For Quick Alerts
ALLOW NOTIFICATIONS  
For Daily Alerts

ಕ್ಷಣಾರ್ಧದಲ್ಲಿ ಪುರುಷರ ತ್ವಚೆಯ ಕಾಂತಿ ಹೆಚ್ಚಿಸುವ ಬಿಬಿ ಕ್ರೀಮ್!

|

ಸುಮಾರು ಇತ್ತೀಚಿನವರೆಗೂ ಸೌಂದರ್ಯ ಪ್ರಸಾಧನಗಳ ಜಾಹೀರಾತುಗಳು ಕೇವಲ ಮಹಿಳೆಯರಿಗಾಗಿಯೇ ಅನ್ವಯವಾಗುತ್ತಿದ್ದವು. ಇಂದು ಮಹಿಳೆಯರ ಸೌಂದರ್ಯಸಾಧನಗಳ ಭರಾಟೆ ತಗ್ಗಿಲ್ಲವಾದರೂ ಅಲ್ಲಲ್ಲಿ ಪುರುಷರಿಗಾಗಿಯೇ ಪ್ರತ್ಯೇಕವಾದ ಸೌಂದರ್ಯ ಪ್ರಸಾದನಗಳ ಜಾಹೀರಾತುಗಳು ಮೂಡಿಬರುತ್ತಿವೆ. ಇದಕ್ಕೆ ಕಾರಣ ಪುರುಷರಲ್ಲಿಯೂ ಜಾಗೃತಗೊಂಡಿರುವ ಸೌಂದರ್ಯಪ್ರಜ್ಞೆ.

ವಿದೇಶಗಳಲ್ಲಿ ಬಹು ಹಿಂದಿನಿಂದಲೂ ಉಪಯೋಗಿಸಲ್ಪಡುತ್ತಿದ್ದರೂ ಇತ್ತೀಚೆಗೆ ಭಾರತದಲ್ಲಿಯೂ ಜನಪ್ರಿಯಗೊಳ್ಳುತ್ತಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮನ್ನು ಉತ್ತಮವಾಗಿ ಪ್ರಸ್ತುತಗೊಳಿಸುವಲ್ಲಿ ಈ ಪ್ರಸಾಧನಗಳ ಪಾತ್ರ ಹಿರಿದಾಗಿದ್ದು ಮುಖಕ್ಕೆ ಮೇಕಪ್ ಅಥವಾ ಫೌಂಡೇಶನ್ ಅಗತ್ಯವಿಲ್ಲದೇ ಗೌರವರ್ಣ ಮತ್ತು ಕಾಂತಿಯುತ ವದನ ಪಡೆಯಲು ನೆರವಾಗುತ್ತದೆ.

Can guys use BB Cream?

ಗೌರವರ್ಣ ಮತ್ತು ಮುಖದ ಕಾಂತಿ ಹೆಚ್ಚಿಸುವ ಕ್ರೀಮ್‌ಗಳ ಸಮೂಹವಾದ ಬಿಬಿ ಕ್ರೀಮ್ ಅಥವಾ ಬ್ಲೆಮಿಶ್ ಬಾಮ್ ಕ್ರೀಮ್ ಕರೆಯಲ್ಪಡುವ ಈ ಪ್ರಸಾಧನಗಳು ಪುರುಷರಿಗೆ ಇಂದಿನ ದಿನಗಳಲ್ಲಿ ಅನಿವಾರ್ಯವಾಗಿವೆ. ಏಕೆ ಅನಿವಾರ್ಯವೆಂದರೆ ಈ ಪ್ರಸಾಧನಗಳನ್ನು ಬಳಸುವುದರಿಂದ ಮುಖದ ಚರ್ಮಕ್ಕೆ ಇದು ಆರ್ದ್ರತೆ, ಪೋಷಣೆ ನೀಡುವುದರ ಜೊತೆಗೆ ಬಿಸಿಲಿನ ಪ್ರಖರ ಕಿರಣಗಳಿಂದ ರಕ್ಷಣೆಯನ್ನು ನೀಡುತ್ತದೆ. ಪುರುಷರಿಗಾಗಿ ಹೇಳಿ ಮಾಡಿಸಿದ ಟಾಪ್ ಬ್ಯೂಟಿ ಟಿಪ್ಸ್

ಜೊತೆಗೇ ಮುಖದ ಕಲೆಗಳನ್ನು ನಿವಾರಿಸಲು ಮತ್ತು ಸಹಜ ಕಾಂತಿ ಹೆಚ್ಚಿಸಲೂ ನೆರವಾಗುತ್ತದೆ. ಇದಕ್ಕೆ ಹೆಚ್ಚಿನ ಶ್ರಮಪಡುವ ಅಗತ್ಯವೇನೂ ಇಲ್ಲ. ನಿಮಗೆ ಸೂಕ್ತವಾದ ಕ್ರೀಮ್ ಅಥವಾ ಲೇಪನವನ್ನು ಮುಖದ ಮೇಲೆ ಹಚ್ಚಿ ಸಮನಾಗಿ ಬರುವಂತೆ ತೆಳುವಾಗಿ ಲೇಪಿಸಿಕೊಂಡರೆ ಸಾಕು. ಚರ್ಮದ ಪೋಷಣೆಗೆ ಇನ್ನೇನೂ ಮಾಡಬೇಕಾಗಿಲ್ಲ.

ಈ ಪ್ರಸಾದನಗಳ ಉಪಯೋಗ ಮೊದಲಿಗೆ ಜರ್ಮನಿಯಲ್ಲಿ ಪ್ರಾರಂಭವಾಯಿತು. ಇದಕ್ಕೂ ಮೊದಲು ಪುರುಷರ ಚರ್ಮದ ಪೋಷಣೆಗಾಗಿ ಐದಾರು ರೀತಿಯ ಕ್ರೀಂ ಮತ್ತು ಪೌಡರುಗಳನ್ನು ಹಚ್ಚಿಕೊಳ್ಳಬೇಕಿತ್ತು. ಇದು ದಪ್ಪನೆಯ ಲೇಪನದಂತೆ ಮುಖದ ಮೇಲೆ ಕುಳಿತು ನಾಟಕಕ್ಕೆ ಬಣ್ಣ ಹಚ್ಚಿಕೊಂಡಂತೆ ಕಾಣಿಸುತ್ತಿತ್ತು, ಇದರ ಉಪಯೋಗವನ್ನು ಸರಳಗೊಳಿಸಲು ಜರ್ಮನಿಯ ಚರ್ಮತಜ್ಞರು ಇವನ್ನು ಎಲ್ಲವೂ ಒಂದರಲ್ಲೇ ಇರುವ ಕ್ರೀಮುಗಳ ಅನ್ವೇಷಣೆಯಲ್ಲಿ ತೊಡಗಿದರು.

Can guys use BB Cream?

ಹೆಚ್ಚಿನವುಗಳಲ್ಲಿ ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುವ ಸಾಮಾಗ್ರಿಗಳನ್ನೂ ಅಳವಡಿಸಲಾಗಿರುವುದರಿಂದ ಪ್ರತ್ಯೇಕವಾದ ಸನ್ ಸ್ಕ್ರೀನ್ ಅಗತ್ಯವಿಲ್ಲ. ಫಲಿತಾಂಶವಾಗಿ ಇಂದು ಹಲವು ಉತ್ತಮ ಬಿಬಿ ಕ್ರೀಮುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವುಗಳ ಬಗ್ಗೆ ಕೆಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಡೊಳ್ಳು ಹೊಟ್ಟೆಯ ಪುರುಷರಿಗೆ ಇದೋ ಕಿವಿಮಾತು

ಬಿಬಿ ಕ್ರೀಮ್, ಏನಿದು?

ಪುರುಷರ ಚರ್ಮಕ್ಕೆ ಫೌಂಡೇಶನ್, ಸನ್ ಸ್ಕ್ರೀನ್ ಮತ್ತು ಪೋಷಣೆಯನ್ನು ಏಕಕಾಲದಲ್ಲಿ ನೀಡಲು ಸಿದ್ಧಬಳಕೆಗಾಗಿ ರೂಪಿಸಿರುವ ಸೌಂದರ್ಯ ಪ್ರಸಾಧನವಾಗಿದೆ. ಇದು ಚರ್ಮದಲ್ಲಿ ಎಣ್ಣೆಯಂಶವನ್ನು ಕಡಿಮೆಗೊಳಿಸಿ ಗೌರವರ್ಣ ನೀಡುವುದರ ಜೊತೆಗೇ ನೆರಿಗೆಗಳು ಬಾರದಂತೆ ತಡೆದು ಚರ್ಮಕ್ಕೆ ಪೋಷಣೆಯನ್ನು ನೀಡುತ್ತದೆ. ಇಂದು ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಚರ್ಮಗಳಿಗಾಗಿ ವಿವಿಧ ರೀತಿಯ ಪ್ರಸಾಧನಗಳು ಲಭ್ಯವಿವೆ.

ಈ ಬಿಬಿ ಕ್ರೀಮ್ ಗಳಲ್ಲಿ ಏನಿದೆ?

ಪ್ರಮುಖವಾಗಿ ಈ ಕ್ರೀಮುಗಳಲ್ಲಿ ಆಂಟಿ ಆಕ್ಸಿಡೆಂಟುಗಳಿದ್ದು ನೆರಿಗೆ ಮೂಡುವುದನ್ನು ಮುಂದೂಡಲು ನೆರವಾಗುತ್ತವೆ. ಇನ್ನೊಂದು ಪ್ರಮುಖವಾದ ಅಂಶವೆಂದರೆ ಲಿಕೋರೈಸ್ (Licorice) ಎಂಬ ರಾಸಾಯನಿಕ, ಇದು ಚರ್ಮದ ಬಣ್ಣವನ್ನು ತಿಳಿಗೊಳಿಸಲು ನೆರವಾಗಿ ಗೌರವರ್ಣ ಪಡೆಯಲು ನೆರವಾಗುತ್ತದೆ. ಇನ್ನಿತರ ಅಂಶಗಳು ಚರ್ಮಕ್ಕೆ ನುಣುಪುತನ ಮತ್ತು ಕಾಂತಿಯನ್ನು ನೀಡುತ್ತವೆ.

Can guys use BB Cream?

ಈ ಕ್ರೀಮುಗಳನ್ನು ಪುರುಷರು ಏಕೆ ಬಳಸಬೇಕು?

ಸಾಮಾನ್ಯವಾಗಿ ಪುರುಷರ ಚರ್ಮ ಗಾಢವರ್ಣದ್ದಾಗಿದ್ದು ಒರಟಾಗಿಯೂ ಇರುತ್ತದೆ. ಈ ಕ್ರೀಮುಗಳನ್ನು ಬಳಸುವುದರಿಂದ ಕೆಲವೇ ವಾರಗಳಲ್ಲಿ ಚರ್ಮ ತನ್ನ ಸಹಜ ಕಾಂತಿ ಮತ್ತು ತಾಜಾತನವನ್ನು ಪಡೆದು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಇದು ಮುಖದ ಚರ್ಮದ ರಂಧ್ರಗಳನ್ನು ಮುಚ್ಚತ್ತದೆಯೇ?

ವಾಸ್ತವವಾಗಿ ಮುಖದ ಮೇಕಪ್ ಚರ್ಮವನ್ನು ಪೂರ್ಣವಾಗಿ ಆವರಿಸುವುದರಿಂದ ಚರ್ಮದ ಸೂಕ್ಷ್ಮರಂಧ್ರಗಳೂ ಮುಚ್ಚಲ್ಪಡುತ್ತವೆ. ಆದರೆ ಬಿಬಿ ಕ್ರೀಮ್ ಗಳು ಈ ರಂಧ್ರಗಳನ್ನು ಮುಚ್ಚದೇ ಪೋಷಣೆಯನ್ನು ನೀಡುವುದರಿಂದ ಚರ್ಮ ಸಹಜವಾದ ಸ್ರವಿಕೆ ಮತ್ತು ಬೆವರುವಿಕೆಯನ್ನು ಪಡೆಯುವುದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ. ಅಲ್ಲದೇ ಇವುಗಳನ್ನು ಹಚ್ಚಲು ಹೆಚ್ಚು ಸಮಯ ಬೇಕಾಗಿಲ್ಲವಾದುದರಿಂದ ಎಲ್ಲಿಯಾದರೂ ಹೊರಡಲು ಶೀಘ್ರವಾಗಿ ತಯಾರಾಗಬಹುದು.

Can guys use BB Cream?

ಇದು ಎಲ್ಲಾ ವಯಸ್ಸಿನವರಿಗೂ ಸೂಕ್ತವೇ?

ಚಿಕ್ಕವಯಸ್ಸಿನ ಮಕ್ಕಳನ್ನು ಹೊರತುಪಡಿಸಿ ಹದಿಹರೆಯ ದಾಟಿದ ಎಲ್ಲರಿಗೂ ಈ ಕ್ರೀಮುಗಳು ಸುರಕ್ಷಿತವಾಗಿವೆ. ಇದು ಮುಖಕ್ಕೆ ಫೌಂಡೇಶನ್ ನಂತೆ ಕಾರ್ಯನಿರ್ವಹಿಸುವುದರಿಂದ ವಯಸ್ಸಾದವರೂ ಉಪಯೋಗಿಸಿ ನವತಾರುಣ್ಯ ಪಡೆಯಬಹುದು.

English summary

Can guys use BB Cream?

Today, BB creams are in vogue. They are known as beauty balms. Though they were used in some parts of the world since decades, recently they have become a rage in the Indian market after they started catering to the male cosmetics market. recently they have become a rage in the Indian market after they started catering to the male cosmetics market.
Story first published: Thursday, July 2, 2015, 15:54 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more