆಚ್ಚ ಅಧಿಕ ಲಾಭ!

ಆದರೆ ಇದರಲ್ಲಿ ಇರುವಂತಹ ರಾಸಾಯನಿಕಗಳ ಬಗ್ಗೆನಮಗೆ ತಿಳಿದೇ ಇರುವುದಿಲ್ಲ. ಇಂತಹ ಕ್ರೀಮ್‌ಗಳು ಕೆಲವು ದಿನಗಳವರೆಗೆ ಮೈಕಾಂತಿಯನ್ನು ನೀಡಿದರೂ ಬಳಿಕ ಇದರಿಂದ ಹಲವಾರು ರೀತಿಯ ಅಡ್ಡಪರಿಣಾಮಗಳು ಉಂಟಾಗುತ್ತದೆ. ಇದು ಪಕ್ಕಾ ನೈಸರ್ಗಿಕ ಫೇಸ್ ಪ್ಯಾಕ್! ಚಿಂತೆಯ ಅಗತ್ಯವೇ ಇಲ್ಲ!

ಹಾಗಾಗಿ ನೈಸರ್ಗಿಕವಾಗಿ ದೊರೆಯುವಂತಹ ಕೆಲವೊಂದು ಮನೆಮದ್ದನ್ನು ಬಳಸಿಕೊಂಡು ಒಳ್ಳೆಯ ಮೈಕಾಂತಿಯನ್ನು ಪಡೆಯಬಹುದಾಗಿದೆ. ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ನಿಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸಬಲ್ಲ ಕೆಲವೊಂದು ಪವರ್ ಫುಲ್ ಮನೆಮದ್ದಿನ ಬಗ್ಗೆ ಬೋಲ್ಡ್ ಸ್ಕೈ ಇಂದು ನಿಮಗೆ ಹೇಳಿಕೊಡಲಿದೆ. ಇದನ್ನು ಪರೀಕ್ಷಿಸಿ ನೋಡಿ........

ಬೀಟ್ ರೂಟ್ ಜ್ಯೂಸ್

ಬೀಟ್ ರೂಟ್ ಜ್ಯೂಸ್

ಹಸಿ ಬೀಟ್ ರೂಟಿನ ಅರ್ಧ ಭಾಗವನ್ನು ತುರಿದು ಕೊಂಚ ನೀರಿನೊಂದಿಗೆ ಮಿಕ್ಸಿಯಲ್ಲಿ ಕಡೆದು ರಸ ಹಿಂಡಿ ತೆಗೆಯಿರಿ. ಈ ರಸವನ್ನು ನೇರವಾಗಿ ಮುಖದ ಚರ್ಮದ ಮೇಲೆ ಹಚ್ಚಿ ಒಣಗಲು ಬಿಡಿ. ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೆರಡು ಅಥವಾ ಮೂರು ಬಾರಿ ಪುನರಾವರ್ತಿಸುವ ಮೂಲಕ ಚರ್ಮದ ಕಾಂತಿ ಹೆಚ್ಚುತ್ತದೆ.

ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣು

ಅರ್ಧ ಕಪ್ ಮಾಗಿದ ಮತ್ತು ಹಿಸುಕಿದ ಪಪ್ಪಾಯಿ ಹಣ್ಣಿನ ಜೊತೆ ಒಂದು ಲಿಂಬೆಹಣ್ಣಿನ ರಸವನ್ನು ಸೇರಿಸಿ ಒಂದು ಫೇಸ್ ಪ್ಯಾಕ್ ತಯಾರಿಸಿ. ಈ ಮಿಶ್ರಣವನ್ನು ನಿಮ್ಮ ಮುಖದ ಎಲ್ಲಾ ಭಾಗ ಮತ್ತು ಕುತ್ತಿಗೆಗೆ ಹಚ್ಚಿ ಮಸಾಜ್ ಮಾಡಿ. 30 ನಿಮಿಷಗಳ ಸಮಯ ಹಾಗೆಯೇ ಬಿಟ್ಟು ತಣ್ಣಗಿರುವ ನೀರಿನಿಂದ ತೊಳೆದುಕೊಳ್ಳಿ. ಹೀಗೆ ವಾರಕೊಮ್ಮೆ ಮಾಡಿಕೊಳ್ಳಿ.

ಎಳೆಸೌತೆಕಾಯಿ

ಎಳೆಸೌತೆಕಾಯಿ

ಅರ್ಧ ಎಳೆಸೌತೆಕಾಯಿಯನ್ನು ಸಿಪ್ಪೆಸಹಿತ ತುರಿದು ಎರಡು ಚಮಚ ಬೆಟ್ಟದ ತಾವರೆ (witch hazel)(ಮರದ ಮೇಲೆ ಬೆಳೆಯುವ ಹಳದಿ ಬಣ್ಣದ ಹೂವುಗಳಂತೆ ತೋರುವ ಗಿಡ) ಮತ್ತು ಎರಡು ಚಮಚ ನೀರು ಸೇರಿಸಿ ಅರೆಯಿರಿ. ಈ ಲೇಪನವನ್ನು ಪ್ರತಿದಿನ ಸ್ವಚ್ಛವಾಗಿ ಮುಖ ತೊಳೆದುಕೊಂಡ ಬಳಿಕ ನಯವಾದ ಮಸಾಜ್ ಮೂಲಕ ಹಚ್ಚಿಕೊಂಡು ಕೊಂಚ ಸಮಯ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಲೇಬೇಡಿ. ಕೆಲವೇ ದಿನಗಳಲ್ಲಿ ನಿಮ್ಮ ಚರ್ಮ ತನ್ನ ಸಹಜ ವರ್ಣವನ್ನು ಪಡೆಯತೊಡಗುತ್ತದೆ.

ಅರಿಶಿನ+ ಕಡಲೆಹಿಟ್ಟು+ ಬಾದಾಮಿ ಎಣ್ಣೆ

ಅರಿಶಿನ+ ಕಡಲೆಹಿಟ್ಟು+ ಬಾದಾಮಿ ಎಣ್ಣೆ

*ಮೊದಲಿಗೆ ಒಂದು ಪಾತ್ರೆಯಲ್ಲಿ, ಎರಡು ಚಮಚ ಕಡಲೆ ಹಿಟ್ಟಿಗೆ ಅರಿಶಿನವನ್ನು ಸೇರಿಸಿಕೊಳ್ಳಿ. ನಂತರ ಬಾದಾಮಿ ಎಣ್ಣೆಯನ್ನು ಇದಕ್ಕೆ ಮಿಶ್ರ ಮಾಡಿ ಸ್ವಲ್ಪ ಹಾಲು ಹಾಕಿ ಪೇಸ್ಟ್ ತಯಾರಿಸಿ

*ಹಾಲನ್ನು ಮಿಶ್ರಣಕ್ಕೆ ಪೇಸ್ಟ್ ತಯಾರಿಯಾಗುವಂತೆ ಬಳಸಿಕೊಂಡರೆ ಸಾಕು. ಹೆಚ್ಚು ಹಾಲನ್ನು ಬಳಸದಿರಿ, ಇದರಿಂದ ಪೇಸ್ಟ್ ನೀರಾಗುವ ಸಾಧ್ಯತೆ ಇರುತ್ತದೆ.

*ಇನ್ನು ಮುಖ, ಕುತ್ತಿಗೆಯ ಭಾಗಕ್ಕೆ ಈ ಮಿಶ್ರಣವನ್ನು ಲೇಪಿಸಿಕೊಳ್ಳಿ. 20 ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಕಳಿತ ಬಾಳೆಹಣ್ಣು

ಕಳಿತ ಬಾಳೆಹಣ್ಣು

ಒಂದು ಚೆನ್ನಾಗಿ ಕಳಿತ ಬಾಳೆಹಣ್ಣನ್ನು ಎರಡು ದೊಡ್ಡಚಮಚ ಜೇನು ಮತ್ತು ಎರಡು ದೊಡ್ಡಚಮಚ ಲಿಂಬೆರಸದೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖದ ಚರ್ಮಕ್ಕೆ ದಪ್ಪನಾಗಿ ಹಚ್ಚಿ ಹದಿನೈದು ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನದಿಂದ ತಕ್ಷಣವೇ ಮುಖ ಉತ್ತಮ ಕಾಂತಿ ಪಡೆಯುತ್ತದೆ.

ತುಳಸಿ ಎಲೆಗಳು

ತುಳಸಿ ಎಲೆಗಳು

ತುಳಸಿ ಎಲೆಗಳು ನೈಸರ್ಗಿಕವಾದ ಬ್ಯಾಕ್ಟೀರಿಯಾ ನಿವಾರಕವಾಗಿವೆ. ಇದು ಬೇಗನೇ ಸೋಂಕಿಗೆ ಒಳಗಾಗುವ ಸೂಕ್ಷ್ಮ ಚರ್ಮದವರಿಗೆ ಅತಿ ಸೂಕ್ತವಾಗಿದ್ದು ಉತ್ತಮ ಪೋಷಣೆ ನೀಡುತ್ತದೆ. ವಿಶೇಷವಾಗಿ ಚರ್ಮದ ಸೂಕ್ಷ್ಮರಂಧ್ರಗಳಲ್ಲಿದ್ದ ಕೊಳೆ ಮತ್ತು ಕಲ್ಮಶಗಳನ್ನು ನಿವಾರಿಸಲು ತುಳಸಿಯ ರಸ ಉತ್ತಮವಾಗಿದೆ. ತುಳಸಿ ಎಲೆಗಳನ್ನು ಅರೆದು ತೆಳುವಾದ ಲೇಪನದ ರೂಪದಲ್ಲಿ ಹಚ್ಚಬಹುದು ಅಥವಾ ಈ ಎಲೆಗಳನ್ನು ಕುದಿಸಿ ತಣಿಸಿ ಸೋಸಿದ ನೀರಿನಿಂದ ಚರ್ಮವನ್ನು ತೊಳೆದುಕೊಳ್ಳುವ ಮೂಲಕ ಚರ್ಮಕ್ಕೆ ಉತ್ತಮ ಪೋಷಣೆ ನೀಡಬಹುದು. ಬೆಳ್ಳಂಬೆಳಗ್ಗೆ ತುಳಸಿ ಎಲೆ ಜಗಿಯಿರಿ, ಆರೋಗ್ಯ ಪಡೆಯಿರಿ

English summary

Essential Homemade Beauty Tips For Fair Skin

In this post, we have an exhaustive list of beauty tips for getting fair skin at home. But this isn’t all about just face packs. We have also tried to cover specific foods and other skin care basics that are often ignored or overlooked.Go ahead and check them out – and get ready to see your skin glowing!
X
Desktop Bottom Promotion