For Quick Alerts
ALLOW NOTIFICATIONS  
For Daily Alerts

ತ್ವಚೆಯ ಆರೈಕೆಗೆ ತೊಗರಿಕಾಳು-ಆಲೂಗಡ್ಡೆಯ ಫೇಸ್‌ ಪ್ಯಾಕ್

By Su.Ra
|

ಚಳಿಗಾಲ ಅಂದ್ರೆ ಮುಖದ ಕಾಂತಿ ಕಳೆಗುಂದುತ್ತೆ. ರಿಂಕಲ್ಸ್ ಆಗುತ್ತೆ. ಚಳಿಗೆ ಮುಖ ಬಿರುಕುಬಿಟ್ಟಂತಾಗಿ ಸೌಂದರ್ಯ ಹೇಳಹೆಸರಿಲ್ಲದಂತೆ ಹೊರಟು ಹೋಗುತ್ತೆ. ಅದಕ್ಕೆ ಸರಿಯಾಗಿ ಹಾಳಾದ ವಾತಾವರಣ ಬೇರೆ ಬೆಂಕಿಗೆ ತುಪ್ಪ ಸುರಿದಂತೆ ನಿಮ್ಮ ಸೌಂದರ್ಯದ ಶತ್ರುವಾಗುತ್ತೆ. ಇನ್ನು ಇದೆಲ್ಲವನ್ನು ಮೇಕಪ್ ಮಾಡಿ ಮರೆಮಾಚಿ ಬಿಡೋಣ ಅಂದ್ರೆ ಅದಕ್ಕೂ ಶನಿ ವಕ್ಕರಿಸಿದಂತಾಗಿರುತ್ತೆ.

ಮೇಕಪ್ ಕೂಡ ಹಾಳಾದ ತ್ವಚೆಯ ಮೇಲೆ ಸರಿಯಾಗಿ ಕೂರೋದಿಲ್ಲ. ಏನು ಮಾಡೋದು ಅಂತ ಚಿಂತೆ ಆವರಿಸಿ ಬಿಡೋದು ಹೆಚ್ಚಿನ ಮಹಿಳೆಯರ ಕಾಮನ್ ಪ್ರಾಬ್ಲಂ..ಅದಕ್ಕೊಂದು ಸಿಂಪಲ್ ಪರಿಹಾರ ಇದೆ.. ಅದಕ್ಕಾಗಿ ನೀವು ಮಾಡ್ಬೇಕಾಗಿರೋದು ಇಷ್ಟೇ.. ಕೊರೆಯುವ ಚಳಿಗಾಲದಲ್ಲಿ ತ್ವಚೆಯ ಆರೈಕೆ ಹೀಗಿರಲಿ

ಬೇಕಾಗಿರುವ ಸಾಮಗ್ರಿಗಳು
1.ಒಂದು ಬೌಲ್ ತೊಗರಿ ಕಾಳು ಸುಮಾರು 150 ಗ್ರಾಮ್ ನಷ್ಟು
2.ಮೀಡಿಯಮ್ ಸೈಜಿನ ಮೂರು ಆಲೂಗಡ್ಡೆ
3. ಹಾಲಿನ ಕೆನೆ - ಒಂದು ಚಮಚ

Potatoes and Togarikalu face packs in Kannada

ಏನು ಮಾಡ್ಬೇಕು?
ಈಗಂತೂ ತೊಗರಿ ಸೀಸನ್.. ಎಲ್ಲೆಲ್ಲೂ ಹಸಿ ತೊಗರಿಕಾಳುಗಳು ಸಿಗುತ್ತೆ. ಒಂದು ಬೌಲ್ ನಷ್ಟು ತೊಗರಿಕಾಳುಗಳನ್ನು ಬಿಡಿಸಿ ಸ್ವಚ್ಛಗೊಳಿಸಿಕೊಳ್ಳಿ.. ನಂತ್ರ ಮೂರು ಆಲೂಗಡ್ಡೆಯನ್ನು ಸಿಪ್ಪೆ ಬಿಡಿಸಿ ಹೆಚ್ಚಿಕೊಳ್ಳಿ.. ಎರಡನ್ನು ಮಿಕ್ಸ್ ಮಾಡಿ ಕುಕ್ಕರ್ ನಲ್ಲಿ ನಾಲ್ಕರಿಂದ ಐದು ಲೋಟ ನೀರು ಹಾಕಿ ಬೇಯಿಸಿ.. ಕುಕ್ಕರ್ ಮೂರು ವಿಷಿಲ್ ಬಂದ ನಂತ್ರ ಆಫ್ ಮಾಡಿ ಪ್ರೆಷರ್ ಇಳಿಯಲು ಬಿಡಿ. ತಣ್ಣಗಾದ ನಂತ್ರ ಬೇಯಿಸಿದ ಕಾಳು ಮತ್ತು ಆಲೂಗಡ್ಡೆಯನ್ನು ನೀರಿನಿಂದ ಬೇರ್ಪಡಿಸಿ.. ಬೇಯಿಸಿದ ಕಾಳು ಮತ್ತು ಆಲೂಗಡ್ಡೆಯನ್ನು ಈಗ ಪೇಸ್ಟ್ ತಯಾರಿಸಿಕೊಳ್ಳಿ. ಎಲೆಮರೆಕಾಯಿ ಆಲೂಗಡ್ಡೆಯ ಜಾದೂಗೆ ಬೆರಗಾಗಲೇಬೇಕು!

ನಂತ್ರ ಆ ಪೇಸ್ಟಿಗೆ ಒಂದು ಚಮಚ ಹಾಲಿನ ಕೆನೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ..ಪೇಸ್ಟ್ ಗಟ್ಟಿಯಾಗಿರಲಿ..ಈ ಮಿಶ್ರಣವನ್ನು ನಿಮ್ಮ ತ್ವಚೆಗೆ ಹಚ್ಚಿಕೊಂಡು ಒಂದು ಅರ್ಧ ಗಂಟೆ ಹಾಗೆಯೇ ಬಿಡಿ..ಆ ಪೇಸ್ಟ್ ನಿಮ್ಮ ಮುಖದಲ್ಲಿ ಒಣಗುವವರೆಗೂ ನೀವು ಹಾಗೆಯೇ ಇದ್ದರೂ ಪರವಾಗಿಲ್ಲ. ನಂತ್ರ ಸ್ವಲ್ಪ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ.. ಯಾವುದೇ ಕೆಮಿಕಲ್ ಬಳಸದೇ ಫೇಸ್ ವಾಷ್ ಮಾಡಿದ್ರೆ ಒಳ್ಳೇದು..

ಹೀಗೆ ಮಾಡೋದ್ರಿಂದ ನಿಮ್ಮ ಕಳೆಗುಂದಿದ ತ್ವಚೆಗೆ ಮರುಜೀವ ಬರುತ್ತೆ. ಅಷ್ಟೇ ಅಲ್ಲ, ಚರ್ಮದ ಕಾಂತಿ ಹೆಚ್ಚಾಗುತ್ತೆ. ಅಲ್ಲದೆ ವಾತಾವರಣದ ಧೂಳಿನಿಂದ ಹಾಳಾಗಿರುವ ನಿಮ್ಮ ಮುಖದ ಚರ್ಮಕ್ಕೆ ಈ ಫೇಸ್ ಪ್ಯಾಕ್ ರಿಲ್ಯಾಕ್ಸ್ ಫೀಲ್ ನೀಡುತ್ತೆ. ಕೊಳೆ ತೊಡೆದು ಹಾಕಿ ಚರ್ಮ ಉಸಿರಾಡುವಂತೆ ಮಾಡಿ ಮುಖ ಫಳಫಳ ಹೊಳೆಯುವಂತೆ ಮಾಡುತ್ತೆ.

ಎಲ್ಲರಿಗೂ ಗೊತ್ತಿರೋ ಹಾಗೆ ಆಲೂಗಡ್ಡೆ ಆಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ತೊಗರಿ ಕಾಳು ಕೂಡ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುವ ಎಲ್ಲಾ ಗುಣಗಳನ್ನು ಹೊಂದಿದೆ. ಇನ್ನು ಚಳಿಗಾಲದಲ್ಲಿ ಚರ್ಮಕ್ಕೆ ಎಷ್ಟು ಆರೈಕೆ ಇದ್ರೂ ಸಾಕಾಗಲ್ಲ. ಅದ್ರಲ್ಲೂ ಮುಖಕ್ಕೆ ಮಹಿಳೆಯರು ಮೇಕಪ್ ಕೂಡ ಮಾಡೋದ್ರಿಂದ ಎಷ್ಟು ಕಾಳಜಿ ವಹಿಸಿದ್ರೂ ಕಡಿಮೆಯೇ. ಹಾಗಾಗಿ ಈ ಫೇಸ್ ಪ್ಯಾಕ್ ಅವ್ರ ಸೌಂದರ್ಯವನ್ನು ಸ್ವಲ್ಪವೂ ಕಡಿಮೆಯಾಗದಂತೆ ನೋಡಿಕೊಳ್ಳುತ್ತೆ. ನಿಮ್ಗೂ ಕೂಡ ಮುಖದ ಚರ್ಮ ಬಿರುಕುಬಿಟ್ಟಂತಾಗಿದೆ ಅನ್ನೋ ಫೀಲ್ ಇದ್ರೆ ಈ ಪೇಸ್ ಪ್ಯಾಕ್ ಟ್ರೈ ಮಾಡಿ ನೋಡಿ..

English summary

Potatoes and green pigeon peas face packs for skin

Potatoes and togarikalu (green pigeon peas) are a rich source of carbohydrate and contain little protein. They also contain vitamin C and B-complex and minerals like potassium, magnesium, phosphorous and zinc which are very good for healthy and glowing skin during winter
X
Desktop Bottom Promotion