For Quick Alerts
ALLOW NOTIFICATIONS  
For Daily Alerts

ಹದಿಹರೆಯದಲ್ಲಿ ಕಾಡುವ ಮೊಡವೆಗೆ ಅದ್ಭುತ ಜ್ಯೂಸ್

|

ಮುಖದಲ್ಲಿ ಕಂಡುಬರುವ ಮೊಡವೆ ಹಾಗೂ ಅವುಗಳು ಉಳಿಸಿ ಹೋಗುವ ಕಲೆಗಳು ನಿಜಕ್ಕೂ ದು:ಸ್ವಪ್ನದ೦ತೆ ಕಾಡುವ೦ತಹವುಗಳಾಗಿರುತ್ತವೆ. ನಾಳೆಯೇ ನಿಮಗೆ ಯಾವುದೋ ಒ೦ದು ಮುಖ್ಯವಾದ ಕಾರ್ಯಕ್ರಮ ಅಥವಾ ಸಮಾರ೦ಭಕ್ಕೆ ತೆರಳಬೇಕಾಗಿದೆ ಎ೦ದು ಇಟ್ಟುಕೊಳ್ಳಿರಿ. ಅ೦ತಹ ಸ೦ದರ್ಭದಲ್ಲಿ ರಾತ್ರಿ ಬೆಳಗಾಗುವುದರೊಳಗಾಗಿ, ಸರಿಯಾಗಿ ನಿಮ್ಮ ಮೂಗಿನ ತುದಿಭಾಗದಲ್ಲಿ ಗುಳ್ಳೆಯೊ೦ದು ಉದ್ಭವಿಸಿದರೆ ನಿಮ್ಮ ಪರಿಸ್ಥಿತಿ ಹೇಗಾಗಿರಬೇಡ?

ಬನ್ನಿ ಹಾಗಾದರೆ ನೀವು ತೀರಾ ವಿಷಮ ಪರಿಸ್ಥಿತಿಯಲ್ಲಿ ಇದ್ದೀರಿ. ನಿಮ್ಮ ಮುಖವು ತನ್ನ ಆಕರ್ಷಣೆಯನ್ನು ಕಳೆದುಕೊಂಡಿರುತ್ತದೆ. ಇದೆಲ್ಲಕ್ಕಿಂತ ಮಿಗಿಲಾಗಿ, ಈ ಹಠಮಾರಿ ರೋಗವು ನಿಮ್ಮ ಮುಖದಲ್ಲಿ ವಾಸಿಯಾದ ಮೇಲೂ ಎಂದಿಗೂಮಾಸದ ಕಲೆಗಳನ್ನು ಬಿಟ್ಟು ಹೋಗುತ್ತದೆ.

ಲಿಂಬೆರಸ
ಲಿಂಬೆರಸವು ಮೊಡವೆಗಳ ಮೇಲೆ ರಾಮ ಬಾಣದ ರೀತಿ ಕೆಲಸ ಮಾಡುತ್ತದೆ. ಲಿಂಬೆರಸವನ್ನು ಸ್ವಲ್ಪ ರೋಸ್ ವಾಟರ್ ಜೊತೆಗೆ ಬೆರೆಸಿ, ಅದನ್ನು ಮೊಡವೆ ಮೇಲೆ ಲೇಪಿಸಿ. ಲಿಂಬೆರಸ ಮೊಡವೆಗಳ ಮೇಲೆ ಉತ್ತಮವಾಗಿ ಕೆಲಸ ಮಾಡುತ್ತದೆ, ಜೊತೆಗೆ ಇದು ಮೊಡವೆಗಳ ಕಲೆಯನ್ನು ಸಹ ನಿವಾರಿಸುತ್ತದೆ. ಜೊತೆಗೆ ಇದು ಮೊಡವೆಗಳಿಗೆ ಕಾರಣವಾಗುವ ಜಿಡ್ಡಿನಂಶವು ತ್ವಚೆಯಲ್ಲಿ ಉತ್ಪಾದನೆಯಾಗುವುದನ್ನು ತಡೆಯುತ್ತದೆ.

Juices For Acne And Pimples

ಒ೦ದಿಷ್ಟು ಲಿ೦ಬೆಯ ರಸವನ್ನು ನೀರಿರುವ ಬಟ್ಟಲೊ೦ದರಲ್ಲಿ ಹಿ೦ಡಿರಿ ಹಾಗೂ ಲಿ೦ಬೆ ರಸವನ್ನು ತಿಳಿಗೊಳಿಸಲು ಅದನ್ನು ನೀರಿನೊಡನೆ ಚೆನ್ನಾಗಿ ಮಿಶ್ರಗೊಳಿಸಿರಿ. ಹತ್ತಿಯ ಉ೦ಡೆಯೊ೦ದನ್ನು ಈ ಮಿಶ್ರಣದಲ್ಲಿ ಅದ್ದಿ, ಅದನ್ನು ಭಾದಿತ ಜಾಗಗಳಿಗೆ ಹಚ್ಚಿಕೊಳ್ಳಿರಿ. ಹಾಗೆ ಮಾಡುವಾಗ ಲಿ೦ಬೆರಸವು ನಿಮ್ಮ ಮೊಡವೆಯನ್ನು ಉರಿಗೊಳಪಡಿಸದ೦ತೆ ಎಚ್ಚರವಹಿಸಿರಿ.ಒ೦ದು ವೇಳೆ ಅ೦ತಹ ಅನುಭವವೇನಾದರೂ ಆದಲ್ಲಿ, ಮಿಶ್ರಣಕ್ಕೆ ಮತ್ತಷ್ಟು ನೀರನ್ನು ಸೇರಿಸುವುದರ ಮೂಲಕ ಅದನ್ನು ಒ೦ದು ತೆಳ್ಳಗಿನ ದ್ರಾವಣದ ರೂಪಕ್ಕೆ ತ೦ದುಕೊ೦ಡು ಅದನ್ನು ಹಚ್ಚಿಕೊಳ್ಳಿರಿ. ಹೀಗೆ ಹಚ್ಚಿಕೊ೦ಡ ದ್ರಾವಣವನ್ನು ಒ೦ದು ರಾತ್ರಿಯಿಡೀ ಹಾಗೆಯೇ ಇರಗೊಟ್ಟು ಮರುದಿನ ಬೆಳಗ್ಗೆ ನೀರಿನಿ೦ದ ತೊಳೆದು ಬಿಡಿರಿ. ಅತ್ಯುತ್ತಮವಾದ ಫಲಿತಾ೦ಶಗಳಿಗಾಗಿ, ನೀವು ಈ ಪರಿಹಾರಕ್ರಮವನ್ನು ಅಥವಾ ಚಿಕಿತ್ಸೆಯನ್ನು ನಿಯಮಿತವಾಗಿ ವಾರಕ್ಕೆರಡು ಬಾರಿ ಪುನರಾವರ್ತಿಸಬೇಕು.

ಕ್ಯಾರೆಟ್ ಜ್ಯೂಸ್


ಕ್ಯಾರೆಟ್‌ನಲ್ಲಿ ಬೀಟಾ ಕೆರೊಟಿನ್ ಹೆಚ್ಚಾಗಿ ಇರುತ್ತದೆ. ಇದು ಮೊಡವೆಗಳನ್ನು ನಿವಾರಿಸಲು ಹಲವು ರೀತಿಯಲ್ಲಿ ಕೆಲಸ ಮಾಡುತ್ತದೆ. ಸ್ವಲ್ಪ ಲಿಂಬೆರಸವನ್ನು ಕ್ಯಾರೆಟ್ ಜ್ಯೂಸ್ ಜೊತೆಗೆ ಬೆರೆಸಿ, ಅದಕ್ಕೆ ಸ್ವಲ್ಪ ಜೇನು ತುಪ್ಪವನ್ನು ಹಾಕಿ. ಈ ಮಿಶ್ರಣವನ್ನು ತ್ವಚೆಯಲ್ಲಿ ಮೊಡವೆ ಇರುವ ಭಾಗಕ್ಕೆ ಲೇಪಿಸಿ ಮತ್ತು 30 ನಿಮಿಷಗಳ ಕಾಲ ಬಿಡಿ. ನಂತರ ನೀರಿನಲ್ಲಿ ತೊಳೆಯಿರಿ. ನಿಮ್ಮ ಮುಖವನ್ನು ಮೊಡವೆಗಳಿಂದ ಮುಕ್ತವಾಗಿರಿಸುವುದು ಹೇಗೆ?

ಸೌತೆಕಾಯಿ ರಸ


ಸೌತೆಕಾಯಿ ರಸವು ಸಹ ಮೊಡವೆಗಳ ಮೇಲೆ ಉತ್ತಮವಾಗಿ ಕೆಲಸ ಮಾಡುತ್ತದೆ, ತಾಜಾ ಸೌತೆಕಾಯಿ ರಸವನ್ನು ಮೊಡವೆಗಳಿಂದ ಹಾನಿಗೊಳಗಾದ ಭಾಗಕ್ಕೆ ಲೇಪಿಸಿ. ನಂತರ 30 ನಿಮಿಷ ಬಿಟ್ಟು, ಅದನ್ನು ಚೆನ್ನಾಗಿ ತೊಳೆಯಿರಿ.

ಕಲ್ಲಂಗಡಿ ರಸ


ಕಲ್ಲಂಗಡಿ ರಸವು ಸಹ ಮೊಡವೆಗಳ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುವ ಒಂದು ರಸವಾಗಿರುತ್ತದೆ. ಈ ಕೆಂಪು ಬಣ್ಣದ ಹಣ್ಣಿನ ರಸದಲ್ಲಿ ಸಮೃದ್ಧವಾದ ಕೆರೊಟಿನಾಯ್ಡ್‌ಗಳು ಮತ್ತು ಆಂಟಿ ಆಕ್ಸಿಡೆಂಟ್‌ಗಳು ಇರುತ್ತವೆ. ಇವುಗಳು ಮೊಡವೆಗಳ ಕಾರಣದಿಂದ ಕಂಡು ಬರುವ ಉರಿಬಾವುಗಳನ್ನು ನಿಯಂತ್ರಿಸುತ್ತವೆ.

ಟೊಮೇಟೊ ರಸ
ಟೊಮೇಟೊ ರಸವು ಸಹ ಮೊಡವೆಗಳನ್ನು ನಿವಾರಿಸುತ್ತದೆ. ಇದು ಮುಖದಲ್ಲಿ ಮೊಡವೆಗಳಿಗೆ ಕಾರಣವಾಗುವ ಜಿಡ್ಡಿನಂಶವನ್ನು ಹೀರಿಕೊಳ್ಳುವ ಸಾಮರ್ತ್ಯವನ್ನು ಹೊಂದಿದೆ. ಟೊಮೇಟೊ ರಸವನ್ನು, ಮೊಸರು ಮತ್ತು ಅರಿಶಿನದ ಜೊತೆಗೆ ಸೇರಿಸಿ, ಪೇಸ್ಟ್ ಮಾಡಿ. ಈ ಪೇಸ್ಟನ್ನು ಮೊಡವೆಗಳ ಮೇಲೆ ಲೇಪಿಸಿ ಮತ್ತು ಅದನ್ನು 20 ನಿಮಿಷ ಹಾಗೆ ಬಿಡಿ. ನಂತರ ತಣ್ಣೀರಿನಲ್ಲಿ ಇದನ್ನು ತೊಳೆಯಿರಿ.

English summary

Juices For Acne And Pimples

Are you suffering from acne? Are you tired of seeing a new pimple every other day after waking up? Well, acne is really a horrible thing which makes your face look unattractive. Moreover, acne is a stubborn disease which leaves ugly scars on your face even after it heals.
X
Desktop Bottom Promotion