For Quick Alerts
ALLOW NOTIFICATIONS  
For Daily Alerts

30 ವರ್ಷ ದಾಟಿದವರಿಗಾಗಿ ಉತ್ತಮ ಮೇಕಪ್ ಸಲಹೆಗಳು

By Sushma Charhra
|

ಸಾಮಾನ್ಯವಾಗಿ 20 ರ ಹರೆಯದಲ್ಲಿ ನೀವು ಹೇಗೆ ಮೇಕಪ್ ಮಾಡಿಕೊಂಡರೂ ಚೆನ್ನಾಗಿಯೇ ಕಾಣುತ್ತೀರಿ. ಆದರೆ 30 ನೇ ವಯಸ್ಸಿಗೆ ಕಾಲಿಡುತ್ತಿದ್ದಂತೆ ನಿಮ್ಮ ವಯಸ್ಸು ಇತರರಿಗೆ ತಿಳಿಯುವಂತೆ ಆಗುತ್ತಿದೆ. ವಯಸ್ಸಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ವಯಸ್ಸಾದರೂ ಕೂಡ ಹರೆಯದವರಂತೆ ಕಾಣಲು ಸಾಧ್ಯವಿದೆ. ಅದಕ್ಕಾಗಿ ನೀವು ಕೆಲವು ಮೇಕಪ್ ಸೂತ್ರಗಳನ್ನು ಅನುಸರಿಸಿಕೊಳ್ಳಬೇಕು ಅಷ್ಟೇ. 30 ನೇ ವಯಸ್ಸಾಗುತ್ತಿದೆ ಅನ್ನುವುದನ್ನು ಗುರುತಿಸುವಂತೆ ಮಾಡುವ ಪ್ರಾರಂಭಿಕ ಕಾಲ. ಕೆಲವೊಂದು ಮೇಕಪ್ ನ ನಿಯಮಗಳ ಖಂಡಿತವಾಗಲೂ ನಿಮ್ಮನ್ನ ಬಾಹ್ಯವಾಗಿ ಅಂದವಾಗಿ ಕಾಣುವಂತೆ ಮತ್ತು 30 ನೇ ವಯಸ್ಸು ಆಗಿದೆ ಎಂಬುದನ್ನು ಗುರುತಿಸಲು ಸಾಧ್ಯವಾಗದಂತೆ ಮಾಡುತ್ತದೆ.

ಸಾಕಷ್ಟು ಬೋಲ್ಡ್ ಆಗಿರುವ ಮತ್ತು ಯೌವನಾತ್ಮಕವಾಗಿರುವ ಲುಕ್ ನೀಡುವಂತೆ ಮಾಡಲು ಕೆಲವು ಮೇಕಪ್ ನ ತಂತ್ರಗಾರಿಕೆ ನಿಮ್ಮ ನೆರವಿಗೆ ಬರುತ್ತದೆ. ಇದು ಪ್ರಮುಖವಾಗಿ ನೀವು ಮೇಕಪ್ ನ ತಂತ್ರಗಾರಿಕೆಯನ್ನು ಹೇಗೆ ಅರ್ಥೈಸಿಕೊಳ್ಳುತ್ತೀರಿ ಮತ್ತು ಅಳವಡಿಸಿಕೊಳ್ಳುತ್ತೀರಿ ಎಂಬುದನ್ನು ಆಧರಿಸಿರುತ್ತದೆ.

makeup tips in kannada

ಟ್ರಿಕ್ಸ್ ಮತ್ತು ನಿಯಮಗಳು ನಿಮ್ಮನ್ನು 30 ರ ಹರೆಯದಲ್ಲೂ 20 ಹರೆಯದವರಂತೆ ಕಾಣಿಸುವಂತೆ ಮಾಡುತ್ತದೆ. ಅದಕ್ಕಾಗಿ ಕೆಲವು ಮೇಕಪ್ ನ ಸಲಹೆಗಳನ್ನು ಸಮಯ ನೀಡಿ ಪಾಲಿಸಬೇಕು ಅಷ್ಟೇ. ಹಾಗಾದ್ರೆ 30 ರ ಹರೆಯದಲ್ಲಿ ಮೇಕಪ್ ಹೇಗಿರಬೇಕು ಮತ್ತು ಯಾವೆಲ್ಲ ಮೇಕಪ್ ತಂತ್ರಗಳನ್ನು ಪಾಲಿಸಬೇಕು ಎಂಬ ಬಗ್ಗೆ ಈ ಲೇಖನವು ನಿಮಗೆ ಸೂಚನೆಗಳನ್ನು ನೀಡಲಿದೆ. ಅದನ್ನು ತಿಳಿಯಲು ಮುಂದೆ ಓದಿ....

ಫೌಂಡೇಷನ್ ಅನ್ವಯಿಸಿಕೊಳ್ಳುವ ಬಗೆ

ಫೌಂಡೇಷನ್ ಕೇವಲ ನಿಮ್ಮ ಮುಖದ ಮೇಕಪ್ಪಿನ ಬೇಸ್ ಗಾಗಿ ಮಾತ್ರವಲ್ಲ ನಿಮ್ಮ ತ್ವಚೆ ಬಿಳಿಯಾಗಿ ಕಾಣಲು ಮತ್ತು ದೋಷರಹಿತವಾಗಿ ಕಾಣುವ ಉದ್ದೇಶದಿಂದಲೂ ಬಳಸಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಲಭ್ಯವಾಗುವ ಹಲವಾರು ರೀತಿಯ ಫೌಂಡೇಷನ್ ಗಳಲ್ಲಿ ಕೇವಲ ನಿಮ್ಮ ತ್ವಚೆಯನ್ನು ಬಿಳಿಗೊಳಿಸಿಕೊಳ್ಳಲು ಮಾತ್ರವಲ್ಲ, ನಿಮ್ಮ ಚರ್ಮವು ವಯಸ್ಸಾದಂತೆ ಕಾಣುವುದು ಸೇರಿದಂತೆ ಹಲವು ರೀತಿಯ ಕಲೆ ಇತರೆ ಸಮಸ್ಯೆಗಳನ್ನು ಮರೆಮಾಚಲು ಕೂಡ ಬಳಕೆ ಮಾಡುವಂತೆ ಇರುತ್ತದೆ.

ಬೇಸಿಕ್ ಪೌಂಡೇಷನ್ ಗಳು ಹೆಚ್ಚಾಗಿ ಬಿಬಿ ಮತ್ತು ಸಿಸಿ ಕ್ರೀಮ್ ಗಳಲ್ಲಿ ಲಭ್ಯವಿರುತ್ತದೆ. ತುಂಬಾ ಬೇಗನೆ ಸೌಮ್ಯಪಾದ ಅಡಿಪಾಯ ಹಾಕಿಕೊಳ್ಳಬೇಕು ಎಂದು ಬಯಸಿದಾಗ ಇವುಗಳು ನಿಮಗೆ ಉತ್ತಮವಾಗಿರುತ್ತದೆ ಅಥವಾ ನೀವು ರೆಟಿನಾಲ್ ಫೌಂಡೇಷನ್ ನ್ನು ಕೂಡ ಆಯ್ಕೆ ಮಾಡಬಹುದು ಇದು ಆದ್ಯತೆಯ ಮಾರ್ಗವಾಗಿದೆ ಮತ್ತು ನಿಮ್ಮ ವಯಸ್ಸನ್ನು ಮೇಕಪ್ ಮೂಲಕ ಮರೆಮಾಚಲು ಇದು ಬಹಳವಾಗಿ ನೆರವಾಗುತ್ತದೆ. ನೀವು ಹಾಕಿಕೊಳ್ಳುವ ಪೌಂಡೇಷನ್ ಬೇಸ್ ನಿಮ್ಮ ಮುಂದಿನ ಮೇಕಪ್ ಹೇಗಾಗಲಿದೆ ಎಂಬುದನ್ನು ನಿರ್ಧರಿಸುತ್ತದೆ. ಹಾಗಾಗಿ ನಿಮ್ಮ ಚರ್ಮಕ್ಕೆ ಸರಿಹೊಂದುವ ಉತ್ತಮ ಫೌಂಡೇಷನ್ನಿನ ಆಯ್ಕೆ ಪರ್ಫೆಕ್ಟ್ ಮೇಕಪ್ ಒಂದರ ಮೊದಲ ಹಂತವಾಗಿರುತ್ತದೆ.

ನಿಮ್ಮ ಮುಖದ ವೈಶಿಷ್ಟ್ಯತೆಗಳನ್ನು ಹೈಲೆಟ್ ಮಾಡುವುದು

ಕೆಲವು ಹೈಲೆಟ್ಸ್ ಗಳ ಎಫೆಕ್ಟ್ ನಿಂದಾಗಿ ನಿಮ್ಮ ಮುಖವನ್ನು ಸ್ವಲ್ಪ ತಿಳಿಗೊಳಿಸಿ.ಆದರೆ, 30 ನೇ ವಯಸ್ಸಿನಲ್ಲಿ ಚರ್ಮದ ಟೆಕ್ಚರ್ ಸ್ವಲ್ಪ ಮಟ್ಟಿಗೆ ಬದಲಾಗಲು ಆರಂಭವಾಗಿರುತ್ತದೆ, ಹಾಗಾಗಿ ಹೆಚ್ಚಿನ ಜಾಗರೂಕತೆಯನ್ನು ನೀವು ಹೈಲೆಟ್ಸ್ ಗಳನ್ನು ಬಳಸುವಾಗ ತೆಗೆದುಕೊಳ್ಳಬೇಕಾಗುತ್ತದೆ. ಕನ್ಸಿಲರ್ ನ್ನು ಆಯ್ಕೆ ಮಾಡುವಾಗ ಹೆಚ್ಚೇ ದಪ್ಪವಾಗಿರುವ ಮತ್ತು ಬೋಲ್ಡ್ ಆಗಿರುವುದನ್ನು ಆಯ್ಕೆ ಮಾಡಿಕೊಂಡರೆ ಅದು ನಿಮ್ಮ ಮುಖದ ರೇಖೆಗಳ ಮೇಲೆ ಉತ್ತಮ ರೀತಿಯಲ್ಲಿ ಸೆಟಲ್ ಆಗಿ ಗೆರೆಗಳನ್ನು ಮರೆಮಾಚಲು ನೆರವಿಗೆ ಬರುತ್ತದೆ ಮತ್ತು ಮುಖವು ಕೇಕ್ ನಂತೆ ಫಳಫಳ ಹೊಳೆಯಲು ಸಹಾಯವಾಗುತ್ತದೆ.

ತುಂಬಾ ಭಾರವಾದ ಉತ್ಪನ್ನಗಳು ಬೆಳಕಿನ ಕೆಳಗೆ ತೀರಾ ತೆಳುವಾಗಿ ಕಾಣಿಸುತ್ತದೆ. ಹಾಗಾಗಿ ಇಂತಹ ಭಾರವಾದ ಉತ್ಪನ್ನಗಳ ಹೈಲೈಟರ್ ಗಳಿಗಿಂತ ದ್ರವರೂಪದ ಹೈಲೈಟ್ಟರ್ ಗಳನ್ನು 30 ರ ವಯಸ್ಸಿನಲ್ಲಿ ಆಯ್ಕೆ ಮಾಡುವುದು ಬಹಳ ಒಳ್ಳೆಯದು.

ನಿಮ್ಮ ಕಣ್ಣುಗಳು ಮತ್ತು ಸುತ್ತಲಿನ ಪ್ರದೇಶವನ್ನು ತಯಾರಿ ಮಾಡುವುದು

ನಿಮ್ಮ ಕಣ್ಣಗಳು ನಿಮ್ಮ ವಯಸ್ಸನ್ನು ತಿಳಿಸುವ ಪ್ರಮುಖ ಅಂಗಗಳು. ನೀವು ನಿಮ್ಮ ವಯಸ್ಸನ್ನು ಯಾಕಾಗಿ ಮರೆಮಾಚಲು ಬಯಸುತ್ತಿದ್ದೀರಿ ಎಂಬುದಕ್ಕೆ ಕಾರಣಗಳು ಬೇಕಿಲ್ಲ, ಅದೇನೆ ಕಾರಣವಿದ್ದರೂ ನೀವು ನಿಮ್ಮ ದೈನಂದಿನ ಮೇಕಪ್ ನ್ನು ಪ್ರಾರಂಭಿಸಿದಾಗ ನಿಮ್ಮ ಕಣ್ಣುಗಳನ್ನು ತಯಾರಿಗೊಳಿಸಿಕೊಂಡು ಮುಖವು ಹೊಳೆಯುವಂತೆ ಮಾಡುವುದು ಮತ್ತು ಯೌವನಾತ್ಮಕವಾದ ಲುಕ್ ನ್ನು ಪಡೆಯುವುದು ಬಹಳ ಮುಖ್ಯ ವಿಚಾರವಾಗಿದೆ. ನಿಮ್ಮ ಕಣ್ಣುಗಳ ಸುತ್ತಲಿನ ಕಪ್ಪು ಪ್ರದೇಶವನ್ನು ಮುಚ್ಚಲು ಆದಷ್ಟು ಲೈಟ್ ಮೇಕಪ್ ಮಾಡಬೇಕಾಗುತ್ತದೆ.

ಭಾರೀಯಾಗಿರುವ ಕಣ್ಣಿನ ಕನ್ಸಲರ್ ಗಳನ್ನು ಕಪ್ಪು ವರ್ತುಲವನ್ನು ಮರೆಮಾಚಲು ಬಳಸಬೇಡಿ.ಇದು ನೀವು ವಯಸ್ಸಾದಂತೆ ಕಾಣುವ ಹಾಗೆ ಮಾಡಬಹುದು.ಹಾಗಾಗಿ ಆದಷ್ಟು ತಿಳಿಯಾಗಿರುವ ವಸ್ತುಗಳನ್ನು ಬಳಕೆ ಮಾಡಿ.ಕಣ್ಣಿನ ಪ್ರದೇಶದಲ್ಲಿ ಕನ್ಸಿಲರ್ ಬಳಕೆ ಮಾಡುವಾಗ ಅದನ್ನು ತೀರಾ ಎಳೆದಿರುವಂತೆ ಮಾಡಬಾರದು. ಮೊದಲು ಕನ್ಸಿಲರ್ ನಿಂದ ಚುಕ್ಕಿಗಳಿಂದ ಆರಂಭಿಸಿ ಮತ್ತು ನೇರವಾಗಿ ಕಣ್ಣಿನ ಪ್ರದೇಶದಲ್ಲಿ ಮೊದಲಿಗೆ ಕಲ್ಸಿಲರ್ ನ್ನೇ ಬಳಸಿ. ಒಂದು ವೇಳೆ ಅಗತ್ಯಬಿದ್ದರೆ ಕಡಿಮೆ ಪ್ರಮಾಣದಿಂದ ಹಿಡಿದು ಹೆಚ್ಚು ಪ್ರಮಾಣದವರೆಗೆ ಕನ್ಸಿಲರ್ ನ್ನು ಹಚ್ಚಬಹುದು. ಆದರೆ ದಪ್ಪವಾಗಿ ಹಚ್ಚಿದಾಗ ಅವುಗಳನ್ನು ಸುಂದರಗೊಳಿಸಿಕೊಳ್ಳುವುದು ಬಹಳ ಕಷ್ಟಕರವಾದ ಕೆಲಸವಾಗಿರುತ್ತದೆ.

ಐಲೆಡ್ ಗಳ ತಯಾರಿ

ಈಗಿನ ದಿನಗಳಲ್ಲಿ ತುಂಬಾ ಮಹತ್ವವಾದ ಮೇಕಪ್ ವಿಚಾರವೆಂದರೆ ಅದು ಐಶಾಡೋ ಪ್ರೈಮರ್ ಬಳಕೆ. ಆದರೆ ಹೆಚ್ಚಿನವರು ಇದನ್ನು ಸ್ಕಿಪ್ ಮಾಡುತ್ತೇವೆ. ಆದರೆ ವಯಸ್ಸಾದ ಚರ್ಮಗಳಿಗೆ ಈ ಪ್ರೈಮರ್ ಗಳು ಉತ್ತಮ ಸ್ನೇಹಿಯಾಗುತ್ತದೆ. ನಿಮ್ಮ ವಯಸ್ಸಿಗೆ ತಕ್ಕಂತೆ ಐಲಿಡ್ ಗಳು ಕೂಡ ಬದಲಾಗುತ್ತವೆ.

ನೀವು ಐಶಾಡೋ ಮತ್ತು ಐಲೈನರ್ ನ್ನು ಹೇಗೆ ಬಳಸಬೇಕು ಎಂಬುದನ್ನು ನಿರ್ಧರಿಸಿಕೊಳ್ಳಲು ಹೆಚ್ಚುವರಿ ಕ್ರೀಸ್ ಗಳು ಮತ್ತು ಕ್ರಿಂಕಲ್ಸ್ ಗಳು ಲಭ್ಯವಿದೆ. ನಿಮ್ಮ ಕಣ್ಣುಗಳನ್ನು ಪರಿಪೂರ್ಣವಾಗಿ ಗೋಚರಿಸುವಂತೆ ಮಾಡಲು, ಕಣ್ಣಿನ ರೆಪ್ಪೆಗಳ ಸ್ಟಿಕ್ ಗಳಿಗೆ ಹೆಚ್ಚು ಮಹತ್ವ ನೀಡಿ ಮತ್ತು ಐಶಾಡೋ ಪ್ರೈಮರ್ ಗಳೂ ಕೂಡ ಬಹಳ ಮುಖ್ಯವಾಗಿ ಬೇಕಾಗುತ್ತದೆ ಎಂಬುದು ನೆನಪಿರಲಿ.

ನಿಮ್ಮ ಕಣ್ಣಿನ ಕೆಳಭಾಗಕ್ಕೆ ಬಳಸಿದ ಕನ್ಸಿಲರ್ ಗಳನ್ನೇ ಕೂಡ ನೀವು ಐಶಾಡೋ ಪ್ರೈಮರ್ ಗಳಂತೆ ಬಳಕೆ ಮಾಡಬಹುದು( ಅದರಲ್ಲೂ ಪ್ರಮುಖವಾಗಿ ನೀವು ಸ್ಪೆಷಲ್ ಐಶಾಡೋ ಪ್ರೈಮರ್ ಗಳನ್ನು ಖರೀದಿಸಲು ಇಚ್ಛಿಸದೇ ಇದ್ದಲ್ಲಿ ). ಇದು ನಿಮ್ಮ ಕಣ್ಣಿನ ಭಾಗವನ್ನು ಮೃದುಗೊಳಿಸುತ್ತದೆ ಮತ್ತು ಅದರ ಮೇಕಪ್ ನ್ನು ಕೂರಿಸಲು ಬಹಳವಾಗಿ ನೆರವಾಗುತ್ತದೆ ಜೊತೆಗೆ ನಿಮಗೆ ಪಾಪ್ ಅಪ್ ಲುಕ್ ಪಡೆಯಲು ನೆರವಾಗುತ್ತದೆ.

ಮ್ಯಾಟ್ ಶಾಡೋ ಗಳನ್ನು ಬಳಸುವಿಕೆ

ನಿಮ್ಮ ಹೊಳೆಯುವ ಕಣ್ಣುಗಳು 20 ರ ಹರೆಯ ನೋಟವನ್ನು ಮರಳಿಸಲು ಸಾಧ್ಯವಿದೆ. ನಿಮ್ಮ ಕಣ್ಣಿನ ಬಳಿ ಇರುವ ಗೆರೆಗಳು ಕಾಣಿಸದಂತೆ ಮಾಡಲು ನೀವು ಮ್ಯಾಟ್ ಫಿನಿಶ್ ಇರುವ ಮೆಕಪ್ ಪ್ರೊಡಕ್ಟ್ ಗಳನ್ನು ಬಳಕೆ ಮಾಡುವುದು ಒಳ್ಳೆಯದು. ಮ್ಯಾಟ್ ಐ ಶಾಡೋ ಗಳನ್ನು ಎಲ್ಲಾ ಮೇಕಪ್ ಆರ್ಟಿಸ್ಟ್ ಗಳು 30 ರ ಹರೆಯ ಮಹಿಳೆಯರಿಗಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.

ಫಳಫಳ ಹೊಳೆಯುವ ಮತ್ತು ಮೆಟಾಲಿಕ್ ಐಶಾಡೋಗಳು ನಿಮಗೆ ಸಮಸ್ಯೆ ಒಡ್ಡಬಹುದು, ಯಾಕೆಂದರೆ ಇವು ನಿಮ್ಮ ಐಲಿಡ್ ಗಳ ಮೇಲೆ ಉದುರಿ ಬೀಳುವ ಸಾಧ್ಯತೆಗಳಿರುತ್ತದೆ. ಮತ್ತು ಇದು ನಿಮ್ಮ ಕಣ್ಣಿನೊಳಗೆ ಹೋದರೆ ನೀರು ಬಂದು ನಿಮ್ಮ ಸಂಪೂರ್ಣ ಮೇಕಪ್ ಹಾಳಾಗಬಹುದು ಮತ್ತು ನಿಮ್ಮ ವಯಸ್ಸು ಕಣ್ಣಿನ ಈ ತೊಂದರೆಯನ್ನು ಅಧಿಕಗೊಳಿಸಬಹುದು.ಆದರೆ, ಫನ್ ಅನ್ನಿಸುವ ಐಶಾಡೋಗಳು ಮತ್ತು ಗ್ಲಿಟರಿಯಾಗಿರುವ ಐಶಾಡೋಗಳನ್ನು ನೀವು ಆಯ್ಕೆ ಮಾಡಿಕೊಳ್ಳುವುದನ್ನು ನಿಮಗೆ ನೀವೇ ನಿರ್ಭಂದಿಸಿಕೊಳ್ಳುವುದು ಒಳಿತು ಇದನ್ನು ಮಾಡುವುದಕ್ಕಾಗಿ ನೀವು ನಿಮ್ಮ ಐಲಿಡ್ ಗಳನ್ನು ಮೊದಲು ಬೋಲ್ಡ್ ಮಾಡಿಕೊಳ್ಳಬೇಕು ಮತ್ತು ಮ್ಯಾಟ್ ಫಿನಿಶ್ ಇರುವ ಐಶಾಡೋಗಳು ಬಳಸಿ ನಂತರ ಕಂದು ಬಣ್ಣದ ಮ್ಯಾಟ್ ಬಣ್ಣದೊಂದಿಗೆ ಗಾಢಗೊಳಿಸಬೇಕು. ಅಷ್ಟಕ್ಕೂ ನಿಮಗೆ ಗ್ಲಿಟರಿ ಅಥವಾ ಮೆಟಾಲಿಕ್ ಶಾಡೋ ಬಳಸಿ ಇದನ್ನು ಪರಿಪೂರ್ಣಗೊಳಿಸಬೇಕು ಎಂಬ ಇಚ್ಛೆ ಇದ್ದಲ್ಲಿ ಲಿಡ್ ನ ಮಧ್ಯಭಾಗಕ್ಕೆ ದೊಡ್ಡ ಪ್ರಮಾಣದಲ್ಲಿ ಅಲ್ಲ, ಅತ್ಯಂತ ಸಣ್ಣ ಪ್ರಮಾಣದಲ್ಲಿ ಬಳಕೆ ಮಾಡಿ.

ನಿಮ್ಮ ಕಣ್ಣುಗಳನ್ನು ಯೌವ್ವನಾತ್ಮಕವಾಗಿ ಕಾಣುವಂತೆ ಮಾಡುವ ಬಗೆ

ನಿಮ್ಮ ಕಣ್ಣುಗಳಿಗೆ ಯೌವನದ ಲುಕ್ ನೀಡುವುದು ಸ್ವಲ್ಪ ಟ್ರಿಕ್ಕಿ ಕೆಲಸವೇ ಹೌದು. ಒಂದು ವೇಳೆ ನೀವು ನಿಮ್ಮ ಕಣ್ಣುಗಳು ಸಿಂಪಲ್ ಆಗಿ ಕಾಣಬೇಕು ಎಂದು ಬಯಸುತ್ತಿದ್ದರೂ ಕೂಡ ಈ ಕೆಲಸ ಸ್ವಲ್ಪ ಕಠಿಣವೇ ಆಗಿದೆ. ಕ್ರೀಮ್ ಟೋನ್ ಗಳನ್ನು ಬಳಸಿ, ತಿಳಿಯಾದ ಐಶಾಡೋ ಹಚ್ಚಿಕೊಳ್ಳಿ, ಕಡಿಮೆ ಪ್ರಮಾಣದಲ್ಲಿ ಅದನ್ನು ಸ್ಪ್ರಾಕ್ ಮಾಡಿ, ಸಣ್ಣದಾದ ಐಬ್ರಷ್ ಗಳನ್ನು ಇದಕ್ಕಾಗಿ ಬಳಕೆ ಮಾಡಿ. ಕಣ್ಣಿನ ಒಳಗಿನ ಕಾರ್ನರ್ ಗಳಿಗೆ ಸ್ವಲ್ಪ ತಿಳಿಯಾಗಿ ಐಶಾಡೋ ಅಪ್ಲೈ ಮಾಡಿ. ಕಣ್ಣಿನ ರೆಪ್ಪೆಯ ಮಧ್ಯ ಭಾಗದ ಬುಡದಲ್ಲೂ ಕೂಡ ಸ್ವಲ್ಪವೇ ಶಾಡೋ ಬಳಕೆ ಮಾಡುವುದು ಒಳ್ಳೆಯದು. ಕಲರ್ ಇರುವ ಐಲೈನರ್ ಗಳನ್ನು ಬಳಕೆ ಮಾಡಿ. ತುಂಬಾ ನ್ಯಾಚುರಲ್ ಆ ಕಾಣಿಸಬೇಕು ಎಂದರೆ ಗ್ಲಿಟ್ಟರ್ ಅಧಿಕವಾಗಿರುವ ಶಾಡೋಗಳನ್ನು ಬಳಕೆ ಮಾಡಬೇಡಿ. ಇದು ನೀವು ನಿಮ್ಮ ಮುಖದ ಇತರೆ ಭಾಗಕ್ಕೆ ಮೇಕಪ್ ಮಾಡದ ಸಂದರ್ಬದಲ್ಲೂ ಕೂಡ ಬಳಸಬಹುದಾಗಿದೆ. ಈ ಕಣ್ಣಿನ ಮೇಕಪ್ ಟ್ರಿಕ್ಸ್ ಗಳು ನಿಮ್ಮ ಕಣ್ಣುಗಳನ್ನು ದೊಡ್ಡದಾಗಿ ಮತ್ತು ಬ್ರೈಟ್ ಆಗಿ ಕಾಣುವಂತೆ ಮಾಡುತ್ತವೆ.

ಪೌಡರ್ ಬಳಸುವ ಮುನ್ನ ಕ್ರೀಮ್ ಆಯ್ಕೆ

ಅತಿಯಾಗಿ ಪೌಡರ್ ಬಳಕೆ ಮಾಡುವುದರಿಂದಾಗಿ ನೀವು ವಯಸ್ಸಾದವರಂತೆ ಕಾಣಬಹುದು. ಅದು ನಿಮ್ಮ ಮುಖದಲ್ಲಿ ಹೆಚ್ಚಿನ ಗೆರೆಗಳನ್ನು ಉಧ್ಬವ ಮಾಡುತ್ತದೆ.ಹಾಗಾಗಿ ಆದಷ್ಟು ತಿಳಿಯಾದ ಪೌಡರ್ ಬಳಸಿ ಮತ್ತು ಕಡಿಮೆ ಪ್ರಮಾಣದಲ್ಲಿ ಬಳಸಿ. ಪ್ರೆಸ್ ಆಗಿರುವ ಗಟ್ಟಿ ಪೌಡರ್ ಗಳು ಹೆವಿಯಾಗಿರುತ್ತದೆ ಮತ್ತು ಕಂಟ್ರೋಲ್ಡ್ ಆಗಿರುತ್ತವೆ. ಬಿಡಿಬಿಡಿಯಾಗಿರುವ ಪೌಡರ್ (ಲೂಸ್ ಪೌಡರ್ ಗಳು ) ಸುಲಭದಲ್ಲಿ ಹಚ್ಚಿಕೊಳ್ಳಬಹುದು ಮತ್ತು ಒಂದು ವೇಳೆ ನಿಮ್ಮ ಮುಖದಲ್ಲಿ ಅಧಿಕವಾದರೆ ಸುಲಭದಲ್ಲಿ ತೆಗೆಯಲೂ ಕೂಡ ಸಾಧ್ಯವಾಗುತ್ತದೆ. ನೀವು ದ್ರವರೂಪದ ಅಥವಾ ಕ್ರೀಮ್ ರೂಪದ ತಿಳಿಯಾದ ಶೇಡ್ ಇರುವ ಬ್ರೌಂಝರ್ ಅಥವಾ ಕ್ರೀಮ್ ಅನ್ನು ಕೂಡ ಮೇಕಪ್ ನ ಫಿನಿಶಿಂಗ್ ಗಾಗಿ ಬಳಕೆ ಮಾಡಬಹುದು.30 ರ ಹರೆಯದ ಮಹಿಳೆಯರಿಗೆ ಇದು ಬಹಳವಾಗಿ ಅನುಕೂಲಕರವಾಗಿರುತ್ತದೆ. ಇದು ನೈಸರ್ಗಿಕ ಫ್ಲಷ್ ಮತ್ತು ಚರ್ಮದ ಬಣ್ಣವನ್ನು ನೀಡುತ್ತದೆ ಮತ್ತು ನಿಮ್ಮ ಚರ್ಮವನ್ನು ಉತ್ತಮವಾಗಿರಿಸಲು ನೆರವಿಗೆ ಬರುತ್ತದೆ.

ಲಿಪ್ ಲೈನರ್

ಬೋಲ್ಡ್ ಆಗಿರುವ ಲಿಪ್ ಈಗಿನ ಟ್ರೆಂಡ್..ಆದರೆ ವಯಸ್ಸನ್ನು ಪರಿಗಣನೆಗೆ ತೆಗೆದುಕೊಂಡರೆ , ಇಂತಹ ಮೇಕಪ್ ಮಾಡಿದರೆ ನೀವು ನಕ್ಕಾಗ ಅದು ಒಂದು ರೀತಿಯ ವಿಚಿತ್ರ ಗೆರೆಗಳಿಗೆ ಕಾರಣವಾಗಬಹುದು. ಹಾಗಾಗಿ ಉತ್ತಮವಾದ ಸ್ವಚ್ಛವಾದ ನಗುವನ್ನು ಮೇಕಪ್ ನ ನಂತರ ಪಡೆಯುವುದು ಒಂದು ಟ್ರಿಕ್ಕಿ ಕೆಲಸವಾಗಿದೆ. ಲಿಪ್ ಲೈನರ್ ಗಳು ಈಗ ಸುಲಭದಲ್ಲಿ ಮತ್ತು ಸಲೀಸಾಗಿರುತ್ತದೆ. ಹಾಗಾಗಿ ಲಿಪ್ ಲೈನರ್ ಗಳನ್ನು ಲಿಪ್ ಸ್ಟಿಕ್ ಬಳಸುವ ಮುನ್ನ ಬಳಕೆ ಮಾಡಿ ತುಟಿಗಳ ಅಂದವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಿ. ಹೀಗೆ ಲಿಪ್ ಲೈನರ್ ಬಳಕೆ ಮಾಡುವುದರಿಂದಾಗಿ ತುಟಿಗಳಲ್ಲಿ ಲಿಪ್ ಸ್ಟಿಕ್ ಗಳು ಪರ್ಫೆಕ್ಟ್ ಆಗಿ ಕೂತಿರಲು ಸಹಾಯವಾಗುತ್ತದೆ ಮತ್ತು ಚರ್ಮದ ಬಣ್ಣಕ್ಕೆ ಹೊಂದಿಕೆಯಾಗುವ , ಟೋನರ್ ಗೆ ಹೊಂದಿಕೊಳ್ಳುವಂತಹ ಲೈನರ್ ಗಳನ್ನೇ ಬಳಕೆ ಮಾಡುವುದು ನಿಮ್ಮ ಮೇಕಪ್ ನ ಹಿತದೃಷ್ಟಿಯಿಂದ ಬಹಳ ಒಳ್ಳೆಯದು. ನಿಮ್ಮ ತುಟಿಯ ಕೆಳಭಾಗದಲ್ಲಿ ಸ್ಕಿನ್ ಟೋನ್ ಗೆ ಹೊಂದಿಕೊಳ್ಳುವ ಲಿಪ್ ಲೈನರ್ ಬಳಕೆ ಮಾಡುವುದರಿಂದಾಗಿ ಫರ್ಫೆಕ್ಟ್ ಲುಕ್ ಪಡೆಯಲು ಸಾಧ್ಯವಾಗುತ್ತದೆ. ಕಲ್ಸೀಲರ್ ಗಳ ಜೊತೆ ಮ್ಯಾಚ್ ಆಗುವ ಲಿಪ್ ಲೈನರ್ ಬಳಕೆ ಮಾಡಿದರೆ ಫೈನ್ ಗೆರೆಗಳು ಸರಿಯಾಗಿದ್ದು, ನಿಮ್ಮ ಲುಕ್ ಇನ್ನಷ್ಟು ಉತ್ತಮಗೊಳ್ಳಲು ನೆರವಾಗುತ್ತದೆ.

ಸ್ಪ್ರೇಗಳನ್ನು ಬಳಕೆ ಮಾಡುವುದು

ನಿಮ್ಮ ಚರ್ಮವು ಯಾವಾಗಲೂ ಉತ್ತಮ ರೀತಿಯಲ್ಲಿ ಹೈಡ್ರೇಟ್ ಆಗಿರಲು ಬಯಸುತ್ತದೆ. ನಿಮ್ಮ ಮೇಕಪ್ ದಿನಪೂರ್ತಿ ಹೈಡ್ರೇಟ್ ಆಗಿ ಉತ್ತಮವಾಗಿ ಕಾಣಿಸುವ ಹಿಂದೆಯೂ ಕೂಡ ಒಂದು ಟ್ರಿಕ್ಸ್ ಅಡಗಿದೆ. ವಯಸ್ಸಾಗಿರುವ ಚರ್ಮವು ಹೆಚ್ಚಿನ ಮಾಯ್ಚರ್ ಅನ್ನು ಬೇಡುತ್ತದೆ.
ರೋಸ್ ವಾಟರ್ ಅಥವಾ ವಾಟರ್ ಸ್ಪ್ರೇಯನ್ನು ನೀವು ಮೇಕಪ್ ಮಾಡಿದ ನಂತರ ಕೊನೆಯಲ್ಲಿ ಬಳಸಿ ಮತ್ತು ಮನೆಯಿಂದ ಹೊರಗಡೆ ಕಾಲಿಡಿ. ಈ ರೀತಿ ಸ್ಪ್ರೇ ಮಾಡಿಕೊಳ್ಳುವುದರಿಂದಾಗಿ ನಿಮ್ಮ ಮೇಕಪ್ ಹೊರಗಿನ ವಾತಾವರಣದಲ್ಲಿ ಶುಷ್ಕವಾಗುವುದಿಲ್ಲ ಮತ್ತು ನಿಮ್ಮ ಮುಖವು ಯೌವನಾತ್ಮಕವಾಗಿ ಹೊಳೆಯುವಂತೆ ಕಾಣಲು ನೆರವಾಗುತ್ತದೆ.
ಮೇಕಪ್ ತೆಗೆಯುವಿಕೆ

ನೀವು ನಿಮ್ಮ 30 ನೇ ವಯಸ್ಸಿಗೆ ತಲುಪಿದ್ದೀರಾದರೆ, ನಿಮ್ಮ ಚರ್ಮದ ಬಗ್ಗೆ ಹೆಚ್ಚಿನ ಕಾಳಜಿಯ ಅಗತ್ಯವಿರುತ್ತದೆ.. ಯಾವಾಗಲೂ ನಿಮ್ಮ ಮೇಕಪ್ ನ್ನು ರಾತ್ರಿ ನೀವು ಹಾಸಿಗೆಗೆ ತೆರಳುವ ಮುನ್ನ ಸರಿಯಾದ ಕ್ರಮದಲ್ಲಿ ತೆಗೆಯಲೇ ಬೇಕು. ಒಂದು ವೇಳೆ ನಿಮ್ಮ 20 ನೇ ವಯಸ್ಸಿನಲ್ಲಿ ಸಂಪೂರ್ಣ ಮೇಕಪ್ ನಲ್ಲಿ ಮಲಗಿ, ಮೇಕಪ್ ತೆಗೆಯುವ ಕೆಲಸವನ್ನು ಮಾಡಿಲ್ಲದಿದ್ದರೂ ಕೂಡ ಈ 30 ರ ವಯಸ್ಸಿನಲ್ಲಿ ಮಾಡಲೇ ಬೇಕು.

ಮೇಕಪ್ ನಿಮ್ಮ ಮುಖದಲ್ಲಿ ಹೆಚ್ಚು ಸಮಯ ಹಾಗೆಯೇ ಇದ್ದರೆ ಹೆಚ್ಚಿನ ಗೆರೆಗಳು ಉಧ್ಬವವಾಗಲು ಕಾರಣವಾಗುತ್ತದೆ. ಹಾಗಾಗಿ, ನೀವು ಯಾವಾಗಲೂ ನೆನಪಿಡಲೇ ಬೇಕಾದ ಪ್ರಮುಖ ಅಂಶವೇನೆಂದರೆ ನಿಮ್ಮ ನಿತ್ಯದ ಚಟುವಟಿಕೆಗಳು ಮುಗಿದ ನಂತರ ನಿಮ್ಮ ಮೇಕಪ್ ನ್ನು ತೆಗೆಯುವುದು.

ನಮಗೆಲ್ಲರಿಗೂ ತಿಳಿದಿರುವಂತೆ, ವಯಸ್ಸು ಅನ್ನುವುದು ಕೇವಲ ಒಂದು ಸಂಖ್ಯೆ. ವಯಸ್ಸಾಗುವಿಕೆಯಲ್ಲಿ ತಪ್ಪೇನಿಲ್ಲ. ಪ್ರತಿಯೊಬ್ಬರಿಗೂ ವಯಸ್ಸಾಗುತ್ತದೆ. ಅದು ಪ್ರಕೃತಿ ನಿಯಮ. ಆದರೆ, ವಯಸ್ಸಾದ ಮೇಲೂ ಚಟುವಟಿಕೆಯಿಂದ, ಉತ್ಸಾಹದಿಂದ ಇರುವುದು ಬಹಳ ಮುಖ್ಯ, ಆ ನಿಟ್ಟಿನಲ್ಲಿ ಈ ಎಲ್ಲಾ ಬೇಸಿಕ್ ಮೇಕಪ್ ಸಲಹೆಗಳು ನಿಮಗೆ ಹೆಚ್ಚು ಆತ್ಮವಿಶ್ವಾಸ ತುಂಬಿಸಬಲ್ಲವು ಮತ್ತು ನೀವು ದಿನಪೂರ್ತಿ ಯಂಗ್ ಆಗಿ, ತಾಜಾವಾಗಿ, ಹೊಳೆಯುವಂತೆ ಕಾಣಲು ಸಾಧ್ಯವಾಗುತ್ತದೆ ಕೂಡ.

ಸರಿಯಾದ ಕ್ರಮದಲ್ಲಿ ಮೇಕಪ್ ಮಾಡುವುದನ್ನು ಹೊರತು ಪಡಿಸಿ, ಬಹಳ ಮುಖ್ಯವಾದ ಅಂಶವೇನೆಂದರೆ ನಿಮ್ಮ ಚರ್ಮಕ್ಕಾಗಿ ನೀವು ಸರಿಯಾದ ಆಹಾರ ಕ್ರಮವನ್ನು ಅನುಸರಿಸುವುದು. ಹೌದು, ಯಾವಾಗಲೂ ಪೋಷಕಾಂಶಭರಿತವಾದ ಆರೋಗ್ಯಕಾರಿ ಆಹಾರಗಳನ್ನೇ ಸೇವಿಸಿ. ಅಷ್ಟೇ ಅಲ್ಲ, ದಿನಕ್ಕೆ ಕಡೇಪಕ್ಷ 8 ಲೋಟದಷ್ಟು ನೀರನ್ನು ಸೇವಿಸಿ, ಹೀಗೆ ಹೆಚ್ಚು ನೀರು ಕುಡಿಯುವುದರಿಂದಾಗಿ ನೀವು ಹೈಡ್ರೇಟ್ ಆಗಿರಲು ಸಾಧ್ಯವಾಗುತ್ತದೆ.
ಪ್ರತಿದಿನ 8 ಗಂಟೆ ನಿದ್ರಿಸುವುದು ಕೂಡ ನಿಮ್ಮ ಸೌಂದರ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಪ್ರಮುಖವಾಗಿ ಕಣ್ಣಿನ ಸುತ್ತಲಿನ ಕಪ್ಪು ವರ್ತುಲ ಮತ್ತು ಚರ್ಮ ಜೋಲುವಿಕೆಯಂತ ಸಮಸ್ಯೆಗಳು ಉದ್ಭವವಾಗದಂತೆ ತಡೆಯಲು ನಿದ್ದೆ ನಿಮಗೆ ಸಹಾಯ ಮಾಡುತ್ತದೆ.

ಅಷ್ಟೇ ಅಲ್ಲ, ನೀರು ಹೊರಗಡೆ ಹೋಗುವಾಗ ಉತ್ತಮವಾದ ಸನ್ಸ್ಕ್ರೀಮ್ ಲೋಷನ್ ಗಳನ್ನು ಬಳಕೆ ಮಾಡಿ. ಆ ಮೂಲಕ ನೀವು ಸೂರ್ಯನ ಕಿರಣಗಳಿಂದ ಟ್ಯಾನ್ ಆಗುವುದು ತಪ್ಪುತ್ತದೆ. ಪ್ರತಿದಿನ ಉತ್ತಮ ಚರ್ಮದ ಕಾಳಜಿ ತೆಗೆದುಕೊಳ್ಳುವುದನ್ನು ಮರೆಯಬೇಡಿ, ಅದರಲ್ಲಿ ಪ್ರಮುಖವಾಗಿ ಉತ್ತಮವಾದ ಫೇಸ್ ವಾಷ್ ಬಳಕೆ, ಸ್ಕ್ರಬ್ ಮತ್ತು ಮಾಯ್ಚರೈಸರ್ ಗಳ ಬಳಕೆ ಕೂಡ ಸೇರಿದೆ.

ನಿಮ್ಮ ವಯಸ್ಸುಎಷ್ಟೇ ಆಗಿರಲಿ ನೀವು ಅಂದವಾಗಿ ಕಾಣಲು ಖಂಡಿತ ಅರ್ಹರು. ಅದಕ್ಕಾಗಿ ಪ್ರತಿದಿನ ಸ್ವಲ್ಪ ಸಮಯವನ್ನು ಮೀಸಲಿಟ್ಟು ಚರ್ಮದ ಕಾಳಜಿ ತೆಗೆದುಕೊಳ್ಳಿ. ಇದು ನಿಮ್ಮನ್ನು ಯಾವುದೇ ವಯಸ್ಸಿನಲ್ಲಾದರೂ ಸುಂದರವಾಗಿ ಮತ್ತು ನಿಮ್ಮ ವಯಸ್ಸಿಗಿಂತ ಸಣ್ಣವರಾಗಿ ಕಾಣಲು ನಿಮ್ಮ ನೆರವಿಗೆ ಬರುತ್ತದೆ.

English summary

Essential makeup tips for women above 30

The age 30 is no longer considered the age that synonyms with growing old. In fact, 30 is now associated with being the new 20. However, the age 30 can begin to show up on your face, which is actually a window to your inner self. The makeup rules definitely change after you have outgrown the typical partying age. It is not that you can no longer pull off bolder looks, but it is more based on how well you understand the makeup tricks once you reach the age of 30 and beyond.
X
Desktop Bottom Promotion