ಕಂದು ಕಣ್ಣಿನ ಸುಂದರಿಯರಿಗೆ ವಿಶೇಷ ಬಗೆಯ ಐ ಮೇಕಪ್

By: Divya
Subscribe to Boldsky

ಹೆಣ್ಣಿನ ಸೌಂದರ್ಯವನ್ನು ಪ್ರತಿಬಿಂಬಿಸುವಲ್ಲಿ ಕಣ್ಣಿನ ಪಾತ್ರ ಮಹತ್ವವಾದದ್ದು. ಮುಖದಲ್ಲಿ ಆಕರ್ಷಿಸುವ ಕಣ್ಣುಗಳು ನಮ್ಮ ಆಕರ್ಷಣೆಯನ್ನು ಹೆಚ್ಚಿಸುವುದು. ಹಾಗಾಗಿ ಅದರ ಮೇಕಪ್ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಪ್ರತಿಯೊಬ್ಬರ ಕಣ್ಣುಗಳ ಬಣ್ಣದಲ್ಲಿ ಸ್ವಲ್ಪ ವ್ಯತ್ಯಾಸಗಳಿರುತ್ತವೆ. ಕೆಲವರ ಕಣ್ಣು ಕಡು ಕಪ್ಪು ಬಣ್ಣ, ನೀಲಿ ಕಣ್ಣು, ಬೂದು ಬಣ್ಣದ ಕಣ್ಣು, ಬೆಕ್ಕಿನ ಕಣ್ಣು ಹೀಗೆ ವಿವಿಧತೆಯನ್ನು ಹೊಂದಿರುತ್ತಾರೆ. ಪ್ರತಿಯೊಂದು ಬಣ್ಣದ ಕಣ್ಣಿಗೂ ವಿಶೇಷ ಬಗೆಯ ಮೇಕಪ್ ಮಾಡಬೇಕಾಗುವುದು. 

ಕಣ್ಣಿನ ಮೇಕಪ್: ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ!

ಕಂದು ಬಣ್ಣದ ಕಣ್ಣನ್ನು ಹೊಂದಿರುವವರು ಕೆಲವು ಆಕರ್ಷಕ ಮೇಕಪ್ ಮಾಡಿಕೊಳ್ಳುವುದರ ಮೂಲಕ ಇನ್ನಷ್ಟು ಆಕರ್ಷಣೆಗೆ ಒಳಗಾಗಬಹುದು. ಅದಕ್ಕಾಗಿ 5 ಬಗೆಯ ಐ ಮೇಕಪ್ ಮೊರೆ ಹೋಗಬೇಕು. ಅವು ಕಣ್ಣಿನ ಆಕಾರ ಹಾಗೂ ಆಕರ್ಷಣೆಯನ್ನು ಹೆಚ್ಚಿಸಿ, ಹೊಸ ಲುಕ್ ನೀಡುವುದು. ನೀವು ನೈಸರ್ಗಿಕವಾಗಿ ಕಂದು ಬಣ್ಣದ ಕಣ್ಣನ್ನು ಹೊಂದಿದವರಾಗಿದ್ದರೆ ಈ ಬಗೆಯ ಮೇಕಪ್ ಮಾಡಿ... ಸುಂದರಿಯರಾಗಿ...

ಡೀಪ್ ಪ್ಲಮ್ ಐ ಲೈನರ್

ಡೀಪ್ ಪ್ಲಮ್ ಐ ಲೈನರ್

ದಪ್ಪವಾದ ಪ್ಲಮ್ ಐ ಲೈನರ್ ಕಂದು ಬಣ್ಣದ ಕಣ್ಣಿನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ನಿಮ್ಮ ಆಯ್ಕೆ ಕಡು ಕಂದು ಬಣ್ಣದ ಐಲೈನರ್ ಆಗಬೇಕು. ಕಂದು ಬಣ್ಣದ ಐ ಲೈನರ್‌ನಿಂದ ಕಂದು ಬಣ್ಣದ ಕಣ್ಣು ಇನ್ನಷ್ಟು ಸುಂದರವಾಗಿ ಗೋಚರಿಸುವುದು ಎಂದು ಹೇಳಲಾಗುತ್ತದೆ.

ವೈಟ್ ಕೋಲ್

ವೈಟ್ ಕೋಲ್

ಬಿಳಿಯ ಕೋಲ್‍ಅನ್ನು ಕಣ್ಣಿಗೆ ಬಳಸುವುದರಿಂದ ಹೆಚ್ಚು ಆಕರ್ಷಕವಾಗಿರುತ್ತದೆ. ಅದರಲ್ಲೂ ಕಂದು ಬಣ್ಣದ ಕಣ್ಣಿನವರು ಎರಡು ರೆಪ್ಪೆಯ ಮೇಲ್ಭಾಗದಲ್ಲಿ ಬಿಳಿ ಬಣ್ಣದ ಕೋಲ್ ಬಳಸುವುದರಿಂದ ಕಣ್ಣುಗಳು ಎದ್ದು ಕಾಣುತ್ತವೆ.

ಕೋಬಾಲ್ಟ್ ಬ್ಲೂ ಶೇಡ್

ಕೋಬಾಲ್ಟ್ ಬ್ಲೂ ಶೇಡ್

ಕೋಬಾಲ್ಟ್ ಬ್ಲೂ ಶೇಡ್ ಕಂದು ಕಣ್ಣುಗಳಿಗೆ ಉತ್ತಮ ಮೆರಗನ್ನು ನೀಡುತ್ತದೆ. ಇದನ್ನು ದಪ್ಪವಾಗಿ ಅನ್ವಯಿಸಿಕೊಳ್ಳುವುದರಿಂದ ಕಂದು ಬಣ್ಣದ ಕಣ್ಣಿನ ನೈಜ ಸೌಂದರ್ಯ ಹೊರ ಹೊಮ್ಮುವುದು. ಪಾರ್ಟಿ ಹಾಗೂ ಸಮಾರಂಭಗಳಿಗೆ ಹೋಗುವಾಗ ಇದು ಉತ್ತಮ ಲುಕ್/ನೋಟ ನೀಡುವುದು. ಕಂದು ಕಣ್ಣಿಗೆ ಇದೊಂದು ಉತ್ತಮ ಪರಿಕಲ್ಪನೆ ಎನ್ನಬಹುದು.

ನ್ಯಾಚುರಲ್ ಮತ್ತು ನ್ಯೂಟ್ರಲ್ ಮೇಕಪ್

ನ್ಯಾಚುರಲ್ ಮತ್ತು ನ್ಯೂಟ್ರಲ್ ಮೇಕಪ್

ಕಣ್ಣಿಗೆ ನೈಸರ್ಗಿಕ ಹಾಗೂ ತಟಸ್ಥ ಬಣ್ಣಗಳಿಂದ ಮೇಕಪ್ ಮಾಡುವುದರಿಂದ ಅದ್ಭುತ ನೋಟವನ್ನು ಹೊಂದಬಹುದು. ದಪ್ಪವಾದ ಮತ್ತು ಕಡು ಬಣ್ಣದ ಮೇಕಪ್ ಇಷ್ಟ ಪಡದವರು ಈ ಬಗೆಯ ಐ ಶೇಡ್ ಆಯ್ಕೆ ಮಾಡಬಹುದು. ಕಣ್ಣಿನ ಮೇಲ್ಭಾಗ ಮತ್ತು ಕೆಳಭಾಗದ ರೆಪ್ಪೆಗಳಿಗೆ ತಟಸ್ಥ ನೆರಳು ಅನ್ವಯಿಸುವ ಶೇಡ್ ಮಾಡುವುದರಿಂದ ಕಣ್ಣುಗಳು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುವುದು.

ಮೆಟಾಲಿಕ್ ಶೇಡ್ ಮೇಕಪ್

ಮೆಟಾಲಿಕ್ ಶೇಡ್ ಮೇಕಪ್

ಮೆಟಾಲಿಕ್/ಲೋಹೀಯ ನೆರಳಿನಂತಹ ಶೇಡ್ ಬಳಕೆಯ ಮೇಕಪ್ ಮಾಡುವುದರಿಂದ ಹೆಚ್ಚು ಸ್ಟೈಲಿಶ್ ಲುಕ್ ನೀಡುವುದು. ಮೆಟಾಲಿಕ್ ಶೇಡ್ ಚಿನ್ನ, ಬೆಳ್ಳಿ ಹಾಗೂ ಕಂಚಿನ ಲೋಹದ ಛಾಯೆಯನ್ನು ಒಳಗೊಂಡಿರುತ್ತದೆ. ಈ ಬಗೆಯ ಶೇಡ್‍ಗಳಿಂದ ಕಣ್ಣಿನ ಮೇಕಪ್ ಮಾಡಿಕೊಂಡರೆ ಕಂದು ಕಣ್ಣುಗಳು ಅನನ್ಯ ಮತ್ತು ದಪ್ಪ ನೋಟವನ್ನು ನೀಡುತ್ತವೆ.

English summary

Stunning Makeup Ideas For Brown Eyes To Look Beautiful

Eyes are an asset for every woman. Those who have naturally brown eyes are considered to be very attractive. Hence, opting for the right eye makeup to accentuate the eyes is also important, in order to enhance their beauty. There are various ways of makeup by which you can draw attention and beautify your brown eyes.
Subscribe Newsletter