For Quick Alerts
ALLOW NOTIFICATIONS  
For Daily Alerts

ರಾತ್ರಿ ಇವುಗಳನ್ನು ಹಚ್ಚಿದರೆ ತ್ವಚೆಯ ತುಂಬಾನೇ ಕಾಂತಿಯುತವಾಗುವುದು

|

ನೀವು ತುಂಬಾ ಚೆನ್ನಾಗಿ ಕಾಣಬೇಕೆಂದರೆ ದುಬಾರಿ ಕ್ರೀಮ್, ಫೇಶಿಯಲ್‌ ಅಂತ ತುಂಬಾ ಖರ್ಚು ಮಾಡಬೇಕಾಗಿಲ್ಲ. ನೀವು ತ್ವಚೆ ಆರೈಕೆ ಕಡೆಗೆ ಸ್ವಲ್ಪ ಗಮನ ನೀಡಿದರೆ ಸಾಕು.

skin care tips

ಏಕೆಂದರೆ ವಾತಾವರಣದಲ್ಲಿರುವ ಮಾಲಿನ್ಯ (ವಾಯು, ನೀರು, ಕೆಮಿಕಲ್), ಮೇಕಪ್‌ ಇವೆಲ್ಲಾ ತ್ವಚೆಯ ಮೇಲೆ ಗಂಭೀರ ಪರಿಣಾಮ ಬೀರುವುದು. ಆದರೆ ಇವುಗಳಿಂದ ತ್ವಚೆಯನ್ನು ರಕ್ಷಣೆ ಮಾಡಲು ನೀವು ತ್ವಚೆ ಆರೈಕೆ ಕಡೆಗೆ ಸ್ವಲ್ಪ ಗಮನ ಕೊಟ್ಟರೆ ಸಾಕಾಗುತ್ತದೆ.

ಅದರಲ್ಲೂ ಮುಖದ ಗ್ಲೋ ಹೆಚ್ಚಲು ರಾತ್ರಿ ಹೊತ್ತಿನಲ್ಲಿ ಮಾಡುವ ಆರೈಕೆ ತುಂಬಾನೇ ಮುಖ್ಯ. ಮುಖದ ಕಾಂತಿ ಹೆಚ್ಚಲು ಮಲಗುವ ಮುಂಚೆ ಯಾವ ರೀತಿ ತ್ವಚೆ ಆರೈಕೆ ಮಾಡಬೇಕು ಎಂದು ಹೇಳಲಾಗಿದೆ ನೋಡಿ:

 ಮಲಗುವ ಮುನ್ನ ಮುಖವನ್ನು ತೊಳೆಯಿರಿ

ಮಲಗುವ ಮುನ್ನ ಮುಖವನ್ನು ತೊಳೆಯಿರಿ

ದಿನವಿಡೀ ದುಡಿದು ದಣಿದಾಗ ರಾತ್ರಿ ಒಮ್ಮೆ ದಿಂಬಿಗೆ ತಲೆಕೊಟ್ಟರೆ ಸಾಕು ಎಂದೆನಿಸುವುದು, ಆದರೆ ಹಾಗೇ ಮಲಗಬೇಡಿ ನಿಮ್ಮ ತ್ವಚೆಗೆ ಹಾನಿಯುಂಟಾಗುವುದು. ಹದ ಬಿಸಿ ನೀರಿನಲ್ಲಿ ಮುಖ ತೊಳೆಯಿರಿ.

ರೆಟಿನೋಲ್ ಬಳಸಿ

ರೆಟಿನೋಲ್ ಬಳಸಿ

ನಿಮ್ಮ ವಯಸ್ಸು 30 ದಾಟಿದರೆ ಮಲಗುವ ಮುಂಚೆ ರೆಟಿನೋಲ್ ಬಳಸಿ. ಇದು ಮುಖದಲ್ಲಿ ಬೇಗನೆ ನೆರಿಗೆ ಬೀಳುವುದನ್ನು ತಡೆಗಟ್ಟುತ್ತೆ. ರೆಟಿನೋಲ್‌ನಲ್ಲಿರುವ ವಿಟಮಿನ್ ಎ ತ್ವಚೆಯಲ್ಲಿ ಕೊಲೆಜಿನ್‌ ಉತ್ಪತ್ತಿ ಹೆಚ್ಚಿ ನೆರಿಗೆ ಬೀಳುವುದನ್ನು ತಡೆಗಟ್ಟಲು ಸಹಕಾರಿ.

ನೀವು ರೆಟಿನೋಲ್‌ ಹಚ್ಚುವ ಮುನ್ನ ನಿಮ್ಮ ತ್ವಚೆಗೆ ಹಚ್ಚಿ ಪರೀಕ್ಷಿಸಿ. ನಿಮ್ಮದು ತುಂಬಾ ಸೂಕ್ಷ್ಮ ತ್ವಚೆಯಾದರೆ ತ್ವಚೆ ಕೆಂಪಾಗುವುದು, ಉರಿ ಕಂಡು ಬರಬಹುದು ಅಂಥವರು ಬಳಸಬೇಡಿ.

ಸರಿಯಾದ ಆ್ಯಂಟಿಆಕ್ಸಿಡೆಂಟ್‌ ಬಳಸಿ

ಸರಿಯಾದ ಆ್ಯಂಟಿಆಕ್ಸಿಡೆಂಟ್‌ ಬಳಸಿ

ವಿಟಮಿನ್‌ ಸಿ ಆ್ಯಂಟಿಆಕ್ಸಿಡೆಂಟ್‌ ಸೆರಮ್‌ ಬಳಸಿದರೆ ನಿಮ್ಮ ತ್ವಚೆ ತುಂಬಾನೇ ಚೆನ್ನಾಗಿರುತ್ತದೆ. ರಾತ್ರಿ ಹೊತ್ತಿನಲ್ಲಿ ಬಳಸಲು ಆ್ಯಂಟಿಆಕ್ಸಿಡೆಂಟ್‌ ಸೆರಮ್ ಸಿಗುತ್ತದೆ, ಅದನ್ನು ಬಳಸಿ.

ಮುಖವನ್ನು ಸ್ಕ್ರಬ್ ಮಾಡಬೇಡಿ

ಮುಖವನ್ನು ಸ್ಕ್ರಬ್ ಮಾಡಬೇಡಿ

ಇದರ ಬಗ್ಗೆ ನೀವು ತುಂಬಾನೇ ಗಮನ ನೀಡಬೇಕು. ತುಂಬಾ ಸ್ಕ್ರಬ್‌ ಮಾಡಿದರೆ ತ್ವಚೆಗೆ ಒಳ್ಳೆಯದಲ್ಲ. ವಾರಕ್ಕೊಮ್ಮೆ ಸ್ಕ್ರಬ್ ಮಾಡಿದರೆ ಒಕೆ,ಆದರೆ ಪ್ರತಿದಿನ ಮಾಡಬೇಡಿ.

English summary

Night-Time Beauty Rituals To Get Glowing Skin

Night-Time Beauty Rituals To Get Glowing Skin, Read on...
Story first published: Monday, May 23, 2022, 21:51 [IST]
X
Desktop Bottom Promotion