For Quick Alerts
ALLOW NOTIFICATIONS  
For Daily Alerts

ಮೇಕಪ್ ಇಲ್ಲದೆಯೇ ಸುಂದರವಾಗಿ ಕಾಣಿಸುವುದು ಹೇಗೆ?

By ಲೇಖಕ
|

ಸೌಂದರ್ಯದ ಬಗ್ಗೆ ಒಲವಿಲ್ಲದವರು ಸಾಮಾನ್ಯವಾಗಿ ಈ ಪ್ರಪಂಚದಲ್ಲಿಯೇ ಯಾರೂ ಇಲ್ಲ. ತಾನೂ ಚಂದ ಎಂದು ಎಲ್ಲರ ಮುಂದೆ ಹೇಳಿಕೊಳ್ಳುವುದಕ್ಕೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅಲಂಕಾರ ಭೂಷಿತರಾಗಿ ಕೆಲವರು ಸುಂದರವಾಗಿ ಕಂಡರೆ ಇನ್ನೂ ಕೆಲವರು ತಮ್ಮ ನೈಸರ್ಗಿಕ ಸೌಂದರ್ಯದಿಂದ ಇತರನ್ನು ಸೆಳೆಯುತ್ತಾರೆ. ಇವೆರಡರಲ್ಲಿ ಶಾಶ್ವತವಾಗಿ ಗಮನ ಸೆಳೆಯುವುದು ನೈಸರ್ಗಿಕ ಸೌಂದರ್ಯ ಮಾತ್ರ !

ನಿರಂತರವಾಗಿ ನೈಸರ್ಗಿಕ /ನ್ಯಾಚುರಲ್ ಆಗಿರುವುದು ಎಂದರೆ ಸ್ವಲ್ಪ ಕಷ್ಟವೇ. ಆದರೆ ನೀವು ಸ್ವಲ್ಪ ಸಮಯ ಮತ್ತು ಪ್ರಯತ್ನದ ಮೂಲಕ ನೈಸರ್ಗಿಕ ಸೌಂದರ್ಯವನ್ನು ಒಳಿಸಿಕೊಳ್ಳಬಹುದು. ಅನೇಕ ಹುಡುಗಿಯರು ಮೇಕಪ್ ಮಾಡುವುದು ಸುಂದರ ಎಂದು ಭಾವಿಸುತ್ತಾರೆ ಆದರೆ ಅದು ತಪ್ಪು ಕಲ್ಪನೆ. ಮೇಕಪ್ ನಿಮ್ಮನ್ನು ಚೆನ್ನಾಗಿ ಕಾಣುವಂತೆ ಮತ್ತು ಉತ್ತಮ ಭಾವನೆ ಉಂಟುಮಾಡಬಹುದು ಆದರೆ ನೀವು ಮೇಕಪ್/ ಅಲಂಕಾರ ಇಲ್ಲದೆ ಹೋದರೆ ಅದು ಇನ್ನೂ ಉತ್ತಮವಾಗಿ ಮಾಡಬಲ್ಲದು.

ಈ 6 ಸರಳ ಹಂತಗಳನ್ನು ಅನುಸರಿಸಿ ಮತ್ತು ನೀವು 'ಸುಂದರ' ರಾಗುವ ನಿಮ್ಮ ದಾರಿಯಲ್ಲಿ ಕಾಣಿಸಬಹುದು !

1. ಮುಖದಲ್ಲಿ ಮಾಯಿಶ್ಚರೈಸರ್ ಇರಬೇಕು

1. ಮುಖದಲ್ಲಿ ಮಾಯಿಶ್ಚರೈಸರ್ ಇರಬೇಕು

ತೇವಾಂಶಯುಕ್ತ ನಿಮ್ಮ ಮುಖವನ್ನು ಪ್ರತಿದಿನ ಸ್ವಚ್ಛಗೊಳಿಸಿ. ನಿಮ್ಮ ತ್ವಚೆಯನ್ನು ಎರಡು ಬಾರಿ ಸ್ವಚ್ಛಗೊಳಿಸುವುದರ ಮೂಲಕ ತೇವಾಂಶ ಹೋಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಬೆಳಿಗ್ಗೆ ಮತ್ತು ಮಲಗಲು ಹೋಗುವ ಮೊದಲು ಮುಖವನ್ನು ತೊಳೆಯಿರಿ. ಇದು ನಿಮ್ಮ ಚರ್ಮ ಸ್ವಚ್ಛವಾಗಿ ಮತ್ತು ತಾಜಾತನದಿಂದ ಕೂಡಿರಲು ಸಹಾಯ ಮಾಡುತ್ತದೆ. ನಿಮ್ಮ ತ್ವಚೆಗೆ ಯಾವ ರೀತಿಯ ಕ್ಲಿನ್ಸರ್ (cleanser) ಸೂಕ್ತವಾಗಿದೆ ಎಂಬುದನ್ನು ನೋಡಿಕೊಳ್ಳಿ. ಇಲ್ಲದಿದ್ದರೆ ಕೇವಲ ಸೌಮ್ಯವಾದ ಅಥವಾ ಬೇಬಿ ಸೋಪ್ ನ್ನು ಬಳಸಿ. ನೀವು ಎಣ್ಣೆಯುಕ್ತ ಚರ್ಮ ಹೊಂದಿದ್ದರೆ ಎಣ್ಣೆಮುಕ್ತ ಮೊಶ್ವರಾಯ್ಸರ್ ಬಳಸಿ. ಒಂದು ವೇಳೆ ನೀವು ತ್ವಚೆ ಶುಷ್ಕ ಅಥವಾ ಸಂಯೋಜನೆ (ಎಣ್ಣೆ ಹಾಗೂ ಶುಷ್ಕ) ಚರ್ಮ ಇದ್ದರೆ ನೀವು ಬೇರೆಯದನ್ನು ಬಳಸಬಹುದು.

2. ಮುತ್ತಿನಂತಹ ಹಲ್ಲುಗಳು

2. ಮುತ್ತಿನಂತಹ ಹಲ್ಲುಗಳು

ಅತ್ಯುತ್ತಮವಾಗಿ ಹೊಳೆಯುವ ಮುತ್ತಿನ ಮುಂದೆ ಬೇರೆ ಯಾವುದೂ ಲೆಕ್ಕಕ್ಕಿಲ್ಲ. ಆದ್ದರಿಂದ ನಿಮ್ಮ ಹಲ್ಲುಗಳ ಆರೈಕೆಯನ್ನು ಖಚಿತಪಡಿಸಿಕೊಳ್ಳಿ. ಮುಖದಲ್ಲಿ ಗಾಢ ಬಿಳಿ, ನಗು ಇವು ಹೆಚ್ಚು ಸುಂದರವಾಗಿ ಕಾಣಲು ನೆರವಾಗುತ್ತದೆ. ಕನಿಷ್ಠ ದಿನಕ್ಕೆ ಎರಡು ಬಾರಿ ನಿಮ್ಮ ಹಲ್ಲುಗಳನ್ನು ಉಜ್ಜಿ. ಮತ್ತು ಉತ್ತಮವಾದ ಟೂತ್ಪೇಸ್ಟ್ ಬಳಸಿ ಅವು ಹಲ್ಲುಗಳು ಅತ್ಯುತ್ತಮವಾಗಿ ಕಾಣುವ ಸಹಾಯ ಮಾಡುತ್ತದೆ.

ನೀರು ಹಾಗೂ ಎಳನೀರು

ನೀರು ಹಾಗೂ ಎಳನೀರು

ದಿನಕ್ಕೆ 8 ಲೋಟ ನೀರನ್ನು ಕುಡಿಯಿರಿ. ಅಂದರೆ 2 ಲೀಟರ್ ಗಳಷ್ಟು. ನೀವಗೆ ನೀರಿನ ಅವಶ್ಯಕತೆ ಸದಾ ಇದ್ದೇ ಇದೆ. ನಿಮ್ಮ ದೇಹದ 75% ಭಾಗ ನೀರಿನಿಂದ ಮಾಡಲ್ಪಟ್ಟಿದೆ ಮತ್ತು ನೀರು ಸೇವಿಸದೆ 3 ದಿನಗಳಿಗಿಂತ ಹೆಚ್ಚು ಕಾಲ ಬದುಕಲು ಸಾಧ್ಯವಿಲ್ಲ. ಕುಡಿಯುವ ನೀರು ನಿಮ್ಮ ಚರ್ಮ ಮತ್ತು ದೇಹ ಎರಡನ್ನೂ ಚೆನ್ನಾಗಿಡುತ್ತದೆ. 2 ವಾರಗಳ ಕಾಲ ನಿರಂತರವಾಗಿ 8 ಲೋಟ ನೀರನ್ನು ಹಾಗೂ ಒಂದು ಎಳನೀರನ್ನು ಕುಡಿಯುತ್ತಾ ಬನ್ನಿ, ಮತ್ತು ನೀವು ಆಗಲೇ ಫಲಿತಾಂಶಗಳನ್ನು ಕಾಣುತ್ತೀರಿ.

4. ಆಹಾರದಲ್ಲಿ ಇರಬೇಕಾದ ವಸ್ತುಗಳು

4. ಆಹಾರದಲ್ಲಿ ಇರಬೇಕಾದ ವಸ್ತುಗಳು

ಹಣ್ಣುಗಳು ಮತ್ತು ತರಕಾರಿಗಳನ್ನು ನಿಮ್ಮ ಆಹಾರದ ಕನಿಷ್ಠ ಐದು ಭಾಗಗಳಷ್ಟನ್ನು ಸೇವಿಸಿ. ಹಣ್ಣು ಮತ್ತು ತರಕಾರಿಗಳು ಕೇವಲ ನಿಮಗೆ ಮುಖ್ಯ ಅಷ್ಟೇ ಅಲ್ಲ. ನಿಮ್ಮ ಆಹಾರ ನಿಮ್ಮ ಚರ್ಮ ಪ್ರಜ್ವಲಿಸುವಲ್ಲಿ ಸಹಾಯ ಮಾಡುತ್ತದೆ.

5. ವ್ಯಾಯಾಮ

5. ವ್ಯಾಯಾಮ

ವ್ಯಾಯಾಮ ನಿಮ್ಮ ದೇಹದ ಆರೋಗ್ಯಕ್ಕೆ ಅತ್ಯಂತ ಮಹತ್ವವಾದುದು. ಜನರು ಫಿಟ್ ಆಗಿರಲು ವ್ಯಾಯಾಮ ಮಾಡಬೇಕು ಎಂದರೆ 1 ಮೈಲಿ ಓಡಬೇಕು ಎಂದು ಭಾವಿಸುತ್ತಾರೆ. ಆದರೆ ಇದು ಸತ್ಯವಲ್ಲ. ನೀವು ಯಾವುದೇ ಕಾರ್ಯದಲ್ಲಿ ಸಕ್ರಿಯವಾಗಿದ್ದರೆ ಮತ್ತು ದೈನಂದಿನ ಏನನ್ನಾದರೂ ಚಟುವಟಿಕೆಗಳನ್ನು ಮಾಡುತ್ತಿದ್ದರೆ ನೀವು ಫಿಟ್ (ದೃಡ) ಆಗಬಹುದು.

6. ನೈಸರ್ಗಿಕ ಸಹಜತೆಯಿಂದಿರಿ.

6. ನೈಸರ್ಗಿಕ ಸಹಜತೆಯಿಂದಿರಿ.

ದೊಡ್ಡ ಹಾಗೂ ಅತ್ಯಂತ ರಹಸ್ಯದ ವಿಷಯವೆಂದರೆ ನಗುತ್ತಿರುವುದು. ಹೌದು, ನಗು ಅಷ್ಟೆ. ನಿಮ್ಮ ಮನೆಯವರು, ಶಿಕ್ಷಕರು ಅಥವಾ ಪ್ರಾಣಿಯೇ ಆಗಿರಲಿ ಎಲ್ಲರಿಗೂ ಒಂದು ಕಿರುನಗೆಯನ್ನು ನೀಡಿ. ನಿಮ್ಮ ನಗು ನಿಮ್ಮಲ್ಲಿ ಬಹಳಷ್ಟು ಉತ್ತಮ ಭಾವನೆಯನ್ನು ಮೂಡಿಸುತ್ತದೆ. ಮತ್ತು ಇತರ ಜನರು ನೀವು ಯಾವ ಸ್ವರೂಪದ ವ್ಯಕ್ತಿ ಎಂದು ಅರ್ಥ ಮಾಡಿಕೊಳ್ಳುತ್ತಾರೆ. ನಿಮ್ಮ ಆಂತರಂಗ ಸ್ವಯಂ ಹೊಳಪನ್ನು ಕಾಣುವುದಕ್ಕೆ ಅವಕಾಶ ಮಾಡಿಕೊಡಿ.

ಸದಾ ನೈಸರ್ಗಿಕ ಸೌಂದರ್ಯವನ್ನು ಹೊಂದಿರುವುದಕ್ಕೆ ಇವುಗಳನ್ನು ಬಿಟ್ಟು ಬೇರೆನು ಬೇಕು?

English summary

How To Be Naturally Beautiful | Tips For Skin Care | ನೈಸರ್ಗಿಕವಾಗಿ ಸುಂದರವಾಗುವುದು ಹೇಗೆ? | ತ್ವಚೆಯ ಆರೈಕೆಗೆ ಕೆಲ ಸಲಹೆಗಳು

Staying regularly natural can be hard but all you need is a bit of time and effort and you will be beautiful. Many girls think that make-up is beautiful but they are wrong. Make-up can make you look better and feel better but it's better if you go without it.
X
Desktop Bottom Promotion