For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ತ್ವಚೆ, ತುಟಿ ಒಣಗುವುದು, ಹಿಮ್ಮಡಿ ಒಡೆಯುವುದು ತಡೆಗಟ್ಟಲು ಈಗಿನಿಂದಲೇ ಹೀಗೆ ಮಾಡಿ

|

ಇನ್ನೇನು ಚಳಿಗಾಲ ಶುರುವಾಗಲಿದೆ, ಚಳಿಗಾಲದಲ್ಲಿ ನಾವು ಇತರ ಸೀಸನ್‌ಗಿಂತ ತುಸು ಹೆಚ್ಚಾಗಿ ತ್ವಚೆ ಆರೈಕೆ ಮಾಡಬೇಕಾಗುತ್ತದೆ, ಏಕೆಂದರೆ ಈ ಸಮಯದಲ್ಲಿ ತ್ವಚೆ ಒಡೆಯುವುದು, ಸ್ಕಿನ್ ಡ್ರೈ ಮುಂತಾದ ಸಮಸ್ಯೆ ಕಂಡು ಬರುವುದು. ಇದರಿಂದಾಗಿ ತ್ವಚೆಯಲ್ಲಿ ತುರಿಕೆ, ನೋವು ಉಂಟಾಗುವುದು.

ಚಳಿಗಾಲದಲ್ಲಿ ಕೆಲವರಿಗಂತೂ ತುಂಬಾನೇ ತೊಂದರೆ ಉಂಟಾಗುತ್ತದೆ. ಕಾಲಿನ ಹಿಮ್ಮಡಿ, ಕೈಗಳು ಒಡೆದು ರಕ್ತ ಸೋರಲಾರಂಭಿಸುತ್ತದೆ, ತ್ವಚೆ ತುಂಬಾನೇ ಡ್ರೈಯಾಗುತ್ತೆ, ಅಂಥವರು ಚಳಿಗಾಲ ಪ್ರಾರಂಭವಾಗುವ ಮುನ್ನವೇ ತುಂಬಾನೇ ಮುನ್ನೆಚ್ಚರಿಕೆವಹಿಸಬೇಕು.

ಅಲ್ಲದೆ ಚಳಿಗಾಲದಲ್ಲಿ ತ್ವಚೆ ಇತರ ಸೀಸನ್‌ಗಿಂತ ಮಂಕಾಗುವುದು. ಈ ಚಳಿಗಾಲದಲ್ಲಿ ಅಂಥ ಯಾವುದೇ ಸಮಸ್ಯೆ ಬಾರದಿರಲು ಈಗಿನಿಂದಲೇ ತ್ವಚೆಯನ್ನು ಈ ರೀತಿ ಆರೈಕೆ ಮಾಡಿ.

ಮಾಯಿಶ್ಚರೈಸರ್ ಹಚ್ಚಿ

ಮಾಯಿಶ್ಚರೈಸರ್ ಹಚ್ಚಿ

ಚಳಿಗಾಲದಲ್ಲಿ ಸ್ನಾನಕ್ಕೆ ಮುನ್ನ ಮೈಗೆ ಎಣ್ಣೆ ಹಚ್ಚಿ. ಕೊಬ್ಬರಿ ಎಣ್ಣೆ ಅಥವಾ ಬಾದಾಮಿ ಎಣ್ಣೆ ಹಚ್ಚಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ. ಚಳಿಗಾಲದಲ್ಲಿ ತುಂಬಾ ಬೆಚ್ಚಗಿನ ನೀರು ಮೈಗೆ ಹಾಕಬೇಕೆನಿಸುತ್ತದೆ, ಆದರೆ ಹ ಮೈಗೆ ತುಂಬಾ ಬಿಸಿ-ಬಿಸಿ ನೀರು ಹಾಕುವುದರಿಂದ ತ್ವಚೆಯಲ್ಲಿರುವ ಮಾಯಿಶ್ಚರೈಸರ್‌ ಕಡಿಮೆಯಾಗಿ ತ್ವಚೆ ಶುಷ್ಕವಾಗುವುದು (ಸ್ಕಿನ್ ಡ್ರೈಯಾಗುವುದು). ಆದ್ದರಿಂದ ತುಂಬಾ ಬಿಸಿ ನೀರನ್ನು ಮೈಗೆ ಹಾಕಬೇಡಿ ಅಲ್ಲದೆ ತುಂಬಾ ಹೊತ್ತು ಶವರ್‌ ಅಡಿಯಲ್ಲಿ ನಿಲ್ಲಬೇಡಿ.

ಸ್ನಾನದ ಬಳಿಕ ಮಾಯಿಶ್ಚರೈಸರ್ ಹಚ್ಚಿ

ಸ್ನಾನದ ಬಳಿಕ ಮಾಯಿಶ್ಚರೈಸರ್ ಹಚ್ಚಿ

ಸ್ನಾನದ ಬಳಿಕ ಇಡೀ ಮೈಗೆ ಮಾಯಿಶ್ಚರೈಸರ್ ಹಚ್ಚಿ. ಮಾಯಿಶ್ಚರೈಸರ್‌ ಕೊಳ್ಳುವಾಗ ಸುವಾಸನೆ ಕಡಿಮೆ ಇರುವ ಮಾಯಿಶ್ಚರೈಸರ್ ಬಳಸಿ. ಚಳಿಗಾಲದಲ್ಲಿ ಎಣ್ಣೆಯಂಶವಿರುವ ಮಾಯಿಶ್ಚರೈಸರ್‌ ಬಳಸುವುದು ಒಳ್ಳೆಯದು.

ರಾತ್ರಿ ಮಲಗುವಾಗ ಡೀಪ್‌ ಮಾಯಿಶ್ಚರೈಸರ್‌ ಹಚ್ಚಿ ಮಲಗುವುದು ಒಳ್ಳೆಯದು.

ನಿಮ್ಮ ತ್ವಚೆಯನ್ನು ಕ್ಲೆನ್ಸ್‌ ಮಾಡಿ

ನಿಮ್ಮ ತ್ವಚೆಯನ್ನು ಕ್ಲೆನ್ಸ್‌ ಮಾಡಿ

ತ್ವಚೆಯನ್ನು ತುಂಬಾ ಕ್ಲೆನ್ಸ್ ಮಾಡಬೇಕು. ಕ್ಲೆನ್ಸ್‌ ಮಾಡುವುದರಿಂದ ದೇಹದಲ್ಲಿರುವ ಕಶ್ಮಲಗಳನ್ನು ಹೊರ ಹಾಕಬಹುದು ಹಾಗೂ ಇದರಿಂದ ರಕ್ತ ಸಂಚಾರ ಸರಾಗವಾಗಿ ನಡೆಯವುದು.

ದೇಹವನ್ನು ಕ್ಲೆನ್ಸ್ ಮಾಡಿ

* ಒಂದು ಗ್ಲಾಸ್ ಬಿಸಿ ನೀರಿಗೆ ನಿಂಬೆರಸ ಹಾಕಿ ಅದಕ್ಕೆ ಸ್ವಲ್ಪ ಶುಂಠಿ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

* ಪ್ಯಾಕ್ ಮಾಡಿದ ಜ್ಯೂಸ್‌ ಸೇವಿಸಬೇಡಿ

* ಚೆನ್ನಾಗಿ ನಿದ್ದೆ ಮಾಡಿ

* ನಿಮ್ಮ ಆಹಾರದಲ್ಲಿ ಪ್ರೊಬಯೋಟಿಕ್ ಹೆಚ್ಚಾಗಿ ಸೇರಿಸಿ.

* ಮೆಂತೆ ಟೀ ಕುಡಿಯಿರಿ.

ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯಿರಿ

ನಿಮ್ಮ ತ್ವಚೆಯ ಆರೋಗ್ಯಕ್ಕೆ ತುಂಬಾ ನೀರು ಕುಡಿಯಿರಿ. ದಿನದಲ್ಲಿ 8 ಲೋಟ ನೀರು ಕುಡಿಯಿರಿ. ನೀರಿಗೆ ಸ್ವಲ್ಪ ಅರಿಶಿಣ ಅಥವಾ ಅಶ್ವಗಂಧದ ಪುಡಿ ಹಾಕಿ ಕುಡಿಯಿರಿ.

ಸನ್‌ಸ್ಕ್ರೀನ್ ಬಳಸಿ

ಸನ್‌ಸ್ಕ್ರೀನ್ ಬಳಸಿ

ಚಳಿಗಾಲದಲ್ಲೂ ಸನ್‌ಸ್ಕ್ರಿನ್ ಬಳಸಿ. ಚಳಿಗಾಲದಲ್ಲಿ ಮಧ್ಯಾಹ್ನ ಹೊತ್ತು ಬಿಸಿಲಿನ ಉರಿ ಹೆಚ್ಚಿರುತ್ತದೆ, ಬೇಗನೆ ತ್ವಚೆ ಟ್ಯಾನ್ ಆಗುವುದು, ಆದ್ದರಿಂದ ಸ್ಕಿನ್‌ಸ್ಕ್ರೀನ್‌ ಹೊರಗಡೆ ಹೋಗುವಾಗ ಸನ್‌ಸ್ಕ್ರೀನ್‌ ಬಳಸಿ.

ಪಾದಗಳ ಆರೈಕೆ

ಪಾದಗಳ ಆರೈಕೆ

ಚಳಿಗಾಲದಲ್ಲಿ ಪಾದಗಳಲ್ಲಿ ಬಿರುಕು ಬರುವ ಸಮಸ್ಯೆ ತಡೆಗಟ್ಟಲು ಪ್ರತಿದಿನ ಮಲಗುವ ಮುನ್ನ ಹಿಮ್ಮಡಿಗೆ ಮಾಯಿಶ್ಚರೈಸರ್ ಅಥವಾ ವ್ಯಾಸ್ಲೀನ್‌ ಜೆಲ್‌ ಹಚ್ಚಿ. ಹೀಗೆ ಮಾಡುವುದರಿಂದ ಪಾದಗಳಲ್ಲಿ ಬಿರುಕು ಉಂಟಾಗುವುದನ್ನು ತಡೆಗಟ್ಟಬಹುದು.

ತುಟಿಗಳ ಆರೈಕೆ

ತುಟಿಗಳ ಆರೈಕೆ

ತುಟಿಗೆ ಪ್ರತಿದಿನ ಲಿಪ್‌ಬಾಮ್‌ ಹಚ್ಚಿ. ತುಪ್ಪ, ಜೇನು ತುಪ್ಪ ಇವುಗಳನ್ನು ತುಟಿಗೆ ಹಚ್ಚುವುದರಿಂದ ತುಟಿ ಡ್ರೈಯಾಗುವುದನ್ನು ತಡೆಗಟ್ಟಬಹುದು.

ಸಲಹೆ: ಈ ರೀತಿ ಚಲಿಗಾಲದಲ್ಲಿ ತ್ವಚೆಯನ್ನು ಆರೈಕೆ ಮಾಡಿದರೆ ಸಾಕು, ಯಾವ ತ್ವಚೆ ಸಮಸ್ಯೆಯೂ ಇರಲ್ಲ, ಚಳಿಗಾಲದಲ್ಲೂ ನಿಮ್ಮ ಸೌಂದರ್ಯದ ಕಳೆ ಹೆಚ್ಚುವುದು.

English summary

Things You Must Do To Your Skin In Cold And Dry Winter Season in kannada

Winter Skin Care Tips: These are things you must to do in cold and dry winter season, read on...
Story first published: Friday, October 7, 2022, 14:29 [IST]
X
Desktop Bottom Promotion