For Quick Alerts
ALLOW NOTIFICATIONS  
For Daily Alerts

ಇವುಗಳು ತ್ವಚೆಗೆ ಹಾನಿಕಾರಕ ಎಚ್ಚರ!

By Poornima Hegde
|

ಸಾಮಾನ್ಯವಾಗಿ ನಾವು ನಮ್ಮ ತ್ವಚೆಯಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳಿಗೆ ಸೂರ್ಯನ ಕಿರಣ, ಶುಷ್ಕ ಗಾಳಿ ಮತ್ತು ಮಾಲಿನ್ಯಯುಕ್ತ ಪರಿಸರವೇ ಕಾರಣವೆಂದು ಹೇಳುತ್ತೇವೆ. ಆದರೆ ಇಂತಹ ತ್ವಚೆಯ ಸಮಸ್ಯೆಗೆ ಇವು ಮಾತ್ರವಲ್ಲದೆ, ಇನ್ನೂ ಹಲವು ವಿಷಯಗಳು ಚರ್ಮ ವ್ಯಾಧಿಗೆ ಕಾರಣವಾಗುತ್ತವೆ ಎಂದು ಐ.ಎ.ಎನ್.ಎಸ್ ವರದಿ ನೀಡಿದೆ. ಹೆಲ್ತ್ ಆಂಡ್ ವೆಲ್ ನೆಸ್ (ಆರೋಗ್ಯ ಮತ್ತು ಕ್ಷೇಮ) ಕಂಪನಿ ನೊಶ್ ಡಿಟೊಕ್ಸ್ ಡೆಲಿವರಿಯ ಸಿಇಓ ಮತ್ತು ಸಂಸ್ಥಾಪಕರಾಗಿರುವ ಗೀತಾ ಸಿಧು – ರಾಬ್, ದೇಹದ ಅಂಗಾಂಗಗಳ ಹಾನಿಗೆ ಕಾರಣವಾಗುವ ವಿಷಯಗಳ ಪಟ್ಟಿಯನ್ನು femalefirst.co.uk. ನಲ್ಲಿ ಬಿಡುಗಡೆ ಮಾಡಿದ್ದಾರೆ.

ಹಾರ್ಮೋನುಗಳು ಕೂಡ ಚರ್ಮಕ್ಕೆ ತೊಂದರೆಕಾರಕಗಳಾಗಿವೆ. ಋತುಬಂಧ ಅವಧಿಯಲ್ಲಿ ಈಸ್ಟ್ರೋಜೆನ್ ಮಟ್ಟದಲ್ಲಾಗುವ ಬದಲಾವಣೆಯಿಂದ ಚರ್ಮದ ಒಳಗೂ ಗಮನಾರ್ಹ ಬದಲಾವಣೆಗಳು ಸಂಭವಿಸಬಹುದು. ಈಸ್ಟ್ರೋಜೆನ್ ಮಟ್ಟಗಳಲ್ಲಿನ ಇಳಿಕೆಯಾದ ಹಾಗೆ ಹೊಸ ಚರ್ಮ ಕಣಗಳ ಉತ್ಪಾದನೆ ಕುಂಠಿತವಾಗುತ್ತದೆ ಪರಿಣಾಮವಾಗಿ ಚರ್ಮದ ಪದರಗಳು ತೆಳುವಾಗುತ್ತವೆ. ಇದರಿಂದ ತ್ವಚೆ ಹೈಡ್ರೋಜನ್, ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ನಿರ್ವಹಿಸುವಲ್ಲಿ ಅಸಾಹಯಕವಾಗುತ್ತದೆ. ನೀವು ನಿಮ್ಮ ತ್ವಚೆಯ ರಕ್ಷಣೆಯ ವಿಧಾನಗಳನ್ನು ಹುಡುಕುತ್ತಿದ್ದರೆ, ಇಲ್ಲಿದೆ ಕೆಲವು ತ್ವಚೆಯ ಹಾನಿಯನ್ನು ವಿರೋಧಿಸುವ ಸಲಹೆಗಳು.

ಆಂಟಿಆಕ್ಸಿಡೆಂಟ್ಸ್ /ಉತ್ಕರ್ಷಣ:

ಆಂಟಿಆಕ್ಸಿಡೆಂಟ್ಸ್ /ಉತ್ಕರ್ಷಣ:

ನಿಮ್ಮ ಆಹಾರದಲ್ಲಿ ಆಂಟಿ ಆಕ್ಸಿಡೆಂಟ್ಸ್ ನ್ನು ಸೇರಿಸುವುದರಿಂದ ತ್ವಚೆಯ ಸಮಸ್ಯೆಯನ್ನು ನಿವಾರಿಸಲು ಸಹಾಯಕವಾಗುತ್ತದೆ. ತಾಜಾ ತರಕಾರಿಗಳು, ಅದರಲ್ಲೂ ವಿಶೇಷವಾಗಿ ಕಿತ್ತಳೆ ಮತ್ತು ಹಸಿರು ಬಣ್ಣದ ಕ್ಯಾರೆಟ್, ಸಿಹಿ ಗೆಣಸು ಮತ್ತು ಪಾಲಾಕ್, ಹಾಗೂ ಕಡು ಬೆರ್ರಿಗಳಾದ, ಬ್ಲೂಬೆರ್ರಿ ಮತ್ತು ಬ್ಲಾಕ್ ಬೆರ್ರಿಗಳು ಶಕ್ತಿಯುತ ಆಂಟಿ ಆಕ್ಸಿಡೆಂಟ್ಸ್ ಹೊಂದಿರುವ ಸಮೃದ್ಧ ಆಂತೋಸಿಯಾನ್ಸಿಸ್ ನ್ನು ಒಳಗೊಂಡಿರುತ್ತವೆ.

ಹಣ್ಣುಗಳು:

ಹಣ್ಣುಗಳು:

ಹಣ್ಣುಗಳ ರಸ ಅಥವಾ ಪೇಸ್ಟ್ ಗಳನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆಯ ರಕ್ಷಣೆಯನ್ನು ಮಾಡಬಹುದು. ಒಂದು ಪಕ್ವವಾದ ಆವಕಾಡೊವನ್ನು ಬಳಸಿ ಮನೆಯಲ್ಲಿಯೇ ಆವಕಾಡೊ ಪೇಸ್ ಪ್ಯಾಕ್ ನ್ನು ತಯಾರಿಸಿಕೊಳ್ಳಿ. ಈ ಪೇಸ್ಟ್ ನ್ನು ಮುಖಕ್ಕೆ ಲೇಪಿಸಿ. 15 ರಿಂದ 20 ನಿಮಿಷಗಳ ಕಾಲ ಬಿಡಿ. ಇದು ಶಾಮಕ ಮತ್ತು ವಿಟಮಿನ್ ಈ ಆರ್ಧ್ರಕ ಗುಣಗಳನ್ನು ಹೊಂದಿದ್ದು, ನೈಸರ್ಗಿಕ ತೈಲವನ್ನು ಮುಖಕ್ಕೆ ನೀಡುತ್ತದೆ ಮತ್ತು ಮುಖದ ಮಾಯಿಶ್ಚರೈಸರ್ ನ್ನು ರಕ್ಷಿಸುತ್ತದೆ.

ಸನ್ ಸ್ಕ್ರೀನ್:

ಸನ್ ಸ್ಕ್ರೀನ್:

ಕನಿಷ್ಠ 15ರಷ್ಟು ಎಸ್ ಪಿ ಎಫ್ (SPF) ಹೊಂದಿರುವ ಉತ್ತಮ ಗುಣಮಟ್ಟದ, ಯಾವುದೇ ಸನ್ಸ್ಕ್ರೀನ್ ಬಳಸಿ ನಿಮ್ಮ ತ್ವಚೆಯ ರಕ್ಷಣೆ ಮಾಡಬಹುದು. ಸೂರ್ಯನ ನೇರ ಕಿರಣವು ನಿಮ್ಮ ಚರ್ಮದ ಮೇಲೆ ಬೀಳದಂತೆ ಎಚ್ಚರವಹಿಸುವುದು ತ್ವಚೆಯನ್ನು ರಕ್ಷಿಸುವ ಪ್ರಮುಖ ಸಲಹೆ. ನೀವು ಸೂರ್ಯನ ನೇರ ಕಿರಣಗಳಿಗೆ ಮೈಯೊಡ್ಡುವ ಸಮಯಬಂದಾಗ ಸೂರ್ಯನ ಕಿರಣದ ಅಡಿಯಲ್ಲಿ ಹೋಗುವುದಕ್ಕಿಂತ ಒಂದು ಗಂಟೆ ಮೊದಲು ಸನ್ಸ್ಕ್ರೀನ್ ನ್ನು ಲೇಪಿಸಿ. ಪ್ರತಿ ಎರಡು ಗಂಟೆಗಳಿಗೊಮ್ಮೆ ಸನ್ ಸ್ಕ್ರೀನ್ ಬಳಸುವುದು ಒಳ್ಳೆಯದು.

ಧೂಮಪಾನವನ್ನು ಬಿಡಿ:

ಧೂಮಪಾನವನ್ನು ಬಿಡಿ:

ಮುಖದಲ್ಲಿ ಬೀಳುವ ನೆರಿಗೆಗಳಿಗೆ ಹಾಗೂ ಕಪ್ಪುಕಲೆಗಳಿಗೆ ಧೂಮಪಾನ ನೇರವಾದ ಕಾರಣವಾಗುತ್ತದೆ. ಧೂಮಪಾನ ಚರ್ಮದ ಹೊರಗಿನ ಪದರಗಳ ಸಣ್ಣ ರಕ್ತನಾಳಗಳಲ್ಲಿ ರಕ್ತದ ಹರಿವು ಕಡಿಮೆಯಾಗುತ್ತದೆ. ಇದು ಆಮ್ಲಜನಕದ ಹರಿವನ್ನು ತಗ್ಗಿಸಲು ಕಾರಣವಾಗುತ್ತದೆ. ಧೂಮಪಾನ ಕಾಲಜನ್ ಮತ್ತು ಎಲಾಸ್ಟಿನ್ ನ್ನು ಕೂಡ ಹಾನಿಗೊಳಿಸುತ್ತದೆ. ಆದ್ದರಿಂದ ತ್ವಚೆಯ ಸಮಸ್ಯೆಯನ್ನು ನಿವಾರಣೆಯಾಗಬೇಕಾದರೆ ಧೂಮಪಾನವನ್ನು ತ್ಯಜಿಸುವುದು ಅತ್ಯಂತ ಉತ್ತಮ ಸಲಹೆ.

ಆರೋಗ್ಯಕರ ಆಹಾರ ಸೇವನೆ:

ಆರೋಗ್ಯಕರ ಆಹಾರ ಸೇವನೆ:

ತ್ವಚೆಯ ಕಾಳಜಿ ಮಾಡಲು ಅತ್ಯುತ್ತಮ ವಿಧಾನವೆಂದರೆ ಸಮತೋಲಿತ ಆಹಾರವನ್ನು ಸೇವಿಸುವುದು. ನಿಮ್ಮ ತ್ವಚೆಗೆ ಸರಿಹೊಂದುವಂತಹ ಆಹಾರವನ್ನೇ ದಿನವೂ ಸೇವಿಸಿ. ಸಮೃದ್ಧ ಆಂಟಿಆಕ್ಸಿಡೆಂಟ್ ಇರುವ ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಪ್ರೋಟೀನ್ ಆಹಾರಗಳನ್ನು ಸೇರಿಸಿ. ವಿಟಮಿನ್ ಸಿ ಅಂಶವಿರುವ ಆಹಾರಕ್ಕೆ ಪ್ರಾಮುಖ್ಯತೆ ನೀಡಿ, ಅನಾರೋಗ್ಯಕರ ಕೊಬ್ಬುಗಳು ಮತ್ತು ಸಂಸ್ಕರಿಸಿದ ಅಥವಾ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಇರುವ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿ.

ವಿಶ್ರಾಂತಿ:

ವಿಶ್ರಾಂತಿ:

ಒತ್ತಡ, ಹಾರ್ಮೋನ್ ಗಳು ತ್ವಚೆಗೆ ಅತ್ಯಂತ ಹಾನಿಕಾರಕಗಳು! ನಿಮ್ಮ ನಿತ್ಯದ ಜೀವನದಲ್ಲಿ ನಿಮ್ಮ ತ್ವಚೆಗೆ ಯಾವುದೇ ಸಮಸ್ಯೆಗಳಿರಬಾರದೆಂದರೆ ನೀವು ಪಾಲಿಸಲೇ ಬೇಕಾದ ಪ್ರಮುಖ ಅಂಶ ವಿಶ್ರಾಂತಿ ಮತ್ತು ತಾಳ್ಮೆ. ನಿಮ್ಮ ಒತ್ತಡವನ್ನು ನಿವಾರಿಸಿಕೊಳ್ಳುವುದರ ಮೂಲಕ ಆರೋಗ್ಯಕರ ತ್ವಚೆ ಮತ್ತು ಶಾಂತವಾದ ಮನಸ್ಥಿತಿಯನ್ನು ಪಡೆಯಲು ಸಾಧ್ಯ. ವ್ಯಾಯಾಮ ಮತ್ತು ಯೋಗವನ್ನು ಮಾಡುವುದು ಸಹ ಚರ್ಮದ ಆರೋಗ್ಯಕ್ಕೆ ಧಿವ್ಯೌಷಧ!

ತ್ವಚೆ ತೇವಕಳೆದುಕೊಳ್ಳದಿರಲಿ:

ತ್ವಚೆ ತೇವಕಳೆದುಕೊಳ್ಳದಿರಲಿ:

ತ್ವಚೆಯ ರಕ್ಷಣೆಗೆ ಎಲ್ಲದಕ್ಕಿಂತ ಮುಖ್ಯವಾಗಿ ಅಗತ್ಯವಿರುವುದು ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯುವುದು. ನಿಮ್ಮ ತ್ವಚೆಯನ್ನು ತೇವ ಕಳೆದುಕೊಳ್ಳದಂತೆ ರಕ್ಷಿಸಿಕೊಳ್ಳುವುದು ಅತ್ಯಂತ ಪ್ರಮುಖ ಅಂಶ. ಆದ್ದರಿಂದ ನೀರನ್ನು ಕುಡಿಯುವುದರಿಂದ ತ್ವಚೆಯಲ್ಲಿ ಮಾಯಿಶ್ಚರೈಸರ್ ಉಳಿಯುತ್ತದೆ ಮತ್ತು ಮುಖದಲ್ಲಿ ಸುಕ್ಕುಗಟ್ಟುವಿಕೆಯನ್ನು ತಡೆದು ಯೌವನ ಸದಾ ಕಾಲ ಉಳಿಯುವಂತೆ ಮಾಡುತ್ತದೆ.

English summary

Skin spoilers to watch out for

Generally we consider exposure to sun, dry winds and pollution as the major culprits for skin problems. But, according to a report in IANS, there are other skin spoilers too, which makes skin are more important.
Story first published: Thursday, December 12, 2013, 10:20 [IST]
X
Desktop Bottom Promotion