ಲಿಪ್‌ಸ್ಟಿಕ್ ಖರೀದಿಗೆ ಮುನ್ನ, ಒಮ್ಮೆ ಈ ಲೇಖನ ಓದಿ...

By: Hemanth
Subscribe to Boldsky

ಸುಂದರವಾಗಿ ಕಾಣಬೇಕೆಂದು ನಾವು ಇನ್ನಿಲ್ಲದ ಪ್ರಯತ್ನ ಮಾಡುತ್ತೇವೆ. ಅದರಲ್ಲೂ ಮಹಿಳೆಯರು ಮೇಕಪ್ ಮಾಡಿಕೊಳ್ಳಲು ಗಂಟೆಗಟ್ಟಲೆ ತೆಗೆದುಕೊಳ್ಳುತ್ತಾರೆ. ಇದಕ್ಕಾಗಿ ಸಾಕಷ್ಟು ಹಣವನ್ನು ವೆಚ್ಚ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವಂತಹ ಹಲವಾರು ರೀತಿಯ ಸೌಂದರ್ಯವರ್ಧಕಗಳನ್ನು ಬಳಸಿಕೊಳ್ಳುವುದು ಮಹಿಳೆರಿಗೆ ಸಾಮಾನ್ಯ ಸಂಗತಿಯಾಗಿದೆ. ಆದರೆ ಇಂತಹ ಸೌಂದರ್ಯವರ್ಧಕಗಳ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು. ತುಟಿಯ ರಂಗು ಬೇಗನೆ ಮಾಸದಿರಲು ಬ್ಯೂಟಿ ಟಿಪ್ಸ್ 

ಅದರಲ್ಲೂ ತುಂಬಾ ಸೂಕ್ಷ್ಮವಾಗಿರುವಂತಹ ತುಟಿಗಳಿಗೆ ಹಚ್ಚುವಂತಹ ಲಿಪ್ ಸ್ಟಿಕ್ ಅನ್ನು ನೀವು ಎಚ್ಚರಿಕೆಯಿಂದ ಆಯ್ಕೆ ಮಾಡ ಕೊಳ್ಳಬೇಕಾಗುತ್ತದೆ. ಯಾಕೆಂದರೆ ಕೆಲವೊಂದು ಲಿಪ್ ಸ್ಟಿಕ್‌ಗಳು ನಿಮ್ಮ ಆರೋಗ್ಯಕ್ಕೆ ಮಾರಕವಾಗಬಹುದು. ಇನ್ನು ಕೆಲವು ನಿಮ್ಮ ಸೌಂದರ್ಯವನ್ನು ಕೆಡಿಸಬಹುದು. ಇದಕ್ಕಾಗಿ ಲಿಪ್ ಸ್ಟಿಕ್ ಆಯ್ಕೆ ಮಾಡಿಕೊಳ್ಳುವ ಮೊದಲು ನೀವು ಗಮನಿಸಬೇಕಾದ ಕೆಲವೊಂದು ವಿಷಯಗಳನ್ನು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಮುಂದಿನ ಸಲ ಲಿಪ್ ಸ್ಟಿಕ್ ಖರೀದಿಸಲು ಹೋಗುವಾಗ ನೀವು ಇದನ್ನು ಗಮನದಲ್ಲಿಟ್ಟುಕೊಂಡರೆ ಒಳ್ಳೆಯದು....  

ಬಣ್ಣ

ಬಣ್ಣ

ಬಣ್ಣದ ಬಗ್ಗೆ ನೀವು ತುಂಬಾ ಗಮನಹರಿಸಬೇಕಾಗುತ್ತದೆ. ಯಾವ ಬಣ್ಣದ ಕುಟುಂಬಕ್ಕೆ ಸೇರಿರುವುದು ಎಂದು ನೀವು ತಿಳಿದುಕೊಳ್ಳಬೇಕು. ಉದಾಹರಣೆಗೆ ಕಿತ್ತಳೆ ಕೆಂಪು ಬಣ್ಣವು ನಿಮಗೆ ಹೊಂದಿಕೊಳ್ಳಬಹುದು. ಇಟ್ಟಿಗೆ ಕೆಂಪು ಬಣ್ಣವು ಹೊಂದಿಕೊಳ್ಳದಿರಬಹುದು. ಯಾವ ಬಣ್ಣ ಬೇಕೆಂದು ನಿಮಗೆ ತಿಳಿದಿರಬೇಕು. ಕೆಂಪು ಲಿಪ್ ಸ್ಟಿಕ್ ಬೇಕು ಎಂದರೆ ಸಾಕಾಗದು.ರೆಡ್ ಲಿಪ್‌ಸ್ಟಿಕ್ ಹಚ್ಚುವವರು ಪಾಲಿಸಲೇಬೇಕಾದ ನಿಯಮಗಳು

ಫಿನಿಶಸ್

ಫಿನಿಶಸ್

ಲಿಪ್ ಸ್ಟಿಕ್‌ಗಳು ವಿವಿಧ ರೀತಿಯ ಫಿನಿಶಸ್ ನಲ್ಲಿ ಬರುತ್ತದೆ. ಮ್ಯಾಟ್ ಫಿನಿಶ್, ಸ್ಯಾಟಿನ್ ಫಿನಿಶ್, ಇದು ಅರ್ಧ ಮ್ಯಾಟ್ ನಂತಿರುತ್ತದೆ. ಇನ್ನು ಕೆಲವು ಕ್ರೀಮ್ ಫಿನಿಶ್ ಕೂಡ ಇದೆ. ಒಣ ತುಟಿ ಇರುವವರು ಮ್ಯಾಟ್ ಫಿನಿಶ್ ಅನ್ನು ಕಡೆಗಣಿಸಬೇಕು. ಮ್ಯಾಟ್ ಬಳಸಬೇಕೆಂದಿದ್ದರೆ ಲಿಪ್ ಸ್ಟಿಕ್ ಬಳಸುವ ಮೊದಲು ತುಟಿಗಳನ್ನು ತಯಾರು ಮಾಡಿ. ಕ್ರೀಮ್ ಫಿನಿಶ್ ಬೇಗನೆ ಕರಗುವುದು ಮತ್ತು ಎದ್ದುಹೋಗಬಹುದು. ಮ್ಯಾಟ್ ಲಿಪ್ ಸ್ಟಿಕ್ ದಿನವಿಡಿ ಉಳಿಯುತ್ತದೆ.

ಅಂಡರ್ ಟೋನ್

ಅಂಡರ್ ಟೋನ್

ಲಿಪ್ ಸ್ಟಿಕ್ ಗೆ ಹೆಚ್ಚಿನವರು ಅಂಡರ್ ಟೋನ್ ನ್ನು ಗಮನಹರಿಸುವುದಿಲ್ಲ. ಬಣ್ಣವು ಬ್ಲೂ ಟೋನ್, ಯಲ್ಲೋ ಟೋನ್ ಅಥವಾ ಸ್ಥಿರವಾಗಿರಬಹುದು. ತಂಪಾದ ಅಂಡರ್ ಟೋನ್ ಹೊಂದಿರುವವರು ಬ್ಲೂ ಟೋನ್ ಲಿಪ್ ಸ್ಟಿಕ್ ಹಚ್ಚಿಕೊಳ್ಳಿ. ಬಿಸಿ ಅಂಡರ್ ಟೋನ್ ಹೊಂದಿರುವವರು ಯಲ್ಲೋ ಟೋನ್ ಲಿಪ್ ಸ್ಟಿಕ್ ಬಳಸಿ. ಸ್ಥಿರ ಅಂಡರ್ ಟೋನ್ ಹೊಂದಿರುವವರು ಎರಡನ್ನು ಬಳಸಬಹುದು.

ಬ್ರಾಂಡ್‌ಗಳು

ಬ್ರಾಂಡ್‌ಗಳು

ನೀವು ಆನ್ ಲೈನ್ ಖರೀದಿ ಮಾಡುತ್ತಾ ಇದ್ದರೆ ಆಗ ನಂಬಿಕಸ್ಥ ಬ್ರಾಂಡ್ ಅನ್ನು ಬಳಸಿ. ಆನ್ ಲೈನ್‌ನಲ್ಲಿ ತುಂಬಾ ಕಡಿಮೆಗೆ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಹೆಚ್ಚಿನವರು ಇದನ್ನು ಖರೀದಿ ಮಾಡುತ್ತಾರೆ. ಆದರೆ ಅದನ್ನು ನೋಡಿದಾಗ ಅಥವಾ ಅದನ್ನು ಬಳಸುವಾಗ ಅದರ ಚರಿತ್ರೆ ತಿಳಿಯುತ್ತದೆ.

ನ್ಯೂಡ್

ನ್ಯೂಡ್

ನ್ಯೂಡ್ ಲಿಪ್ ಸ್ಟಿಕ್ ನ್ನು ಆನ್ ಲೈನ್ ನಲ್ಲಿ ಖರೀದಿ ಮಾಡಲು ಹೋಗಬೇಡಿ. ನ್ಯೂಡ್ ಲಿಪ್ ಸ್ಟಿಕ್ ಗಳು ಚರ್ಮದ ಟೋನ್ ಅನ್ನು ಕಿತ್ತುಹಾಕುತ್ತವೆ. ಇದರಿಂದ ಲಿಪ್ ಸ್ಟಿಕ್ ಖರೀದಿಸುವ ಮೊದಲು ಅದನ್ನು ಒಮ್ಮೆ ಪ್ರಯತ್ನಿಸಿ ನೋಡಿ.

 
English summary

Things To Remember When You Buy A Lipstick

You pick the wrong one and it could mess your entire look. Since lips really stand out on the use of lipsticks, we must ensure to know of the things to remember before buying a lipstick. So, here's a list of the things you should keep in mind when you buy a lipstick.
Please Wait while comments are loading...
Subscribe Newsletter