For Quick Alerts
ALLOW NOTIFICATIONS  
For Daily Alerts

  ಒಣಚರ್ಮವೇ? ಅಲೋವೆರಾ ಫೇಸ್ ಪ್ಯಾಕ್ ಪ್ರಯತ್ನಿಸಿ ನೋಡಿ...

  By Arshad
  |

  ಚರ್ಮದ ಆರೋಗ್ಯಕ್ಕೆ ಆರ್ದ್ರತೆ ಬಹಳ ಮುಖ್ಯ. ಕೆಲವರ ಚರ್ಮ ಆರ್ದತೆಯನ್ನು ಹಿಡಿದಿಟ್ಟುಕೊಳ್ಳುವ ಕ್ಷಮತೆಯನ್ನು ಕೊಂಚ ಕಡಿಮೆ ಹೊಂದಿರುವ ಕಾರಣ ಇವರ ಚರ್ಮ ಸದಾ ಒಣದಾಗಿಯೇ ಇರುತ್ತದೆ.

  ವಾತಾವರಣದಲ್ಲಿ ಕೊಂಚ ಒಣಹವೆ ಕಂಡುಬಂದರೂ ಇವರ ಚರ್ಮ ಒಣಗಿ ಬಿರುಕು ಬಿಡಲಾರಂಭಿಸುತ್ತದೆ. ಅದರಲ್ಲೂ ವಿಪರೀತ ಶುಷ್ಕ ಹವೆ ಇದ್ದಾಗ ಚರ್ಮ ಒಣಗಿ ಬಿಗಿಯಾಗಿ ನಗುವುದೂ ಕಷ್ಟಕರವಾಗುತ್ತದೆ.

  Aloe Vera Face Packs For Dry
    ಅಲ್ಲದೇ ಬೇಗನೇ ನೆರಿಗೆ ಬೀಳುವುದು, ಹೊರಪದರ ಪರೆಯಂತೆ ಏಳುವುದು, ಚರ್ಮ ಕೆಂಪಗಾಗುವುದು, ತುಟಿಗಳು ಸೀಳಿ ರಕ್ತ ಬರುವುದು ಇತ್ಯಾದಿಗಳು ಕಂಡುಬರುತ್ತವೆ.

  ಪರೋಕ್ಷವಾಗಿ ವೃದ್ಧಾಪ್ಯದ ಲಕ್ಷಣಗಳನ್ನು ಚಿಕ್ಕವಯಸ್ಸಿನಲ್ಲಿಯೇ ಮೂಡಿಸುತ್ತವೆ. ಈ ತೊಂದರೆಯನ್ನು ಸಮರ್ಥವಾಗಿ ನಿಭಾಯಿಸಲು ನಿಸರ್ಗ ನೀಡಿರುವ ಅತ್ಯುತ್ತಮ ಪರಿಹಾರವೆಂದರೆ ಲೋಳೆಸರ. ಬನ್ನಿ, ಈ ನಿಟ್ಟಿನಲ್ಲಿ ಲೋಳೆಸರವನ್ನು ಹೇಗೆ ಬಳಸಬಹುದು ಎಂಬುದನ್ನು ಮೂರು ಮುಖಲೇಪಗಳ ಮುಖಾಂತರ ವಿವರಿಸಲಾಗಿದೆ: 'ಅಲೋವೆರಾ'ದ ಫೇಸ್ ಪ್ಯಾಕ್-ಸೌಂದರ್ಯದ ಕೀಲಿಕೈ! 

  ಲೋಳೆಸರ (ಅಲೋವೆರಾ) ಮತ್ತು ಮೊಸರು: ಕೆಂಪಗಾಗಿರುವ ಚರ್ಮಕ್ಕಾಗಿ

  Aloe Vera Face Packs For Dry

  ಎರಡು ದೊಡ್ಡಚಮಚದಷ್ಟು ಸಮಪ್ರಮಾಣದಲ್ಲಿ ಲೋಳೆಸರ ಮತ್ತು ಮೊಸರನ್ನು ಬೆರೆಸಿ ಈ ಲೇಪನವನ್ನು ಮುಖ, ಕುತ್ತಿಗೆ ಕೈಗಳಿಗೆ ಹಚ್ಚಿ. ಇದರಿಂದ ಒಣಗಿದ ಭಾಗ ಕೆಂಪಗಾಗಿದ್ದರೆ ತಕ್ಷಣ ಉರಿ ಕಡಿಮೆಯಾಗುತ್ತದೆ ಹಾಗೂ ಪದರವೇಳುವುದು ಕಡಿಮೆಯಾಗುತ್ತದೆ. ಈ ವಿಧಾನವನ್ನು ಪ್ರತಿದಿನ ಒಂದು ಹೊತ್ತಿನಲ್ಲಿ ನಿಯಮಿತವಾಗಿ ಹಚ್ಚುತ್ತಾ ಬನ್ನಿ. ಬೆಳಗ್ಗಿನ ಸಮಯ ಉತ್ತಮ. ಈ ಮುಖಲೇಪದ ಇನ್ನೊಂದು ಉಪಯೋಗವೆಂದರೆ ಚರ್ಮವನ್ನು ತಣಿಸುವುದು. ಇದರಿಂದ ಚಿಕ್ಕ ಚಿಕ್ಕ ಬೊಕ್ಕೆ, ಬೆವರುಸಾಲೆ ಮೊದಲಾದವು ಏಳುವ ಸಂಭವ ಕಡಿಮೆಯಾಗುತ್ತದೆ.

  Aloe Vera Face Packs For Dry
   

  ಲೋಳೆಸರ ಮತ್ತು ಅರಿಶಿನ: ಮುಖದ ಕಾಂತಿ ಹೆಚ್ಚಿಸಲು

  ಒಂದು ವೇಳೆ ಒಣಚರ್ಮದ ಕಾರಣದಿಂದ ಮುಖದ ಕಾಂತಿ ಮತ್ತು ಹೊಳಪು ಇಲ್ಲವಾಗಿದ್ದರೆ ಈ ಮುಖಲೇಪ ಸಮರ್ಥವಾದ ಉತ್ತರವಾಗಿದೆ. ಅರಿಶಿನ ಮುಖದ ಕಾಂತಿ ಹೆಚ್ಚಿಸುತ್ತದಾದರೂ ಒಣಚರ್ಮವನ್ನು ಇನ್ನಷ್ಟು ಒಣಗಿಸುವ ಕಾರಣ ಬರೆಯ ಅರಿಶಿನ ಸಾಕಾಗುವುದಿಲ್ಲ.

  ಆದರೆ ಇದರೊಂದಿಗೆ ಕೊಂಚ ಲೋಳೆಸರದ ರಸ ಬೆರೆಸಿ ಹಚ್ಚಿದರೆ ಒಣಚರ್ಮಕ್ಕೆ ಆರ್ದ್ರತೆ ಮತ್ತು ಅರಿಶಿನದ ಪೋಷಣೆ ದೊರೆತು ಒಣಚರ್ಮದವರೂ ಇತರರಂತೆ ಕಾಂತಿಯುಕ್ತ ಮುಖವನ್ನು ಹೊಂದಬಹುದು. ಇದಕ್ಕಾಗಿ ಒಂದು ದೊಡ್ಡ ಚಮಚ ಲೋಳೆಸರದ ರಸಕ್ಕೆ ಚಿಟಿಕೆಯಷ್ಟು ಅರಿಶಿನ ಬೆರೆಸಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಒಣಗಲು ಬಿಡಿ. ಕೊಂಚ ಹೊತ್ತಿನ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ತ್ವಚೆಯ ಸರ್ವ ರೋಗಕ್ಕೂ ಲೋಳೆ ಸರದ ಫೇಸ್ ಪ್ಯಾಕ್ 

  ಲೋಳೆಸರ ಮತ್ತು ಪಪ್ಪಾಯಿ: ಮುಖದ ಅನಗತ್ಯ ಕೂದಲು ನಿವಾರಿಸಲು

  ಪಪ್ಪಾಯಿಯಲ್ಲಿರುವ ಕೆಲವು ಕಿಣ್ವಗಳು ಮುಖದ ಮೇಲಿರುವ ಅನಗತ್ಯ ಕೂದಲುಗಳನ್ನು ನಿವಾರಿಸುವ ಶಕ್ತಿ ಹೊಂದಿದೆ. ನಿಯಮಿತವಾಗಿ ಈ ಮುಖಲೇಪವನ್ನು ಬಳಸುತ್ತಾ ಬಂದರೆ ಬೇಡದ ಕೂದಲ ನಿವಾರಣೆಗಾಗಿ ದುಬಾರಿ ಬ್ಯೂಟಿ ಪಾರ್ಲರುಗಳಲ್ಲಿ ಪ್ರತ್ಯೇಕ ಆರೈಕೆ ಪಡೆದುಕೊಳ್ಳುವ ಅಗತ್ಯವೇ ಇಲ್ಲ.

  Aloe Vera Face Packs For Dry
    

  ಇದಕ್ಕಾಗಿ ಕೊಂಚ ಲೋಳೆಸರದ ರಸ ಮತ್ತು ಪಪ್ಪಾಯಿ ಹಣ್ಣಿನ ಚಿಕ್ಕ ತುಂಡನ್ನು ಜಜ್ಜಿ ಬೆರೆಸಿ ನಯವಾದ ಲೇಪವಾಗಿಸಿ. ಈ ಲೇಪವನ್ನು ಮುಖದ ಮೇಲೆ ಹಚ್ಚಿ ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಮುಖದ ಕಾಂತಿ ಹೆಚ್ಚುವ ಜೊತೆಗೇ ಬೇಡದ ಕೂದಲೂ ಬುಡಸಮೇತ ಹೋಗಿರುತ್ತದೆ.

  English summary

  Aloe Vera Face Packs For Dry Skin

  Having dry skin can be a pain, quite literally. It tends to feel stretchy and can make smiling a pain at times. Not to mention that dry skin can actually age faster. However, you can make your own aloe vera face packs to combat dry skin. Here, we are sharing with you three amazing face packs that use aloe vera as a base. Have a look.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more