For Quick Alerts
ALLOW NOTIFICATIONS  
For Daily Alerts

ಹೊಳಪಿನ ತ್ಚಚೆಗೆ ಕ್ರೀಂ ಬೇಡ ಯೋಗಾಭ್ಯಾಸ ಮಾಡಿ

By Sanketh Chiploonkar
|

ಧೂಳು, ಮಾಲಿನ್ಯದಿಂದ ಕೂಡಿರುವ ಈ ನಗರಗಳಲ್ಲಿ ನಮ್ಮ ನೈಸರ್ಗಿಕ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಏಕೆಂದರೆ ಹೆಚ್ಚುತ್ತಿರುವ ಮಾಲಿನ್ಯ, ರಾಸಾಯನಿಕಗಳು ನಮ್ಮ ತ್ಚಚೆಯನ್ನು ಹಾಳುಮಾಡುತ್ತವೆ. ಹಾಗೆಂದ ಮಾತ್ರಕ್ಕೆ ತ್ವಚೆಯನ್ನು ಹಾಳುಗೆಡವಲು ಸಾಧ್ಯವೇ ಅದಕ್ಕಾಗಿಯೇ ನಾವು ಪರಿಹಾರವನ್ನು ಕಂಡುಕೊಂಡಿದ್ದೇವೆ. ಅದೇ ವಿವಿಧ ಬಗೆಯ ಕ್ರೀಮ್ ಗಳು, ಹಾಗೂ ಮತ್ತಿತರ ಸೌಂದರ್ಯವರ್ಧಕಗಳು!

ಆದರೆ ಇದು ನಿಜವಾದ ಪರಿಹಾರವಲ್ಲ. ನಿಮ್ಮ ತ್ಚಚೆಗೆ ಇದರಿಂದ ಯಾವುದೇ ಉಪಯೋಗವೂ ಆಗದು. ಕೇವಲ ಕ್ಷಣದ ಸೌಂದರ್ಯವನ್ನು ನೀಡಬಲ್ಲವೇ ಹೊರತು ಶಾಶ್ವತ ಪರಿಹಾರವಂತೂ ಖಂಡಿತವಾಗಿಯೂ ಇದರಿಂದ ಲಭಿಸದು. ನಿಮ್ಮ ನೈಸರ್ಗಿಕ ತ್ಚಚೆಗೆ ಅದರ ಹೊಳಪಿಗೆ ಸೂಕ್ತ ಪರಿಹಾರವೆಂದರೆ - ಯೋಗ.

ಯೋಗ ದೈಹಿಕ ಆರೋಗ್ಯವನ್ನು ನೀಡುವುದು ಮಾತ್ರವಲ್ಲದೇ ಮಾನಸಿಕ ಆರೋಗ್ಯವನ್ನೂ ಸಹ ಕಾಯ್ದುಕೊಳ್ಳುವಲ್ಲಿ ಯೋಗ ಬಹಳ ಸಹಕಾರಿಯಾಗಿದೆ. ನಿಮ್ಮ ತ್ಚಚೆಯ ಹೊಳಪಿಗೆ ಇಲ್ಲಿ ಕೆಲವು ಯೋಗದ ಭಂಗಿಯನ್ನು ಇಲ್ಲಿ ಹೇಳಲಾಗಿದೆ.

ಆಯುರ್ವೇದದಲ್ಲಿ ತ್ಚಚೆಯು ಆರೋಗ್ಯಕರ ಜೀವನಕ್ಕೆ ಅತ್ಯಂತ ಮುಖ್ಯ ಎಂದು ನಂಬಲಾಗಿದೆ. ತ್ವಚೆ ಆರೋಗ್ಯಕರವಾಗಿದ್ದರೆ, ರಕ್ತದ ಪೂರೈಕೆಯನ್ನೂ ಉತ್ತಮಗೊಳಿಸುತ್ತದೆ. ಕೆಲವು ಯೋಗಗಳು ಮುಖದಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಯೌವ್ವನವನ್ನು ಕಾಯ್ದುಕೊಳ್ಳಲು, ಆರೋಗ್ಯವಾಗಿರಲು ಮತ್ತು ಸುಂದರವಾಗಿ ಕಾಣಲು ಈ ಯೋಗಗಳು ಅತ್ಯಂತ ಸಹಾಯಕವಾಗಿವೆ.

English summary

Want glowing skin? Forget expensive creams and try yoga

Want naturally glowing skin? Well, we have the answer for you – yoga. Yoga gives you a healthy mind and body and in turn makes your skin glow. Here are the top 5 yoga poses you could try to get the flawless glowing skin you always wanted.
Story first published: Friday, November 29, 2013, 15:45 [IST]
X
Desktop Bottom Promotion