For Quick Alerts
ALLOW NOTIFICATIONS  
For Daily Alerts

  ಬ್ಯೂಟಿ ಟಿಪ್ಸ್: ಸೌಂದರ್ಯ ಪ್ರಿಯ ಪುರುಷರಿಗೆ ಒಂದಿಷ್ಟು ಸಿಂಪಲ್ ಟಿಪ್ಸ್

  By Arshad
  |

  ಸಾಮಾನ್ಯವಾಗಿ ಪುರುಷರು ತಮ್ಮ ವಯಸ್ಸನ್ನು ಮುಚ್ಚಿಡಲು ಯತ್ನಿಸುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ವಯಸ್ಸಾಗುತ್ತಿದ್ದಂತೆಯೇ ವೃದ್ಧಾಪ್ಯದ ಲಕ್ಷಣಗಳನ್ನು ತಾರುಣ್ಯದ ಲಕ್ಷಣಗಳಂತೆ ಪರಿವರ್ತಿಸುವ ಪ್ರಯತ್ನಗಳನ್ನು ಪುರುಷರು ಯತ್ನಿಸುವುದು ಮಾತ್ರ ಸುಳ್ಳಲ್ಲ. ನೆರೆದ ಕೂದಲನ್ನು ಕಪ್ಪಾಗಿಸುವುದು, ಯುವಕರು ತೊಡುವ ಟೀ-ಶರ್ಟ್ ತೊಡುವುದು ಇತ್ಯಾದಿ, ಕೆಲವರ ಪ್ರಯತ್ನವಂತೂ ಸರಿಸುಮಾರು ಮಹಿಳೆಯರಿಗೆ ಸರಿಸಮನಾಗಿಯೇ ಇರುತ್ತದೆ. ವಯಸ್ಸನ್ನು ಈ ಪರಿಯ ಯತ್ನಗಳಿಂದ ಮರೆಮಾಚಲು ಯತ್ನಿಸಿದಷ್ಟೂ ಹೆಚ್ಚು ಸ್ಪಷ್ಟವಾಗಿ ಪ್ರಕಟಗೊಳ್ಳುವ ಸಾಧ್ಯತೆಯೇ ಅಧಿಕ.

  ಹಾಗಾಗಿ ಆರೋಗ್ಯವನ್ನೇ ಉತ್ತಮವಾಗಿಸಿ ತರುಣರಂತಹ ಮೈಕಟ್ಟನ್ನು ಹೊಂದುವ ಮೂಲಕ ಮಾತ್ರ ತಾರುಣ್ಯವನ್ನು ನಿಜವಾಗಿಯೂ ಹಿಂದೆ ಬರುವಂತೆ ಮಾಡಬಹುದು. ವಿಶೇಷವಾಗಿ ಮುಖದಲ್ಲಿ ಮೂಡಿರುವ ನೆರಿಗೆಗಳನ್ನು ನಿವಾರಿಸಲು ಇಂದು ನೀಡಲಾಗಿರುವ ಸಲಹೆಗಳು ನಿಜವಾಗಿಯೂ ಕೆಲಸ ಮಾಡುವಂತಹದ್ದಾಗಿವೆ. ಆದರೆ ಇವುಗಳ ಪರಿಣಾಮ ಕಂಡುಕೊಳ್ಳಲು ಕೊಂಚ ಸಮಾಯಾವಕಾಶದ ಅಗತ್ಯವಿರುವ ಕಾರಣ ಪ್ರಯತ್ನವನ್ನು ಶ್ರದ್ಧಾಸಕ್ತಿ ಹಾಗೂ ಸತತವಾಗಿಸುವುದು ಅಗತ್ಯವಾಗಿದೆ. ಬೋಲ್ಡ್ ಸ್ಕೈ ತಂಡದಲ್ಲಿರುವ ಸೌಂದರ್ಯ ತಜ್ಞರು ನೀಡಿರುವ ಈ ಉಪಯುಕ್ತ ಸಲಹೆಗಳಲ್ಲಿ ನಿಮಗೆ ಸೂಕ್ತವಾದುದನ್ನು ಪಾಲಿಸುವ ಮೂಲಕ ವೃದ್ಧಾಪ್ಯದ ಗೆರೆಗಳನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಿ ವಯಸ್ಸಿನ ಗಡಿಯಾರದ ಮುಳ್ಳುಗಳನ್ನು ಕೆಲವಾರು ವರ್ಷಗಳಷ್ಟು ಹಿಂದೆ ತಿರುಗಿಸಲು ಸಾಧ್ಯ.

  Men's Skin Care

  ಕಿವಿಯ ಮತ್ತು ಮೂಗಿನ ಕೂದಲನ್ನು ನಿವಾರಿಸಿ

  ತಾರುಣ್ಯದ ನೋಟ ಬೇಕೆಂದಿದ್ದರೆ ಮೊದಲು ಕಿವಿಯ ಮೇಲೆ ಹಾಗೂ ಮೂಗಿನ ಒಳಗೆ ಬೆಳೆದು ಹೊರಚಾಚಿರುವ ಕೂದಲುಗಳನ್ನು ಮೊದಲು ನಿವಾರಿಸಿ. ಈ ಕೆಲಸವನ್ನು ನಿಮ್ಮ ಸ್ಥಳೀಯ ನಾಪಿತರು ನಡೆಸಬಲ್ಲರು ಅಥವಾ ಕೊಂಚ ಎಚ್ಚರಿಕೆಯಿಂದ ಮನೆಯಲ್ಲಿ ನೀವೇ ನಿವಾರಿಸಿಕೊಳ್ಳಬಹುದು. ಕಣ್ಣಿನ ಹುಬ್ಬುಗಳಿಗೆ ನೀಡುವ ಆರೈಕೆಯಂತೆಯೇ ಕಿವಿ ಮೂಗುಗಳ ಕೂದಲುಗಳನ್ನೂ ಟ್ವೀಜರ್ ಬಳಸಿ ಕತ್ತರಿಸಿಕೊಳ್ಳಬಹುದು. ಕೂದಲು ಮತ್ತು ಕಿವಿಯ ಕೂದಲುಗಳ ಇರುವಿಕೆ ನಿಮ್ಮ ವಯಸ್ಸನ್ನು ಈಗಿರುವುದಕ್ಕಿಂತಲೂ ಹತ್ತು ವರ್ಷ ಹೆಚ್ಚಿಸಲು ಕಾರಣವಾಗಬಹುದು. ಆದ್ದರಿಂದ ಆಗಾಗ ಕಿವಿ ಮತ್ತು ಮೂಗಿನ ಕೂದಲುಗಳನ್ನು ನಿವಾರಿಸಿ ಕೊಳ್ಳುತ್ತಿರಬೇಕು. ಇದಕ್ಕಾಗಿ ನೋಸ್ ಟ್ರಿಮರ್ ಹಾಗೂ ಫೇಶಿಯಲ್ ಟ್ರಿಮ್ಮರ್ ಗಳನ್ನು ಖರೀದಿಸುವುದು ಉತ್ತಮ ಆಯ್ಕೆ.

  Men's Skin Care

  ಚರ್ಮಕ್ಕೆ ಅಗತ್ಯವಾದ ಆರೈಕೆ ನೀಡಿ

  ಸಾಮಾನ್ಯವಾಗಿ ಪುರುಷರು ತಮ್ಮ ತ್ವಚೆಗೆ ಯಾವುದೇ ಆರೈಕೆ ನೀಡುವುದೇ ಇಲ್ಲ. ಪರಿಣಾಮವಾಗಿ ತ್ವಚೆ ಕಳಾರಹಿತ, ಪದರವೇಳುವಂತೆ, ತುರಿಸಿಕೊಳ್ಳುತ್ತಿರುವ ಹಾಗೂ ಗಡಸಾಗಿರುತ್ತದೆ. ವಯಸ್ಸು ಹೆಚ್ಚುತ್ತಿದ್ದಂತೆಯೇ ಚರ್ಮದ ಗಡಸುತನವೂ ಹೆಚ್ಚುತ್ತಲೇ ಹೋಗುವ ಕಾರಣ ಪುರುಷರಿಗೂ ತ್ವಚೆಯ ಆರೈಕೆಯನ್ನು ನಿರ್ವಹಿಸುವುದು ಅಗತ್ಯ. ಇದರ ಪ್ರಥಮ ಹಂತವೆಂದರೆ ನಿತ್ಯವೂ ಉತ್ತಮ ಗುಣಮಟ್ಟದ ತೇವಕಾರಕ (ಮಾಯಿಶ್ಚರೈಸರ್) ಹಚ್ಚಿಕೊಳ್ಳುವುದು. ನಂತರ ಕ್ಲೀಂನ್ಸಿಂಗ್ (ಸ್ವಚ್ಛಗೊಳಿಸುವುದು) ಹಾಗೂ ಟೋನಿಂಗ್ (ಟೋನರ್ ದ್ರಾವಣವನ್ನು ಹಚ್ಚಿಕೊಳ್ಳುವುದು) ಅನ್ನು ವಾರಕ್ಕೆರಡು ಅಥವಾ ಮೂರು ಬಾರಿಯಾದರೂ ನಿರ್ವಹಿಸಬೇಕು. ಇದರಿಂದ ವಯಸ್ಸಿನ ಲಕ್ಷಣಗಳನ್ನು ನಿವಾರಿಸಿ ತಾರುಣ್ಯ ಪ್ರಕಟಿಸಲು ನೆರವಾಗುತ್ತದೆ.

  Men's Skin Care

  ಕಣ್ಣುಗಳ ಕೆಳಗಿನ ಕಪ್ಪು ವರ್ತುಲಗಳನ್ನು ನಿಯಂತ್ರಿಸಿ

  ಪುರುಷರಲ್ಲಿಯೂ ಕಪ್ಪು ವರ್ತುಲಗಳು ಕಾಣಿಸಿಕೊಂಡು ಈಗಿರುವ ವಯಸ್ಸನ್ನು ಇನ್ನಷ್ಟು ಹೆಚ್ಚಿಸುತ್ತವೆ. ಕಪ್ಪು ವರ್ತುಲಗಳನ್ನು ನಿವಾರಿಸಲು ಕೆಲವಾರು ವಿಧಾನಗಳಿವೆ. ಮನೆಯಲ್ಲಿಯೇ ಸುಲಭವಾಗಿ ನಿರ್ವಹಿಸುವ ವಿಧಾನವೆಂದರೆ ಹಸಿ ಆಲುಗಡ್ಡೆ ಅಥವಾ ಎಳೆ ಸೌತೆಕಾಯಿಯ ಬಿಲ್ಲೆಯನ್ನು ಈ ವರ್ತುಲಗಳ ಮೇಲಿರಿಸುವುದು. ಸಾಧ್ಯವಾದರೆ ವೃತ್ತಿಪರರ ನೆರವನ್ನು ಪಡೆಯಬಹುದು. ಆದರೆ ಈ ವರ್ತುಲಗಳು ಕಣ್ಮರೆಯಾಗಲು ಕೊಂಚ ಹೆಚ್ಚೇ ಸಮಯ ತೆಗೆದುಕೊಳ್ಳುವ ಕಾರಣ ಕೊಂಚ ತಾಳ್ಮೆ ವಹಿಸುವುದು ಅಗತ್ಯ. ಕ್ರಮೇಣ ಈ ವರ್ತುಲಗಳು ಇಲ್ಲವಾಗುತ್ತವೆ ಹಾಗೂ ತಾರುಣ್ಯದ ವಯಸ್ಸನ್ನು ಮತ್ತೆ ಹಿಂದೆ ಪಡೆಯುವಂತಾಗುತ್ತದೆ.

  Men's Skin Care

  ಸನ್ ಸ್ಕ್ರೀನ್ ಬಳಸಿ

  ಸಾಮಾನ್ಯವಾಗಿ ಬಿಸಿಲಿಗೆ ಹೊರಹೋಗುವ ಮೊದಲು ಪುರುಷರು ಸನ್ ಸ್ಕ್ರೀನ್ ಹಾಕಿಕೊಳ್ಳುವುದನ್ನು ಮರೆತೇ ಬಿಡುತ್ತಾರೆ. ನಿತ್ಯದ ಕೆಲಸದ ಆಲೋಚನೆಗಳು ಈ ಮರೆವಿಗೆ ಪ್ರಮುಖ ಕಾರಣ. ಆದರೆ ಬಿಸಿಲಿನ ಝಳದಿಂದ ಚರ್ಮ ಕಪ್ಪಗಾಗುವಷ್ಟು ಬೇರಾವ ಕಾರಣದಿಂದಲೂ ಆಗುವುದಿಲ್ಲ. ಬಿಸಿಲಿಗೆ ಕಪ್ಪಗಾದ ತ್ವಚೆ ವಯಸ್ಸನ್ನು ನೇರವಗಿ ಹತ್ತಾರು ವರ್ಷ ಮುಂದೆ ಕೊಂಡು ಹೋಗುತ್ತವೆ. ಹೀಗಾಗಬಾರದು ಎಂದಿದ್ದರೆ ಪ್ರತಿಬಾರಿ ಬಿಸಿಲಿಗೆ ಹೋಗುವ ಮುನ್ನ ಉತ್ತಮ ಗುಣಮಟ್ಟದ ಸನ್ ಸ್ಕ್ರೀನ್ ದ್ರಾವಣವನ್ನು ವರ್ಷದ ಎಲ್ಲಾ ದಿನಗಳಲ್ಲಿಯೂ ಹಚ್ಚಿಕೊಂಡೇ ಹೋಗಬೇಕು. ಇದರೊಂದಿಗೆ ತೇವಕಾರಕವನ್ನೂ ಹಚ್ಚಿಕೊಳ್ಳಲು ಮರೆಯಬಾರದು.

  ಬೆನ್ನಿನ ಮೊಡವೆಗಳು

  ವಯಸ್ಸಾಗುತ್ತಿದ್ದಂತೆಯೇ ಪುರುಷರ ಬೆನ್ನಿನ ಮೇಲೆಯೂ ಮೊಡವೆಗಳು ಮೂಡುತ್ತವೆ. ಸಾಮಾನ್ಯವಾಗಿ ಬಟ್ಟೆಗಳು ಈ ಮೊಡವೆಗಳನ್ನು ಮರೆಮಾಚುವ ಕಾರಣ ಹೆಚ್ಚಿನ ಪುರುಷರು ಈ ಬಗ್ಗೆ ಹೆಚ್ಚಿನ ಅಸ್ಥೆ ವಹಿಸುವುದಿಲ್ಲ. ಆದರೆ ಮೊಡವೆಗಳ ಇರುವಿಕೆ ವೃದ್ದಾಪ್ಯದ ಲಕ್ಷಣಗಳನ್ನು ಪ್ರಕಟಿಸಲು ಕಾರಣವಾಗಬಹುದು. ಈ ಮೊಡವೆಗಳನ್ನು ನಿವಾರಿಸಲು ಮನೆಮದ್ದುಗಳೇ ಸಾಕು. ಮುಖದ ಮೊಡವೆಗಳಂತೆಯೇ ಬೆನ್ನಿನ ಮೊಡವೆಗಳೂ ಸುಲಭವಾಗಿ ಗುಣವಾಗುವುದಿಲ್ಲ. ಹಾಗೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತವೆ. ಆದ್ದರಿಂದ ಮುಖದ ಮೊಡವೆ ನಿವಾರಿಸಲು ಬಳಸುವ ವಿಧಾನದಲ್ಲಿ ನಿಮಗೆ ಸೂಕ್ತವಾದುದನ್ನು ಆಯ್ದುಕೊಂಡು ಬೆನ್ನಿನ ಮೊಡವೆಗಳಿಗೂ ಅನುಸರಿಸುವ ಮೂಲಕ ಈ ಮೊಡವೆಗಳು ಮಾಯವಾಗುತ್ತವೆ ಹಾಗೂ ತಾರುಣ್ಯ ಆಗಮನವಾಗುತ್ತದೆ.

  Men's Skin Care

  ಗಡ್ಡಮೀಸೆಗಳನ್ನು ಆಗಾಗ ಟ್ರಿಮ್ ಮಾಡಿಕೊಳ್ಳುತ್ತಿರಿ

  ವಯಸ್ಸಿನ ಲಕ್ಷಣಗಳನ್ನು ಸ್ಪಷ್ಟವಾಗಿ ಪ್ರಕಟಿಸುವಲ್ಲಿ ತಲೆಗೂದಲಿನ ಜೊತೆಗೇ ಗಡ್ಡಮೀಸೆಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಗಡ್ಡ ಮೀಸೆಗಳ ಹೊರತಾಗಿಯೂ ಮುಖದಲ್ಲಿ ನವಿರಾದ ರೋಮಗಳು ಕಾಣಿಸಿಕೊಳ್ಳಬಹುದು. ಗಡ್ಡ ಮೀಸೆಗಳನ್ನು ಒಪ್ಪ ಓರಣವಾಗಿಸುವ ಜೊತೆಗೇ ಈ ರೋಮಗಳನ್ನು ನಿವಾರಿಸುವುದೂ ಅಗತ್ಯವಾಗಿದೆ. ಅಷ್ಟೇ ಅಲ್ಲ, ಮೀಸೆಯನ್ನು ಮೇಲ್ತುಟಿಯ ಮೇಲಿನ ಅಂಚು ದಾಟದಂತೆ ಕತ್ತರಿಸಿಕೊಳ್ಳುವುದು ಸಹಾ ಅಗತ್ಯ. ಮೇಲ್ತುಟಿಯನ್ನು ಆವರಿಸಿರುವ ಮೀಸೆ ವೃದ್ಧಾಪ್ಯದ ಲಕ್ಷಣವಾಗಿದೆ.

  English summary

  Men's Skin Care: Tips To Look Younger In Appearance

  Though men don't admit it often, they do make sure to hide their actual age and would like to appear years younger, just like the women folk do. Age is not revealed by looks and to hide it, the right way is to portray an improved physical appearance. Men, improve your physical appearance now with these skincare tips that are easy to execute and actually work.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more