Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಹಳ್ಳಿ ಮದ್ದಿನ ಬ್ಯೂಟಿ ಟಿಪ್ಸ್‌ನಲ್ಲಿ ಖಂಡಿತ ಮೋಸವಿಲ್ಲ...
ಮನೆಯಲ್ಲಿ ಕುಳಿತುಕೊಂಡು ಟಿವಿ ನೋಡುತ್ತಿರುವಾಗ ಹಲವಾರು ರೀತಿಯ ಸೌಂದರ್ಯ ವರ್ಧಕಗಳ ಜಾಹೀರಾತುಗಳು ನಮ್ಮ ಕಣ್ಣ ಮುಂದೆ ಬರುತ್ತಿರುತ್ತದೆ. ಈ ಜಾಹೀರಾತುಗಳನ್ನು ನೋಡಿ ನಾವು ಕೂಡ ಮಾರುಕಟ್ಟೆಯಲ್ಲಿ ಅದೇ ಉತ್ಪನ್ನ ಬೇಕೆಂದು ಕೇಳಿ ಪಡೆಯುತ್ತೇವೆ. ಆದರೆ ಇದರಲ್ಲಿ ಯಾವ್ಯಾವ ರಾಸಾಯನಿಕಗಳನ್ನು ಬಳಸಲಾಗಿದೆ ಎನ್ನುವ ಬಗ್ಗೆ ನಾವು ಗಮನಿಸುವುದೇ ಇಲ್ಲ.

ಲೇಬಲ್‌ಗಳಲ್ಲಿ ಉತ್ಪನ್ನಕ್ಕೆ ಬಳಸಿರುವ ರಾಸಾಯನಿಕಗಳ ಬಗ್ಗೆ ಬರೆದಿದ್ದರೂ ನಮಗೆ ಅದು ಅರ್ಥವೇ ಆಗಲ್ಲ. ಒಂದು ವೇಳೆ ಅರ್ಥವಾದರೂ ನಾವು ಅದನ್ನುಕಡೆಗಣಿಸುತ್ತೇವೆ. ಏನಾದರೂ ಅಡ್ಡಪರಿಣಾಮಗಳು ಆದಾಗ ಮಾತ್ರ ಎಚ್ಚೆತ್ತುಕೊಂಡು ನೈಸರ್ಗಿಕವಾಗಿ ಸೌಂದರ್ಯವರ್ಧಕಗಳು ಏನಾದರೂ ಇದೆಯಾ ಎಂದು ಹುಡುಕುತ್ತೇವೆ. ಜಾಹೀರಾತಿಗೆ ಮರುಳಾಗಿ ಸೌಂದರ್ಯ ಕಳೆದುಕೊಳ್ಳಬೇಡಿ!
ಈ ಲೇಖನದಲ್ಲಿ ಕೊಟ್ಟಿರುವ ಕೆಲವೊಂದು ನೈಸರ್ಗಿಕ ಸೌಂದರ್ಯ ವರ್ಧಕಗಳನ್ನು ಬಳಸಿದರೆ ಯಾವುದೇ ಅಡ್ಡಪರಿಣಾಮಗಳು ಇಲ್ಲ ಮತ್ತು ಖರ್ಚು ಕೂಡ ತುಂಬಾ ಕಡಿಮೆ. ಇದನ್ನೊಮ್ಮೆ ಪ್ರಯತ್ನಿಸಿ ನೋಡಿ.
ಬೇವು
ಎಲ್ಲಾ ಸೌಂದರ್ಯವರ್ಧಕ ಸಾಮಗ್ರಿಗಳ ರಾಜನೆಂದು ಇದನ್ನು ಕರೆಯಬಹುದಾಗಿದೆ. ಪವಿತ್ರವೆಂದು ಭಾವಿಸಲಾಗಿರುವ ಬೇವಿನ ಮರದ ಪ್ರತಿಯೊಂದು ಭಾಗವು ಸೌಂದರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ.
ಮೊಡವೆಗಳ ನಿವಾರಣೆ
*ಒಂದಿಷ್ಟು ಬೇನಿನ ಎಲೆಗಳನ್ನು ಚೆನ್ನಾಗಿ ಅರೆದು ಕೆಲವು ಹನಿ ಹಸಿಹಾಲನ್ನು ಹಾಕಿ ಲೇಪನ ತಯಾರಿಸಿ ಮೊಡವೆಗಳ ಮೇಲೆ ಹಚ್ಚಿ. ಕೊಂಚ ಉರಿ ಎನಿಸಿದರೂ ಮೊಡವೆಗಳಿಗೆ ಉತ್ತಮ ಆರೈಕೆ ನೀಡುವುದರಿಂದ ಐದು ನಿಮಿಷ ಸಹಿಸಿ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ. ಬೇವು: ಕಹಿಯಾದರೂ ಸೌಂದರ್ಯದ ವಿಷಯದಲ್ಲಿ ಸಿಹಿ
ಬ್ಲ್ಯಾಕ್ ಹೆಡ್ ಸಮಸ್ಯೆಗೆ
*ಹಸಿಬೇವಿನ ಎಲೆಗಳನ್ನು ನುಣ್ಣಗೆ ಅರೆದು ನೇರವಾಗಿ ಕಪ್ಪುಕಲೆಗಳಿರುವಲ್ಲಿ (ಬ್ಲ್ಯಾಕ್ ಹೆಡ್) ಹಚ್ಚಿ ಸುಮಾರು ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಬದಲಿಗೆ ಬೇವಿನ ಎಣ್ಣೆಯನ್ನು ಹಿಂಡಿ ತೆಗೆದ ರಸವನ್ನು ಹತ್ತಿಯಲ್ಲಿ ಮುಳುಗಿಸಿ ಕಪ್ಪುಕಲೆಗಳಿರುವಲ್ಲಿ ಒರೆಸಿ ಸಹಾ ತೆಗೆಯಬಹುದು.
ಕೇಸರಿ
ಇದು ತುಂಬಾ ದುಬಾರಿ ಸೌಂದರ್ಯವರ್ಧಕವಾಗಿದೆ. ಅತೀ ಶ್ರೀಮಂತ ಸೌಂದರ್ಯವರ್ಧಕಕ್ಕೆ ಹಣ ವ್ಯಯಿಸಿದರೂ ಯಾವುದೇ ತೊಂದರೆಯಿಲ್ಲ. ಯಾಕೆಂದರೆ ಇದು ನಿಮ್ಮ ಬಣ್ಣವನ್ನು ಬಿಳಿ ಮಾಡಲಿದೆ.
ತ್ವಚೆಯನ್ನು ಬಿಳಿಯಾಗಿಸುವುದು
ಕೆಲವು ಎಸಲು ಕೇಸರಿ ತೆಗೆದುಕೊಂಡು ಅದನ್ನು ಹಾಲಿನಲ್ಲಿ ಹಾಕಿ 30 ನಿಮಿಷಗಳ ಕಾಲ ನೆನೆಸಿಡಿ. ಒಂದು ಚಮಚ ಗಂಧದ ಹುಡಿಯನ್ನು ಈ ಮಿಶ್ರಣಕ್ಕೆ ಸೇರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 15-20 ನಿಮಿಷ ಹಾಗೆ ಇರಲಿ. ಬಳಿಕ ತೊಳೆಯಿರಿ.
ಇನ್ನೊಂದು ವಿಧಾನವಿದೆ- ಎರಡು ಚಮಚ ತಣ್ಣನೆಯ ಹಾಲಿನಲ್ಲಿ ಕೆಲವು ಎಸಳು ಕೇಸರಿಯನ್ನು ಹಾಕಿ ಒಂದು ಗಂಟೆ ನೆನೆಸಿ. ಇದಕ್ಕೆ ಬಳಿಕ ಒಂದು ಚಿಕ್ಕಚಮಚ ಚಂದನದ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಲೇಪನವನ್ನು ಮುಖ ಮತ್ತು ಕುತ್ತಿಗೆಯ ಮೇಲೆ ಹಚ್ಚಿ (ಕೆಳಗಿನಿಂದ ಮೇಲಕ್ಕೆ ಬರುವಂತೆ ಮಸಾಜ್ ಮಾಡುತ್ತಾ) ಸುಮಾರು ಇಪ್ಪತ್ತು ನಿಮಿಷ ಒಣಗಲು ಬಿಡಿ. ಕೇಸರಿಯ ರಹಸ್ಯ: ಕಣ ಕಣದಲ್ಲೂ ಸೌಂದರ್ಯದ ಶಕ್ತಿ!
ಜೇನು
ಜೇನು ಖಂಡಿತವಾಗಿಯೂ ಪ್ರತಿಯೊಬ್ಬರ ಫೇವರಿಟ್ ಆಗಿರುತ್ತದೆ. ರುಚಿಕರ, ಸುಲಭವಾಗಿ ಸಿಗುವ ಮತ್ತು ಕಡಿಮೆ ವೆಚ್ಚದ ಜೇನನ್ನು ಬಳಸಿದರೆ ತ್ವಚೆಯು ತೇವಾಂಶವನ್ನು ಪಡೆದುಕೊಳ್ಳುವುದು. ನಿಮ್ಮನ್ನು ನಿಬ್ಬೆರಗಾಗಿಸುವ ಜೇನು ತುಪ್ಪದ ಸೌಂದರ್ಯ ಚಿಕಿತ್ಸೆ!
ಸುಟ್ಟ ಗಾಯ ಶಮನ
ಸುಟ್ಟ ಗಾಯವಾಗಿದ್ದರೆ ಜೇನನ್ನು ಅದಕ್ಕೆ ಹಚ್ಚಿಕೊಳ್ಳಿ. ಜೇನಿನಲ್ಲಿ ನಂಜುನಿರೋಧಕ ಮತ್ತು ಶಮನಕಾರಿ ಗುಣಗಳಿವೆ. ಜೇನನ್ನು ಸುಟ್ಟ ಗಾಯಕ್ಕೆ ನಿಯಮಿತವಾಗಿ ಹಚ್ಚಿಕೊಂಡರೆ ಗಾಯದ ಕಲೆಯ ಬಣ್ಣ ಮಾಸುವುದು.



Click it and Unblock the Notifications



