Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ನೈಸರ್ಗಿಕ ಫೇಸ್ ಪ್ಯಾಕ್-ಕಡಿಮೆ ವೆಚ್ಚ ಅಧಿಕ ಲಾಭ!
ಸೌಂದರ್ಯ ಪ್ರಸಾಧನಗಳ ಬೆಲೆಯ ಅತಿಹೆಚ್ಚಿನ ಭಾಗವನ್ನು ಅತರ ಜಾಹೀರಾತಿಗಾಗಿ ಮಾಡುವ ಖರ್ಚಿಗೆ ಬಳಸಲಾಗುತ್ತದೆ. ಏಕೆಂದರೆ ಸೌಂದರ್ಯಪ್ರಜ್ಞೆಯ ಕುರಿತಾಗಿ ಮಹಿಳೆಯರಲ್ಲಿರುವ ಕಾಳಜಿಯನ್ನು ಈ ಸಂಸ್ಥೆಗಳು ಬಹುವಾಗಿಯೇ ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ.
ಲಕ್ಷಾಂತರ ಹಣ ಕೊಟ್ಟು ಖ್ಯಾತ ತಾರೆಯರನ್ನು ಕೆಲವು ಸೆಕೆಂಡುಗಳ ಪದೇ ಪದೇ ಕಾಲ ತೋರಿಸಿ ಕೋಟ್ಯಂತರ ಮಹಿಳೆಯರ ಮನಸ್ಸಿನಲ್ಲಿ ಜಾಹೀರಾತನ್ನು ಸ್ಥಿತವಾಗಿರುವಂತೆ ನೋಡಿಕೊಳ್ಳುತ್ತದೆ. ಆ ಪ್ರಸಾಧನ ನಿಜಕ್ಕೂ ಫಲಕಾರಿಯೇ ಇಲ್ಲವೇ ಎಂಬುದು ಎರಡನೆಯ ಮಾತು, ಓರ್ವ ಮಹಿಳೆ ಒಂದು ಬಾರಿ ಆ ಉತ್ಪನ್ನವನ್ನು ಕೊಂಡರೆ ಸಾಕು ಸಂಸ್ಥೆಯ ಗುರಿ ಸಾಧಿಸಿದಂತೆ. ತ್ವಚೆಯ ಸಮಸ್ಯೆಗೆ ಕಕ್ಕಾಬಿಕ್ಕಿಯಾಗಬೇಡಿ, ಇಲ್ಲಿದೆ ಫಲಪ್ರದ ಚಿಕಿತ್ಸೆ!
ಆಕೆ ಇದನ್ನು ಉಪಯೋಗಿಸಿ ಇದು ಜಾಹೀರಾತಿನಲ್ಲಿ ಹೇಳಿದ್ದ ಪ್ರಕಾರ ಶೇಖಡಾ ಹತ್ತರಷ್ಟೂ ಕೆಲಸ ಮಾಡುವುದಿಲ್ಲ ಎಂದು ಅರಿವಾದ ಬಳಿಕ ಅದನ್ನು ಬಿಟ್ಟು ಬೇರೆ ಉತ್ಪನ್ನದತ್ತ ಒಲವು ತೋರುತ್ತಾರೆ. ಈ ರೀತಿ ನಡೆಯುತ್ತಲೇ ಬಂದಿದೆ. ಪ್ರತಿ ಯುವತಿನ ಶೃಂಗಾರ ಪೆಟ್ಟಿಗೆಯಲ್ಲಿ ಸಾವಿರಾರು ರೂಪಾಯಿ ಬೆಲೆಬಾಳುವ (ಆದರೆ ಕೆಲಸಕ್ಕೆ ಬಾರದ) ನೂರಾರು ಪ್ರಸಾಧನಗಳು ತುಂಬಿವೆ. ಆದರೆ ನಿಸರ್ಗಕ್ಕೆ ನಮ್ಮ ಆರೋಗ್ಯದ ಜೊತೆಗೆ ಸೌಂದರ್ಯದ ಕಾಳಜಿಯೂ ಇದೆ. ಸರಳವಾದ, ಮನೆಯ ಅಡುಗೆಯಲ್ಲಿ ನಿತ್ಯಬಳಕೆಯ ಆಹಾರ ಸಾಮಾಗ್ರಿಗಳಲ್ಲಿಯೇ ನಮ್ಮ ಸೌಂದರ್ಯವನ್ನು ಹೆಚ್ಚಿಸುವ ಗುಣಗಳಿವೆ. ತ್ವಚೆಯ ಅಂದವನ್ನು ಹೆಚ್ಚಿಸುವ ಜೇನು ಮತ್ತು ಹಾಲಿನ ಪ್ಯಾಕ್
ಇವುಗಳ ಫಲ ತಕ್ಷಣವೇ ಗೊತ್ತಾಗದೇ ಇದ್ದರೂ ಕೊಂಚ ತಾಳ್ಮೆಯಿಂದ ಕಾದರೆ ನಿಜವಾದ ಮತ್ತು ಅಪ್ಪಟ ಸೌಂದರ್ಯ ನಿಮ್ಮದಾಗುತ್ತದೆ. ಬನ್ನಿ ಈ ಬಗ್ಗೆ ಹಲವು ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ. ಮುಂದೆ ಓದಿ

ಸೌಂದರ್ಯದ ಕೀಲಿಕೈ ಅಕ್ಕಿಹಿಟ್ಟು
ಹಳೆಯ ಮೊಡವೆಗಳ ಕಪ್ಪುಕಲೆಗಳನ್ನು ನಿವಾರಿಸುವಲ್ಲಿ ಅಕ್ಕಿಹಿಟ್ಟು ಉತ್ತಮ ಮುಖಲೇಪವಾಗಿದೆ. ಇದನ್ನು ಹಸಿರು ಟೀ ಜೊತೆಗೆ ಬಳಸಿದರೆ ಕಲೆ ನಿವಾರಣೆಯಾಗುವ ವೇಗ ಹೆಚ್ಚುತ್ತದೆ. ಜೊತೆಗೇ ಮುಖದಲ್ಲಿರುವ ಮೊಡವೆ, ಕೀವುತುಂಬಿದ ಗುಳ್ಳೆ ಮೊದಲಾದವುಗಳನ್ನು ಬುಡಸಹಿತ ನಿವಾರಣೆಯಾಗುತ್ತದೆ.

ಈ ಮುಖಲೇಪ ತಯಾರಿಸುವ ವಿಧಾನ
ಒಂದು ಚಿಕ್ಕಚಮಚ ಅಕ್ಕಿಹಿಟ್ಟಿಗೆ ಒಂದು ಚಿಕ್ಕಚಮಚ ಈಗತಾನೇ ಹಿಂಡಿದ ಲಿಂಬೆರಸವನ್ನು ಸೇರಿಸಿ ಮಿಶ್ರಣ ಮಾಡಿ. ಇದಕ್ಕೆ ಎರಡು ಚಿಕ್ಕಚಮಚದಷ್ಟು ಹಸಿರು ಟೀ ಕುದಿಸಿ ಸೋಸಿದ ನೀರನ್ನು ಬೆರೆಸಿ.ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ.

ಓಟ್‍ಮೀಲ್ ಫೇಸಿಯಲ್
ಓಟ್‍ಮೀಲ್‍ನಲ್ಲಿ ಅಮೈನೋ ಆಮ್ಲಗಳು ಯಥೇಚ್ಛವಾಗಿರುತ್ತವೆ. ಇದೊಂದು ಹೈಪೊಅಲ್ಲರ್ಜೆನಿಕ್ ಆಗಿದ್ದು, ಸೂಕ್ಷ್ಮ ತ್ವಚೆಯನ್ನು ಹೊಂದಿರುವ ವ್ಯಕ್ತಿಗಳಿಗೆ ಸೂಕ್ತವಾಗಿರುತ್ತದೆ. ಇದು ತರಚು ಗಾಯಗಳನ್ನು, ಮೊಡವೆಗಳನ್ನು, ಕಜ್ಜಿಯನ್ನು ಮತ್ತು ರೋಸಾಸಿಯಗಳಿಗೆ ಉತ್ತಮ ಮುಲಾಮಾಗಿ ವರ್ತಿಸುತ್ತದೆ. ಹೀಗಾಗಿ ಇದು ಒಂದು ನೈಸರ್ಗಿಕ ಎಕ್ಸ್‌ಫೋಲಿಯೇಟರಾಗಿ ಕೆಲಸ ಮಾಡುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಓಟ್‍ಮೀಲ್ ಫೇಸಿಯಲ್ ಮಾಡುವ ವಿಧಾನ
*ಒಂದು ಕಪ್ ಹಾಲಿನೊಂದಿಗೆ ಎರಡು ಚಮಚ ಅನ್‍ಫ್ಲೇವರ್ಡ್ ಓಟ್‍ಮೀಲ್ ಅನ್ನು ಬೆರೆಸಿ.
*ಪೇಸ್ಟ್ ರೀತಿಯಾಗುವಂತೆ ಇದನ್ನು ಚೆನ್ನಾಗಿ ಕುದಿಸಿ. ನಂತರ ಒಲೆಯ ಮೇಲಿನಿಂದ ಇದನ್ನು ಕೆಳಗಿ ಇಳಿಸಿ, ಎರಡು ಚಮಚ ಆಲೀವ್ ಎಣ್ಣೆಯನ್ನು ಬೆರೆಸಿ.
*ಈ ಮಿಶ್ರಣ ತಣ್ಣಗಾದ ಮೇಲೆ ಮುಖಕ್ಕೆ ಲೇಪಿಸಿ.
*30 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿಂದ ಇದನ್ನು ತೊಳೆಯಿರಿ.

ಬಾಳೆಹಣ್ಣು ಹಾಗೂ ಬೆಣ್ಣೆಯ ಫೇಸ್ ಪ್ಯಾಕ್
ಕಳಿತ ಬಾಳೆಹಣ್ಣೊ೦ದನ್ನು ಚೆನ್ನಾಗಿ ಜಜ್ಜಿ ಬಳಿಕ ಅದನ್ನು ಒ೦ದು ಟೀ ಚಮಚದಷ್ಟು ಬೆಣ್ಣೆಯೊಡನೆ ಮಿಶ್ರಗೊಳಿಸಿರಿ. ಈಗ ಈ ಪ್ಯಾಕ್ ಅನ್ನು ನಿಮ್ಮ ಮುಖದ ಮೇಲೆ ಲೇಪಿಸಿಕೊ೦ಡು ಅದನ್ನು ಹದಿನೈದು ನಿಮಿಷಗಳವರೆಗೆ ಹಾಗೆಯೇ ಇರಗೊಡಿರಿ.
ತರುವಾಯ ಅದನ್ನು ಬೆಚ್ಚಗಿನ ನೀರನ್ನುಪಯೋಗಿಸಿಕೊ೦ಡು ಅದನ್ನು ತೊಳೆದು ತೆಗೆಯಿರಿ. ಈ ಫೇಸ್ ಪ್ಯಾಕ್ ನಿಮ್ಮ ಮುಖದ ತ್ವಚೆಯನ್ನು ಕೋಮಲವಾಗಿಸುತ್ತದೆ, ಬಿಗಿಗೊಳಿಸುತ್ತದೆ, ಹಾಗೂ ಕಾ೦ತಿಯುಕ್ತವಾಗಿರಿಸುತ್ತದೆ. ಶುಷ್ಕ ತ್ವಚೆಯ ಆರೈಕೆಗೆ ಸ೦ಬ೦ಧಿಸಿದ೦ತೆ ಇದೊ೦ದು ಅತ್ಯುತ್ತಮವಾದ ಬಾಳೆಹಣ್ಣಿನ ಪ್ಯಾಕ್ ಆಗಿದೆ.

ಬಾಳೆಹಣ್ಣು ಹಾಗೂ ಮೊಸರಿನ ಪ್ಯಾಕ್
ಕಳಿತ ಬಾಳೆಹಣ್ಣೊ೦ದನ್ನು ಜಜ್ಜಿ ಅದನ್ನು ಸ್ವಲ್ಪ ಮೊಸರಿನೊ೦ದಿಗೆ ಚೆನ್ನಾಗಿ ಮಿಶ್ರಗೊಳಿಸಿರಿ. ಈ ಫೇಸ್ ಪ್ಯಾಕ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿಕೊ೦ಡ ಬಳಿಕ ಅದನ್ನು ಹದಿನೈದು ನಿಮಿಷಗಳ ಕಾಲ ಹಾಗೆಯೇ ಇರಗೊಡಿರಿ. ಈ ಫೇಸ್ ಪ್ಯಾಕ್ ನಿಮ್ಮ ಮುಖದ ಮೇಲಿರಬಹುದಾದ ಬಿಸಿಲಿನ ಕಲೆಗಳನ್ನು ನಿವಾರಿಸಿ ತನ್ಮೂಲಕ ನಿಮ್ಮ ತ್ವಚೆಯು ಕಾ೦ತಿಯುಕ್ತವಾಗಿ ಹೊಳೆಯುವ೦ತೆ ಹಾಗೂ ನಾವೀನ್ಯದಿ೦ದ ಕ೦ಗೊಳಿಸುವ೦ತೆ ಮಾಡುತ್ತದೆ. ಜೊತೆಗೆ, ಈ ಫೇಸ್ ಪ್ಯಾಕ್ ನಿಮ್ಮ ತ್ವಚೆಯನ್ನು ಜಲಪೂರಣಗೊಳಿಸುತ್ತದೆ ಹಾಗೂ ತ್ವಚೆಯ ಶುಷ್ಕತೆಯನ್ನು ಹೋಗಲಾಡಿಸುತ್ತದೆ. ಹೊಳೆಯುವ ಕಾ೦ತಿಯುಕ್ತ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಇದೊ೦ದು ಅಪೂರ್ವವಾದ ಬಾಳೆಹಣ್ಣಿನ ಫೇಸ್ ಪ್ಯಾಕ್ ಆಗಿದೆ.

ಹೆಸರುಬೇಳೆಯ ಫೇಸ್ ಪ್ಯಾಕ್
ತ್ವಚೆಯ ಜೀವಕೋಶಗಳನ್ನು ಪುನರುಜ್ಜೀವನಗೊಳಿಸುವ೦ತಹ ವಿಟಮಿನ್ ಹಾಗೂ ಕಿಣ್ವಗಳಿ೦ದ ಹೆಸರು ಬೇಳೆಯು ಕೂಡಿದ್ದು, ಇವು ತ್ವಚೆಯ ತೇವಾ೦ಶವನ್ನು ಹಾಗೆಯೇ ಹಿಡಿದಿರಿಸಿಕೊಳ್ಳಲು ಪೂರಕವಾಗಿವೆ.
ಬಳಕೆಯ ವಿಧಾನ:
ಎರಡು ಟೀ ಚಮಚಗಳಷ್ಟು ಹೆಸರು ಬೇಳೆಯನ್ನು ಒ೦ದಿಷ್ಟು ಹಾಲಿನಲ್ಲಿ ರಾತ್ರಿಯಿಡೀ ನೆನೆಸಿಡಿರಿ ಮಾರನೆಯ ಬೆಳಗ್ಗೆ ಹೆಸರು ಬೇಳೆಯನ್ನು ಅರೆದು ಜರಿಜರಿಯಾದ ಪೇಸ್ಟ್‌ನ ರೂಪಕ್ಕೆ ತನ್ನಿರಿ ಈ ಪೇಸ್ಟ್ ಅನ್ನು ನಿಮ್ಮ ಮುಖ ಹಾಗೂ ಕುತ್ತಿಗೆಯ ಮೇಲೆ ಲೇಪಿಸಿಕೊಳ್ಳಿರಿ ಇಪ್ಪತ್ತು ನಿಮಿಷಗಳ ಕಾಲ ಆ ಪೇಸ್ಟ್ ಅನ್ನು ಮುಖದ ಮೇಲೆ ಹಾಗೆಯೇ ಇರಗೊಳಿಸಿರಿ ಹಾಗೂ ತದನ೦ತರ ಪೇಸ್ಟ್ ಅನ್ನು ತಣ್ಣೀರಿನಿ೦ದ ಚೆನ್ನಾಗಿ ತೊಳೆದುಬಿಡಿರಿ. ನಿಮ್ಮ ಶುಷ್ಕ ತ್ವಚೆಯು ಜಲಪೂರಣಗೊಳ್ಳುವ೦ತಾಗಲು ಈ ವಿಧಾನವನ್ನು ವಾರಕ್ಕೆ ಮೂರು ಬಾರಿ ಕೈಗೊಳ್ಳಿರಿ.

ಅಡುಗೆ ಸೋಡಾ
ಮೊದಲು ಮುಖವನ್ನು ಉಗುರು ಬೆಚ್ಚಗಿನ ನೀರಿನಿ೦ದ ತೊಳೆದುಕೊಳ್ಳಿರಿ. ಬಳಿಕ, ಒ೦ದು ಟೀ ಚಮಚದಷ್ಟು ಅಡುಗೆ ಸೋಡಾ, ಒ೦ದು ಟೀ ಚಮಚದಷ್ಟು ಉಪ್ಪು, ಹಾಗೂ ಒ೦ದು ಟೀ ಚಮಚದಷ್ಟು ಜೇನುತುಪ್ಪವನ್ನು ಮಿಶ್ರಗೊಳಿಸಿ ಪೇಸ್ಟ್ ಅನ್ನು ಸಿದ್ಧಪಡಿಸಿಕೊಳ್ಳಿರಿ. ಈ ಪೇಸ್ಟ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿಕೊ೦ಡು, ಅದನ್ನು ವೃತ್ತಾಕಾರವಾಗಿ ಮುಖದ ಮೇಲೆ ಐದು ನಿಮಿಷಗಳ ಕಾಲ ಮಾಲೀಸು ಮಾಡಿಕೊಳ್ಳಿರಿ. ಹೀಗೆ ಮಾಡುವುದರ ಮೂಲಕ ತ್ವಚೆಯ ರ೦ಧ್ರಗಳನ್ನು ಆಳದವರೆಗೆ ಸ್ವಚ್ಛಗೊಳಿಸಲು ಸಾಧ್ಯವಾಗುತ್ತದೆ



Click it and Unblock the Notifications











