For Quick Alerts
ALLOW NOTIFICATIONS  
For Daily Alerts

ತುಟಿಯ ರಂಗು ಬೇಗನೆ ಮಾಸದಿರಲು ಬ್ಯೂಟಿ ಟಿಪ್ಸ್

|

ಚೆನ್ನಾಗಿ ಡ್ರೆಸ್ ಮಾಡಿ, ಮೇಕಪ್ ಮಾಡಿ, ತುಟಿಯೂ ರಂಗಿನಿಂದ ಕೂಡಿರಲಿ ಎಂದು ಲಿಪ್ ಸ್ಟಿಕ್ ಹಚ್ಚಿರುತ್ತೇವೆ. ಹಚ್ಚಿದ ಲಿಪ್ ಸ್ಟಿಕ್ ಸ್ವಲ್ಪ ಹೊತ್ತಿನಲ್ಲಿ ಹೋದರೆ ಕಿರಿಕಿರಿ ಅನಿಸುತ್ತದೆ ಅಲ್ಲವೇ? ಆಗಾಗ ಲಿಪ್ ಸ್ಟಿಕ್ ಹಚ್ಚಲೂ ಬೇಜಾರಾಗುತ್ತದೆ.

ಇಲ್ಲಿ ನಾವು ಕೆಲ ಟಿಪ್ಸ್ ನೀಡಿದ್ಧೇವೆ, ಅವುಗಳನ್ನು ಪಾಲಿಸಿದರೆ ತುಟಿ ತುಂಬಾ ಹೊತ್ತು ರಂಗಿನಿಂದ ಕೂಡಿರುವಂತೆ ಮಾಡಬಹುದು, ಲಿಪ್ ಸ್ಟಿಕ್ ಬಣ್ಣ ಬೇಗನೆ ಮಾಸದಿರಲು ಏನು ಮಾಡಬೇಕೆಂದು ತಿಳಿಯಬೇಕೆ? ಹಾಗಾದರೆ ಇಲ್ಲಿ ನೋಡಿ:

ತುಟಿಯಲ್ಲಿ ರಂಗು ಮಾಸದಿರಲು ಟಿಪ್ಸ್

Make Your Lipstick Last Longer: Tips

* ತುಟಿಗೆ ಹಚ್ಚಿದ ಬಣ್ಣ ತುಂಬಾ ಹೊತ್ತಿನವರೆಗೆ ಇರಲು ರಾತ್ರಿ ಲಿಪ್ ಸ್ಟಿಕ್ ಅನ್ನು ಫ್ರಿಜ್ ನಲ್ಲಿಡಿ, ಬೆಳಗ್ಗೆ ಹಚ್ಚಿ, ಹೀಗೆ ಮಾಡಿದರೆ ಲಿಪ್ ಸ್ಟಿಕ್ ಬೇಗನೆ ಮಾಸುವುದಿಲ್ಲ.

* ಲಿಪ್ ಸ್ಟಿಕ್ ಹಚ್ಚುವ ಮುನ್ನ ತುಟಿಗೆ ಪೌಡರ್ ಹಚ್ಚಿ, ನಂತರ ಲಿಪ್ ಸ್ಟಿಕ್ ಹಚ್ಚಿದರೆ ಬಣ್ಣ ತುಟಿಯ ಮೇಲೆ ತುಂಬಾ ಹೊತ್ತಿನವರೆಗೆ ಇರುತ್ತದೆ.

* ಲಿಪ್ ಸ್ಟಿಕ್ ತುಟಿಗೆ ಹಚ್ಚಿದಾಗ ತುಟಿ ತುಂಬಾ ಆಕರ್ಷಕವಾಗಿ ಕಾಣಲು ಮೊದಲು ಲಿಪ್ ಲೈನರ್ ಹಚ್ಚಿ ನಂತರ ಲಿಪ್ ಸ್ಟಿಕ್ ಹಚ್ಚಿ, ಲಿಪ್ ಸ್ಟಿಕ್ ಬಣ್ಣ ಮತ್ತು ಲಿಪ್ ಲೈನರ್ ಬಣ್ಣ ಮ್ಯಾಚ್ ಆಗುವಂತೆ ಇರಲಿ. ಇದರಿಂದ ಲಿಪ್ ಸ್ಟಿಕ್ ಸ್ಪ್ರೆಡ್ ಆಗುವುದನ್ನು ತಡೆಯಬಹುದು.

* ನ್ಯೂಡ್ ಬಣ್ಣದ ಲಿಪ್ ಸ್ಟಿಕ್ ಹಚ್ಚುವುದಾದರೆ ಪೌಡರ್ ಹಚ್ಚಿ ಹಚ್ಚಿ, ನಂತರ ಅದರ ಮೇಲೆ ಲಿಪ್ ಗ್ಲೋಸ್ ಹಚ್ಚಿ.

* ಲಿಪ್ ಸ್ಟಿಕ್ ತುಂಬಾ ಹೊತ್ತು ಇರಲು ಎರಡು ಕೋಟ್ ಹಾಕಿ, ಹೀಗೆ ಹಾಕುವಾಗ ಎರಡು ಬಣ್ಣದ ಲಿಪ್ ಸ್ಟಿಕ್ ಬಣ್ಣವನ್ನು ಟ್ರೈ ಮಾಡಬಹುದು. ಯಾವ ಎರಡು ಬಣ್ಣ ಮಿಕ್ಸ್ ಮಾಡಿದರೆ ಚೆನ್ನಾಗಿರುತ್ತದೆ ಎಂದು ನಿಮಗನಿಸುತ್ತದೆಯೋ ಆ ಬಣ್ಣವನ್ನು ಹಚ್ಚಿ. ಕೆಲವೊಮ್ಮೆ ಎರಡು ಬಣ್ಣಕ್ಕೆ ಹೊಂದಾಣಿಕೆಯಾಗದಿದ್ದರೆ ತುಟಿ ತುಂಬಾ ಕೆಟ್ಟದಾಗಿಯೂ ಕಾಣಬಹುದು. ಆದ್ದರಿಂದ ಎಚ್ಚರ.
ಹೇಗಿದೆ ಈ ಬ್ಯೂಟಿ ಟಿಪ್ಸ್ ? ಟ್ರೈ ಮಾಡಿ ಹೇಳಿ.

English summary

Make Your Lipstick Last Longer: Tips

If you want to look unique and extra gorgeous with your favourite lipstick on, here are some of the best lipstick tips to keep in mind.
 
 
Story first published: Thursday, October 10, 2013, 17:19 [IST]
X
Desktop Bottom Promotion