For Quick Alerts
ALLOW NOTIFICATIONS  
For Daily Alerts

ವಯಸ್ಸಾದವರಂತೆ ಕಾಣದಿರಲು ಪುರುಷರಿಗೊಂದಿಷ್ಟು ಸರಳ ಸಲಹೆಗಳು

By Sushma Charhra
|

ಮಹಿಳೆಯರು ಮಾತ್ರ ಸೌಂದರ್ಯ ಪ್ರಿಯರು, ಅವರಿಗೆ ಮಾತ್ರ ಸೌಂದರ್ಯ ಕಾಳಜಿ, ಅವರು ಮಾತ್ರ ವಯಸ್ಸು, ಬ್ಯೂಟಿ, ಚರ್ಮ, ಇತ್ಯಾದಗಳ ಬಗ್ಗೆ ಕಾಳಜಿ ಹೊಂದಿರುತ್ತಾರೆ ಎಂಬ ಕಾಲ ಯಾವತ್ತೋ ಹೋಗಿಯಾಗಿದೆ. ಎಲ್ಲಾ ವಿಚಾರವೂ ಪುರುಷ ಮತ್ತು ಮಹಿಳೆ ಇಬ್ಬರಿಗೂ ಕೂಡ ಅನ್ವಯಿಸುವ ಕಾಲ ಇದು.ಪುರುಷರೂ ಕೂಡ ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತಾರೆ ಮತ್ತು ಸುಂದರವಾಗಿ ಕಾಣಲು ಏನು ಮಾಡಬೇಕು ಎಂಬ ಬಗ್ಗೆ ಚಿಂತಿಸುತ್ತಾರೆ.

ಪ್ರತಿಯೊಬ್ಬರೂ ಕೂಡ ತಮ್ಮ ಉತ್ತಮ ಮುಖವನ್ನು ಮತ್ತೊಬ್ಬರು ನೋಡಬೇಕು ಮತ್ತು ಅವರು ನಿಮ್ಮನ್ನು ಆ ಮೂಲಕ ಗುರುತಿಸಬೇಕು ಎಂದು ಬಯಸುತ್ತಾರೆ. ಪ್ರತಿ ಕ್ಷಣವೂ ನಿಮ್ಮ ತ್ವಚೆ ಹೊಳೆಯುತ್ತಿರಬೇಕು ಎಂಬ ಆಸೆ ಪುರುಷರಲ್ಲೂ ಇರುತ್ತದೆ.

ಇದಕ್ಕೆ ಕಾರಣ ಸರಳವಾದದ್ದು. ಯಾರು ತಾನೆ ಉತ್ತಮವಾದ ಲುಕ್ ಹೊಂದಿರಲು ಬಯಸುವುದಿಲ್ಲ ಹೇಳಿ? ಉತ್ತಮವಾಗಿ ಕಾಣಿಸಿಕೊಳ್ಳುವುದು ಅಂದರೆ ಅದು ನಿಮ್ಮ ಆತ್ಮವಿಶ್ವಾಸವನ್ನು ವರ್ಧಿಸಿಕೊಳ್ಳುವುದು ಮತ್ತು ನಿಮ್ಮಲ್ಲಿ ನಿಮಗೆ ಭರವಸೆ ಅಧಿಕಗೊಳ್ಳುವುದು ಎಂದರ್ಥ.

Even men wants to look staggeringly handsome & beautiful

ನೆರಿಗೆಗಳ ವಿಚಾರಕ್ಕೆ ಬರುವುದಾದರೆ ಅದನ್ನು ತಡೆಹಿಡಿಯುವುದು ಬಹಳ ಕಷ್ಟ ಎಂದೇ ಹಲವರು ಭಾವಿಸಿದ್ದಾರೆ. ಆದರೆ ನಿಜಕ್ಕೂ ಹೇಳಬೇಕೆಂದರೆ ಇದೇ ಕಾರಣಕ್ಕೆ ಮಹಿಳೆಯರು ಮಾತ್ರವಲ್ಲ ಈಗಿನ ಜಮಾನದಲ್ಲಿ ಪುರುಷರೂ ಕೂಡ ಹಲವು ರೀತಿಯ ಕಾಸ್ಮೆಟಿಕ್ ಪ್ರೊಡಕ್ಟ್ ಗಳನ್ನು ಬಳಕೆ ಮಾಡುತ್ತಾರೆ. ಇವುಗಳು ನೆರಿಗೆಗಳ ನಿವಾರಣೆಯ ಭರವಸೆ ನೀಡುತ್ತವೆಯಾದರೂ ಇವುಗಳಿಂದ ಅಡ್ಡ ಪರಿಣಾಮಗಳಾಗುವ ಸಾಧ್ಯತೆಗಳು ಅಧಿಕವಾಗಿಯೇ ಇರುತ್ತದೆ. ಹಾಗಾಗಿ ಯಾವುದೇ ಕಾಸ್ಮೆಟಿಕ್ ಗಳನ್ನು ಬಳಸದೆ ಆರೋಗ್ಯಕಾರಿಯಾದ ನೈಸರ್ಗಿಕ ವಿಧಾನದಿಂದ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದಾದರೆ ಯಾವ ವಿಧಾನವನ್ನು ಬಳಕೆ ಮಾಡಬಹುದು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಪ್ರಯೋಜನಕಾರಿಯಾಗಿದೆ.

ಹಾಗಾಗಿ ಕೆಲವು ನೈಸರ್ಗಿಕ ಆಂಟಿ-ಏಜಿಂಗ್ ಸಲಹೆಗಳನ್ನು ಪುರುಷರಿಗಾಗಿ ನೀಡುತ್ತಿದ್ದೇವೆ ಮತ್ತು ಇವುಗಳು ಈಗಾಗಲೇ ನಿಮ್ಮ ವಯಸ್ಸಿನ ಚಿಹ್ನೆಗಳು ಬೇಗನೆ ಕಾಡದಂತೆ ಮಾಡಲು ಸಹಕರಿಸುತ್ತವೆ ಎಂದು ಸಾಬೀತುಗೊಂಡಿರುವ ಪ್ರಮುಖ ಅಂಶಗಳಾಗಿವೆ.

ಜೂನ್ ಅಂದರೆ ಪುರುಷರ ಆರೋಗ್ಯದ ತಿಂಗಳಾಗಿರುವುದರಿಂದಾಗಿ ಈ ತಿಂಗಳು ನಾವು ನಿಮಗೆ ಕೆಲವು ನೈಸರ್ಗಿಕ ಸಲಹೆಗಳನ್ನು ನೀಡುತ್ತಿದ್ದೇವೆ. ಆ ಮೂಲಕ ನೀವು ಆರೋಗ್ಯವಂತರಾಗಿ, ಖುಷಿಯಾಗಿ , ಖಂಡಿತವಾಗಿ ಹ್ಯಾಂಡ್ ಸಮ್ ಆಗಿ ಕಾಣಲು ಸಾಧ್ಯವಿದೆ.

ಹಾಗಾಗಿ ಇನ್ನುಹೆಚ್ಚು ತಡ ಮಾಡದೆ ನಾವು ನೇರವಾಗಿ ವಿಷಯ ಪ್ರಸ್ತಾಪಿಸುತ್ತೇವೆ. ವಯಸ್ಸಾಗದಂತೆ ಕಾಣಲು ಏನ ಮಾಡಬೇಕು. ನೈಸರ್ಗಿಕವಾಗಿ ನಿಮ್ಮ ವಯಸ್ಸಿನ ಚಿಹ್ನೆಗಳು ನಿಮ್ಮನ್ನು ಆವರಿಸದಂತೆ ಮಾಡಲು ಏನು ಮಾಡಬಹುದು ಎಂಬ ಬಗ್ಗೆ ಕೆಲವು ಸರಳ ಸಲಹೆಗಳಿವೆ. ಅವುಗಳನ್ನು ಪಾಲಿಸಿದರೆ ಪ್ರತಿಯೊಬ್ಬ ಪುರುಷರೂ ಕೂಡ ತಮ್ಮ ವಯಸ್ಸಾಗುವಿಕೆಯನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು. ಹಾಗಂತ ವಯಸ್ಸು ನಿಂತ ನೀರಲ್ಲ. ಅದು ಸಾಗುತ್ತಲೇ ಇರುತ್ತೆ. ಆದರೆ ಅದರ ಚಿಹ್ನೆಗಳು ಬೇಗನೆ ಕಾಣಿಸಿಕೊಳ್ಳುವ ಹಾಗೆ ಆಗುವುದು ನೀವು ಮಾಡುವ ಸ್ವಯಂಕೃತ ಅಪರಾಧಗಳಿಂದ. ಆ ಬಗ್ಗೆ ನಿಮಗೆ ಜಾಗೃತಿ ಮೂಡಿಸುವ ಕೆಲಸ ಖಂಡಿತ ಈ ಲೇಖನದಲ್ಲಿ ಆಗಲಿದೆ. ಅದಕ್ಕಾಗಿ ನಾವೊಂದಿಷ್ಟು ನೈಸರ್ಗಿಕ ಸಲಹೆಗಳನ್ನು ಇಲ್ಲಿ ನೀಡುತ್ತಿದ್ದೇವೆ. ದಯವಿಟ್ಟು ಗಮನಿಸಿ.

1. ನಿತ್ಯ ಕರ್ಮಗಳಿಗೆ ಬದ್ಧರಾಗಿ

2. ಹಸಿರಿನೆಡೆಗೆ ನಿಮ್ಮ ಹೆಜ್ಜೆ ಮತ್ತು ಹೆಚ್ಚು ನೀರು ಕುಡಿಯಿರಿ

3. ಚೆನ್ನಾಗಿ ನಿದ್ರಿಸಿ

4. ಅಲ್ಕೋಹಾಲ್, ಕೆಫಿನ್ ಮತ್ತು ಧೂಮಪಾನದ ಬಗ್ಗೆ ಹಿಡಿತ ಇರಲಿ

5. ಪ್ರತಿದಿನ ವ್ಯಾಯಾಮಕ್ಕೆ ಕಟ್ಟುನಿಟ್ಟಾಗಿರಿ

1. ನಿತ್ಯ ಕರ್ಮಗಳಿಗೆ ಬದ್ಧರಾಗಿ:

ಮೊದಲ ಪ್ರಮುಖ ವಿಚಾರವೇನೆಂದರೆ, ನಿಮ್ಮ ನಿತ್ಯಕರ್ಮಗಳಿಗೆ ಪ್ರತಿದಿನ ಬದ್ಧರಾಗಿರಿ, ಯಾವುದೇ ಕಾರಣಕ್ಕೂ ತಪ್ಪಿಸಬೇಡಿ. ನೀವು ಎಷ್ಟೇ ಬ್ಯುಸಿಯಾಗಿರಬಹುದು. ಆದರೆ ಪ್ರತಿದಿನ ನಿಮಗೆ ಹೊಂದಿಕೆಯಾಗುವ ಫೇಸ್ ವಾಷ್ ನಿಂದ ಬೆಳಿಗ್ಗೆ ಎದ್ದ ಕೂಡಲೇ ಮುಖ ತೊಳೆಯುವುದು, ಮಾಯ್ಚರೈಸರ್ ಹಚ್ಚಿಕೊಳ್ಳುವುದು ಮಾಡಬೇಕು. ಕೇವಲ ಬೆಳಿಗ್ಗೆ ಮಾತ್ರವಲ್ಲ, ರಾತ್ರಿಯೂ ನೀವಿದನ್ನು ಮಾಡಲೇಬೇಕು.

ಇದು ನಿಮ್ಮ ಚರ್ಮದ ಕಾಂತಿಯನ್ನು ಮೇಲ್ದರ್ಜೆಗೆ ಕೊಂಡೊಯ್ಯುತ್ತದೆ ಮತ್ತು ಶಕ್ತಿಯುವ ನೋಟಕ್ಕೆ ನಿಮಗೆ ಸಹಕಾರ ನೀಡುತ್ತದೆ. ಪ್ರಮುಖವಾಗಿ ನಿಮ್ಮ ಚರ್ಮದ ವಿಧ ಯಾವುದು ಎಂಬುದನ್ನು ಪರೀಕ್ಷಿಸಿಕೊಳ್ಳಿ ಮತ್ತು ಅದಕ್ಕೆ ತಕ್ಕುದಾದ ಫೇಸ್ ವಾಷ್ ಆಯ್ಕೆ ಮಾಡಿ ಖರೀದಿಸಿ. ಆ ಮೂಲಕ ನಿಮ್ಮ ಚರ್ಮದ ಸೌಂದರ್ಯವನ್ನು ಕಾಪಾಡಿಕೊಳ್ಳಿ.

2. ಹಸಿರಿನೆಡೆಗೆ ನಿಮ್ಮ ಹೆಜ್ಜೆ ಮತ್ತು ಹೆಚ್ಚು ನೀರು ಕುಡಿಯಿರಿ

ಅಧ್ಯಯನಗಳು ಮತ್ತೆ ಮತ್ತೆ ಪುನರುಚ್ಚರಿಸುತ್ತಿದೆ ಏನೆಂದರೆ ನಿಮ್ಮ ಊಟದಲ್ಲಿ ಬಣ್ಣಬಣ್ಣದ ತರಕಾರಿಗಳು, ಹಣ್ಣುಗಳಿದ್ದರೆ ನಿಮ್ಮ ಆರೋಗ್ಯವು ಎಲ್ಲಾ ದೃಷ್ಟಿಕೋನದಿಂದಲೂ ಕೂಡ ಅಧ್ಬುತವಾಗಿರುತ್ತದೆ ಎಂಬುದು. ಯಾವುದು ನಿಮ್ಮ ವಯಸ್ಸಿನ ಲಕ್ಷಣಗಳನ್ನು ಕಡಿಮೆ ಮಾಡಲು ಸಹಕಾರಿ ಎಂಬ ವಿಚಾರವನ್ನೇ ಪ್ರಸ್ತಾಪಿಸುವುದೇ ಆದರೆ ವಿಟಮಿನ್ ಸಿ ಅಂಶಗಳಿಂದ ಸಮೃದ್ಧವಾಗಿರುವ ಪೇರಲೆಹಣ್ಣು, ಬೆಲ್ ಪೆಪ್ಪರ್ಗಳು, ಹೂ ಕೋಸು, ಪಪ್ಪಾಯ ಇತ್ಯಾದಿಗಳು. ಇವುಗಳು ನಿಮ್ಮ ಚರ್ಮದ ಫ್ರೀ ರ್ಯಾಡಿಕಲ್ಸ್ ಗಳ ವಿರುದ್ಧ ಹೋರಾಡುತ್ತದೆ ಮತ್ತು ಚರ್ಮದ ಸ್ಥಿತಿಸ್ಥಾಪಕತ್ವ ಗುಣವನ್ನು ಹಾಗೂ ಚರ್ಮದ ಒಟ್ಟಾರೆ ಆರೋಗ್ಯವನ್ನು ಕಾಪಾಡಲು ನೆರವಿಗೆ ಬರುತ್ತದೆ.

ಕೋಸು, ಮೊಳಕೆ ಕಾಳುಗಳು, ಬಟಾಣಿ, ಆಲೂಗಡ್ಡೆ, ಸ್ಪಿನಾಚ್ ಮತ್ತು ಸತುವಿನಿಂದ ಶ್ರೀಮಂತಗೊಂಡಿರುವ ಆಹಾರಗಳ ಸೇವನೆಯು ಚರ್ಮದ ಮರುಹುಟ್ಟಿಗೆ ಕಾರಣವಾಗುತ್ತದೆ. ಅಂದರೆ ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಿ, ರಂಧ್ರಗಳನ್ನು ಹೊಡೆದೋಡಿಸಿ ಹೊಸ ಚರ್ಮವು ಹುಟ್ಟಿಕೊಳ್ಳಲು ಇದು ಸಹಕರಿಸುತ್ತದೆ. ಹಣ್ಣುಗಳಾದ ಕಿವಿ, ಬೆಣ್ಣೆಹಣ್ಣು, ಕಲ್ಲಂಗಡಿ ಮತ್ತು ತರಕಾರಿಗಳಾದ ಟೋಮೆಟೋ, ಕ್ಯಾರೆಟ್ ಇತ್ಯಾದಿಗಳಲ್ಲಿ ವಿಟಮಿನ್ ಇ ಅಂಶವಿದ್ದು ಇವುಗಳು ಸೂರ್ಯನ ನೇರಳಾತೀತ ಕಿರಣಗಳಿಂದ ಯಾವುದೇ ಸಮಸ್ಯೆಯಾಗದಂತೆ ತಡೆಯುತ್ತದೆ.

ನಿಮ್ಮ ದೇಹದ ಬಹುದೊಡ್ಡ ಅಂಗ ಚರ್ಮವನ್ನು ಗಣನೆಗೆ ತೆಗೆದುಕೊಂಡಾಗ ಅದಕ್ಕೆ ಅಗತ್ಯವಾಗಿ ಬೇಕಾಗುವ ನೀರಿನ ಅಗತ್ಯತೆಯ ಬಗ್ಗೆ ಚಿಂತಿಸುವೇದ ಇಲ್ಲ. ಸರಿಯಾದ ಪ್ರಮಾಣದಲ್ಲಿ ನೀರನ್ನು ಸೇವಿಸುವುದರಿಂದ ನೀವು ಯೌವನಾತ್ಮಕವಾಗಿರುವ ಚರ್ಮವನ್ನು ಹೊಂದಿರಲು ಸಾಧ್ಯವಿದೆ. ಯಾಕೆಂದರೆ ಇದರ ಫಲಿತಾಂಶದಿಂದಾಗಿ ಚರ್ಮ ಸುಕ್ಕು ಗಟ್ಟುವಿಕೆ ಮತ್ತು ಚರ್ಮ ಶುಷ್ಕವಾಗುವುದನ್ನು ತಪ್ಪಿಸಬಹುದು. ಚೆನ್ನಾಗಿ ನೀರು ಕುಡಿಯುವುದರಿಂದಾಗ ಚರ್ಮದ ಜೀವಕೋಶಗಳು ಪುನಶ್ಚೇತನಗೊಳ್ಳುತ್ತದೆ ಮತ್ತು ಚರ್ಮದ ಸ್ಥಿತಿಸ್ಥಾಪಕತ್ವ ಗುಣವೂ ವೃದ್ಧಿಸುತ್ತದೆ. ಅಷ್ಟೇ ಅಲ್ಲ ಚರ್ಮವು ತೇವಾಂಶದಿಂದ ಕೂಡಿರಲು ನೆರವಾಗುತ್ತದೆ. ಸರಿಯಾಗಿ ಹೈಡ್ರೇಷನ್ ನ್ನು ದೇಹದಲ್ಲಿ ಸರಿದೂಗಿಸಿಕೊಂಡು ಇಲ್ಲದೇ ಇದ್ದರೆ ನಿಮ್ಮ ದೇಹದಿಂದ ಟಾಕ್ಸಿನ್ ಗಳನ್ನು ಹೊರ ಹಾಕಲು ಸಾಧ್ಯವಾಗುವುದಿಲ್ಲ. ಇದು ನಿಮಗೆ ಆಕ್ನೆ, ತುರಿಕೆಗಲು, ಅನಗತ್ಯವಾದ ಅಸಹ್ಯಕರವಾದ ಮತ್ತು ಸಹಿಸಿಕೊಳ್ಳಲು ಆಗದ ಕೆಲವು ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಅದು ನಿಮಗೆ ಖಂಡಿತ ಇಷ್ಟವಿಲ್ಲವೆಂದು ನಾವು ಭಾವಿಸುತ್ತಿದ್ದೇವೆ!

3. ಚೆನ್ನಾಗಿ ನಿದ್ರಿಸಿ :

ಒಂದು ದಿನ ಅಥವಾ ನಿರಂತರವಾಗಿ ಸರಿಯಾಗಿ ನಿದ್ದೆ ಮಾಡದೇ ಇದ್ದರೆ ಅದು ನಿಮ್ಮ ಮುಖದ ಮೇಲೆ ಕೂಡಲೇ ಗೋಚರವಾಗುತ್ತದೆ. 8 ತಾಸುಗಳ ಕನಿಷ್ಟ ನಿದ್ದೆಯನ್ನು ಮಾಡುವುದರಿಂದಾಗಿ ನಿಮ್ಮ ಕಣ್ಣಿನ ಭಾಗದಲ್ಲಿ ಚರ್ಮ ಜೋತುಬೀಳುವಿಕೆಯನ್ನು ತಡೆಯಬಹುದು. ಅಷ್ಟೇ ಅಲ್ಲ ಅದಕ್ಕಿಂತ ಮುಖ್ಯವಾಗಿ ನಿಮ್ಮ ಮೆದುಳನ್ನು ರಿಲ್ಯಾಕ್ಸ್ ಮಾಡಲು ಇದು ಬಹಳವಾಗಿ ಸಹಕರಿಸುತ್ತದೆ ಮತ್ತು ಚರ್ಮದ ಜೀವಕೋಶಗಳಿಗೂ ಕೂಡ ವಿರಾಮ ಸಿಗುತ್ತದೆ ಆ ಮೂಲಕ ಚರ್ಮದಲ್ಲಿ ನೆರಿಗೆಗಳಾಗುವುದನ್ನು ನಿಯಂತ್ರಿಸಿಕೊಳ್ಳಬಹುದು. ಒತ್ತಡ ರಹಿತ ಮತ್ತು ಆರಾಮದಾಯವಾಗಿರುವ ಮನಸ್ಸು ಅಂದರೆ ನಿರ್ವಿವಾದವಾಗಿ ಹೇಳಬಹುದು ಉತ್ತಮ ಚರ್ಮ ಮತ್ತು ಹೊಳೆಯುವ ತ್ವಚೆ ಎಂದು..

4. ಅಲ್ಕೋಹಾಲ್, ಕೆಫಿನ್ ಮತ್ತು ಧೂಮಪಾನದ ಬಗ್ಗೆ ಹಿಡಿತ ಇರಲಿ :

ಇದೇನು ಹೊಸ ವಿಚಾರವಲ್ಲ, ಆಲ್ಕೋಹಾಲ್ ಮತ್ತು ಕೆಫೀನ್ ಗಳ ಸೇವನೆಯು ನಿಮ್ಮ ಚರ್ಮದ ಮೇಲೆ ಎಲ್ಲರೂ ಗುರುತಿಸಬಹುದಾದ ಪರಿಣಾಮಗಳನ್ನು ಹಲವು ರೀತಿಯಲ್ಲಿ ಮಾಡುತ್ತದೆ. ಜೀವಶಾಸ್ತ್ರದ ಪ್ರಕಾರ ಅಥವಾ ಜೈವಿಕವಾಗಿ ಪ್ರಸ್ತಾಪ ಮಾಡುವುದಾದರೆ, ಆಲ್ಕೋಹಾಲ್ ಸೇವನೆಯಿಂದ ನಿಮ್ಮ ರಕ್ತದ ನಾಳಗಳ ಹಿಗ್ಗುವಿಕೆಗೆ ಅದು ಕಾರಣವಾಗುತ್ತದೆ. ನಿರಂತರವಾದ ಸೇವನೆಯು ಶಾಶ್ವತವಾಗಿ ರಕ್ತನಾಳಗಳನ್ನು ಹಾಳು ಮಾಡಬಹುದು ಮತ್ತು ಕೆಂಪಾದ , ಸ್ಪೈಡರಿ ರಕ್ತನಾಳಗಳ ಆರೋಗ್ಯವು ಕುಂದುತ್ತದೆ.

ಕೆಫೀನ್ ಅಂಶವು ನಿಮ್ಮನ್ನು ನಿರ್ಜಲೀಕರಣಗೊಳಿಸುತ್ತದೆಮತ್ತು ಮೂತ್ರವರ್ಧಕವನ್ನು ಹೆಚ್ಚು ಪ್ರತಿಕ್ರಿಯೆಗೆ ಒಳಪಡುವಂತೆ ಮಾಡುತ್ತದೆ. ಚರ್ಮದ ಜೀವಸತ್ವಗಳನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮವನ್ನು ದಿನಕಳೆದಂತೆ ಕಳೆಗುಂದಿರುವಂತೆ ಮಾಡುತ್ತಾ ಸಾಗುತ್ತೆ. ಆದರೆ, ನೀವು ಇವುಗಳಿಂದಾಗುವ ಸಮಸ್ಯೆಯನ್ನು ನಿಯಂತ್ರಿಸಬೇಕು ಅಥವಾ ಸಮಸ್ಯೆಗೇ ಆಗದಂತೆ ತಡೆಯಬೇಕು ಎಂದರೆ ಒಂದು ಈ ಅಭ್ಯಾಸಗಳನ್ನು ಬಿಡಬೇಕು ಇಲ್ಲವೇ ಅತಿಯಾಗಿ ನೀರಿನ ಸೇವನೆ ಮಾಡಬೇಕು.

ಇನ್ನೊಂದು ಪ್ರಮುಖ ವಿಚಾರ ನಿಮ್ಮ ವಯಸ್ಸನ್ನು ಕುಗ್ಗಿಸುವಂತೆ , ನಿಮ್ಮ ಸೌಂದರ್ಯವನ್ನು ಬೇಗನೆ ಹಾಳಾಗುವಂತೆ ಮಾಡುವುದು ನಿಮ್ಮ ಧೂಮಪಾನದ ಅಭ್ಯಾಸ. ಅದು ವ್ಯಕ್ತಿಯನ್ನು ಇನ್ನಿಲ್ಲದಂತೆ ಕೆಟ್ಟ ಪರಿಣಾಮಗಳಿಗೆ ದೂಡುತ್ತದೆ.ಕಾರ್ಬನ್ ಮೊನಾಕ್ಸೈಡ್ ನ್ನು ಸೇವಿಸುವುದರ ಪರಿಣಾಮ ರಕ್ತನಾಳಗಳಲ್ಲಿನ ಆಮ್ಲಜನಕದ ಮೇಲೆ ಪರಿಣಾಮ ಉಂಟಾಗುತ್ತದೆ ಮತ್ತು ಅದು ನಿಮ್ಮ ಚರ್ಮದ ಮೇಲೆ ಗೋಚರವಾಗುವಂತೆ ಮಾಡುತ್ತದೆ ಅಷ್ಟೇ ಅಲ್ಲ ಇತರೆ ಕೆಲವು ಅಂಗ ಮತ್ತು ಅಂಗಾಂಶಗಳ ಮೇಲೂ ಪರಿಣಾಮ ಉಂಟು ಮಾಡುತ್ತದೆ.ಈ ಕೆಟ್ಟ ವಿಚಾರವು ಎಲ್ಲರಿಗೂ ತಿಳಿದಿದ್ದರೂ ಕೂಡ, ಕೆಲವು ಅಭ್ಯಾಸ ಬಿಡುತ್ತಿಲ್ಲ. ಆದರೆ ಈ ಅಭ್ಯಾಸವನ್ನು ಬಿಟ್ಟರೆ ನೀವು ಇನ್ನಷ್ಟು ಸುಂದರವಾಗಿ ಕಾಣಬಹುದು ಎಂಬುದನ್ನು ಪುರುಷರು ಅರಿತರೆ ಬಹಳ ಒಳ್ಳೆಯದು. ಇದರಿಂದಾಗಿ ಅವರ ಚರ್ಮದಲ್ಲಿ ಕಾಣಿಸಿಕೊಳ್ಳುವ ನೆರಿಗೆಗಳನ್ನು ಇನ್ನಷ್ಟು ವರ್ಷಗಳ ಕಾಲ ಮುಂದಕ್ಕೆ ತಳ್ಳಬಹುದು.

5. ಪ್ರತಿದಿನ ವ್ಯಾಯಾಮಕ್ಕೆ ಕಟ್ಟುನಿಟ್ಟಾಗಿರಿ:

ವ್ಯಾಯಾಮವು ಕೇವಲ ಹೃದಯ ರಕ್ತನಾಳದ ಆರೋಗ್ಯಕ್ಕೆ ಮಾತ್ರ ಲಾಭಗಳನ್ನು ಮಾಡುವುದಿಲ್ಲ. ನಿಯಮಿತ ವ್ಯಾಯಾಮವು ನಿಮ್ಮ ಆರೋಗ್ಯಕಾಗಿ ಚರ್ಮವು ಉತ್ತಮ ರಕ್ತ ಸಂಚಾರದ ಮೂಲಕ ಪಡೆಯಲೂ ಕೂಡ ಸಹಕಾರಿಯಾಗಿದ ಮತ್ತು ಇದು ನಿಮ್ಮ ಚರ್ಮಕ್ಕೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಒದಗಿಸಿ ಆರೋಗ್ಯವಾಗಿರಲು ಸಹಕಾರಿಯಾಗಿದೆ.

ಪ್ರಾಮಾಣಿಕವಾಗಿ ಹೇಳುವುದಾದರೆ, ವ್ಯಾಯಮವು ನಿಮ್ಮ ಚರ್ಮವನ್ನು ನಿರ್ವಿಷಗೊಳಿಸಲು ಸಹಕಾರಿ. ಆದರೆ ಅದು ಚರ್ಮವನ್ನುಒಳಭಾಗದಿಂದ ಸ್ವಚ್ಛಗೊಳಿಸುತ್ತದೆ ಮತ್ತು ಸೆಲ್ಯುಲರ್ ಶಿಲಾಖಂಡರಾಶಿಗಳನ್ನು ಪ್ರಕ್ರಿಯೆಗಳಿಂದ ಹೊರನೂಕಲ್ಪಡುತ್ತದೆ. ಕೇವಲ ಹೊಳೆಯುವ ಉತ್ತಮವಾದ ಮುಖವನ್ನು ಮಾತ್ರ ಪಡೆಯುವುದಲ್ಲ, ಮಾಂಸಖಂಡಗಳ ಆರೋಗ್ಯವು ಹೆಚ್ಚಾಗಿ, ನೀವು ಸೌಂದರ್ಯ ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ.

ಪುರುಷರೇ ಒಂದು ನೆನಪಿಡಿ, ಒಳಗಿನ ಆರೋಗ್ಯವು ಚೆನ್ನಾಗಿದ್ದರೆ ಅದು ಖಂಡಿತವಾಗಲೂ ಹೊರಗಡೆ ಗೋಚರವಾಗುತ್ತದೆ. ಹಾಗಾಗಿ ನೀವು ಹೆಚ್ಚು ಭಯಪಡಬೇಡಿ ಮತ್ತು ಆದಷ್ಟು ಸುಂದರವಾಗಿ ಕಾಣಲು ಏನು ಮಾಡಬೇಕೋ ಅದಕ್ಕೆ ಸ್ವಲ್ಪ ಸಮಯ ನೀಡಿ. ಆ ಮೂಲಕ ನಿಮ್ಮ ಆತ್ಮವಿಶ್ವಾಸವನ್ನು ಎಂದಿಗೂ ಹೆಚ್ಚಿಸಿಕೊಂಡಿರಲು ಸಾಧ್ಯವಾಗುತ್ತದೆ. ನಿಮಗೆ ಈ ಬಗ್ಗೆ ಯಾವುದೇ ಗೊಂದಲ , ಪ್ರಶ್ನೆ ಅಥವಾ ಏನನ್ನೇ ಹೇಳಲು ಇಚ್ಛಿಸಿದರೆ ನಮ್ಮ ಕಮೆಂಟ್ ಮಾಡುವ ವಿಭಾಗದಲ್ಲಿ ಕಮೆಂಟ್ ಮಾಡಿ. ನಮ್ಮ ಕಮೆಂಟ್ ವಿಭಾಗವು ಯಾವಾಗಲೂ ನಿಮ್ಮ ಸಹಾಯಕ್ಕಾಗಿಯೇ ಇದೆ.

English summary

Men Can Keep Age To Just A Number With These Simple Tips

Those days are long gone when it was only the women's job to take care of their skin in order to slow down the process of ageing. Even men these days are paying a lot of attention to their appearance, and thus proving you don't really have to be "metrosexual" to care about putting your best face forward every time you step out. The reason is simple: Who doesn't want to look their best? Looking your best is directly proportional to feeling best and consequently, you're more confident than ever.
Story first published: Saturday, June 30, 2018, 9:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more