ಹದಿಹರೆಯದವರಿಗಾಗಿ 7 ಸೌಂದರ್ಯ ರಹಸ್ಯಗಳು

By: Deepa M
Subscribe to Boldsky

ತಾರುಣ್ಯವತಿಯರು ತಿಳಿದಿರಲೇಬೇಕಾದ 7 ಸೌಂದರ್ಯ ರಹಸ್ಯಗಳು

ಹಲವಾರು ಬಾರಿ ನೀವು ಮೇಕಪ್ ಮಾಡುವ ಕಲೆಯನ್ನು ಸ್ವಯಂ ಅನುಭವದಿಂದ ಮಾತ್ರ ದಕ್ಕಿಸಿಕೊಳ್ಳಬಹುದು. ಆದರೆ ಅದಕ್ಕಾಗಿ ನಿಮ್ಮ ಸಮಯ ಮತ್ತು ಸೌಂದರ್ಯವನ್ನು ಸಹ ಹಾಳು ಮಾಡಿಕೊಳ್ಳಬೇಡಿ. ನಾನು ನಿಮ್ಮೊಂದಿಗೆ ಕೆಲವೊಂದು ಸೌಂದರ್ಯದ ರಹಸ್ಯಗಳನ್ನು ಹಂಚಿಕೊಳ್ಳಲು ಬಯಸುತ್ತಿದ್ದೇನೆ. ಮೇಕಪ್ ಮಾಡಲು ಯಾವುದೇ ನೀತಿ ನಿಯಮಗಳು ಇಲ್ಲವೆಂದು ಮೊದಲು ತಿಳಿಯಿರಿ. ಅದೊಂದು ಕಲೆ! ಆ ಕಲೆಯ ಪರಿಚಯದ ಒಂದು ಭಾಗವಾಗಿ ನಿಮಗೆ ನನಗೆ ಗೊತ್ತಿರುವ 7 ಸೌಂದರ್ಯದ ರಹಸ್ಯಗಳನ್ನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಹೆಚ್ಚಿನ ಮಾಹಿತಿಗೆ ಮುಂದೆ ಓದಿ!!!

1. ಕನ್ಸೀಲರನ್ನು ಪರಿಣಾಮಕಾರಿಯಗಿ ಬಳಸಿ

1. ಕನ್ಸೀಲರನ್ನು ಪರಿಣಾಮಕಾರಿಯಗಿ ಬಳಸಿ

ಕನ್ಸೀಲರನ್ನು ಬಳಸುವುದು ಒಳ್ಳೆಯದು. ಆದರೆ ಅದನ್ನು ಬಳಸುವಾಗ ಉಜ್ಜುವ ತಪ್ಪನ್ನು ಹಲವರು ಮಾಡುತ್ತಾರೆ. ಇದು ತಪ್ಪು. ಏಕೆಂದರೆ ಹೀಗೆ ಮಾಡುವುದರಿಂದ ಕನ್ಸೀಲರ್ ಸಮಸ್ಯೆಯಿರುವ ಭಾಗದ ಮೇಲೆ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವುದಿಲ್ಲ. ಅದಕ್ಕಾಗಿ ಮುಂದೆ ನೀವು ಕನ್ಸೀಲರನ್ನು ಬಳಸುವಾಗ ನಿಮ್ಮ ಉಂಗುರ ಬೆರಳಿನಿಂದ ತ್ವಚೆಯ ಮೇಲೆ ಮೃದುವಾಗಿ ಉಜ್ಜಿ. ಇದು ತಾರುಣ್ಯವತಿಯರು ತಪ್ಪದೆ ತಿಳಿದುಕೊಳ್ಳಬೇಕಾದ ಸೌಂದರ್ಯದ ರಹಸ್ಯವಾಗಿದೆ.

2. ಜಿಡ್ಡಿನಿಂದ ಕೂಡಿದ ಕೂದಲಿಗೆ ರಾಮಬಾಣ

2. ಜಿಡ್ಡಿನಿಂದ ಕೂಡಿದ ಕೂದಲಿಗೆ ರಾಮಬಾಣ

ನಿಮ್ಮ ಕೂದಲಿನ ಹೊಳಪನ್ನು, ಆರೋಗ್ಯವನ್ನು ಮತ್ತು ತಾಜಾತನವನ್ನು ಕಾಯ್ದುಕೊಳ್ಳಲು ಪ್ರತಿ ಎರಡು ದಿನಕ್ಕೆ ಒಮ್ಮೆ ನಿಮ್ಮ ಕೂದಲನ್ನು ತೊಳೆಯಿರಿ. ಇದರಿಂದ ನಿಮ್ಮ ಕೂದಲು ಅತಿಯಾಗಿ ಒಣಗುವುದನ್ನು ತಪ್ಪಿಸಬಹುದು ಮತ್ತು ಅದಕ್ಕೆ ಹೆಚ್ಚಿನ ರಾಸಾಯನಿಕಗಳ ಸೇರ್ಪಡೆಯನ್ನು ಸಹ ತಡೆಯಬಹುದು. ಹಾಗೆಂದು ನಿಮ್ಮ ಕೂದಲನ್ನು ಸ್ವಚ್ಛವಾಗಿಟ್ಟುಕೊಳ್ಳುವುದನ್ನು ಕಡೆಗಣಿಸಬೇಡಿ. ಅದಕ್ಕಾಗಿಯೇ ಡ್ರೈ ಶಾಂಪೂಗಳು ಸಹ ದೊರೆಯುತ್ತವೆ. ಇದಕ್ಕಾಗಿ ನೀವು ಬೇಬಿ ಪೌಡರನ್ನು ಸಹ ಬಳಸಬಹುದು. ಮುಂದೆ ನೀವು ತಲೆಗೆ ಸ್ನಾನ ಮಾಡುವಾಗ ಈ ಸಲಹೆಯನ್ನು ಜಾರಿಗೆ ತನ್ನಿ, ಆಗ ನೀವೇ ನೋಡುವಿರಿ ಇದರ ಚಮತ್ಕಾರವನ್ನು!

3. ವ್ಯಾಸೆಲಿನ್ ಪ್ರತಿಯೊಂದಕ್ಕು ಉತ್ತಮ

3. ವ್ಯಾಸೆಲಿನ್ ಪ್ರತಿಯೊಂದಕ್ಕು ಉತ್ತಮ

ಒಂದು ಪವಾಡ ಸದೃಶ್ಯ ಉತ್ಪನ್ನವು ಎಲ್ಲ ಮೂಲ ಸಮಸ್ಯೆಗಳ ಮೇಲು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತದೆ. ಅದೇ ವ್ಯಾಸೆಲಿನ್!. ಇದರ ಉಪಯೋಗಗಳು ಒಂದೇ, ಎರಡೇ, ತುಟಿಗಳಿಗೆ ಮೊಯಿಶ್ಚರೈಸ್ ಮಾಡುತ್ತದೆ, ಮೇಕಪ್ ತೆಗೆಯಲು ಬಳಕೆಯಾಗುತ್ತದೆ, ತುಟಿಗಳು ಒಡೆಯದಂತೆ ತಡೆಯುತ್ತದೆ, ಹೇರ್ ಡೈ ಮಾಡುವಾಗ ಕೂದಲ ಬುಡದಲ್ಲಿ ಕಲೆಯುಂಟಾಗದಂತೆ ತಡೆಯುತ್ತದೆ, ಸುಟ್ಟ ಗಾಯ ಅಥವಾ ಕೊಯ್ದ ಗಾಯದ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಹೀಗೆ ಪಟ್ಟಿ ಮಾಡುತ್ತ ಸಾಗಿದರೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಅದಕ್ಕಾಗಿ ಒಂದು ಸಣ್ಣ ವ್ಯಾಸೆಲಿನ್ ಬಾಟಲನ್ನು ನಿಮ್ಮ ಬ್ಯಾಗಿನಲ್ಲಿ ಸದಾ ಇಟ್ಟುಕೊಳ್ಳಿ.

4. ಫೌಂಡೇಶನ್ ಆಯ್ಕೆ ಮಾಡುವುದು

4. ಫೌಂಡೇಶನ್ ಆಯ್ಕೆ ಮಾಡುವುದು

ನೀವು ತಾರುಣ್ಯವತಿಯರಾಗಿದ್ದಲ್ಲಿ ಫೌಂಡೇಶನ್ ಬಳಸಲು ನನ್ನ ವೈಯುಕ್ತಿಕ ಅಸಮ್ಮತಿ ಇದೆ. ಏಕೆಂದರೆ ಇದು ನಿಮ್ಮ ಮುಖದ ಸೌಂದರ್ಯದಲ್ಲಿ ಕೃತಕತೆಯನ್ನು ಉಂಟು ಮಾಡಿ ಅಸ್ವಾಭಾವಿಕವಾಗಿ ಕಾಣಿಸುತ್ತದೆ. ಇದರ ಬದಲಿಗೆ BB ಕ್ರೀಮ್ ಅಥವಾ ಟಿಂಟೆಡ್ ಮೊಯಿಶ್ಚರೈಸರನ್ನು ಬಳಸಿ, ಇವುಗಳು ತೆಳುವಾಗಿದ್ದು, ಬಳಸಲು ಸಹ ಅನುಕೂಲಕರವಾಗಿರುತ್ತವೆ. ಆದಾಗಿಯೂ ನಿಮ್ಮ ತ್ವಚೆಗೆ ಅಗತ್ಯವಿರುವ ಮತ್ತು ಅದಕ್ಕೆ ಹೊಂದಿಕೊಳ್ಳುವ ಫೌಂಡೇಶನ್‍ನನ್ನೆ ಬಳಸಿ. ಇಷ್ಟೆಲ್ಲ ಮಾಡಿದರು ನಿಮ್ಮ ಇಡೀ ದೇಹದ ಬಣ್ಣ ಮುಖ್ಯವಾಗಿ ಕತ್ತಿನ ಭಾಗದ ಬಣ್ಣದ ಜೊತೆಗೆ ಹೊಂದಿಕೊಳ್ಳುವ ಫೌಂಡೇಶನ್ ಅನ್ನು ಆಯ್ಕೆ ಮಾಡಿಕೊಳ್ಳಿ. ಇಲ್ಲವಾದಲ್ಲಿ ನಿಮ್ಮ ಎಲ್ಲಾ ಪರಿಶ್ರಮ ಆಭಾಸವಾದೀತು.

5. ಕೊಳೆಯುಂಟು ಮಾಡುವ ಐಲೈನರನ್ನು ಬಳಸುವುದನ್ನು ನಿಯಂತ್ರಿಸಿ.

5. ಕೊಳೆಯುಂಟು ಮಾಡುವ ಐಲೈನರನ್ನು ಬಳಸುವುದನ್ನು ನಿಯಂತ್ರಿಸಿ.

ಐಲೈನರ್ ನಿಂದ ಸಮಸ್ಯೆಯನ್ನು ಅನುಭವಿಸುತ್ತಿರುವವರಲ್ಲಿ ನೀವು ಸಹ ಒಬ್ಬರೇ? ಅದಕ್ಕಾಗಿ ನಿಮ್ಮ ಐಲೈನರನ್ನು ಹಚ್ಚುವ ಮೊದಲು ಎಣ್ಣೆಯನ್ನು ಈರುವ ಕಾಗದದಿಂದ ನಿಮ್ಮ ಕಣ್ಣೀನ ಸುತ್ತ ಇರುವ ಜಿಡ್ಡಿನಂಶವನ್ನು ತೆಗೆಯಿರಿ. ಇದರ ಜೊತೆಗೆ ಐಲೈನರನ್ನು ಕೊಳ್ಳುವಾಗ ಸ್ಟೇ-ಪ್ರೂಫ್ ವಿಯರ್- ಸಾಮರ್ಥ್ಯವನ್ನು ಹೊಂದಿರುವ ಐಲೈನರನ್ನು ಕೊಳ್ಳಿರಿ.

6. ನಿಮ್ಮ ತ್ವಚೆಯ ಬಗ್ಗೆ ಕಾಳಜಿವಹಿಸಿ.

6. ನಿಮ್ಮ ತ್ವಚೆಯ ಬಗ್ಗೆ ಕಾಳಜಿವಹಿಸಿ.

ನೀವು ನಿಮ್ಮ ತ್ವಚೆಯ ಬಗ್ಗೆ ಕಾಳಜಿವಹಿಸಲಿಲ್ಲವಾದಲ್ಲಿ ಯಾವ ಬಗೆಯ ಮೇಕಪ್ ಹಚ್ಚಿದರು ಅದು ಪ್ರಯೋಜನಕ್ಕೆ ಬರುವುದಿಲ್ಲ. ಹಾಗಾಗಿ ನಿಮ್ಮ ತ್ವಚೆಯ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಿ. SPF ಜೊತೆಗೆ ಉತ್ತಮವಾದ ಮೊಯಿಶ್ಚರೈಸರನ್ನು ಮೇಕಪ್ ಮಾಡುವ ಮೊದಲು ಹಚ್ಚಿ. ಆದರೆ ಮಲಗುವ ಮುನ್ನ ರಾತ್ರಿಯ ಸಮಯದಲ್ಲಿ ನಿಮ್ಮ ಮೇಕಪ್ ತೆಗೆದು ಮುಖವನ್ನು ತೊಳೆಯುವುದನ್ನು ಮರೆಯಬೇಡಿ.

7.ನಿಮ್ಮ ಕೂದಲಿನ ಬಗ್ಗೆ ಕಾಳಜಿಯನ್ನು ವಹಿಸಿ

7.ನಿಮ್ಮ ಕೂದಲಿನ ಬಗ್ಗೆ ಕಾಳಜಿಯನ್ನು ವಹಿಸಿ

ಜನರು ಯಾವಾಗಲು ನನಗೆ ಹೇಳುತ್ತಿರುತ್ತಾರೆ ಒಂದೇ ಬಗೆಯ ಶಾಂಪೂವನ್ನು ಬಳಸಬೇಡ ಎಂದು. ಏಕೆಂದರೆ ಅವರ ಪ್ರಕಾರ ಒಂದೇ ಬಗೆಯ ಶಾಂಪೂವನ್ನು ಬಳಸಿದರೆ ಅದು ಕೂದಲಿನ ಮೇಲೆ ತನ್ನ ಪ್ರಭಾವವನ್ನು ಕಳೆದುಕೊಂಡು ಕೂದಲನ್ನು ಮಂಕಾಗಿ ಕಾಣಿಸುವಂತೆ ಮಾಡುತ್ತದೆಯಂತೆ. ಇದು ಎಷ್ಟರ ಮಟ್ಟಿಗೆ ನಿಜ ಎಂದು ನನಗೆ ತಿಳಿದಿಲ್ಲ. ಆದರೆ ಪ್ರತಿ ಬಾರಿ ನಾನು ಶಾಂಪೂವನ್ನು ಬದಲಾಯಿಸಿದಾಗಲು ನನ್ನ ಕೂದಲು ಮತ್ತಷ್ಟು ತಾಜಾತನದಿಂದ ಕಂಗೊಳಿಸಿದ್ದಂತು ಸತ್ಯ. ಹಾಗಾಗಿ ನೀವು ಸಹ ಆಗಾಗ್ಗೆ ನಿಮ್ಮ ಶಾಂಪೂವನ್ನು ಬದಲಾಯಿಸಿ ನೋಡಿ, ಆಗ ನಿಮ್ಮ ಕೂದಲಿಗೆ ಯಾವ ಶಾಂಪೂ ಉತ್ತಮವೆಂಬುದನ್ನು ನೀವೆ ತಿಳಿದುಕೊಳ್ಳುವಿರಿ.

English summary

7 Beauty Secrets Every Teen Should Know for Sure

Most of the time the only way you can learn the right way of makeup is through personal experience, but in order to save you some frustration and unfortunate experimentation,
Please Wait while comments are loading...
Subscribe Newsletter