For Quick Alerts
ALLOW NOTIFICATIONS  
For Daily Alerts

ಮುಖದ ಅಂದವನ್ನು ಹೆಚ್ಚಿಸುವ ನೈಸರ್ಗಿಕ ಸೌಂದರ್ಯವರ್ಧಕಗಳು

By Super
|

ಕಲೆಯಿಲ್ಲದ ಚರ್ಮ ಹೊಂದುವುದು ಎಲ್ಲರ ಕನಸು. ಆದರೆ ನಮ್ಮ ಚರ್ಮದಲ್ಲಿ ಮೂಡುವ ಕಲೆಗಳು, ಮೊಡವೆ, ಕೆಂಪಗಾಗಿರುವುದು, ಗೀರುಗಳು ಬಿದ್ದಿರುವುದು ಮೊದಲಾದವುಗಳಿಗೆ ನಮ್ಮ ಹಾರ್ಮೋನುಗಳ ಜೊತೆಗೇ ನಾವು ಸೇವಿಸುವ ಆಹಾರಗಳೂ ಪ್ರಧಾನ ಪಾತ್ರ ವಹಿಸುತ್ತವೆ. ದೇಹಕ್ಕೆ ಶಕ್ತಿ ನೀಡುವ ಸಕ್ಕರೆ ಚರ್ಮಕ್ಕೆ ಕಲೆಯನ್ನೂ ನೀಡುವುದು ಒಂದು ವೈಪರೀತ್ಯವಾಗಿದೆ. ಬನ್ನಿ ಇಲ್ಲಿ ನೀಡಿರುವ ಮನೆಮದ್ದನ್ನು ಪ್ರಯತ್ನಿಸಿ ತ್ವಚೆಯ ಕಾಂತಿ ಹೆಚ್ಚಿಸಿಕೊಳ್ಳಿ..ದುಂಡಗಿನ ಮುಖಕ್ಕೆ ಸೂಕ್ತವಾಗಿರುವ 7 ಮೇಕಪ್ ಸಲಹೆಗಳು

ಬಾದಾಮಿ

ಬಾದಾಮಿಯ ಬೀಜಗಳನ್ನು ಹನ್ನೆರಡು ಗಂಟೆ ನೀರಿನಲ್ಲಿ ನೆನೆಸಿದ ಬಳಿಕ ಸಿಪ್ಪೆ ಸುಲಿದು ನಯವಾಗಿ ತೇದಿಕೊಳ್ಳಬೇಕು. ಈ ಲೇಪನವನ್ನು ಗುಲಾಬಿನೀರಿನೊಂದಿಗೆ ಮಿಶ್ರಣಮಾಡಿಕೊಂಡು ರಾತ್ರಿ ಹಚ್ಚಿ ಬೆಳಿಗ್ಗೆ ತಣ್ಣಿರಿನಿಂದ ತೊಳೆದುಕೊಳ್ಳಬೇಕು.

ಶ್ರೀಗಂಧ

ಶ್ರೀಗಂಧದ ಕೊರಡನ್ನು ತೇದಿದ ಲೇಪನವನ್ನು ಅಥವಾ ಶ್ರೀಗಂಧದ ಪುಡಿಯನ್ನು ಹಾಲು ಅಥವಾ ಗುಲಾಬಿ ನೀರಿನಲ್ಲಿ ಮಿಶ್ರಣ ಮಾಡಿ ಕಲೆಗಳ ಮೇಲೆ ಹಚ್ಚಿ ಒಂದು ಗಂಟೆಯ ಕಾಲ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಬೇಕು.

ಹೊಸ ಚರ್ಮ ಹುಟ್ಟುವಿಕೆ

ಕಲೆಗಳ ಚರ್ಮ ಕಿತ್ತು ಬಂದಾಗ ಹೊಸ ಚರ್ಮ ಹುಟ್ಟಲು ಸಹಾಯವಾಗುವಂತೆ ಮಾಡಿ. ವಿಟಮಿನ್ ಸಿ ಹೇರಳವಾಗಿರುವ ನಿಂಬೆ ಹಣ್ಣಿನಿಂದ ಚರ್ಮ ಹುಟ್ಟುವಿಕೆಗೆ ಸಹಾಯಕವಾಗಬಹುದು. ತಾಜಾ ನಿಂಬೆ ರಸಕ್ಕೆ ಹತ್ತಿಯನ್ನು ಅದ್ದಿ ಅದನ್ನು ಕಲೆಗೆ ಹಚ್ಚಿ. ರಸವನ್ನು ಪೂರ್ತಿಯಾಗಿ ಹೀರಲು ಸ್ವಲ್ಪ ಸಮಯ ಬಿಡಿ.ಈ ರೀತಿ ಮಾಡುವುದರಿಂದ ಮುಖಕ್ಕೆ ಹೊಸ ಚರ್ಮ ಬರುವುದರ ಜೊತೆಗೆ ಕಾಂತಿಯುತವಾಗುತ್ತದೆ.

ಲಿಂಬೆರಸ

ದಿನಕ್ಕೆ ಮೂರು ಬಾರಿಯಂತೆ ಎರಡು ವಾರಗಳ ಕಾಲ ಲಿಂಬೆರಸವನ್ನು ಸೇವಿಸುವುದರ ಮೂಲಕ ಉತ್ತಮ ಪರಿಣಾಮ ಪಡೆಯಬಹುದು.

ಅಡುಗೆ ಸೋಡಾ

ಅಡುಗೆ ಸೋಡಾಪುಡಿಯನ್ನು ನೀರಿನೊಂದಿಗೆ ಸೇರಿಸಿ ಕಲೆಯಾದ ಜಾಗದಲ್ಲಿ ನಯವಾಗಿ ಒಂದರಿಂದ ಎರಡು ನಿಮಿಷಗಳವರೆಗೆ ತಿಕ್ಕಬೇಕು. ಬಳಿಕ ಉಗುರುಬೆಚ್ಚನೆಯ ನೀರಿನಲ್ಲಿ ತೊಳೆದುಕೊಳ್ಳಬೇಕು. ದಿನಕ್ಕೆ ಎರಡು ಅಥವಾ ಮೂರು ಬಾರಿ ಈ ವಿಧಾನ ಅನುಸರಿಸುವುದರಿಂದ ಉತ್ತಮ ಪರಿಣಾಮ ಪಡೆಯಬಹುದು.

ಆಲಿವ್ ಎಣ್ಣೆ

ಕಲೆ ಇರುವ ಜಾಗದಲ್ಲಿ ಅಪ್ಪಟ ಆಲಿವ್ ಎಣ್ಣೆಯನ್ನು ನಯವಾಗಿ ತಿಕ್ಕಿ ಹದವಾದ ನೀರಾವಿಗೆ ಚರ್ಮವನ್ನು ಒಡ್ಡಿಕೊಳ್ಳಬೇಕು. ಇದರಿಂದಾಗಿ ಚರ್ಮದ ಸೂಕ್ಷ್ಮರಂಧ್ರಗಳು ತೆರೆದು ಆಲಿವ್ ಎಣ್ಣೆ ಗಾಢವಾಗಿದ್ದ ಚರ್ಮದ ಮೆಲನಿನ್ ವರ್ಣದ್ರವ್ಯವನ್ನು ಕಡಿಮೆಗೊಳಿಸಿ ಕಲೆಯನ್ನು ಕಡಿಮೆ ಮಾಡುತ್ತದೆ.

ನೀವು ಕಲೆಗಳನ್ನು ಹೊಂದಿದ್ದೀರೆ? ಅವುಗಳನ್ನು ಹೋಗಲಾಡಿಸಲು ಒದ್ದಾಡುತ್ತಿದ್ದೀರೆ ? ಹಾಗಾದರೆ ಈ ಮೇಲೆ ತಿಳಿಸಿರುವ ನೈಸರ್ಗಿಕ ಮದ್ದನ್ನು ಮಾಡಿ ನೋಡಿ.ಆದಾಗ್ಯೂ ನೀವು ಇದನ್ನು ಎರಡು ಮೂರು ವಾರಗಳು ಮಾಡಿ ಪರಿಣಾಮ ತಿಳಿಯಬಹುದು.

English summary

Natural Remedies to Remove Facial Scars

Natural remedies to try which may slightly lessen the appearance or fade the scar a little. If you have ongoing concerns about your scar, if it is showing signs of not healing, etc., then it is important to speak to a doctor or a skin specialist for suitable medical advice.
X
Desktop Bottom Promotion