For Quick Alerts
ALLOW NOTIFICATIONS  
For Daily Alerts

ಸ್ಟ್ರೆಚ್ ಮಾರ್ಕ್ಸ್ ಬೀಳಲು ಕಾರಣ ಮತ್ತು ಪರಿಹಾರ

|

ಸ್ಟ್ರೆಚ್ ಮಾರ್ಕ್ಸ್ ಮುಜುಗರ ತರಿಸುವಂತಹ ವಿಷಯವಾಗಿದೆ. ಸ್ಟ್ರೆಚ್ ಮಾರ್ಕ್ಸ್ ಹೊಟ್ಟೆಯ ಭಾಗದಲ್ಲಿ, ಕೈ ರಟ್ಟೆ ಮತ್ತು ತೊಡೆಗಳಲ್ಲಿ ಕಂಡು ಬರುತ್ತದೆ. ಸ್ಟ್ರೆಚ್ ಮಾರ್ಕ್ಸ್ ಬಂದರೆ ಮಹಿಳೆಯರಿಗೆ ಸೌಂದರ್ಯ ಸಮಸ್ಯೆ ಕೂಡ ಕಾಡುತ್ತದೆ.

ಸೀರೆ , ಸ್ಲೀವ್ ಲೆಸ್ ಸೆಲ್ವಾರ್ ಹಾಗೂ ಮಾಡರ್ನ್ ಡ್ರೆಸ್ ಧರಿಸಿದರೆ ಸ್ಟ್ರೆಚ್ ಮಾರ್ಕ್ಸ್ ಅಸಹ್ಯವಾಗಿ ಕಾಣುವುದು. ಸ್ಟ್ರೆಚ್ ಮಾರ್ಕ್ಸ್ ಬೀಳಲು ಕಾರಣಗಳಾವುವು ಹಾಗೂ ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಲು ಏನು ಮಾಡಬೇಕೆಂದು ನೋಡೋಣ ಬನ್ನಿ:

Causes And Remedies For Stretch Marks

ಗರ್ಭಿಣಿಯಾಗಿದ್ದಾಗ

ಗರ್ಭಿಣಿಯಾಗಿದ್ದಾಗ ಹೊಟ್ಟೆ ದೊಡ್ಡದಾಗುತ್ತಾ ಬಂದಂತೆ ತ್ವಚೆ ಬಿಗಿದುಕೊಳ್ಳುತ್ತದೆ ಇದರಿಂದಾಗ ಹೊಟ್ಟೆ ತುಂಬಾ ತುರಿಸುತ್ತದೆ. ಆಗ ಕೈ ಉಗುರು ತಾಗಿದರೆ ಸ್ಟ್ರೆಚ್ ಮಾರ್ಕ್ಸ್ ಬೀಳುವುದು. ಗರ್ಭಿಣಿಯರು ವಿಟಮಿನ್ ಇ ಎಣ್ಣೆಯನ್ನು ಹೊಟ್ಟೆಗೆ ಸವರಿದರೆ ಸ್ಟ್ರೆಚ್ ಮಾರ್ಕ್ಸ್ ಕಡಿಮೆಯಾಗುತ್ತದೆ.

ಜಿಮ್ಮಿಂಗ್
ಸ್ನಾಯುಗಳು ಉಬ್ಬಿಕೊಂಡು ಮಸಲ್ ಬಂದರೆ ಸ್ಟ್ರೆಚ್ ಮಾರ್ಕ್ಸ್ ಬೀಳುತ್ತದೆ. ಕೈ ರಟ್ಟೆ ಮತ್ತು ತೊಡೆಗಳಲ್ಲಿ ಸ್ಟ್ರೆಚ್ ಮಾರ್ಕ್ಸ್ ಕಂಡು ಬರುತ್ತದೆ.

ದೇಹದ ತೂಕದಲ್ಲಿ ಬದಲಾವಣೆ
ದೇಹದ ತೂಕದಲ್ಲಿ ವ್ಯತ್ಯಾಸ ಕಂಡು ಬಂದರೆ ಸ್ಟ್ರೆಚ್ ಮಾರ್ಕ್ಸ್ ಬೀಳುವುದು. ಸಣ್ಣಗಿದ್ದವರು ದಪ್ಪಗಾದರೆ, ದಪ್ಪಗಿದ್ದವರು ತೆಳ್ಳಗಾದರೆ ಸ್ಟ್ರೆಚ್ ಮಾರ್ಕ್ಸ್ ಬೀಳುವುದು.

ಒಣ ತ್ವಚೆ

ಒಣ ತ್ವಚೆ ಇರುವವರೆಗೆ ಸ್ಟ್ರೆಚ್ ಮಾರ್ಕ್ಸ್ ಬೀಳುತ್ತದೆ. ತ್ವಚೆಯಲ್ಲಿ ಮಾಯಿಶ್ಚರೈಸರ್ ಕಾಪಾಡಿಕೊಳ್ಳುವುದು ಒಳ್ಳೆಯದು.

ಸ್ಟ್ರೆಚ್ ಮಾರ್ಕ್ಸ್ ಗೆ ಪರಿಹಾರಗಳು:

ಆಹಾರ: ವಿಟಮಿನ್ ಸಿ ಮತ್ತು ಸತುವಿನಂಶವಿರುವ ಆಹಾರ ತಿನ್ನಬೇಕು.

ಲೋಳೆಸರ: ಸ್ಟ್ರೆಚ್ ಮಾರ್ಕ್ಸ್ ಬಿದ್ದ ಜಾಗಕ್ಕೆ ಲೋಳೆಸರ ಹಚ್ಚುತ್ತಾ ಬಂದರೆ ಸ್ಟ್ರೆಚ್ ಮಾರ್ಕ್ಸ್ ಕಡಿಮೆಯಾಗುವುದು.

ವಿಟಮಿನ್ ಇ ಎಣ್ಣೆ: ಗರ್ಭಿಣಿಯರು ವಿಟಮಿನ್ ಇ ಎಣ್ಣೆಯನ್ನು ಹಚ್ಚುವುದು ಒಳ್ಳೆಯದು. ಇದನ್ನು ಹಚ್ಚುವುದರಿಂದ ಸ್ಟ್ರೆಚ್ ಮಾರ್ಕ್ಸ್ ತುಂಬಾ ಬೀಳದಂತೆ ತಡೆಯಬಹುದು.

ಆಲೀವ್ ಎಣ್ಣೆ: ಸ್ಟ್ರೆಚ್ ಮಾರ್ಕ್ಸ್ ಬಿದ್ದ ಜಾಗಕ್ಕೆ ದಿನದಲ್ಲಿ ಎರಡು ಬಾರಿಯಂತೆ ಆಲೀವ್ ಎಣ್ಣೆ ಹಚ್ಚಿ. ಈ ರೀತಿ ಮಾಡುವುದರಿಂದ ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಬಹುದು.

English summary

Causes And Remedies For Stretch Marks | Tips For Skin Care | ಸ್ಟ್ರೆಚ್ ಮಾರ್ಕ್ಸ್ ಬೀಳಲು ಕಾರಣ ಮತ್ತು ಪರಿಹಾರ | ತ್ವಚೆ ಆರೈಕೆಗೆ ಕೆಲ ಸಲಹೆಗಳು

Stretch marks are truly annoying. These fine white lines on the skin not only develops during pregnancy. It is important to know that stretch marks also appear because of fluctuation of body weight. It is also said that rapid growth during puberty also forms stretch marks.Causes And Remedies For Stretch Marks, Tips For Skin Care, ಸ್ಟ್ರೆಚ್ ಮಾರ್ಕ್ಸ್ ಬೀಳಲು ಕಾರಣ ಮತ್ತು ಪರಿಹಾರ, ತ್ವಚೆ ಆರೈಕೆಗೆ ಕೆಲ ಸಲಹೆಗಳು
X
Desktop Bottom Promotion