For Quick Alerts
ALLOW NOTIFICATIONS  
For Daily Alerts

ಅಪ್ಪರ್ ಲಿಪ್ ಕಪ್ಪಿದ್ದರೆ ಈ ರೀತಿ ಮಾಡಿ

|
How to Lighten Upper Lip
ಮಹಿಳೆಯರಿಗೆ ತುಟಿಯ ಮೇಲಿನ ಚರ್ಮ ಕಪ್ಪಗಿದ್ದರೆ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಿದ್ದಂತೆ. ಹಲವರಿಗೆ ಥ್ರೆಡಿಂಗ್ ಮಾಡಿದ ನಂತರವೂ ತುಟಿಯ ಮೇಲಿನ ಚರ್ಮ ಕಪ್ಪಗೆ ಕಾಣುತ್ತಿರುತ್ತೆ. ಆದರೆ ಚಿಂತಿಸಬೇಕಿಲ್ಲ. ಅದಕ್ಕೆಂದು ಇಲ್ಲೊಂದಿಷ್ಟು ಮಾರ್ಗವಿದೆ. ಓದಿ ನೋಡಿ.ತುಟಿಯ ಮೇಲಿನ ಚರ್ಮವನ್ನು ಬೆಳ್ಳಗಾಗಿಸುವ ಕೆಲವು ಮಾರ್ಗಗಳು ಇಲ್ಲಿವೆ.

ತುಟಿಯ ಮೇಲಿನ ಕಪ್ಪು ಚರ್ಮ ಹೋಗಿಸುವ ಸಲಹೆ:

1. ತುಟಿಯ ಮೇಲಿನ ಚರ್ಮ ಕಪ್ಪಿದ್ದರೆ ನಿಂಬೆ, ಜೇನು ಅಥವಾ ಮೊಸರನ್ನು ಮಸಾಜ್ ಮಾಡಿಕೊಂಡರೆ ನೈಸರ್ಗಿಕವಾಗಿ ತ್ವಚೆ ಬ್ಲೀಚ್ ಆಗಿ ಬೆಳ್ಳಗಾಗುತ್ತದೆ.
2. ಬಾದಾಮಿ ಪೇಸ್ಟ್ ಅಥವಾ ಕಡಲೆ ಹಿಟ್ಟಿನಿಂದ ಉಜ್ಜಿಕೊಂಡರೂ ನಿರ್ಜೀವ ಚರ್ಮ ಹೋಗಿಸಿ ತ್ವಚೆ ಶುದ್ಧವಾಗಿ ಕಾಣುತ್ತೆ. ಕ್ರಮೇಣ ಕಪ್ಪೂ ಹೋಗುತ್ತೆ.
3. ಬೀಟ್ ರೂಟ್ ಜ್ಯೂಸ್ ಅಥವಾ ದಾಳಿಂಬೆರಸವನ್ನು ಹಚ್ಚಿಕೊಂಡರೂ ಈ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು.
4. ತಕ್ಷಣದ ಪರಿಹಾರ: ಮುಖಕ್ಕೆಂದು ಇರುವ ಬ್ಲೀಚನ್ನು ತುಟಿಯ ಮೇಲ್ಭಾಗಕ್ಕೆ ಹಚ್ಚಿಕೊಂಡು ಸೂಚನೆ ಪ್ರಕಾರ ತೊಳೆದುಕೊಂಡು ಫೌಂಡೇಶನ್ ಹಚ್ಚಿಕೊಳ್ಳಬಹುದು. ಇದರಿಂದ ತಕ್ಷಣವೇ ಚರ್ಮವನ್ನು ಬೆಳ್ಳಗೆ ಮಾಡಿಕೊಳ್ಳಬಹುದು. ಆದರೆ ನಿರಂತರವಾಗಿ ಈ ವಿಧಾನ ಅನುಸರಿಸುವುದು ಒಳ್ಳೆಯದಲ್ಲ. ನೈಸರ್ಗಿಕ ಮಾರ್ಗ ಹೆಚ್ಚು ಸೂಕ್ತ.

ತುಟಿಯ ಮೇಲಿನ ಚರ್ಮ ಕಪ್ಪಾಗುವುದುನ್ನು ತಡೆಯುವುದು ಹೇಗೆ?
1. ಕಾಫಿ, ಆಲ್ಕೊಹಾಲ್, ತಂಬಾಕು ಸೇವನೆಯನ್ನು ಮಾಡಿದರೆ ಹಲ್ಲು, ತುಟಿ ಮತ್ತು ತುಟಿಯ ಮೇಲಿನ ಚರ್ಮ ಕಪ್ಪಗಾಗುತ್ತದೆ. ಆದ್ದರಿಂದ ಇವನ್ನು ತ್ಯಜಿಸಿದರೆ ಕಪ್ಪಾಗುವುದನ್ನು ತಡೆಯಬಹುದು.
2. 18ಕ್ಕಿಂತ ಹೆಚ್ಚು SPF ಇರುವ ಸನ್ ಸ್ಕ್ರೀನ್ ಲೋಶನ್ ಹಚ್ಚಿಕೊಳ್ಳಬಹುದು.
3. ಹೆಚ್ಚು ನೀರನ್ನು ಕುಡಿಯಬೇಕು. ದಿನಕ್ಕೆ ಕನಿಷ್ಠ 8 ಲೋಟವಾದರೂ ನೀರಿನ ಸೇವನೆಯಿರಲಿ.
4. ತುಟಿಗಳಿಗೆ ಗಾಢ ಬಣ್ಣದ ಲಿಪ್ಸ್ ಟಿಕ್ ಗಳನ್ನು ಬಳಸಬಾರದು. ಇದು ತುಟಿಯ ಮೇಲಿನ ಚರ್ಮದ ಮೇಲೂ ಪರಿಣಾಮ ಬೀರುತ್ತೆ.

English summary

Dark Upper Lip Problem | How to Lighten Upper Lip | ತುಟಿಯ ಮೇಲಿನ ಚರ್ಮದ ಕಪ್ಪು ಹೋಗಿಸುವುದು ಹೇಗೆ

Even after the painful threading your upper may look dark, not to worry, our skin lightening tips will help. Here are some simple home remedies or quick tips that will help you lighten and brighten the skin. Take a look.
Story first published: Tuesday, November 29, 2011, 17:02 [IST]
X
Desktop Bottom Promotion