For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: 'ಖರ್ಜೂರ' ಹಣ್ಣಿನ ಫೇಸ್ ಪ್ಯಾಕ್

ಖರ್ಜೂರ ನಮ್ಮ ತ್ವಚೆಗೂ ಉತ್ತಮ ಆರೈಕೆ ನೀಡುತ್ತದೆ ಎಂದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಇದರ ಮುಖಲೇಪ ತಯಾರಿಸಿ ಹಚ್ಚಿಕೊಳ್ಳುವ ಮೂಲಕ ಘಾಸಿಗೊಂಡಿದ್ದ ಚರ್ಮ ಮತ್ತೆ ತನ್ನ ಪೂರ್ವ ಸ್ಥಿತಿಯನ್ನು ತಲುಪುತ್ತದೆ ಅಲ್ಲದೇ ಕಾಂತಿಯೂ ಹೆಚ್ಚುತ್ತದೆ

By Manu
|

ಸಿಹಿಯಾದ ಗಾಢಕಂದು ಬಣ್ಣದ ಸಿಹಿಯಾದ ಖರ್ಜೂರ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿವೆ ಎಂಬುದು ಈಗಾಗಲೇ ಸಾಬೀತು ಆಗಿದೆ. ಇದರ ಸೇವನೆಯಿಂದ ಆರೋಗ್ಯ ವೃದ್ಧಿಸುವುದು ಮಾತ್ರವಲ್ಲ, ರಕ್ತ ಶುದ್ಧೀಕರಣ, ಮಲಬದ್ಧತೆ ಇಲ್ಲವಾಗುವ ಉಪಯೋಗಗಳೂ ಇವೆ.

ಆದರೆ ಖರ್ಜೂರ ನಮ್ಮ ತ್ವಚೆಗೂ ಉತ್ತಮ ಆರೈಕೆ ನೀಡುತ್ತದೆ ಎಂದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಇದರ ಮುಖಲೇಪ ತಯಾರಿಸಿ ಹಚ್ಚಿಕೊಳ್ಳುವ ಮೂಲಕ ಘಾಸಿಗೊಂಡಿದ್ದ ಚರ್ಮ ಮತ್ತೆ ತನ್ನ ಪೂರ್ವ ಸ್ಥಿತಿಯನ್ನು ತಲುಪುತ್ತದೆ ಅಲ್ಲದೇ ಕಾಂತಿಯೂ ಹೆಚ್ಚುತ್ತದೆ. ದಿನಂಪ್ರತಿ ಸಿಹಿಸಿಹಿ ಖರ್ಜೂರ ಸೇವಿಸಿದರೆ, ಅಪಾರ ಲಾಭ!

ಈ ಮುಖಲೇಪದಲ್ಲಿ (ಫೇಸ್ ಪ್ಯಾಕ್) ಉತ್ತಮ ಪ್ರಮಾಣದ ವಿಟಮಿನ್ B5 ಇದೆ. ಈ ಪೋಷಕಾಂಶ ದೇಹದಲ್ಲಿ ಕ್ಯಾನ್ಸರ್ ಉಂಟು ಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುತ್ತದೆ. ಚರ್ಮ ಸಡಿಲವಾಗಲೂ, ನೆರಿಗೆ ಬೀಳಲೂ ಈ ಕಣಗಳೇ ಮುಖ್ಯ ಕಾರಣವಾಗಿದ್ದು ಈ ಕಣಗಳನ್ನು ನಿಷ್ಟೇಷ್ಠಿತಗೊಳಿಸುವ ಮೂಲಕ ಚರ್ಮದ ಸೆಳೆತವನ್ನು ಹೆಚ್ಚಿಸುತ್ತದೆ. ಬನ್ನಿ, ಈ ಮುಖಲೇಪವನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.....

ಹಂತ 1

ಹಂತ 1

ಸುಮಾರು ಮೂರರಿಂದ ಐದು ಚೆನ್ನಾಗಿ ಹಣ್ಣಾದ ಖರ್ಜೂರಗಳ ಬೀಜ ನಿವಾರಿಸಿ ಇದನ್ನು ತಣ್ಣೀರಿನಲ್ಲಿ ಚೆನ್ನಾಗಿ ತೊಳೆದು ಹೊರ ಭಾಗದಲ್ಲಿ ಅಂಟಿಕೊಂಡಿದ್ದ ಮರಳು, ಧೂಳನ್ನು ನಿವಾರಿಸಿ.

ಹಂತ 2

ಹಂತ 2

ಅರ್ಧ ಕಪ್ ಹಾಲನ್ನು ಚಿಕ್ಕ ಉರಿಯಲ್ಲಿ ಐದು ನಿಮಿಷ ಬಿಸಿಮಾಡಿ. ಬಳಿಕ ಉರಿ ಆರಿಸಿ ಇದರಲ್ಲಿ ಖರ್ಜೂರವನ್ನು ಚಿಕ್ಕ ಚಿಕ್ಕ ತುಂಡುಗಳಾಗಿಸಿ ಮುಳುಗಿಸಿ ಅರ್ಧ ಗಂಟೆ ಹಾಗೇ ನೆನೆಯಲು ಬಿಡಿ.

ಹಂತ 3

ಹಂತ 3

ಈ ಖರ್ಜೂರದ ತುಂಡುಗಳನ್ನು ಸೋಸಿ ತೆಗೆದು ಕೊಂಚ ಹಾಲಿನ ಜೊತೆಗೆ ನುಣ್ಣಗೆ ಅರೆಯಿರಿ.

 ಹಂತ 4

ಹಂತ 4

ಇದಕ್ಕೆ ಒಂದು ದೊಡ್ಡ ಚಮಚ ಗೋಧಿರವೆ ಅಥವಾ ಚಿರೋಟಿ ರವೆಯನ್ನು ಮಿಶ್ರಣ ಮಾಡಿ ಚೆನ್ನಾಗಿ ಗೊಟಾಯಿಸಿ. ಇದು ದಪ್ಪನೆಯ ಜೇನಿನಷ್ಟು ದಪ್ಪಗಿರಬೇಕು ಅಷ್ಟು ಮಾತ್ರ ಹಾಲನ್ನು ಬೆರೆಸಿ. ಬಳಿಕ ಒಂದು ದೊಡ್ಡ ಚಮಚ ಜೇನು ಮತ್ತು ಕೆಲವು ಹನಿ ಪ್ರಿಮ್ರೋಸ್ ಎಣ್ಣೆಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

ಹಂತ 5

ಹಂತ 5

ಲೇಪನ ತಯಾರಾದ ಬಳಿಕ ಮುಖವನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆದುಕೊಂಡು ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ. ಬಳಿಕ ಈ ಲೇಪನವನ್ನು ಮುಖ ಮತ್ತು ಕುತ್ತಿಗೆಯ ಮೇಲೆ ದಪ್ಪನಾಗಿ ಹಚ್ಚಿಕೊಳ್ಳಿ. ಈ ಲೇಪನ ಸುಮಾರು ಮೂವತ್ತು ನಿಮಿಷಗಳ ಕಾಲ ಹಾಗೇ ಒಣಗಲು ಬಿಡಿ.

ಹಂತ 6

ಹಂತ 6

ಬಳಿಕ ಮುಖದ ಮೇಲೆ ತಣ್ಣೀರಿನಿಂದ ಪ್ರೋಕ್ಷಳಿಸಿ. ಕೆಲವು ಕ್ಷಣಗಳ ಬಳಿಕ ಈ ಲೇಪನ ಸಡಿಲವಾಗುತ್ತದೆ. ಈಗ ಬೆರಳಿನಿಂದ ವೃತ್ತಾಕಾರದಲ್ಲಿ ಮಸಾಜ್ ಮಾಡುತ್ತಾ ನಡುನಡುವೆ ನೀರನ್ನು ಎರಚಿಕೊಳ್ಳುತ್ತಾ ತೊಳೆದುಕೊಳ್ಳಿ. ಲೇಪನ ಪೂರ್ಣವಾಗಿ ತೊಳೆದು ಹೋದ ಬಳಿಕ ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ.

ವಾರಕ್ಕೊಂದು ಬಾರಿ ಪುನರಾವರ್ತಿಸಿ

ವಾರಕ್ಕೊಂದು ಬಾರಿ ಪುನರಾವರ್ತಿಸಿ

ಈ ವಿಧಾನವನ್ನು ವಾರಕ್ಕೊಂದು ಬಾರಿ ಪುನರಾವರ್ತಿಸಿ. ಕೆಲವೇ ವಾರಗಳಲ್ಲಿ ನಿಮ್ಮ ಚರ್ಮದ ಬಣ್ಣ ಪ್ರಖರಗೊಳ್ಳುವುದನ್ನೂ ನೆರಿಗೆಗಳು ಮಾಯವಾಗುವುದನ್ನೂ ಕಾಣಬಹುದು. ಒಂದು ವೇಳೆ ನಿಮ್ಮಲ್ಲಿಯೂ ಉತ್ತಮವಾದ ಮಾಹಿತಿ ಇದ್ದರೆ ನಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಿ.

English summary

DIY Red Dates Face Mask For Super-glowing Skin!

Juicy, succulent dates can do more than act as a laxative or blood purifier. What if we say DIY dates mask can cleanse, rejuvenate and repair your skin? Sounds too good to be true, right? Believe it or not, it does all that and more. Dates pack a powerful punch of vitamin B5 that forms a protective barrier against the free radicals, repairing damaged skin cells and improving the skin's elasticity. So, here is a step-by-step method on how to use dates on skin, take a look.
X
Desktop Bottom Promotion