For Quick Alerts
ALLOW NOTIFICATIONS  
For Daily Alerts

ಮೊಡವೆಗೆ ನೈಸರ್ಗಿಕವಾದ ಚಿಕಿತ್ಸೆ

|

ಮೊಡವೆ ಹದಿಹರೆಯದಲ್ಲಿ ಕಾಡುವ ದುಃಸ್ವಪ್ನ. ಮೊಡವೆ ಬರುತ್ತಿದ್ದಂತೆ ಅದರ ಬಗ್ಗೆ ಗಮನ ಹರಿಸಿದರೆ ಮುಖದ ಮೇಲೆ ಅದು ಬೀರುವ ಕೆಟ್ಟ ಪರಿಣಾಮವನ್ನು ತಡೆಯಬಹುದು. ಮೊಡವೆಯಿಂದ ಕಲೆಗಳು ಉಂಟಾದರೆ ನಿಧಾನಕ್ಕೆ ಹೋಗಲಾಡಿಸಬಹುದು. ಆದರೆ ರಂದ್ರಗಳು ಉಂಟಾದರೆ ಮುಖದ ಅಂದ ಮಾಯವಾಗುವುದು.

ಮೊಡವೆಗಾಗಿ ಸ್ಕಿನ್ ಕೇರ್ ಟ್ರೀಟ್ ಮೆಂಟ್ ತೆಗೆಯುವುದಾದರೆ ತುಂಬಾ ಜಾಗೃತಿ ವಹಿಸಿಬೇಕು. ಬಿಸಿಲಿನಲ್ಲಿ ಓಡಾಡಬಾರದು, ಕ್ರೀಮ್ ತ್ವಚೆಗೆ ಹೊಂದಿಕೆಯಾಗದಿದ್ದರೆ ಅಲರ್ಜಿ ಉಂಟಾಗಬಹುದು, ರಾಸಾಯನಿಕಗಳ ಬಳಕೆಯಿಂದ ತ್ವಚೆಯ ಹೊಳಪು ಕಡಿಮೆಯಾಗಬಹುದು.

ಅದೇ ನೈಸರ್ಗಿಕ ವಿಧಾನದಿಂದ ಮೊಡವೆ ಹೋಗಲಾಡಿಸಿದರೆ ತ್ವಚೆಗೆ ಯಾವುದೇ ಹಾನಿಯುಂಟಾಗುವುದಿಲ್ಲ. ನೈಸರ್ಗಿಕ ವಿಧಾನದಲ್ಲೂ ಎಲ್ಲಾ ವಿಧಾನಗಳು ಎಲ್ಲಾ ರೀತಿಯ ತ್ವಚೆಗೆ ಸೂಕ್ತವಾಗುವುದಿಲ್ಲ. ಕೆಲವರಿಗೆ ಅರಿಶಿಣ, ಗಂಧ ಅಲರ್ಜಿಯನ್ನು ತರಬಹುದು. ಇಲ್ಲಿ ನಾವು ಕೆಲವು ಪರಿಣಾಮಕಾರಿಯಾದ ಮೊಡವೆ ನಿವಾರಕಗಳ ಬಗ್ಗೆ ಹೇಳಿದ್ದೇವೆ, ನಿಮಗೆ ಯಾವ ವಿಧಾನ ಸೂಕ್ತ ಅನಿಸುತ್ತದೆಯೋ ಅದನ್ನು ಅನುಸರಿಸಬಹುದು.

ನಿಂಬೆರಸ ಮತ್ತು ರೋಸ್ ವಾಟರ್

ನಿಂಬೆರಸ ಮತ್ತು ರೋಸ್ ವಾಟರ್

ನಿಂಬೆರಸ ಮತ್ತು ರೋಸ್ ವಾಟರ್ ಅನ್ನು ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಬೇಕು. ಈ ರೀತಿ ಒಂದು ದಿನವೂ ತಪ್ಪದೆ ಒಂದು ತಿಂಗಳವರೆಗೆ ಹಚ್ಚಿದರೆ ಮೊಡವೆ ಸಂಪೂರ್ಣವಾಗಿ ಕಡಿಮೆಯಾಗುವುದು.

ನಿಂಬೆರಸ ಮತ್ತು ಕಡಲೆ ಎಣ್ಣೆ

ನಿಂಬೆರಸ ಮತ್ತು ಕಡಲೆ ಎಣ್ಣೆ

ನಿಂಬೆರಸ ಮತ್ತು ಕಡಲೆ ಎಣ್ಣೆಯನ್ನು ಮಿಶ್ರಣ ಮಾಡಿ ದಿನವೂ ಮುಖಕ್ಕೆ ಹಚ್ಚಿ ಅರ್ಧಗಂಟೆಯ ಬಳಿಕ ಹದ ಬಿಸಿ ನೀರಿನಲ್ಲಿ ಮುಖ ತೊಳೆಯಬೇಕು.

 ಜೇನು ಮತ್ತು ಚಕ್ಕೆ

ಜೇನು ಮತ್ತು ಚಕ್ಕೆ

1 ಚಮಚ ಜೇನಿಗೆ ಒಂದು ಚಕ್ಕೆಯನ್ನು ಪುಡಿ ಮಾಡಿ ಹಾಕಿ ಮಿಶ್ರಣ ಮಾಡಿ ಅದನ್ನು ಮುಖಕ್ಕೆ ಹಚ್ಚಿದರೆ ಮೊಡವೆ ಬೇಗನೆ ಗುಣಮುಖವಾಗುತ್ತದೆ. ಆದರೆ ಇದನ್ನು ಹಚ್ಚುವಾಗ ಮುಖ ಸ್ವಲ್ಪ ಉರಿಯುತ್ತದೆ.

ಜೇನು ಮತ್ತು ಸೇಬು

ಜೇನು ಮತ್ತು ಸೇಬು

ಸೇಬನ್ನು ಚೆನ್ನಾಗಿ ಹಿಸುಕಿ ಅದಕ್ಕೆ 1 ಚಮಚ ಜೇನು ಹಾಕಿ ಮುಖಕ್ಕೆ ಹಚ್ಚಿದರೆ ಮೊಡವೆ ಕಡಿಮೆಯಾಗುವುದು. ಮುಖದ ಹೊಳಪು ಹೆಚ್ಚುವುದು.

ಟೊಮೆಟೊ ಮತ್ತು ಸೌತೆಕಾಯಿ

ಟೊಮೆಟೊ ಮತ್ತು ಸೌತೆಕಾಯಿ

ಟೊಮೆಟೊ ಮತ್ತು ಸೌತೆಕಾಯಿಯನ್ನು ಹಚ್ಚಿದರೆ ಮೊಡವೆ ಕಡಿಮೆಯಾಗುವುದು, ಟೊಮೆಟೊ ಮತ್ತು ಸೌತೆಕಾಯಿ ಮುಖದಲ್ಲಿ ಕಲೆ ನಿಲ್ಲಲು ಬಿಡುವುದಿಲ್ಲ.

ತುಳಸಿ

ತುಳಸಿ

ತುಳಸಿಯನ್ನು ನೀರಿನಲ್ಲಿ 20 ನಿಮಿಷ ಕುದಿಸಿ, ಆ ನೀರು ತಣ್ಣಗಾದ ಮೇಲೆ ಮುಖಕ್ಕೆ ಹಚ್ಚಬೇಕು. ಈ ರೀತಿ ಪ್ರತಿದಿನ ಮಾಡಿದರೆ ಮೊಡವೆ ಮಾಯವಾಗುತ್ತದೆ.

ಮೆಂತೆ

ಮೆಂತೆ

ಮೆಂತೆಯನ್ನು ಪುಡಿ ಮಾಡಿ ಸ್ವಲ್ಪ ನೀರು ಮತ್ತು ನಿಂಬೆ ರಸ ಹಾಕಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿದರೆ 25-30 ದಿನಗಳಲ್ಲಿ ಮೊಡವೆ ಸಮಸ್ಯೆಯಿಂದ ಸಂಪೂರ್ಣವಾಗಿ ಗುಣಮುಖವಾಗಬಹುದು.

ಲೋಳೆ ಸರ

ಲೋಳೆ ಸರ

ಲೋಳೆಸರವನ್ನು ಪ್ರತಿದಿನ ಹಚ್ಚಿದರೆ ಅದು ತ್ವಚೆಯ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ.

English summary

Natural Treatment for Pimples | Tips For Skin Care | ಮೊಡವೆಗೆ ನೈಸರ್ಗಿಕವಾದ ಚಿಕಿತ್ಸೆ | ತ್ವಚೆ ಆರೈಕೆಗೆ ಕೆಲ ಸಲಹೆಗಳು

Pimple is a disease that affects the teenagers most and though not critical, it sure makes the social life of a teenager miserable due to its appearance. A lot of chemicals and medicines are available in the market for the cure of pimples but one can treat the pimples naturally.
X
Desktop Bottom Promotion