For Quick Alerts
ALLOW NOTIFICATIONS  
For Daily Alerts

ಊಹೆಗೂ ನಿಲುಕದ ಹರಳೆಣ್ಣೆಯ ಸೌಂದರ್ಯವರ್ಧಕ ಗುಣಗಳು

By Super
|

ತ್ವಚೆಯ ಸಮಸ್ಯೆಗಳನ್ನು ಸ್ವಾಭಾವಿಕವಾಗಿ ಪರಿಹರಿಸಿಕೊಳ್ಳಲು ಇರುವಂತಹ ಕೆಲವೊಂದು ಎಣ್ಣೆಗಳಲ್ಲಿ ಹರಳೆಣ್ಣಡಗೂ ಸಹ ಸ್ಥಾನವಿದೆ. ಇದರಲ್ಲಿರುವ ಸ್ವಚ್ಛಗೊಳಿಸುವ ಮತ್ತು ಆಂಟಿಸೆಪ್ಟಿಕ್ ಅಂಶಗಳು ತ್ವಚೆಯ ಸಮಸ್ಯೆಗಳನ್ನು ಪರಿಹರಿಸಲು ಹೇಳಿ ಮಾಡಿಸಿದ ಔಷಧಿಯಾಗಿದೆ. ಹರಳೆಣ್ಣೆಯಿಂದ ಸನ್‍ಬರ್ನ್, ಮೊಡವೆ, ಒಣ ತ್ವಚೆ ಮತ್ತು ತ್ವಚೆಯ ಮೇಲಿನ ನೆರಿಗೆಗಳಂತಹ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಹರಳೆಣ್ಣೆಯು ತನ್ನಲ್ಲಿರುವ ಆಂಟಿಸೆಪ್ಟಿಕ್ ಅಂಶಗಳಿಂದಾಗಿ ಯೀಸ್ಟ್ ಮತ್ತು ಫಂಗಲ್ ಇನ್‍ಫೆಕ್ಷನ್‍ಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರ ಸಹಾಯದಿಂದ ವಾರ್ಟ್‍ಗಳು ಮತ್ತು ಅಥ್ಲೆಟ್‍ಗಳ ಪಾದದ ಸಮಸ್ಯೆಯನ್ನು ಸಹ ನಿವಾರಿಸಬಹುದು.

ಈ ಹರಳೆಣ್ಣೆಯಿಂದ ಅತ್ಯುತ್ತಮವಾದ ಪ್ರಯೋಜನವನ್ನು ಪಡೆಯಲು ಒಂದು ಹತ್ತಿಯ ಉಂಡೆಯನ್ನು ಹರಳೆಣ್ಣೆಯಲ್ಲಿ ಅದ್ದಿ, ಅದನ್ನು ಸಮಸ್ಯೆಯಿರುವ ಭಾಗಕ್ಕೆ ಲೇಪಿಸಿ. ಅರ್ಧದಿಂದ ಒಂದು ಗಂಟೆಯವರೆಗೆ ಇದನ್ನು ಒಣಗಲು ಬಿಡಿ, ನಂತರ ಇದನ್ನು ತೊಳೆಯಿರಿ. ಈ ಚಿಕಿತ್ಸೆಯನ್ನು ನೀವು ಬೆಳಗ್ಗೆ ಮತ್ತು ಸಂಜೆ ಯಾವಾಗ ಬೇಕಾದರು ಪ್ರಯೋಗಿಸಬಹುದು. ಹರಳೆಣ್ಣೆಯು ಹಲವಾರು ತ್ವಚೆಯ ಸಮಸ್ಯೆಗಳಿಗೆ ರಾಮ ಬಾಣದಂತೆ ಕಾರ್ಯ ನಿರ್ವಹಿಸುತ್ತದೆ. ಇದನ್ನು ಬಳಸುವುದರಿಂದ ಯಾವುದಾದರು ದುಷ್ಪರಿಣಾಮಗಳು ಕಂಡು ಬರುತ್ತವೆ ಎಂದು ಹೆದರಬೇಕಾದ ಅವಶ್ಯಕತೆಯಿಲ್ಲ. ಹರಳೆಣ್ಣೆಯಿಂದ ದೊರೆಯುವ ಕೆಲವೊಂದು ಸೌಂದರ್ಯದ ಪ್ರಯೋಜನಗಳನ್ನು ಈ ಕೆಳಗೆ ಪಟ್ಟಿ ಮಾಡಿದ್ದೇವೆ ಓದಿ: ಹರಳೆಣ್ಣೆಯಲ್ಲಿದೆ ಹಲವು ಪ್ರಯೋಜನ

Brilliant Beauty Uses Of Castor Oil

ಮೊಡವೆಗಳು
ಮೊಡವೆಗಳು ಹೆಚ್ಚು ಗುಳ್ಳೆಗಳನ್ನು ಮತ್ತು ತುರಿಕೆಗಳನ್ನು ಉಂಟು ಮಾಡುತ್ತದೆ. ಹರಳೆಣ್ಣೆಯು ತ್ವಚೆಯಿಂದ ಹೆಚ್ಚಿನ ಪ್ರಮಾಣದ ಕೊಳೆಯನ್ನು, ನಿರ್ಜೀವ ಕೋಶಗಳನ್ನು ಮತ್ತು ಬ್ಯಾಕ್ಟೀರಿಯಾಗಳನ್ನು ನಿರ್ಮೂಲನೆ ಮಾಡುತ್ತದೆ. ಈ ಎಣ್ಣೆಯಲ್ಲಿ ಸ್ವಚ್ಛಗೊಳಿಸುವ ಅಂಶಗಳು ಹೆಚ್ಚಾಗಿ ಇರುತ್ತವೆ. ಆದ್ದರಿಂದ ಇದು ಮೊಡವೆಗಳನ್ನು ನಿವಾರಿಸಲು ಹೆಚ್ಚು ಸಹಾಯ ಮಾಡುತ್ತದೆ. ಇದು ಹರಳೆಣ್ಣೆಯ ಒಂದು ಒಳ್ಳೆಯ ಪ್ರಯೋಜನವಾಗಿದೆ.

ದೇಹವನ್ನು ಶುದ್ಧಿಗೊಳಿಸಲು
ಈಗಾಗಲೇ ಹೇಳಿದಂತೆ ಇದರಲ್ಲಿರುವ ಶುದ್ಧಗೊಳಿಸುವ ಅಂಶಗಳು, ಹರಳೆಣ್ಣೆಯನ್ನು ಸೋಪ್ ತಯಾರಿಕೆಯಲ್ಲಿ ಸಹ ಬಳಸುವಂತೆ ಮಾಡಿವೆ. ಹರಳೆಣ್ಣೆಯನ್ನು ಒಳಗೊಂಡಿರುವ ಸೋಪನ್ನು ಬಳಸಿದರೆ, ಸುಂದರವಾದ ತ್ವಚೆ ದೊರೆಯುವುದರಲ್ಲಿ ಸಂಶಯವಿಲ್ಲ. ಇದರ ಜೊತೆಗೆ ಇದು ತ್ವಚೆಯಲ್ಲಿರುವ ರಂಧ್ರಗಳನ್ನು ಸಹ ಮುಚ್ಚಿ ಹಾಕುತ್ತದೆ. ಈ ರಂಧ್ರಗಳು ಮುಚ್ಚಿಕೊಳ್ಳುವುದರಿಂದ ಅವುಗಳಲ್ಲಿ ಧೂಳು ಮುಂತಾದ ಕಲ್ಮಶಗಳು ಬಂದು ಸೇರಿಕೊಂಡು, ಅವುಗಳಿಂದ ಸೌಂದರ್ಯ ಹಾಳಾಗುವುದು ತಪ್ಪುತ್ತದೆ.

ಮೃದುವಾದ ತ್ವಚೆ
ಹರಳೆಣ್ಣೆಯು ತ್ವಚೆಯನ್ನು ಮೃದುಗೊಳಿಸುತ್ತದೆ. ಮಲಗುವ ಮೊದಲು ಹರಳೆಣ್ಣೆಯನ್ನು ಹಚ್ಚಿಕೊಂಡು ಮಲಗುವ ಮೂಲಕ ನೀವು ಈ ಪ್ರಯೋಜನವನ್ನು ಪಡೆಯಬಹುದು. ಇದನ್ನು ನೀವು ಗಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಇದನ್ನು ನೇರವಾಗಿ ಲೇಪಿಸಲು ನಿಮಗೆ ಹಿಡಿಸಲಿಲ್ಲವಾದಲ್ಲಿ, ಹರಳೆಣ್ಣೆಯಿರುವ ಯಾವುದಾದರು ಕ್ರೀಮನ್ನು ನೀವು ಹಚ್ಚಿಕೊಳ್ಳಬಹುದು. ಇದನ್ನು ವಾರಕ್ಕೊಮ್ಮೆಯಾದರು, ಸ್ನಾನಕ್ಕೆ ಹೋಗುವ ಮುನ್ನ ಲೇಪಿಸಿಕೊಳ್ಳಿ. ಪುದೀನಾ ಎಣ್ಣೆಯಲ್ಲಿದೆ ಮ್ಯಾಜಿಕ್ ಗುಣಗಳು

ಟಾಕ್ಸಿನ್‍ಗಳನ್ನು ಹೊರಹಾಕುತ್ತದೆ
ದೇಹವು ಟಾಕ್ಸಿನ್ ಮುಕ್ತವಾದಾಗ ಮಾತ್ರವೇ ತ್ವಚೆಯು ಅಂದವಾಗಿ ಕಾಣುತ್ತದೆ. ಹರಳೆಣ್ಣೆಯು ಇದಕ್ಕೆ ಸಹಾಯ ಮಾಡುತ್ತದೆ. ಹರಳೆಣ್ಣೆಯಲ್ಲಿರುವ ಪೋಷಕಾಂಶಗಳ ಸಂಪೂರ್ಣ ಪ್ರಯೋಜನ ನಿಮಗೆ ದೊರೆಯಬೇಕು ಎಂದಾದಲ್ಲಿ ಹರಳೆಣ್ಣೆಯ ಪ್ಯಾಕ್ ತಯಾರಿಸಿಕೊಂಡು ಅದನ್ನು ಬಳಸಬಹುದು. ಇದು ನಿಮ್ಮ ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಈ ಎಲ್ಲಾ ಸೇರಿ ನಿಮ್ಮ ತ್ವಚೆಯನ್ನು ಮತ್ತಷ್ಟು ಆರೋಗ್ಯಕಾರಿಯಾಗಿ ಮತ್ತು ಅಂದವಾಗಿ ಕಾಣುವಂತೆ ಮಾಡುತ್ತವೆ. ಈ ವಿಧಾನವನ್ನು ನೀವು ವಾರಕ್ಕೆ ಮೂರು ಬಾರಿ ಬಳಸಿದರೆ ಉತ್ತಮ. ಸುಂದರವಾದ ತ್ವಚೆಯನ್ನು ಪಡೆಯಲು ಹರಳೆಣ್ಣೆಯ ಒಂದು ಪ್ರಯೋಜನವಾಗಿದೆ.

ತ್ವಚೆಯ ಸಮಸ್ಯೆಗಳು
ಹಲವಾರು ಜನರಿಗೆ ತ್ವಚೆಯ ಮೇಲೆ ದುರ್ಮಾಂಸದ ಗಂಟುಗಳು ಗುಳ್ಳೆಗಳಂತೆ ಇರುತ್ತವೆ. ಹರಳೆಣ್ಣೆಯು ಈ ವಿಚಾರದಲ್ಲಿ ಉತ್ತಮ ಪ್ರಯೋಜನವನ್ನು ನೀಡುತ್ತದೆ. ಒಡೆದ ಪಾದಗಳ ಸಮಸ್ಯೆ ಇದ್ದಲ್ಲಿ, ಪಾದಗಳನ್ನು ಎಪ್ಸಂ ಉಪ್ಪು ಮತ್ತು ಹರಳೆಣ್ಣೆ ಹಾಕಿರುವ ಬಿಸಿ ನೀರಿನಲ್ಲಿ ಪಾದವನ್ನು ನೆನೆಸಿ. ಇದರಿಂದ ಹರಳೆಣ್ಣೆಯನ್ನು ಗಾಯ ಮತ್ತು ಇನ್‍ಫೆಕ್ಷನ್‍ಗಳಿಗೆ ಆಂಟಿಸೆಪ್ಟಿಕ್ ಆಗಿ ಸಹ ಬಳಸಬಹುದು. ನಿಮ್ಮ ಸೌಂದರ್ಯ ಇಮ್ಮಡಿಗೊಳ್ಳಬೇಕು ಎಂದಾದಲ್ಲಿ, ಹರಳೆಣ್ಣೆಯನ್ನು ಬಳಸಿ, ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಸಹ ಉಂಟಾಗುವುದಿಲ್ಲ.

English summary

Brilliant Beauty Uses Of Castor Oil

Castor oil is one of the most natural ways to treat a lot of skin problems. The cleansing and antiseptic properties of castor oil help in treating skin problems. Sunburn, acne, dry skin and stretch marks are some of the skin problems that can be resolved with castor oil.
X
Desktop Bottom Promotion