For Quick Alerts
ALLOW NOTIFICATIONS  
For Daily Alerts

ಆರ್ಯುವೇದದ 7 ಬ್ಯೂಟಿ ಸೀಕ್ರೆಟ್ ಇಲ್ಲಿದೆ

|

ತ್ವಚೆ ರಕ್ಷಣೆ ಬೆಲೆ ಬಾಳುವ ಕ್ರೀಮ್ ಬಳಸಿದರೆ ಮಾತ್ರ ಸಾಧ್ಯ ಹಾಗೇ ನಿಲ್ಲ ! ಅನೇಕ ಸೌಂದರ್ಯವರ್ಧಕ ಗುಣಗಳು ನೈಸರ್ಗಿಕ ವಸ್ತುಗಳಲ್ಲಿವೆ. ಆದ್ದರಿಂದ ಸೌಂದರ್ಯ ಹೆಚ್ಚಿಸಲು ಅಥವಾ ಸೌಂದರ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ನಾವು ಆರ್ಯುವೇದಗಳಿಂದ ಪರಿಹಾರ ಕಂಡುಕೊಳ್ಳುವುದು ಒಳ್ಳೆಯ ಆಲೋಚನೆ ಕೂಡ ಹೌದು.

ಆರ್ಯುವೇದ ಪದ್ಧತಿಯನ್ನು ಪಾಲಿಸಿದರೆ ದೊರೆಯುವ ಅತೀ ದೊಡ್ಡ ಪ್ರಯೋಜನವೆಂದರೆ ಯಾವುದೇ ಅಡ್ಡ ಪರಿಣಾಮ ಉಂಟಾಗುವುದು. ಇಲ್ಲಿ ನಾವು 7 ಸರಳ ಟಿಪ್ಸ್ ನೀಡಿದ್ದೇವೆ. ಅವುಗಳನ್ನು ಪಾಲಿಸಿದರೆ ಕಲೆರಹಿತ, ಮೃದುವಾದ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಬಹುದು:

ನೆರಿಗೆ ತಡೆಗಟ್ಟಲು

ನೆರಿಗೆ ತಡೆಗಟ್ಟಲು

ದಿನಾವೂ ಹರಳಣ್ಣೆಯನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಮುಖ ತೊಳೆದರೆ ಮುಖದಲ್ಲಿ ಯೌವನದ ಕಳೆ ತುಂಬಾ ಕಾಲದವರೆಗೆ ಇರುತ್ತದೆ. ಅಕಾಲಿಕ ನೆರಿಗೆ ಸಮಸ್ಯೆ ಉಂಟಾಗುವುದಿಲ್ಲ.

2. ಕಲೆರಹಿತ ತ್ವಚೆ

2. ಕಲೆರಹಿತ ತ್ವಚೆ

ಕಲೆರಹಿತ ತ್ವಚೆಗಾಗಿ ದಿನಾ ಹಾಲಿನಲ್ಲಿ ಹತ್ತಿಯನ್ನು ಮುಳುಗಿಸಿ ಅದರಿಂದ ಮುಖವನ್ನು ಕ್ಲೆನ್ಸ್ ಮಾಡಬೇಕು.ಈ ರೀತಿ ಮಾಡಿದರೆ ಕಲೆ ರಹಿತ ತ್ವಚೆ ನಿಮ್ಮದಾಗುವುದು.

3. ಮಾಯಿಶ್ಚರೈಸರ್

3. ಮಾಯಿಶ್ಚರೈಸರ್

ಮೊಟ್ಟೆಯ ಬಿಳಿ, ನಿಂಬೆ ಮತ್ತು ಕಿತ್ತಳೆ ರಸ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಡಬೇಕು. ನಂತರ ಮುಖವನ್ನು ತಣ್ಣೀರಿನಿಂದ ತೊಳೆಯಬೇಕು.

 4.ಸ್ಕಿನ್ ಕಂಡೀಷನರ್

4.ಸ್ಕಿನ್ ಕಂಡೀಷನರ್

2 ಚಮಚ ಕೆನೆಗೆ 1/2 ಚಮಚ ಜೇನು ಸೇರಿಸಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಡಬೇಕು. ನಂತರ ಟವಲ್ ನೆನೆಸಿ ಅದರಿಂದ ಮುಖವನ್ನು ಉಜ್ಜಬೇಕು.

5. ಕಪ್ಪು ಚುಕ್ಕಿಗಳು

5. ಕಪ್ಪು ಚುಕ್ಕಿಗಳು

ಹಸಿ ಆಲೂಗೆಡ್ಡೆ ದಿನವೂ ಮುಖಕ್ಕೆ 10 ನಿಮಿಷ ಉಜ್ಜಿದರೆ ಮುಖದಲ್ಲಿರುವ ಕಪ್ಪು ಕಲೆಗಳು ಕಡಿಮೆಯಾಗುತ್ತದೆ.

6. ಮೃದುವಾದ ತ್ವಚೆಗಾಗಿ

6. ಮೃದುವಾದ ತ್ವಚೆಗಾಗಿ

ದಿನಾವೂ 10 ನಿಮಿಷ ಕಿತ್ತಳೆ ರಸವನ್ನು ಮುಖಕ್ಕೆ ಹಚ್ಚುತ್ತಿದ್ದರೆ ತ್ವಚೆ ಮೃದುವಾಗುತ್ತದೆ.

7. ಮುಖದಲ್ಲಿರುವ ಬೇಡದ ಕೂದಲನ್ನು ಹೋಗಲಾಡಿಸಲು

7. ಮುಖದಲ್ಲಿರುವ ಬೇಡದ ಕೂದಲನ್ನು ಹೋಗಲಾಡಿಸಲು

ಸಾಸಿವೆ ಎಣ್ಣೆ, ಅರಿಶಿಣ ಮತ್ತು ಗೋಧಿ ಹಿಟ್ಟು ಈ ವಸ್ತುಗಳನ್ನು ಮಿಶ್ರ ಮಾಡಿ ಮುಖಕ್ಕೆ ತಿಕ್ಕಿದರೆ ಬೇಡದ ಕೂದಲನ್ನು ಹೋಗಲಾಡಿಸಬಹುದು.

English summary

Ayurvedic Beauty Secret| Tips For Skin Care | ಆರ್ಯುವೇದ ಬ್ಯೂಟಿ ಸೀಕ್ರೆಟ್ | ತ್ವಚೆ ರಕ್ಷಣೆಗೆ ಟಿಪ್ಸ್

Every one get desire to have flawless. But Only few will get by nature, that means it doesn't mean others can't get flawless skin. Try one of the following Ayurveda suggestions to get the beautiful results you desire:
X
Desktop Bottom Promotion