For Quick Alerts
ALLOW NOTIFICATIONS  
For Daily Alerts

ಮೈ ಮನಸ್ಸು ಸೆಳೆಯುವ ತರಹೇವಾರಿ ಮದರಂಗಿ ಡಿಸೈನ್‌ಗಳು

By Lekhaka
|

ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ....ಹೀಗೆ ಮದರಂಗಿ ಬಗ್ಗೆ ಹಲವಾರು ಹಾಡುಗಳು ಸ್ಯಾಂಡಲ್ ವುಡ್ ನಲ್ಲಿದೆ. ಮದರಂಗಿ ಎನ್ನುವುದು ದಕ್ಷಿಣ ಏಶ್ಯಾದವರ ಮದುವೆಯ ಪ್ರಮುಖ ಭಾಗ. ಹಿಂದೆ ಮದರಂಗಿಯನ್ನು ಒಂದು ಸಂಪ್ರದಾಯವಾಗಿ ಪರಿಗಣಿಸಲಾಗುತ್ತಿತ್ತು. ಆದರೆ ಆಧುನಿಕತೆ ಬಂದಂತೆ ಇದೊಂದು ಟ್ರೆಂಡ್ ಆಗಿದೆ. ಮದುವೆಗೆ ಮೊದಲು ನಡೆಯುವ ಮದರಂಗಿ ಮತ್ತು ಸಂಗೀತ ಕಾರ್ಯಕ್ರಮಗಳಲ್ಲಿ ಕುಟುಂಬದ ಪ್ರತಿಯೊಬ್ಬರು ಭಾಗವಹಿಸಿ ಆನಂದ ಪಡುವರು.

ಸಂಗೀತ ಕಾರ್ಯಕ್ರಮವೆಂದರೆ ಮಹಿಳೆಯರು ಹಾಡು ಹಾಡಿ ನೃತ್ಯ ಮಾಡುವುದು. ಮದರಂಗಿಯು ಕೆಲವರಿಗೆ ಅತೀ ಪ್ರಾಮುಖ್ಯ ವಾಗಿರುವುದು. ಹೆಚ್ಚಿನವರು ವಿವಿಧ ರೀತಿಯ ವಿನ್ಯಾಸಗಳು ಇರುವ ಮದರಂಗಿಯನ್ನು ಕೈ ಹಾಕಿಕೊಳ್ಳುವರು. ಆದರೆ ಇಂದಿನ ದಿನಗಳಲ್ಲಿ ಸಂಗೀತಕ್ಕೆ ಮಾತ್ರ ಮದರಂಗಿಯನ್ನು ಇಡುವುದಿಲ್ಲ.

ಕರ್ವಾ ಚೌತಿ, ತೀಜ್ ಮತ್ತು ಈದ್‌ಗೂ ಮದರಂಗಿಯನ್ನಿಡುವರು. ಇಂದಿನ ದಿನಗಳಲ್ಲಿ ಮಹಿಳೆಯರ ಅಂಗೈಯಿಂದ ಹಿಡಿದು ಭುಜದ ತನಕ ಮದರಂಗಿ ವಿನ್ಯಾಸವಿರುವುದನ್ನು ಕಾಣಬಹುದು. ಕಾಲಿಗೂ ವಿಧವಿಧದ ವಿನ್ಯಾಸ ಮಾಡಿಸಿಕೊಳ್ಳುವರು. ವಿವಿಧ ರೀತಿಯ ಮದರಂಗಿ ವಿನ್ಯಾಸಗಳ ಬಗ್ಗೆ ನೀವು ಈ ಲೇಖನ ಮೂಲಕ ತಿಳಿಯಿರಿ....

ಭಾರತೀಯ ಮದರಂಗಿ ವಿನ್ಯಾಸ

ಭಾರತೀಯ ಮದರಂಗಿ ವಿನ್ಯಾಸ

ಭಾರತೀಯ ಮೆಹಂದಿ ವಿನ್ಯಾಸದಲ್ಲಿ ವಿಶೇಷವಾಗಿ ಸುಂದರವಾಗಿರುವ ಹೂವುಗಳು, ನವಿಲಿನ ನರ್ತನ, ಕೆಲವೊಮ್ಮೆ ಮನುಷ್ಯರ ಆಕೃತಿಗಳು ಇರುವುದು. ಇದರಲ್ಲಿ ಯಾವುದೇ ಜಾಗವಿರುವುದಿಲ್ಲ. ಇದರಿಂದಾಗಿ ವಿನ್ಯಾಸವೂ ಪರಿಪೂರ್ಣ ಹಾಗೂ ಇಡೀಯಾಗಿ ಕಾಣುವುದು. ಈ ವಿನ್ಯಾಸಗಳು ತುಂಬಾ ಜಟಿಲ ಮತ್ತು ಕ್ಲಾಸಿಯಾಗಿರುವ ಕಾರಣ ಕೈಯಲ್ಲಿ ಅದು ಅದ್ಭುತವಾಗಿ ಕಾಣಿಸುವುದು.

ಅರೇಬಿಕ್ ಮದರಂಗಿ ವಿನ್ಯಾಸ

ಅರೇಬಿಕ್ ಮದರಂಗಿ ವಿನ್ಯಾಸ

ಅರೇಬಿಕ್ ಮದರಂಗಿ ವಿನ್ಯಾಸವು ತುಂಬಾ ಸಾಂದ್ರ. ಈ ವಿನ್ಯಾಸಗಳಲ್ಲಿ ಹೊರಭಾಗವು ತುಂಬಾ ಅಲಂಕಾರ ಮಾಡಿದಂತೆ ಕಾಣಿಸುವುದು. ಆದರೆ ವಿನ್ಯಾಸದ ಒಳಭಾಗದಲ್ಲಿ ಹೆಚ್ಚಿಗೆ ತುಂಬಿರುವುದಿಲ್ಲ. ಭಾರತೀಯ ವಿನ್ಯಾಸಕ್ಕೆ ಹೋಲಿಸಿದರೆ ಇದು ತುಂಬಾ ಸರಳ. ಈ ವಿನ್ಯಾಸದಲ್ಲಿ ಹೂವುಗಳು, ಬಳ್ಳೀಗಳು ಮತ್ತು ಎಲೆಗಳಿರುವುದು. ಇದನ್ನು ಮದರಂಗಿಯಲ್ಲಿ ಅತಿಯಾಗಿ ಬಳಸುವ ವಿನ್ಯಾಸ.

ಪಾಕಿಸ್ತಾನಿ ಮದರಂಗಿ ವಿನ್ಯಾಸ

ಪಾಕಿಸ್ತಾನಿ ಮದರಂಗಿ ವಿನ್ಯಾಸ

ಪಾಕಿಸ್ತಾನದ ಮದರಂಗಿ ವಿನ್ಯಾಸವು ಭಾರತೀಯ ಮತ್ತು ಅರೇಬಿಕ್ ಮದರಂಗಿ ವಿನ್ಯಾಸದ ಮಿಶ್ರಣವಾಗಿದೆ. ಇದರಲ್ಲಿ ಹೂವುಗಳು ಹಾಗೂ ಇತರ ಕೆಲವೊಂದು ವಿನ್ಯಾಸಗಳಿರುವುದು. ಭಾರತೀಯ ವಿನ್ಯಾಸದಂತೆ ತುಂಬಾ ಗಾಢ ಮತ್ತು ಅರೇಬಿಕ್ ವಿನ್ಯಾಸದಂತೆ ತುಂಬಾ ಸರಳ ವಿನ್ಯಾಸಗಳು ಬೇಡವೆನ್ನುವವರು ಪಾಕಿಸ್ತಾನಿ ಮದರಂಗಿ ವಿನ್ಯಾಸ ಆಯ್ಕೆ ಮಾಡಿಕೊಳ್ಳಿ. ಇದರಿಂದ ಕೈಗಳು ತುಂಬಾ ಸುಂದರ ಹಾಗೂ ಅಮೋಘವಾಗಿ ಕಾಣಿಸುವುದು.

ಇಂಡೋ ಅರೇಬಿಕ್ ಮೆಹಂದಿ ವಿನ್ಯಾಸ

ಇಂಡೋ ಅರೇಬಿಕ್ ಮೆಹಂದಿ ವಿನ್ಯಾಸ

ಅರೇಬಿಕ್ ಶೈಲಿಯಲ್ಲಿ ಹಲವಾರು ರೀತಿಯ ಸುಂದರ ಸಾಂಪ್ರದಾಯಿಕ ನಮೂನೆಗಳಿವೆ ಮತ್ತು ಇದು ತುಂಬಾ ಸೂಕ್ಷ್ಮವಾಗಿವೆ. ಇದು ಭಾರತೀಯ ಮದುವೆಗಳಿಗೆ ಅತ್ಯುತ್ತಮವಾಗಿ ಹೊಂದಿಕೊಳ್ಳುವುದು.

ಮೊರೊಕ್ಕನ್ ಮೆಹಂದಿ ವಿನ್ಯಾಸ

ಮೊರೊಕ್ಕನ್ ಮೆಹಂದಿ ವಿನ್ಯಾಸ

ಮಧ್ಯಪೂರ್ವದಿಂದ ಮೊರೊಕ್ಕನ್ ಮದರಂಗಿ ವಿನ್ಯಾಸವು ಬಂದಿದೆ. ಇದು ಜ್ಯಾಮಿತಿಯ ಮತ್ತು ಹಲವಾರು ಸುಂದರ ಹೂಗಳ ವಿನ್ಯಾಸ ಒಳಗೊಂಡಿದೆ. ಈ ವಿನ್ಯಾಸದಲ್ಲಿ ದೊಡ್ಡ ಮತ್ತು ಸಣ್ಣ ಚೌಕಗಳು, ತ್ರಿಕೋನಗಳು ಮತ್ತು ಆಯತಗಳು ಇವೆ. ಮತ್ತಷ್ಟು ನಾವೀನ್ಯತೆ ನೀಡಲು ಹೂಗಳನ್ನು ಇದರಲ್ಲಿ ಬಿಡಿಸಬಹುದು.

ಮುಘಲೈ ಮೆಹಂದಿ ವಿನ್ಯಾಸ

ಮುಘಲೈ ಮೆಹಂದಿ ವಿನ್ಯಾಸ

ಮುಘಲೈ ಮದರಂಗಿಯು ತುಂಬಾ ಸ್ವಚ್ಛ ಹಾಗೂ ವಿವರಣೆಯುಳ್ಳದ್ದಾಗಿದೆ. ಈ ವಿನ್ಯಾಸವು ತುಂಬಾ ಸುಂದರವಾಗಿರುವುದು ಮತ್ತು ವಿಭಿನ್ನ ಶೈಲಿಗಳನ್ನು ಒಳಗೊಂಡಿದೆ. ಅಲ್ಲಿ ಚುಕ್ಕೆಗಳೂ ಮತ್ತು ಸುರುಳಿಗಳು ತುಂಬಾ ಗಾಢವಾಗಿ ಎದ್ದು ಕಾಣುವುದು. ಇದು ತುಂಬಾ ಹಳೆಯ ಹಾಗೂ ಸಾಂಪ್ರದಾಯಿಕ ಮದರಂಗಿ ವಿನ್ಯಾಸವಾಗಿದೆ.

ಮದುಮಗಳ ಮದರಂಗಿ ವಿನ್ಯಾಸ

ಮದುಮಗಳ ಮದರಂಗಿ ವಿನ್ಯಾಸ

ಮದುಮಗಳ ಮದರಂಗಿ ವಿನ್ಯಾಸವು ತುಂಬಾ ಭಿನ್ನವಾಗಿರುವುದು. ಇದರಲ್ಲಿ ವಿವಿಧ ರೀತಿಯ ಹೂವುಗಳು ಮತ್ತು ಬಳ್ಳಿಗಳು ಹಾಗೂ ಇತರ ವಿನ್ಯಾಸವಿರುವುದು. ಈ ವಿನ್ಯಾಸವನ್ನು ಮೇಲಿನಿಂದ ಕೆಳಗಿನವರೆಗೆ ಮಾಡಲಾಗುತ್ತದೆ. ವಿನ್ಯಾಸದಲ್ಲಿ ಮದುಮಗ ಹಾಗೂ ಮದುಮಗಳ ಚಿತ್ರಗಳು ಇವೆ. ಇದು ತುಂಬಾ ಭಾರೀಯಾಗಿರುವ ಕಾರಣದಿಂದ ಕೈಗಳು ತುಂಬಾ ಅಲಂಕಾರ ಮಾಡಿದಂತೆ ಸುಂದರವಾಗಿ ಕಾಣಿಸುವುದು.

ಕ್ರಿಸ್ ಕ್ರಾಸ್ ನಮೂನೆ ವಿನ್ಯಾಸ

ಕ್ರಿಸ್ ಕ್ರಾಸ್ ನಮೂನೆ ವಿನ್ಯಾಸ

ಈ ವಿನ್ಯಾಸಗಳು ತುಂಬಾ ಅನನ್ಯ ಮತ್ತು ಸರಳ. ತ್ರಿಕೋನಾಕೃತಿಗಳನ್ನು ಅಂಗೈಯ ಮೇಲೆ ಬಿಡಿಸಲಾಗುತ್ತದೆ ಮತ್ತು ಈ ವಿನ್ಯಾಸವು ತುಂಬಾ ಸುಂದರವಾಗಿ ಕಾಣಿಸುವುದು. ಸಣ್ಣ ಹಾಗೂ ಸುಂದರ ಪೊಟಿಫ್ಸ್ ಗಳನ್ನು ಮಾಡಿ ವಿನ್ಯಾಸವು ಪರಿಪೂರ್ಣ ಮತ್ತು ಅನನ್ಯವಾಗಿ ಕಾಣಿಸುವಂತೆ ಮಾಡಲಾಗುತ್ತದೆ.

ಹೂವಿನ ಮದರಂಗಿ ವಿನ್ಯಾಸ

ಹೂವಿನ ಮದರಂಗಿ ವಿನ್ಯಾಸ

ಹೂವಿನ ಮದರಂಗಿ ವಿನ್ಯಾಸದಲ್ಲಿ ವಿವಿಧ ರೀತಿಯ ಹೂವುಗಳು ಹಾಗೂ ಬಳ್ಳಿಗಳಿರುವುದು. ಇದರಿಂದ ಕೈಗಳು ತುಂಬಾ ಸುಂದರ ಹಾಗೂ ವಿಶೇಷವಾಗಿ ಕಾಣಿಸುವುದು. ಈ ವಿನ್ಯಾಸವು ಸಂಗೀತ ಕಾರ್ಯಕ್ರಮ ಮತ್ತು ಮದುವೆ ಸಮಾರಂಭಗಳಿಗೆ ಕೇಳಿ ಮಾಡಿಸಿದ ವಿನ್ಯಾಸ.

ರಾಜಸ್ಥಾನಿ ಮೆಹಂದಿ ವಿನ್ಯಾಸ

ರಾಜಸ್ಥಾನಿ ಮೆಹಂದಿ ವಿನ್ಯಾಸ

ರಾಜಸ್ಥಾನಿ ಮಹಂದಿ ವಿನ್ಯಾಸದಲ್ಲಿ ಸುಂದರವಾಗಿರುವ ಹೂವುಗಳು, ನವಿಲುಗಳು ಇತ್ಯಾದಿ ಇರುವುದು. ಇಲ್ಲಿ ವಿನ್ಯಾಸದ ಮಧ್ಯೆ ಯಾವುದೇ ಜಾಗ ಬಿಡಲಾಗುವುದಿಲ್ಲ. ರಾಜಸ್ಥಾನಿ ವಿನ್ಯಾಸವು ಭಾರತೀಯ ಮೆಹಂದಿ ವಿನ್ಯಾಸದಂತೆ ಇರುವುದು. ಈ ವಿನ್ಯಾಸವು ಬೆರಳಿನಿಂದ ಹಿಡಿದು ಮೊಣಕೈಯವರೆಗೆ ಹಬ್ಬಿರುವುದು.

English summary

Best Mehendi Designs For Sangeet Ceremony

Mehendi, also referred to as henna, is considered to be the most important thing for the South Asian weddings. Earlier, mehendi used to be a very important tradition. But with each passing year, it has become a trend. Marriages and sangeet ceremonies are important occasions in one's life when all the family members come together to spend time with each other. Sangeet ceremonies are functions where all the women dance and sing together.
X
Desktop Bottom Promotion