For Quick Alerts
ALLOW NOTIFICATIONS  
For Daily Alerts

ಮೊಡವೆ ಉಪಟಳಕ್ಕೆ, ಕಿತ್ತಳೆ-ಲೋಳೆಸರದ ಜ್ಯೂಸ್

By Super Admin
|

ಬೆಳಿಗ್ಗೆ ಎದ್ದು ಹೋಗಿ ಕನ್ನಡಿಯಲ್ಲಿ ನೋಡಿದಾಗ ಮುಖದ ತುಂಬಾ ಮೊಡವೆಗಳು ಹಾಗೂ ಬೊಕ್ಕೆಗಳು ಕಾಣಿಸಿಕೊಂಡರೆ ಒಮ್ಮೆ ಎದೆ ಒಡೆದು ಹೋದಂತೆ ಆಗುತ್ತದೆ. ನಿರಾಶೆಯೊಂದಿಗೆ ಇದನ್ನು ಹೇಗಪ್ಪಾ ನಿವಾರಿಸುವುದು ಎನ್ನುವ ಆತಂಕ ಕಾಡಲು ಆರಂಭಿಸುತ್ತದೆ. ಸ್ವಲ್ಪ ಹುಷಾರ್, ಇದು ಅಂತಿಂಥ ಮೊಡವೆ ಅಲ್ಲ..!

ಮೊಡವೆ ಕಾಣಿಸಿಕೊಂಡಾಗ ಹೆಚ್ಚಿನವರು ತಕ್ಷಣ ಮಾರುಕಟ್ಟೆಗೆ ಹೋಗಿ ಅಲ್ಲಿ ಸಿಗುವ ಯಾವುದಾದರೂ ಕ್ರೀಮ್ ಅನ್ನು ಎತ್ತಿಕೊಂಡು ಬಂದುಮೊಡವೆಗಳಿಗೆ ಹಚ್ಚಲು ಆರಂಭಿಸುತ್ತಾರೆ. ಇದರಿಂದ ಚರ್ಮವು ಕಾಂತಿಯನ್ನು ಪಡೆಯುವುದು ಎಂದು ನಾವು ನಂಬಿರುತ್ತೇವೆ. ಅಯ್ಯೋ ದೇವರೆ, ಮೂಗಿನಲ್ಲಿ ಮೊಡವೆ ಏನು ಮಾಡ್ಲಿ..?

ಆದರೆ ಈ ರಾಸಾಯನಿಕಯುಕ್ತ ಉತ್ಪನ್ನಗಳು ತ್ವಚೆಗೆ ಹಲವಾರು ರೀತಿಯ ಹಾನಿಯನ್ನುಂಟು ಮಾಡುತ್ತದೆ. ಆದರೆ ಮನೆಯಲ್ಲಿಯೇ ಸಿಗುವ ಕೆಲವೊಂದು ಉತ್ಪನ್ನಗಳನ್ನು ಬಳಸಿಕೊಂಡು ತ್ವಚೆಯ ಕಾಂತಿಯನ್ನು ಹೆಚ್ಚಿಸಬಹುದಾಗಿದೆ. ಕಿತ್ತಳೆ ಜ್ಯೂಸ್ ಮತ್ತು ಅಲೋವೆರಾ ಅಥವಾ ಲೋಳೆಸರದ ಜ್ಯೂಸ್ ಬಳಸಿದರೆ ತ್ವಚೆಯು ಬೆಳ್ಳಗಾಗಿ ಕಾಂತಿಯನ್ನು ಪಡೆಯುವುದು. ಕಿತ್ತಳೆ ಜ್ಯೂಸ್ ಮತ್ತು ಅಲೋವೆರಾದಿಂದ ಚರ್ಮದ ಮಾಸ್ಕ್ ಅನ್ನು ಯಾವ ರೀತಿ ಮಾಡುವುದು ಎಂದು ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

*ಕಿತ್ತಳೆ ಜ್ಯೂಸ್ 3 ಚಮಚ

*ಅಲೋವೆರಾದ ತಿರುಳು 2 ಚಮಚ

ತಯಾರಿಸುವ ವಿಧಾನ

ತಯಾರಿಸುವ ವಿಧಾನ

*ಹೇಳಿದಷ್ಟು ಪ್ರಮಾಣದಲ್ಲಿ ಸಾಮಗ್ರಿಯನ್ನು ತೆಗೆದುಕೊಂಡು ಮಿಶ್ರಣ ಮಾಡಿಕೊಳ್ಳಿ.

*ಈ ಮಿಶ್ರಣವನ್ನು ತ್ವಚೆಗೆ ಹಚ್ಚಿಕೊಳ್ಳಿ.

*20 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ಅದನ್ನು ತೊಳೆಯಿರಿ.

*ಕಿತ್ತಳೆ ಜ್ಯೂಸ್ ಮತ್ತು ಅಲೋವೆರಾದಿಂದ ಮಾಡಿದ ಮಾಸ್ಕ್‌ನಿಂದ ತ್ವಚೆಗೆ ಆಗುವಂತಹ ಲಾಭಗಳನ್ನು ತಿಳಿದುಕೊಳ್ಳಿ.

ಚರ್ಮ ಒಣಗುವುದನ್ನು ಕಡಿಮೆ ಮಾಡುವುದು

ಚರ್ಮ ಒಣಗುವುದನ್ನು ಕಡಿಮೆ ಮಾಡುವುದು

ಈ ನೈಸರ್ಗಿಕ ಮಿಶ್ರಣವು ಚರ್ಮದ ಪ್ರತಿಯೊಂದು ರಂಧ್ರಕ್ಕೆ ತೇವಾಂಶವನ್ನು ನೀಡುವುದು. ಇದರಿಂದ ಒಣಚರ್ಮವು ದೂರವಾಗಿ ಚರ್ಮವು ಮೃಧುವಾಗಿ ಕಾಂತಿಯನ್ನು ಪಡೆಯುವುದು.

ನೆರಿಗೆ ನಿವಾರಣೆ

ನೆರಿಗೆ ನಿವಾರಣೆ

ಮಾಸ್ಕ್ ವಿಟಮಿನ್ ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್ ನಿಂದ ಸಮೃದ್ಧವಾಗಿದೆ. ಇದು ಕೋಶಗಳಿಗೆ ವಯಸ್ಸಾಗುವುದನ್ನು ತಡೆಯುವುದು. ಇದರಿಂದ ನೆರಿಗೆ ಮತ್ತು ಚರ್ಮ ಜೋತು ಬೀಳುವುದು ಕಡಿಮೆಯಾಗುತ್ತದೆ.

ಗಾಯಗಳಿಗೆ ಚಿಕಿತ್ಸೆ

ಗಾಯಗಳಿಗೆ ಚಿಕಿತ್ಸೆ

ಕಿತ್ತಳೆ ಜ್ಯೂಸ್ ಮತ್ತು ಅಲೋವೆರಾದ ಮಾಸ್ಕ್ ನಲ್ಲಿ ಉರಿಯೂತ ಶಮನಕಾರಿ ಗುಣಗಳಿವೆ. ಇದರಿಂದ ಸಣ್ಣ ಪ್ರಮಾಣದ ಗಾಯ, ಸುಟ್ಟಗಾಯ ಮತ್ತು ಕೀಟಗಳಿಂದ ಆಗುವ ಕಡಿತ ನಿವಾರಣೆಯಾಗುವುದು.

ಕಾಂತಿ ನೀಡುವುದು

ಕಾಂತಿ ನೀಡುವುದು

ಈ ಮಾಸ್ಕ್‌ನಲ್ಲಿರುವ ವಿಟಮಿನ್ ಸಿ ಅಂಶವು ನೈಸರ್ಗಿಕ ಬ್ಲೀಚಿಂಗ್ ಆಗಿ ಕೆಲಸ ಮಾಡುವುದರಿಂದ ನಿಯಮಿತವಾಗಿ ಬಳಸುವುದರಿಂದ ಚರ್ಮವು ಕಾಂತಿಯನ್ನು ಪಡೆಯುವುದು.

 ಕಪ್ಪುಕಲೆ ನಿವಾರಣೆ

ಕಪ್ಪುಕಲೆ ನಿವಾರಣೆ

ಕಿತ್ತಳೆ ಜ್ಯೂಸ್ ಮತ್ತು ಅಲೋವೆರಾದ ಮಾಸ್ಕ್ ಚರ್ಮದ ರಂಧ್ರಗಳಲ್ಲಿ ಅಡಗಿರುವಂತಹ ಧೂಳು ಮತ್ತು ಕಲ್ಮಶವನ್ನು ತೆಗೆದುಹಾಕುತ್ತದೆ. ಇದರಿಂದ ಚರ್ಮದಲ್ಲಿ ಮೂಡುವ ಕಪ್ಪು ಕಲೆಗಳು ನಿವಾರಣೆಯಾಗುವುದು.

English summary

Apply Orange Juice And Aloe Vera On Your Skin, Watch What Happens!

Many of us also realise that chemical-based skin care products do more harm than good for our skin. Did you know that there are a few easily available kitchen ingredients like orange juice and aloe vera that can make our complexions healthy and radiant? Learn how to make the orange juice and aloe vera skin mask, here.
X
Desktop Bottom Promotion