For Quick Alerts
ALLOW NOTIFICATIONS  
For Daily Alerts

ತ್ವಚೆಯ ಸೌಂದರ್ಯಕ್ಕಾಗಿ ಫೇಶಿಯಲ್ ಮಸಾಜ್‌

By Deepak
|

ನೀವು ಹೊಳೆಯುವ ತ್ವಚೆಯನ್ನು ಇಷ್ಟಪಡುತ್ತೀರಾ? ಇದಕ್ಕೆ ನಿಮ್ಮ ಉತ್ತರ ಮುಗುಳ್ನಗೆಯೊಂದಿಗೆ "ಹೌದು" ಎಂದಾಗಿರುತ್ತದೆ ಎಂಬುದು ನಮಗೆ ಗೊತ್ತು. ಕೆಲವೊಮ್ಮೆ ನಮ್ಮ ತ್ವಚೆಯು ಮಂಕಾಗಿ ಮತ್ತು ಇರುವ ವಯಸ್ಸಿಗಿಂತ ಹೆಚ್ಚು ವಯಸ್ಸಾದಂತೆ ಕಾಣುವುದು ಸಾಮಾನ್ಯ. ಆದರೆ ಇದನ್ನೇ ಮನಸ್ಸಿಗೆ ತಗೊಳ್ಳುವ ಕೆಲವು ಮಹಿಳೆಯರು ಖಿನ್ನತೆಗೆ ಒಳಗಾಗುತ್ತಾರೆ ಅಲ್ಲದೆ ಇದರಿಂದ ಮುಕ್ತಿ ಹೊಂದಲು ಮಾರುಕಟ್ಟೆಯಲ್ಲಿ ದೊರೆಯುವ ನಾನಾ ಬಗೆಯ ಸೌಂದರ್ಯವರ್ಧಕಗಳನ್ನು ಖರೀದಿಸಿ ತಮ್ಮ ಕೈಲಾದ ಪ್ರಯತ್ನವನ್ನು ಮಾಡುತ್ತಾರೆ.

ಆದರೆ ಮಾರುಕಟ್ಟೆಯಲ್ಲಿ ದೊರೆಯುವ ಎಷ್ಟೇ ಬೆಲೆಯ ಸೌಂದರ್ಯವರ್ಧಕಗಳೂ ಕೂಡ ಪರಿಣಾಮಕಾರಿಯಾಗಿ ಸೌಂದರ್ಯ ಹೆಚ್ಚಿಸುವುದಿಲ್ಲ ಎಂಬುದಂತೂ ಸತ್ಯ. ಹಾಗಾದರೆ ನೈಸರ್ಗಿಕವಾಗಿ ಸೌಂದರ್ಯವನ್ನು ಹೆಚ್ಚಿಸುವ ಬಗೆ ಹೇಗೆ? ಚಿಂತಿಸದಿರಿ, ಇವುಗಳಿಗೆಲ್ಲಾ ಒಂದೇ ಉತ್ತರ ಅದೇ ಫೇಶಿಯಲ್ ಮಸಾಜ್...! ತಾಜಾ ತ್ವಚೆಗಾಗಿ ಐಸ್ ಕ್ಯೂಬ್ ಮಸಾಜ್ ಈ ರೀತಿ ಮಾಡಿ

Beauty Benefits Of Facial Massage

ಸಾಮಾನ್ಯವಾಗಿ ವಯಸ್ಸಾದಂತೆ ಹೆಂಗಸರು ತಮ್ಮ ತ್ವಚೆಯಲ್ಲಿ ಬಿಗಿತನವನ್ನು ಕಳೆದುಕೊಳ್ಳುತ್ತಾರೆ.ಆಗ ಅವರ ಮುಖವು ಇರುವ ವಯಸ್ಸಿಗಿಂತ ಹೆಚ್ಚಾದಂತೆ ಕಾಣುತ್ತದೆ. ಹಾಗಾಗಿ ಇಂತಹ ಸಮಸ್ಯೆಯಿಂದ ಮುಕ್ತಿ ಹೊಂದಲು ಮಾರುಕಟ್ಟೆಯಲ್ಲಿ ದೊರೆಯುವ ರಾಸಾಯನಿಕ ಫೇಸ್ ಕ್ರೀಮ್‌ಗಳಿಗೆ ಮೊರೆ ಹೋಗುತ್ತಾರೆ.

ಆದರೆ ಸೌಂದರ್ಯ ಉತ್ಪನ್ನಗಳು ಮತ್ತು ಇನ್ನಿತರ ಸೌಂದರ್ಯ ವರ್ಧಕಗಳು ನಿಮ್ಮ ತ್ವಚೆಯನ್ನು ತಾತ್ಕಾಲಿಕವಾಗಿ ಸುಂದರವಾಗಿ ಕಾಣುವಂತೆ ಮಾಡುತ್ತವೆ. ಜೊತೆಗೆ ಈ ಉತ್ಪನ್ನಗಳ ಅಧಿಕ ಬಳಕೆಯು ನಿಮ್ಮ ಮುಖದಲ್ಲಿ ಸುಕ್ಕುಗಳನ್ನು ಉಂಟು ಮಾಡುತ್ತದೆ. ಸ್ವಾಭಾವಿಕ ಉತ್ಪನ್ನಗಳನ್ನು ಮತ್ತು ಮನೆಯಲ್ಲಿಯೇ ತಯಾರಿಸಿದ ಉತ್ಪನ್ನಗಳನ್ನು ಬಳಸುವುದರಿಂದ ಈ ರೀತಿಯ ಅಡ್ಡಪರಿಣಾಮಗಳನ್ನು ತಡೆಯಬಹುದು. ಬನ್ನಿ ಫೇಶಿಯಲ್ ಮಸಾಜ್‌ನಿಂದ ದೊರೆಯುವ ಸೌಂದರ್ಯದ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.

ತ್ವಚೆಯಲ್ಲಿ ಸುಕ್ಕುಗಳನ್ನು ತಡೆಯಲು
ಮಹಿಳೆಯರಿಗೆ ವಯಸ್ಸಾದಂತೆ ಅವರ ತ್ವಚೆಯು ತಮ್ಮ ಬಿಗಿತನವನ್ನು ಕಳೆದುಕೊಳ್ಳುತ್ತವೆ. ಇದರಿಂದ ಅವರು ನೈಜ ವಯಸ್ಸಿಗಿಂತ ಹೆಚ್ಚು ವಯಸ್ಸಾದಂತೆ ಕಾಣುತ್ತಾರೆ. ಇದಕ್ಕೆ ಕಾರಣ ಅವರ ತ್ವಚೆಯಲ್ಲಿರುವ ಕೊಲ್ಲಾಜೆನ್ ಉತ್ಪಾದನೆ ಕಡಿಮೆಯಾಗಿರುತ್ತದೆ. ನಿಯಮಿತವಾಗಿ ಮಸಾಜ್ ಮಾಡುವುದರಿಂದ ಇದರ ಉತ್ಪಾದನೆ ಹೆಚ್ಚಾಗುತ್ತದೆ. ಆಗ ತ್ವಚೆಯು ಸುಕ್ಕುಗಳು ಕಂಡು ಬರುವುದನ್ನು ತಡೆಯುತ್ತದೆ.

ಮಾಯಿಶ್ಚರೈಸರ್ ಅಥವಾ ಲೋಶನ್ ಬಳಸಿ
ಮಾಯಿಶ್ಚರೈಸರ್ ಅಥವಾ ಲೋಶನ್ ಗಳನ್ನು ಹಚ್ಚುವುದರಿಂದ ತ್ವಚೆ ಬಿರುಕುಬಿಡುವುದು ಕಡಿಮೆಯಾಗುತ್ತದೆ. ಹೆಚ್ಚು ಶುಷ್ಕ ತ್ವಚೆ ನಿಮ್ಮದಾಗಿದ್ದರೆ ಆಲೀವ್ ಎಣ್ಣೆಯಂತಹ ಶುದ್ಧ ತರಕಾರಿ ಎಣ್ಣೆಯನ್ನು ಹಚ್ಚುವುದು ಉತ್ತಮ. ಇದು ಬೇರೆಲ್ಲ ಕ್ರೀಮ್ ಗಳಿಗಿಂತ ತ್ವಚೆಗೆ ಹೆಚ್ಚಿನ ರಕ್ಷಣೆಯನ್ನು ನೀಡುತ್ತದೆ. ತ್ವಚೆ ಎಣ್ಣೆಯುಕ್ತವಾಗಿದ್ದರೂ ಚರ್ಮ ಬಿರುಕು ಬಿಡುವ ಸಾಧ್ಯತೆಗಳಿವೆ. ಆದ್ದರಿಂದ ಹೆಚ್ಚು ಅಪರ್ಯಾಪ್ತ ಕೊಬ್ಬಿನಂಶ (polyunsaturated fats)ಇರುವ ಎಣ್ಣೆಯನ್ನು ಬಳಸಿ.

ಪ್ರಾಕೃತಿಕ ಮನೆಮದ್ದಿಗೆ ಆದ್ಯತೆ ನೀಡಿ
ಮಸಾಜ್ ಮಾಡಲು ಹೆಚ್ಚಾಗಿ ಕೆಮಿಕಲ್ / ರಾಸಾಯನಿಕಗಳನ್ನು ಬಳಸದೇ ಪ್ರಾಕೃತಿಕ ವಸ್ತುಗಳಾದ ಬಾಳೆಹಣ್ಣು, ಪಪ್ಪಾಯಿ, ಟೊಮೇಟೊಗಳಂತಹ ಹಣ್ಣು ತರಕಾರಿಗಳಮ್ಮು ಬಳಸಿ ಮಸಾಜ್ ಮಾಡಿದರೆ ನಿಮ್ಮ ತ್ವಚೆ ಮಯಸ್ಸಾದರೂ ಹೊಳಪನ್ನು ಕಳೆದುಕೊಳ್ಳದೆ ಹೊಸ ಕಾಂತಿಯನ್ನು ನಿಮ್ಮ ತ್ವಚೆಗೆ ಮರುಕಳಿಸುತ್ತದೆ.

ತ್ವಚೆಗೆ ಬಿಗಿತನ ನೀಡುತ್ತದೆ
ಬಹುತೇಕ ಹೆಂಗಸರಲ್ಲಿ ವಯಸ್ಸಾದಂತೆ ತ್ವಚೆಯ ಬಿಗಿತನ ಕಡಿಮೆಯಾಗುತ್ತದೆ. ಇದರಿಂದ ಅವರ ತ್ವಚೆ ಇಳಿ ಬೀಳುತ್ತದೆ. ಜೊತೆಗೆ ಮುಖದಲ್ಲಿ ಹೆಚ್ಚಿನ ಕೊಬ್ಬು ಶೇಖರಣೆಗೊಂಡು ಮುಖ ಅಂದ ಕಳೆದುಕೊಳ್ಳುತ್ತದೆ. ಫೇಶಿಯಲ್ ಮಸಾಜ್ ಮೂಲಕ ನೀವು ನಿಮ್ಮ ಮುಖದಲ್ಲಿರುವ ತ್ವಚೆಗೆ ಅಗತ್ಯ ಬಿಗಿತನವನ್ನು ನೀಡಬಹುದು.

ತ್ವಚೆಯನ್ನು ತಿಳಿಗೊಳಿಸುತ್ತದೆ
ಪ್ರತಿಯೊಬ್ಬರು ತಮ್ಮ ತ್ವಚೆ ತಿಳಿಬಣ್ಣದಿಂದ ಕೂಡಿರಬೇಕು ಎಂದು ಇಷ್ಟಪಡುತ್ತಾರೆ. ಫೇಶಿಯಲ್ ಮಸಾಜಿನ ಮತ್ತೊಂದು ವಿಶೇಷವೆಂದರೆ ಅದು ತ್ವಚೆಯನ್ನು ತಿಳಿಗೊಳಿಸುತ್ತದೆ. ಇದರಿಂದ ನೀವು ಮತ್ತಷ್ಟು ಸುಂದರವಾಗಿ ಕಾಣುತ್ತೀರಿ. ಕೆಲವೊಂದು ಸ್ವಾಭಾವಿಕ ಉತ್ಪನ್ನಗಳ ಜೊತೆಗೆ ಫೇಶಿಯಲ್ ಮಸಾಜ್ ಮಾಡುವುದನ್ನು ರೂಢಿ ಮಾಡಿಕೊಳ್ಳಿ. ಇದರಿಂದ ನಿಮ್ಮ ತ್ವಚೆ ತಿಳಿಗೊಳ್ಳುತ್ತದೆ.

English summary

Beauty Benefits Of Facial Massage

Do you love to have a glowing skin? Of course, the answer will be a big ‘Yes’. Sometimes our face may look dull and older than the real age. This makes most women depressed and they will start trying hard to make it beautiful. Massaging is one of the easiest ways to stay relaxed and beautiful. Most of the women know the uses of facial massages and go for it often.
Story first published: Monday, August 24, 2015, 15:00 [IST]
X
Desktop Bottom Promotion