For Quick Alerts
ALLOW NOTIFICATIONS  
For Daily Alerts

ಕಾಫಿಯಲ್ಲಿದೆ ಸೌಂದರ್ಯದ ನೂರೆಂಟು ಉಪಯೋಗ

|
Coffee Beauty Recipes
ಕಾಫಿ ಕುಡಿಯಲು ಮಾತ್ರವಲ್ಲ, ತ್ವಚೆಯನ್ನು ಪೋಷಿಸಿ ಸೌಂದರ್ಯ ನೀಡಲೂ ಸಹಕಾರಿ. ಕಾಫಿ ಪುಡಿ ಬಳಕೆಯಿಂದ ಮುಖಕ್ಕೆ, ದೇಹದ ಚರ್ಮಕ್ಕೆ ಮತ್ತು ಕೂದಲಿಗೆ ಅಗತ್ಯ ಪೋಷಣೆ ನೀಡುವ ಕೆಲವು ಸಲಹೆಗಳು ಇಲ್ಲಿವೆ. ಅದೇನೆಂದು ಮುಂದೆ ತಿಳಿಯಿರಿ.

ಸೌಂದರ್ಯಕ್ಕೆ ಕಾಫಿ ಬಳಕೆಯ ಐದು ಮಾರ್ಗ:

* ಮುಖಕ್ಕೆ ಕಾಫಿ ಬಳಕೆ ಹೇಗೆ: ಒಣತ್ವಚೆಯಿದ್ದವರಿಗೆ ಕಾಫಿ ಸ್ಕ್ರಬ್ ತುಂಬಾ ಸಹಕಾರಿ. ಕಾಫಿ ಪುಡಿಯಲ್ಲಿ ಸುಕ್ಕಿನ ವಿರುದ್ಧ ಹೋರಾಡುವ ಗುಣವಿರುವುದರಿಂದ ತ್ವಚೆಗೆ ಅವಶ್ಯಕ. 3 ಚಮಚ ನುಣ್ಣನೆಯ ಕಾಫಿ ಪುಡಿಗೆ 1 ಚಮಚ ಹಾಲು ಸೇರಿಸಿ ಪೇಸ್ಟ್ ನಂತೆ ಮಾಡಿ ವೃತ್ತಾಕಾರವಾಗಿ ಮುಖಕ್ಕೆ ಮಸಾಜ್ ಮಾಡಿಕೊಂಡು ಒಣಗಿದ ನಂತರ ತಣ್ಣನೆ ನೀರಿನಿಂದ ತೊಳೆದುಕೊಂಡು ಮಾಯಿಶ್ಚರೈಸರ್ ಹಚ್ಚಿಕೊಂಡರೆ ಉತ್ತಮ ಫಲಿತಾಂಶ ಹೊಂದಬಹುದು.

* ಕಾಫಿ ಫೇಸ್ ಪ್ಯಾಕ್: ಕೋಕೊ ಪೌಡರ್ ಜೊತೆ ಕಾಫಿ ಪುಡಿ ಸೇರಿಸಿ ಹಾಲು ಮತ್ತು ಸ್ವಲ್ಪ ಬೆಲ್ಲದ ರಸ ಸೇರಿಸಬೇಕು. ಈ ಫೇಸ್ ಪ್ಯಾಕ್ ಹಾಕಿಕೊಳ್ಳುವುದರಿಂದ ತ್ವಚೆಯಲ್ಲಿನ ಸುಕ್ಕನ್ನೂ ತಡೆಯುತ್ತದೆ ಮತ್ತು ಮುಖವನ್ನು ಶುದ್ಧವಿರುವಂತೆ ನೋಡಿಕೊಳ್ಳುತ್ತದೆ.

* ಕೂದಲಿಗೆ ಕಾಫಿ ಬಳಕೆ: ಕೂದಲಿನ ಬುಡದ ಚರ್ಮಕ್ಕೆ ಬೇಕಾದ ಅನೇಕ ಅಂಶ ಕಾಫಿಯಲ್ಲಿದೆ. ಕಾಫಿ ಕೂದಲಿಗೂ ತುಂಬಾ ಒಳ್ಳೆಯದು. ಕಾಫಿ ನೈಸರ್ಗಿಕ ಕಂಡೀಶನರ್ ನಂತೆ ಕೆಲಸ ನಿರ್ವಹಿಸಿ ಕೂದಲುದುರುವಿಕೆ ತಡೆದು ಮೃದುವಾಗಿಸುತ್ತೆ. ಮೆಹಂದಿಯೊಂದಿಗೆ ಕಾಫಿ ಡಿಕಾಕ್ಷನ್ ಬೆರೆಸಿ ಹಚ್ಚಿಕೊಂಡು 2 ಗಂಟೆ ಬಿಟ್ಟರೆ ಕೂದಲಿಗೆ ಒಳ್ಳೆ ಕಲರ್ ನೊಂದಿಗೆ ಹೊಳಪೂ ಬರುತ್ತದೆ.

* ದೇಹದ ಮಸಾಜ್ ಗೆ ಕಾಫಿ: ಕೋಕೊ ಬಟರ್ ಅಥವಾ ಬೆಣ್ಣೆಯೊಂದಿಗೆ ಕಾಫಿ ಪುಡಿ ಬೆರೆಸಿ ದೇಹಕ್ಕೆ ಮಸಾಜ್ ಮಾಡಿಕೊಂಡರೆ ಬೇಗನೆ ಚರ್ಮದ ಒಳಗೆ ಈ ಅಂಶ ಸೇರಿಕೊಂಡು ತ್ವಚೆಯನ್ನು ನುಣುಪಾಗುತ್ತದೆ.

* ಕಾಫಿ ಮೆನಿಕ್ಯೂರ್ ಮತ್ತು ಪೆಡಿಕ್ಯೂರ್:
ಒಡೆದ ಹಿಮ್ಮಡಿ ಮತ್ತು ಕಪ್ಪಾದ ಮೊಣಕೈ ಮೊಣಕಾಲಿಗೂ ಕಾಫಿ ಮಸಾಜ್ ಉತ್ತಮ ಪರಿಹಾರ. ಇದರೊಂದಿಗೆ ಕೈ ಬೆರಳುಗಳ ಮಧ್ಯೆ, ಅಂಗಾಲುಗಳಿಗೆ ಕಾಫಿ ಪುಡಿ ಮಸಾಜ್ ಮಾಡಿದರೆ ಫಲಿತಾಂಶ ನಿಮಗೇ ಗೋಚರಿಸುತ್ತೆ.

English summary

Coffee Beauty Recipes | Coffee for Skin | ಕಾಫಿ ಎಂಬ ಸೌಂದರ್ಯವರ್ಧಕ | ತ್ವಚೆ ಪೋಷಣೆಗೆ ಕಾಫಿ ಬಳಕೆ

A sip of coffee will not only make your day but also your evenings by adding beauty and glow to your face. if coffee used on skin and hair have its own natural effect. Take a look at the beauty recipes using coffee that will help you get the most aspired look in a jiff.
Story first published: Monday, November 14, 2011, 17:23 [IST]
X
Desktop Bottom Promotion