For Quick Alerts
ALLOW NOTIFICATIONS  
For Daily Alerts

ಹಚ್ಚೆಗೆ ಮರುಳಾಗಿ, ಅಪಾಯದ ಸುಳಿಗೆ ಸಿಲುಕಬೇಡಿ!

By manu
|

ಕುಂಭಮೇಳದಲ್ಲಿ ಕಳೆದುಹೋದ ಸಹೋದರರು ಮುಂದೆಲ್ಲೋ ಒಂದಾಗಲು ಕಾರಣ ಅವರ ಕೈಮೇಲಿದ್ದ ಸಮಾನವಾದ ಹಚ್ಚೆ. ಸುಮಾರು ಎಪ್ಪತ್ತು ಎಂಭತ್ತರ ದಶಕದಲ್ಲಿ ಬಿಡುಗಡೆಯಾಗಿದ್ದ ಚಿತ್ರಗಳಲ್ಲೆಲ್ಲಾ ಈ ಹಚ್ಚೆ (ಟ್ಯಾಟೂ) ಸರ್ವೇ ಸಾಮಾನ್ಯವಾಗಿತ್ತು. ಅಂದು ಅದು ಪುಟ್ಟದಾಗಿ ಪ್ರೀತಿಪಾತ್ರರ ಹೆಸರನ್ನೋ ಅಥವಾ ದೇವರ ಮೇಲಿನ ಭಕ್ತಿಯನ್ನೂ, ಆರಾಧಿಸುವ ವ್ಯಕ್ತಿಯ/ಸಂಘದ ಚಿಹ್ನೆಯೋ ಆಗಿರುತ್ತಿತ್ತು. ಇಂದು ಹೆಚ್ಚೆಯ ಪರಿಕಲ್ಪನೆ ಬದಲಾಗಿದೆ.

ಅಭಿಮಾನವನ್ನು ಸೂಚಿಸುವ ಸೂಚನೆಗಿಂತ ಬೆಡಗು ಬಿನ್ನಾಣದ ಸಂಕೇತವಾಗಿದೆ. ಇವನ್ನು ನೋಡಿದ ಇತರರಿಗೂ ಹಚ್ಚೆ ಹಾಕಿಸಿಕೊಳ್ಳುವ ಬಯಕೆಯಾಗುತ್ತದೆ. ಅದರಲ್ಲೂ ಅವರ ನೆಚ್ಚಿನ ಕ್ರಿಕೆಟ್ ತಾರೆಯರ ಕೈಗಳಲ್ಲೋ, ಕುತ್ತಿಗೆಯಲ್ಲೋ ಕಂಡರಂತೂ ಈ ಬಯಕೆ ಭುಗಿಲೇಳುತ್ತದೆ. ಹಚ್ಚೆ ಹಾಕಿಸಿಕೊಳ್ಳುವಾಗ ತುಂಬಾ ನೋವಾಗುತ್ತದಂತೆ? ಎನ್ನುವ ಭಯ ತಾರೆಯರನ್ನು ಕಂಡ ಬಳಿಕ ನೋವಾದರೂ ಸರಿ ಹಾಕಿಸಿಕೊಳ್ಳಲೇಬೇಕು ಎಂಬ ಹಠಕ್ಕೆ ಪರಿವರ್ತನೆಯಾಗುತ್ತದೆ. ಹಚ್ಚೆಯನ್ನು ಎಲ್ಲೆಲ್ಲಿ ಹಾಕಿಸಿಕೊಳ್ಳುವುದು ಈಗೀನ ಟ್ರೆಂಡ್?

ಆದರೆ ಹಚ್ಚೆ ಹಾಕಿಸಿಕೊಳ್ಳುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಆದರೆ ಹಚ್ಚಿ ಹಾಕುವವರು ಇದನ್ನು ಅಲ್ಲಗಳೆಯುತ್ತಾ ಇಂದು ಅತ್ಯಾಧುನಿಕ ಹಚ್ಚೆ ಹಾಕುವ ಯಂತ್ರಗಳು ಬಂದಿದ್ದು ಪ್ರತಿಯೊಬ್ಬರಿಗೂ ಅತ್ಯಂತ ಕ್ರಿಮಿರಹಿತವಾದ (sterile)ಸೂಜಿಗಳನ್ನು ಮತ್ತು ಪ್ರಯೋಗಾಲಯದಲ್ಲಿ ಪರೀಕ್ಷಿಸಲ್ಪಟ್ಟ ಶಾಯಿಯನ್ನೇ ಬಳಸುತ್ತೇವೆ, ಹಾಗಾಗಿ ಅಪಾಯದ ಸಂಭವ ಅತಿ ಕಡಿಮೆ ಎನ್ನುತ್ತಾರೆ.

ಆದರೂ ಹಚ್ಚೆ ಹಾಕಿಸಿಕೊಳ್ಳುವ ಮೊದಲು ಇದರ ಅಡ್ಡಪರಿಣಾಮಗಳನ್ನು ಕುರಿತು ಅರಿಯುವುದು ಮುಖ್ಯ. ಹಚ್ಚೆ ಎಂದರೆ ಅತಿಚೂಪಾದ ಸೂಜಿಯಿಂದ ಚರ್ಮದ ಮೇಲ್ಪದರಕ್ಕೊಂದು ಚುಚ್ಚಿ ಅಲ್ಲಿಂದ ಶಾಶ್ವತವಾಗಿ ಚರ್ಮಕ್ಕೆ ಬಣ್ಣಬರುವ ಶಾಯಿಯನ್ನು ತುಂಬುವುದು. ಶಾಯಿ ಚರ್ಮಕ್ಕೆ ಅಪಾಯಕರವಲ್ಲ ಎಂದು ಹಚ್ಚೆಯವರು ಹೇಳಿದರೂ ಸಾವಿರದಲ್ಲಿ ಒಬ್ಬರಿಗಾದರೂ ಇದರಿಂದ ಅಲರ್ಜಿಯಿರುತ್ತದೆ. ಇದು ನಿಮಗೇ ಏಕಾಗಬಾರದು? ಹಚ್ಚೆಯಿಂದ ಎದುರಾಗಬಹುದಾದ ಇಂತಹ ಅಡ್ಡಪರಿಣಾಮ ಅಥವಾ ಅಪಾಯಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡಿ...

ಬಣ್ಣ ಅಲರ್ಜಿಯುಂಟುಮಾಡಬಹುದು

ಬಣ್ಣ ಅಲರ್ಜಿಯುಂಟುಮಾಡಬಹುದು

ವಿವಿಧ ಬಣ್ಣಗಳಿಗಾಗಿ ವಿವಿಧ ರಾಸಾಯನಿಕ ಸಂಯೋಜನೆಗಳನ್ನು ಉಪಯೋಗಿಸಬೇಕಾಗುತ್ತದೆ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರಾಸಾಯನಿಕದಿಂದ ಅಲರ್ಜಿ ಇದ್ದೇ ಇರುತ್ತದೆ. ಇದು ಇದೆ ಎಂದು ಆ ರಾಸಾಯನಿಕ ಚರ್ಮದ ಮೇಲೆ ಪರಿಣಾಮ ಬೀರಿದ ಬಳಿಕವೇ ಗೊತ್ತಾಗುತ್ತದೆ. ಇದಕ್ಕಾಗಿಯೇ ಕೂದಲಿಗೆ ಹಚ್ಚುವ ಬಣ್ಣದ ಡಬ್ಬಿಯಲ್ಲಿ ಇದನ್ನು ನಿರಪಾಯಕಾರವಾದ ಚರ್ಮಕ್ಕೆ ಮೊದಲು ಹಚ್ಚಿ ಅಲರ್ಜಿ ಪರಿಶೀಲಿಸಿ ಎಂದು ಬರೆದಿರುತ್ತದೆ.. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

ಬಣ್ಣ ಅಲರ್ಜಿಯುಂಟುಮಾಡಬಹುದು

ಬಣ್ಣ ಅಲರ್ಜಿಯುಂಟುಮಾಡಬಹುದು

ಆದರೆ ಹಚ್ಚೆ ಹಚ್ಚುವಲ್ಲಿ ಇಂತಹ ಯಾವುದೇ ವ್ಯವಸ್ಥೆಯೇ ಇಲ್ಲ. ಹೆಚ್ಚಿನವರಿಗೆ ಈ ಅಲರ್ಜಿ ಸೂರ್ಯನ ಬೆಳಕಿಗೆ ಹೋದಕ್ಷಣ ಭುಗಿಲೆದ್ದು ಬೆಂಕಿ ಹತ್ತಿದಂತೆ ಉರಿಯಲು ತೊಡಗುತ್ತದೆ. ಹಚ್ಚೆ ಹಚ್ಚುವವರು ಇದೆಲ್ಲಾ ಸಾಮಾನ್ಯ, ಎಲ್ಲರಿಗೂ ಹೀಗಾಗುತ್ತದೆ, ಕೊಂಚ ಜ್ವರ ಬರುತ್ತದೆ, ನಾಳೆ ಎಲ್ಲಾ ಸರಿಹೋಗುತ್ತದೆ ಎಂದೆಲ್ಲಾ ಬಡಾಯಿ ಬಿಟ್ಟು ಮನೆಗೆ ಕಳುಹಿಸುತ್ತಾರೆ. ಈ ಅಲರ್ಜಿ ವಿಪರೀತಕ್ಕೂ ತಿರುಗಿ ಆಸ್ಪತ್ರೆಯನ್ನೂ ಸೇರಬೇಕಾದೀತು.

ಹೆಪಟೈಟಿಸ್ ಸೋಂಕಿನ ಭಯ

ಹೆಪಟೈಟಿಸ್ ಸೋಂಕಿನ ಭಯ

ಹಚ್ಚೆ ಹಚ್ಚುವ ಯಂತ್ರದ ಸೂಜಿ ದುಬಾರಿಯಾದುದರಿಂದ ಹಚ್ಚೆ ಹಚ್ಚುವವರು ಒಂದೇ ಸೂಜಿಯನ್ನು ಹಲವು ಜನರಿಗೆ ಉಪಯೋಗಿಸುತ್ತಾರೆ. ಇಬ್ಬರ ನಡುವೆ ಈ ಸೂಜಿಯನ್ನು ಸ್ವಚ್ಛಗೊಳಿಸುತ್ತೇವೆ ಎಂದು ಹೇಳಿದರೂ ಬರೆಯ ಬಟ್ಟೆಯಿಂದ ಒರೆಸಿಯೋ, ಸ್ವಲ್ಪ ನೀರಿನಲ್ಲಿ ಮುಳುಗಿಸಿಯೋ ಸ್ವಚ್ಛಗೊಳಿಸಿರುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹೆಪಟೈಟಿಸ್ ಸೋಂಕಿನ ಭಯ

ಹೆಪಟೈಟಿಸ್ ಸೋಂಕಿನ ಭಯ

ಇಂತಹ ಕಡೆ ಹಚ್ಚೆ ಹಾಕಿಸಿಕೊಳ್ಳುವುದು ಅಪಾಯಕ್ಕೆ ತೆರೆದ ಆಹ್ವಾನ. ಅದರಲ್ಲೂ ಗಾಳಿಯಲ್ಲಿ ತೇಲಾಡುತ್ತಾ ಸೂಜಿ, ಬಾಗಿಲ ಹಿಡಿಕೆ ಮೊದಲಾದ ಲೋಹಗಳ ಮೇಲೆ ಸುಲಭವಾಗಿ ಕುಳಿತುಕೊಳ್ಳುವ ಹಪಟೈಟಿಸ್ ಬ್ಯಾಕ್ಟೀರಿಯಾಗಳು ಯಾವುದೇ ಪ್ರವೇಶ ಶುಲ್ಕವಿಲ್ಲದೇ ನೇರವಾಗಿ ಚರ್ಮದೊಳಕ್ಕೆ ದಾಖಲು ಪಡೆದು ವಂಶಾಭಿವೃದ್ದಿಕೊಂಡು ಬಳಿಕ ದೇಹದ ಮೇಲೆ ಧಾಳಿಯಿಡುತ್ತವೆ. ಪ್ರತಿ ವ್ಯಕ್ತಿಗೂ ಬಳಸುವ ಸೂಜಿಯನ್ನು ಕುದಿನೀರಿನಲ್ಲಿ ಕುದಿಸಿ ಕ್ರಿಮಿರಹಿತವಾಗಿಸಿಯೇ ಉಪಯೋಗಿಸುತ್ತೇವೆ ಎನ್ನದ ಹೊರತು ಸೇವೆ ಪಡೆಯಲು ಮುಂದಾಗಬೇಡಿ.

ವಿವಿಧ ಸೋಂಕು

ವಿವಿಧ ಸೋಂಕು

ಹಚ್ಚೆ ಹಚ್ಚಲು ಉಪಯೋಗಿಸಿದ ಶಾಯಿ ಸಂಪೂರ್ಣವಾಗಿ ಕ್ರಿಮಿರಹಿತವೆಂದು ಖಡಾಖಂಡಿತವಗಿ ಹೇಳಲು ಬರುವುದಿಲ್ಲ. ಏಕೆಂದರೆ ಟ್ಯಾಟೂ ಹಾಕುವ ಸ್ಥಳದಲ್ಲಿಯೂ ನೂರಾರು ಜನರು ಬಂದುಹೋಗುತ್ತಿರುತ್ತಾರೆ. ಅವರ ಸೀನು, ಕೆಮ್ಮು ಮೊದಲಾದವುಗಳಿಂದ ತೆರೆದಿಟ್ಟ ಇಂಕಿನ ಬಾಟಲಿಯೂ ಕ್ರಿಮಿಗಳಿಂದ ತುಂಬುವ ಸಂಭವವಿದೆ. ಅಲ್ಲದೇ ಈ ಶಾಯಿ ಬಂದ ಪ್ರದೇಶದಿಂದಲೇ ತನ್ನೊಂದಿಗೆ ಯಾವುದಾದರೂ ಅಪಾಯಕಾರಿ ಕ್ರಿಮಿಗಳನ್ನು ತಂದಿರುವ ಸಾಧ್ಯತೆಯಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಿವಿಧ ಸೋಂಕು

ವಿವಿಧ ಸೋಂಕು

ಅಲ್ಲದೇ ಸೂಜಿಯಿಂದ ಚುಚ್ಚೀ ಚುಚ್ಚೀ ಜಾಲರಿಯಾಗಿರುವ ಚರ್ಮ ಬ್ಯಾಕ್ಟೀರಿಯಾಗಳ ಪಾಲಿಗೆ ಸಾವಿರಾರು ಹೆಬ್ಬಾಗಿಲುಗಳು ತೆರೆದಂತಿರುತ್ತದೆ. ಆಗ ಸೋಂಕು ತಗಲುವ ಸಂಭವ ಹೆಚ್ಚುತ್ತದೆ. ಒಂದು ವೇಳೆ ಸೋಂಕು ತಗುಲಿದರೆ ನೋವು, ತುರಿಕೆ, ಚರ್ಮ ಕೆಂಪಗಾಗುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ.

ಇತರ ಚರ್ಮವ್ಯಾಧಿಗಳು ಎದುರಾಗಬಹುದು

ಇತರ ಚರ್ಮವ್ಯಾಧಿಗಳು ಎದುರಾಗಬಹುದು

ಒಂದು ವೇಳೆ ಗಾಯವಾದರೆ ಆ ಸ್ಥಳದಲ್ಲಿ ಬೆಳೆದ ಚರ್ಮ ಕಪ್ಪಗಾಗಿದ್ದು ಕಲೆಯನ್ನು ಮೂಡಿಸುತ್ತದೆ. ಹಚ್ಚೆಯಲ್ಲಿಯೂ ಸಹ ಸೂಜಿಯಿಂದ ಚುಚ್ಚಿದ ಪ್ರತಿ ಚುಕ್ಕೆಯ ಮೇಲೆಯೂ ಚರ್ಮ ಒಂದು ಕಲೆಯನ್ನು ಮೂಡಿಸುತ್ತದೆ. ಈ ಭಾಗದಲ್ಲಿ ಈಗಾಗಲೇ ಶಾಯಿಯ ಕಾರಣ ಬಣ್ಣ ಬದಲಾಗಿರುವುದರಿಂದ ಕಲೆ ಕಾಣದೇ ಹೋದರೂ ಕಲೆಯ ಮೇಲ್ಮೈಯನ್ನು ಮುಟ್ಟಿದರೆ ಒರಟಾಗಿರುವುದು ಗೊತ್ತಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಇತರ ಚರ್ಮವ್ಯಾಧಿಗಳು ಎದುರಾಗಬಹುದು

ಇತರ ಚರ್ಮವ್ಯಾಧಿಗಳು ಎದುರಾಗಬಹುದು

ಕೆಲವರಲ್ಲಿ ಇದು ಚಿಕ್ಕದಾಗಿದ್ದರೂ ಕೆಲವರಲ್ಲಿ ಚಿಕ್ಕ ಗೋಲಿಗಾತ್ರಕ್ಕಿದ್ದು ಅಸಹ್ಯವಾಗಿ ಕಾಣಬಹುದು. ಬಹುತೇಕರಲ್ಲಿ ಹಚ್ಚೆ ಹಚ್ಚಿಸಿದ ಚರ್ಮ ಇತರ ಭಾಗಕ್ಕಿಂತ ಕೊಂಚ ಎತ್ತರವಿರುವುದನ್ನು ಗಮನಿಸಿ. ಇದು ಶಾಶ್ವತವಾಗಿದ್ದು ಬಣ್ಣ ಹೋದರೂ ಈ ಕಲೆಗಳು ಹೋಗಲಾರವು.

ಕಲೆಗಳು ಉಂಟಾಗಬಹುದು

ಕಲೆಗಳು ಉಂಟಾಗಬಹುದು

ಒಂದು ವೇಳೆ ಚರ್ಮದ ಮೇಲೆ ಬೆಳೆದ ಕಲೆ ಪಕ್ಕದ ಚುಕ್ಕೆ ಮತ್ತದರ ಪಕ್ಕದ ಚುಕ್ಕೆ ಹೀಗೇ ಉದ್ದಕ್ಕೆ ಒಂದು ರೇಖೆಯಂತೆ ಉಂಟಾದರೆ ಆ ಭಾಗದಲ್ಲಿ ಸ್ಪಷ್ಟವಾಗಿ ಕಾಣಬಲ್ಲ ಕಲೆಗಳು ಉಂಟಾಗಬಹುದು. ಇವು ಕೊಂಚ ಉಬ್ಬಿದಂತಿದ್ದು ಹಚ್ಚೆ ಹಾಕಿಸುವ ಮೂಲ ಉದ್ದೇಶವನ್ನೇ ಬದಲಾಯಿಸಬಹುದು. ನೋಡುವವರು ನಿಮ್ಮ ಹಚ್ಚೆಗಿಂತ ನಿಮ್ಮ ಕಲೆಗಳ ಬಗ್ಗೆಯೇ ಹೆಚ್ಚು ಉತ್ಸುಕರಾಗಬಹುದು. ಇನ್ನೂ ಮುಂದುವರೆದು ಕೆಲವರು ಈ ಕಲೆಗಳನ್ನು ಮುಚ್ಚಿಡಲಿಕ್ಕಾಗಿಯೇ ಹಚ್ಚೆ ಹಾಕಿಸಿಕೊಂಡಿದ್ದೀರಾ ಎಂದು ಕೇಳಿದರೆ?

ಗಾಯವಾಗುವ ಸಾಧ್ಯತೆಗಳು ಹೆಚ್ಚು

ಗಾಯವಾಗುವ ಸಾಧ್ಯತೆಗಳು ಹೆಚ್ಚು

ಎಷ್ಟೇ ಎಚ್ಚರಿಕೆಯಿಂದ ಚರ್ಮದ ಕೇವಲ ಮೇಲ್ಪದರವನ್ನು ಮಾತ್ರ ತೂತು ಮಾಡುತ್ತೇವೆಂದು ಹೇಳಿದರೂ ಚರ್ಮ ಕೆಲವೆಡೆ ಅತಿ ತೆಳುವಾಗಿರುತ್ತದೆ, ಅಂದರೆ ಎರಡೂ ಪದರಗಳ ನಡುವಣ ಅಂತರ ಬಹಳ ಕಡಿಮೆ ಇರುತ್ತದೆ (ಕಣ್ಣುಗಳ ಕೆಳಭಾಗ ಬೇಗನೇ ಕಪ್ಪಗಾಗುವುದು ಇದೇ ಕಾರಣಕ್ಕಾಗಿ). ಹಾಗಾಗಿ ಕೆಲವೊಮ್ಮೆ ಕೆಳಚರ್ಮವೂ ಘಾಸಿಗೊಂಡು ಈಗಾಗಲೇ ಚುಕ್ಕೆಚುಕ್ಕೆಗಳಂತೆ ತೂತಾಗಿಸಿದ ಮೇಲ್ಪದರದೊಂದಿಗೆ ಅಂಚೆಚೀಟಿಗಳನ್ನು ಹರಿದಂತೆ ಹರಿದುಬಿಡಬಹುದು. ಕೆಲವೊಮ್ಮೆ ಚರ್ಮದ ಪದರಗಳ ನಡುವಣ ಅತಿಸೂಕ್ಷ್ಮ ರಕ್ತನಾಳಗಳು ಮತ್ತು ನರತಂತುಗಳೂ ಘಾಸಿಗೊಳ್ಳಬಹುದು. ರಕ್ತ ಕೋಡಿಯಾಗಿ ಹರಿದು ವೈದ್ಯರ ಚಿಕಿತ್ಸೆಯ ಅಗತ್ಯ ಬೀಳಬಹುದು.

ಆಂಟಿ ಟೆಟ್ನಸ್ ತೆಗೆದುಕೊಳ್ಳಬೇಕಾಗಬಹುದು

ಆಂಟಿ ಟೆಟ್ನಸ್ ತೆಗೆದುಕೊಳ್ಳಬೇಕಾಗಬಹುದು

ತುಕ್ಕು ಹಿಡಿದ ಮೊಳೆ ತಾಗಿ ಗಾಯವಾದರೆ ತೆಗೆದುಕೊಳ್ಳುವ ಆಂಟಿ ಟೆಟ್ನಸ್ ಇಂಜೆಕ್ಷನ್ ಅನ್ನು ಹಚ್ಚೆ ಹಾಕಿಸುವಾಗಲೂ ತೆಗೆದುಕೊಳ್ಳಬೇಕಾಗಬಹುದು. ಏಕೆಂದರೆ ಎಷ್ಟೇ ಉತ್ತಮ ಸ್ಟೇನ್ ಲೆಸ್ ಸ್ಟೀಲ್ ಬಳಸಿದರೂ ಅತಿ ಸೂಕ್ಷ್ಮವಾದ ತುಕ್ಕು ಇದ್ದೇ ಇರುತ್ತದೆ. ನೀರಿನಲ್ಲಿ ಬಿದ್ದಿದ್ದ ಚಮಚ ವರ್ಷದ ಬಳಿಕ ತುಕ್ಕು ಹಿಡಿದ ಸ್ಥಿತಿಯಲ್ಲಿ ಸಿಕ್ಕಿರುವುದನ್ನು ನೀವು ಗಮನಿಸಿರಬಹುದು. ಸೂಜಿಯನ್ನು ಪ್ರತಿಬಾರಿ ಅತ್ಯಂತ ಪರಿಶುದ್ಧವಾದ ರೂಪದಲ್ಲಿಯೇ ಬಳಸುತ್ತಾರೆ ಎಂಬುದಕ್ಕೆ ಯಾವುದೇ ಖಚಿತತೆ ಇಲ್ಲದಿರುವುದರಿಂದ ಇಂತಹ ಸೂಜಿಯಿಂದ ಹಚ್ಚೆ ಹಾಕಿಸಿಕೊಳ್ಳುವುದು ಗಂಡಾಂತರವಾಗಿದೆ.

ನಿಮ್ಮ ದೇಹಸ್ಥಿತಿಯನ್ನು ಬದಲಿಸಬಹುದು

ನಿಮ್ಮ ದೇಹಸ್ಥಿತಿಯನ್ನು ಬದಲಿಸಬಹುದು

ಹಚ್ಚೆಯ ಶಾಯಿಯಲ್ಲಿರುವ ರಾಸಾಯನಿಕಗಳು ಇಂದೇ ಅವುಗಳ ಪ್ರಭಾವ ಬೀರುತ್ತವೆ ಎಂದು ಹೇಳಲಾಗುವುದಿಲ್ಲ. ದೇಹ ಪ್ರವೇಶಿಸಿದ ಎಷ್ಟೋ ಕಾಲದ ಬಳಿಕ ವೈದ್ಯಕೀಯ ತಪಾಸಣೆ ಅಥವಾ ಎಂಅರ್ ಐ ಸ್ಕ್ಯಾನ್ ಮಾಡುವಾದ ಥಟ್ಟನೇ ಬೆಳಕಿಗೆ ಬರುತ್ತವೆ. ಹೆಚ್ಚಿನ ಶಾಯಿಗಳು ತಾಪಮಾನಕ್ಕನುಗುಣವಾಗಿ ತಮ್ಮ ಪ್ರಕೋಪವನ್ನು ತೋರಿಸುತ್ತವೆ. ಜ್ವರ ಬಂದಾಗ ಚರ್ಮ ಊದಿಕೊಳ್ಳುವ ಮೂಲಕ ಇದು ಬೆಳಕಿಗೆ ಬರುತ್ತದೆ.

ಇತರ ಅಲರ್ಜಿಗಳು

ಇತರ ಅಲರ್ಜಿಗಳು

ವಿಷದ ಹಾವು ಕಚ್ಚಿ ಅರವತ್ತು ವರ್ಷದ ಬಳಿಕವೂ ಅದರ ವಿಷ ಸಾವಿಗೆ ಕಾರಣವಾಗಿರುವುದು ಬೆಳಕಿಗೆ ಬಂದಿದೆ. ಹಚ್ಚೆಯಲ್ಲಿಯೂ ಅಷ್ಟೇ, ಇದರಲ್ಲಿ ಯಾವುದೋ ಪದಾರ್ಥ ನಿಮಗೆ ಅಲರ್ಜಿಯಾಗಿದ್ದು ಇಂದು ಯಾವುದೂ ಸುಳಿವು ನೀಡದೇ ಮುಂದೆಂದೋ ಹಠಾತ್ತಾಗಿ ಯಾವುದೋ ಅಂಗ ಅಥವಾ ಚರ್ಮದ ಮೇಲೆ ತನ್ನ ಪ್ರಭಾವವನ್ನು ತೋರುತ್ತದೆ.

 ಇತರ ಸಲಹೆಗಳು

ಇತರ ಸಲಹೆಗಳು

* ಒಮ್ಮೆ ಮಾಡಿದ ತಿಂಡಿಯನ್ನೇ ಮರುದಿನವೂ ತಿನ್ನಬೇಕಾದರೆ ಬೇಸರ ವ್ಯಕ್ತಪಡಿಸುವ ಮನ ಒಂದೇ ಹಚ್ಚೆಗೆ ಬೇಸರಗೊಳ್ಳದಿರುತ್ತದೆಯೇ? ಆಗ ಬೇಡ ಎಂದರೆ ಇದನ್ನು ತೆಗೆಯಲಿಕ್ಕಾಗುವುದಿಲ್ಲ.

* ಎಷ್ಟೇ ಆಕರ್ಷಕ ವಿನ್ಯಾಸವನ್ನು ಆಯ್ಕೆ ಮಾಡಿದರೂ ಕೆಲದಿನಗಳ ಬಳಿಕ ಇನ್ನೊಂದು ವಿನ್ಯಾಸ ಇಷ್ಟವಾಗಿ ಅದನ್ನು ಹಾಕಿಸಿಕೊಳ್ಳುವ ಬಯಕೆಯಾಗುತ್ತದೆ. ಬಳಿಕ ಇನ್ನೊಂದು, ನಂತರ ಮತ್ತೊಂದು, ಹೀಗೇ ಇದು ವ್ಯಸನಕ್ಕೆ ತಿರುಗುವ ಸಾಧ್ಯತೆಗಳು ದಟ್ಟವಾಗಿವೆ.

* ನೀವು ಹಾಕಿಕೊಂಡ ಹಚ್ಚೆ ನಿಮ್ಮ ವೈರಿಯೂ ಹಾಕಿಕೊಂಡಿದ್ದರೆ ನೋಡಿದ ಕ್ಷಣದಿಂದ ನಿಮ್ಮ ಹಚ್ಚೆಯ ಮೇಲೆ ದ್ವೇಶ ಉಂಟಾಗುತ್ತದೆ. ಇದನ್ನು ತೆಗೆಸುವ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತೀರಿ

* ಒಂದು ವೇಳೆ ನಿಮ್ಮ ಮನೆಯವರಿಗೆ ಈ ಹೆಚ್ಚೆ ಇಷ್ಟವಾಗದಿದ್ದರೆ ಜೀವಮಾನವಿಡೀ (ಅಥವಾ ತೆಗೆಸುವವರೆಗೂ) ಬೈಗುಳ ತಿನ್ನುತ್ತಲೇ ಇರಬೇಕಾಗುತ್ತದೆ.

English summary

Dangerous Side Effects Of Tattoos!

Well, we love to follow trends but what if some of them are dangerous? Are tattoos dangerous? Some believe that there are health risks whereas, some argue that tattoos are not so dangerous. On the other side, the technology used to create tattoos is developing. That is why some would argue that it is not really dangerous while some say that it can cause harm.
X
Desktop Bottom Promotion