For Quick Alerts
ALLOW NOTIFICATIONS  
For Daily Alerts

ನೀವು ತಾರೆಯರಂತಹ ತ್ವಚೆ ಪಡೆಯುವುದು ಹೇಗೆ?

|

ಸಿನಿಮಾ ತಾರೆಯರು, ಮಾಡೆಲ್ ಗಳು, ಹೀಗೆ ಹಲವಾರು ಪ್ರಸಿದ್ಧ ಹುಡುಗಿಯರು ಪತ್ರಿಕೆಗಳಲ್ಲಿ ನಿಯತಕಾಲಿಕಗಳಲ್ಲಿ ಅವರ ಮೈ ಬಣ್ಣ ಸಂಪೂರ್ಣವಾಗಿ ಸರಿಯಾಗಿರುವಂತೆ ಅಂದರೆ ಅತ್ಯಂತ ಆಕರ್ಷಕವಾಗಿ ಕಂಡುಬರುತ್ತವೆ. ಇಂತಹ ಬೆಡಗಿ ಅದೆಷ್ಟು ಬಾರಿ ನಿಮ್ಮನ್ನು ಮೆರಗುಗೊಳಿಸಿಲ್ಲ? ಅದೆಷ್ಟು ಬಾರಿ ಇವರೆಲ್ಲ ಹೇಗೆ ಇಷ್ಟು ಚೆನ್ನಾಗಿ ಕಾಣಿಸುತ್ತಾರೆ ಎಂದು ಯೋಚಿಸಿಲ್ಲ ?

ಅವರಂತೆ ನಾನು ಯಾಕೆ ಇದುವರೆಗೆ ಆಕರ್ಷಕವಾಗಿ ಕಾಣಿಸುತ್ತಿಲ್ಲ ಎಂಬ ಯೋಚನೆಗಳೂ ನಿಮ್ಮ ಮನಸ್ಸಿನಲ್ಲಿ ಸುಳಿದಿರಬಹುದು. ಆದರೆ ಇಂತಹ ಆಲೋಚನೆಗಳನ್ನು ನಿಮ್ಮಿಂದ ದೂರಮಾಡುವ ಕೆಲವು ಸಲಹೆಗಳು, ಉಪಾಯಗಳು ಇಲ್ಲಿವೆ. ಇವು ನಿಮ್ಮನ್ನು ಇನ್ನಷ್ಟು ಕಾಂತಿಯುತರನ್ನಾಗಿ ಮಾಡುವಲ್ಲಿ ಸಹಾಯಕವಾಗುವುದರಲ್ಲಿ ಸಂಶಯವಿಲ್ಲ !

How to Get a Better Complexion
 

ಹಂತಗಳು :

ಹಿಂದಿನ ರಾತ್ರಿ ಅಥವಾ ಹಗಲು ಮಾಡಿದ ಮುಖದ ಅಲಂಕಾರ (ಮೇಕಪ್) ಗಳನ್ನು ತೆಗೆಯಿರಿ. ಮೇಕಪ್ ನ್ನು ತೆಗೆಯುವ ಬಟ್ಟೆ, ಹತ್ತಿ ಅಥವಾ ಬೇರೆ ಸಾಮಗ್ರಿಗಳನ್ನು ಉಪಯೋಗಿಸಿ ಮುಖದಲ್ಲಿರುವ ಮೇಕಪ್ ಸಂಪೂರ್ಣವಾಗಿ ಹೋಗುವಂತೆ ತೊಳೆಯಿರಿ/ ತೆಗೆಯಿರಿ. ಪ್ರತಿದಿನ ಹೀಗೆ ಮಾಡದೇ ಇದ್ದಲ್ಲಿ, ಮುಖದಲ್ಲಿ ವಯಸ್ಸಾದಂತೆ ಚರ್ಮ ಸುಕ್ಕುಗಟ್ಟುವುದು, ತ್ವಚೆಯಲ್ಲಿ ರಂಧ್ರಗಳು, ಬ್ಲಾಕೆಡ್ಸ್, ವೈಟೆಡ್ಸ್ ನಂತಹ ಕಲೆಗಳು ಉಂಟಾಗಬಹುದು.

ಬೆಳ್ಳಿಗ್ಗೆ ಹಾಗೂ ರಾತ್ರಿ ಮಲಗುವ ಮುನ್ನ ಮುಖವನ್ನು ಸ್ವಚ್ಛಗೊಳಿಸಿ. ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ದ್ರವ, ಬಟ್ಟೆ ಅಥವಾ ಯಾವುದೇ ಸಲಕರಣೆಗಳಿಂದ ಸ್ವಚ್ಛಗೊಳಿಸಿ. ಹೀಗೆ ದಿನವೂ ಸ್ವಚ್ಛಗೊಳಿಸದಿದ್ದಲ್ಲಿ ಮುಖದಲ್ಲಿ ಧೂಳು ಅಥವಾ ರಂಧ್ರಗಳು ಕಾಣಿಸಿಕೊಳ್ಳುತ್ತವೆ. ನಿಮ್ಮ ಹತ್ತಿರದ ಔಷಧಾಲಯಗಳಿಂದ ಉತ್ತಮವಾದ ಕ್ಲಿನ್ಜರ್ ಟೋನರ್ ಗಳನ್ನು ಖರೀದಿಸಬಹುದು.

ನಿಮ್ಮ ತ್ವಚೆಯನ್ನು ಸುರಕ್ಷಿತವಾಗಿಡಲು ಮುಂಜಾನೆ ಮತ್ತು ರಾತ್ರಿ ಮೊಯಶ್ಚರೈಸರ್ ಮಾಡಿ. ನಿಮ್ಮ ತ್ವಚೆಒಣ ತ್ಚಚೆಯಾಗಿದ್ದರೆ ಮುಖವನ್ನು ತೇವಾಂಶಯುಕ್ತ ಕ್ರೀಮ್ ಬಳಸುವುದು ಉತ್ತಮ. ಅದರಲ್ಲೂ ಹಗಲು ಮತ್ತು ರಾತ್ರಿ ಎರಡೂ ಹೊತ್ತು ಮೊಯಶ್ಚರೈಸರ್ ಮಾಡಬೇಕು. ನಿಮ್ಮ ತ್ವಚೆಯಲ್ಲಿ ಸುಕ್ಕು ಉಂಟಾಗಿದ್ದರೆ ಅದನ್ನು ತೆಗೆಯಲು ಸುಕ್ಕು ನಿವಾರಕ ಕ್ರೀಮ್ ಅಥವಾ ಮನೆಯಲ್ಲಿಯೇ ತಯಾರಿಸಿದ ಕ್ರೀಮ್ ಗಳನ್ನು ಬಳಸಬಹುದು. ಅಲ್ಲದೇ ಹೀಗೆ ಮಾಡುವಾಗ ನಿಮ್ಮ ಮೇಕಪ್ ಮುಖದಲ್ಲಿರಬಾರದು ಮತ್ತು ಮೇಕಪ್ ಮಾಡುವುದಕ್ಕಿಂತ ಮೊದಲೇ ತೇವಾಂಶಯುಕ್ತ ಕ್ರೀಮ್ ಗಳನ್ನು ಬಳಸಿ.

ನಿಮ್ಮ ನಿಮ್ಮ ತ್ವಚೆಗೆ ಯಾವುದು ಸರಿ ಎನಿಸುವುದೋ ಅದೇ ಪೌಂಡೇಶನ್ ಕ್ರೀಮ್ ಗಳನ್ನು ಬಳಸಿ. ಒಬ್ಬರ ತ್ವಚೆಗೆ ಸರಿ ಹೊಂದುಕೊಳ್ಳುವುದು ಇನ್ನೊಬ್ಬರ ತ್ವಚೆಗೆ ಹೊಂದುಕೊಳ್ಳದೇ ಇರಬಹುದು. ಆದ್ದರಿಂದ ನಿಮ್ಮ ಮೈ ಬಣ್ಣಕ್ಕೆ ಸರಿ ಹೊಂದುವಂತಹ ಮೇಕಪ್ ವಸ್ತುಗಳನ್ನೇ ಬಳಸಿ. ಮೇಕಪ್ ನಲ್ಲಿ ದ್ರವ ರೂಪದ (ಲಿಕ್ವಿಡ್) ಅಂಶಗಳನ್ನು ಬಳಸುವುದರಿಂದ ಮೃದು ತ್ವಚೆಗೆ ಹೊಂದುಕೊಳ್ಳುತ್ತದೆ ಮತ್ತು ತ್ವಚೆಯು ಕಾಂತಿಯುತವಾಗಿ ಕಾಣಿಸುತ್ತದೆ. ಅದೇ ರೀತಿ ಮುಖದಲ್ಲಿ ಸಣ್ಣ ಸಣ್ಣ ಕಲೆಗಳಿದ್ದರೆ ಅದನ್ನು ಅಡಗಿಸಲು ಪೌಡರ್ ಗಳನ್ನು ಬಳಸುವುದು ಸೂಕ್ತ. ಕೆಲವು ಮೇಕಪ್ ಕಲಾಕಾರರು ಈ ಎರಡೂ ವಿಧಾನಗಳನ್ನು ಬಳಸುತ್ತಾರೆ. ಆದರೆ ಇದು ನಿಮ್ಮ ತ್ವಚೆಯನ್ನು ಅವಲಂಬಿಸಿರುತ್ತದೆ. ಮುಖಕ್ಕೆ ತುಂಬಾ ಕಡಿಮೆ ಗುಣಮಟ್ಟದ ಮೇಕಪ್ ವಸ್ತುಗಳನ್ನು ಬಳಸಬಾರದು. ಉತ್ತಮ ಗುಣಮಟ್ಟದ ಮೇಕಪ್ ವಸ್ತುಗಳು ಕಣ್ಣಿನ ಸುತ್ತಲಿನ ಕಪ್ಪು ಕಲೆಗಳನ್ನು ಅಡಗಿಸಲು ಸಹ ಸಹಕಾರಿಯಾಗುತ್ತವೆ.

 

ಅಲ್ಲದೇ ಮುಖಕ್ಕೆ ಇನ್ನಷ್ಟು ಕಾಂತಿಯನ್ನು ತರಲು ಒಳ್ಳೆಯ ಕನ್ಸಿಲರ್ ನ್ನು ಬಳಸಿ. ಇದು ಪೌಂಡೇಶನ್ ಕ್ರೀಮ್ ಅಥವಾ ಪೌಡರ್ (ಪುಡಿ) ಗಿಂತಲೂ ಉತ್ತಮವಾಗಿ ಮುಖದಲ್ಲಿನ ರಂಧ್ರ ಅಥವಾ ಕಪ್ಪು ಕಲೆಗಳನ್ನು ಅಡಗಿಸುತ್ತದೆ. ಅಲ್ಲದೇ ನೀವು ರಾತ್ರಿ ಚೆನ್ನಾಗಿ ನಿದ್ದೆ ಮಾಡದಿದ್ದರೆ ಕಣ್ಣಿನ ಕೆಳಗೆ ಕಪ್ಪು ಕಲೆಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಉತ್ತಮವಾದ ಕನ್ಸಿಲರ್ ನ್ನೇ ಬಳಸಿ.

ಸಲಹೆಗಳು :

ನಿಮ್ಮ ಮೊಯಶ್ಚರೈಸರ್ ಕ್ರೀಮ್ ನಿಮ್ಮ ತ್ವಚೆಗೆ ಅಂದರೆ ಒಣ, ಜಿಡ್ಡು, ಅಥವಾ ಸಾಮಾನ್ಯ ತ್ವಚೆ ಹೀಗೆ ನಿಮ್ಮ ತ್ವಚೆಗೆ ಸರಿಹೊಂದುತ್ತದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಮೇಕಪ್ ಪೌಂಡೇಶನ್ ಕ್ರೀಮ್ ಅಥವಾ ಪೌಡರ್ ನ್ನು ಖರೀದಿಸುವಾಗ ಅದು ನಿಮ್ಮ ತ್ವಚೆ ನೈಸರ್ಗಿಕವಾಗಿ ಕಾಂತಿಯುತವಾಗಿ ಕಾಣುವಂತೆ ಮಾಡುತ್ತವೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಎಎಂದರೆ ಅದನ್ನು ಬಳಸಿದ ಮೇಲೆ ನಿಮ್ಮ ತ್ವಚೆ ಇನ್ನಷ್ಟು ಕಳಾಹೀನವಾಗಿ ಗೋಚರಿಸಬಾರದು.

ನೀವು ಒಣ ತ್ವಚೆಯನ್ನು ಹೊಂದಿದ್ದು, ಪ್ರತಿದಿನವೂ ಮುಖಕ್ಕೆ ಹಚ್ಚುತ್ತಿದ್ದರೆ ನಿಮ್ಮ ತ್ವಚೆ ಇನ್ನಷ್ಟು ಒಣ ತ್ವಚೆಯಾಗಿ ಕಾಣಿಸಬಹುದು ಆದ್ದರಿಂದ ಇದನ್ನು ಬಳಸುವಾಗ ಎಚ್ಚರಿಕೆ ವಹಿಸಿ.

ಇಂತಹ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ನಿಮ್ಮ ತ್ವಚೆಯ ಬಗ್ಗೆ ಗಮನವಿಟ್ಟು ಅದಕ್ಕೆ ಸರಿ ಹೊಂದುವಂತೆ ಮೇಕಪ್ ನ್ನ ಮಾಡಿದರೆ ನೀವು ಕೂಡಾ ಯಾವುದೇ ತಾರೆಗಿಂತ ಕಡಿಮೆ ಇಲ್ಲ ಎನ್ನಿಸಿಕೊಳ್ಳಬಹುದು ಏನಂತೀರಿ?

English summary

How to Get a Better Complexion | Tips For Beauty | ಉತ್ತಮ ತ್ವಚೆಯನ್ನು ಪಡೆಯುವುದು ಹೇಗೆ | ಸೌಂದರ್ಯಕ್ಕಾಗಿ ಕೆಲ ಸಲಹೆಗಳು

If you ever wondered how those celebrities and girls in the magazines get their complexion looking so perfect, and yet you can never do it as well as like them. Here are a few tips and tricks to lighten your complexion!
Story first published: Thursday, February 14, 2013, 11:46 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more