For Quick Alerts
ALLOW NOTIFICATIONS  
For Daily Alerts

ಶ್ಯಾಂಪೂವಿನಲ್ಲಿ ಈ ಅಂಶಗಳಿದ್ದರೆ ಕ್ಯಾನ್ಸರ್ ಅಪಾಯ ಹೆಚ್ಚು, ಜಾಗ್ರತೆ!

|

ಶ್ಯಾಂಪೂವಿನಿಂದ ಹಿಡಿದು ಹೇರ್‌ ಸೀರಮ್‌ನವರೆಗೂ ವಿವಿಧ ಬ್ರ್ಯಾಂಡ್‌ನ ಹೇರ್‌ಕೇರ್‌ ಪ್ರಾಡಕ್ಟ್‌ಗಳು ಇಂದು ಮಾರುಕಟ್ಟೆ, ಆನ್‌ಲೈನ್‌ನಲ್ಲಿ ಸಿಗುತ್ತಿದೆ. ಇತ್ತೀಚೆಗಂತೂ ಸ್ಕಿನ್‌ ಕೇರ್‌ ರುಟೀನ್‌ ಜೊತೆಗೆ ಹೇರ್‌ಕೇರ್‌ ರುಟೀನ್‌ ಯಾರೂ ಮರೆಯೋದೆ ಇಲ್ಲ.

ಸ್ನಾನ ಮಾಡುವ ಮೊದಲು ಬಳಸುವ ಆಯಿಲ್‌ನಿಂದ ಹಿಡಿದು, ಲೀವ್‌ಇನ್‌ ಕಂಡೀಷನರ್‌ವರೆಗೂ ಅನೇಕ ಪ್ರಾಡಕ್ಟ್‌ಗಳನ್ನು ನೀವೂ ನೋಡಿರಬಹುದು. ಹೆಚ್ಚಾಗಿ ಜಾಹೀರಾತು ನೋಡಿಯೋ ಅಥವಾ ಬೇರೆಯವರ ಮಾತು ಕೇಳಿ ಖರೀದಿಸುವ ಜನ ಹೆಚ್ಚು ಆದರೆ ಆ ಪ್ರಾಡಕ್ಟ್‌ನಲ್ಲಿ ಏನೇನು ಬಳಸಿದ್ದಾರೆ ಎಂದು ತಿಳಿದುಕೊಳ್ಳೋಕೆ ಯಾರು ಹೋಗೋದಿಲ್ಲ.

list of cancer causing cosmetics

ಆದರೆ ಈ ಹೇರ್‌ಕೇರ್‌ ಪ್ರಾಡಕ್ಟ್‌ಗಳಲ್ಲಿ ಬಳಸುವಂತಹ ಕೆಲವೊಂದು ರಾಸಾಯನಿಕ ವಸ್ತುಗಳು ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಎನ್ನುತ್ತದೆ ಸಂಶೋಧನೆಗಳು. ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.

ಹೇರ್‌ ಕೇರ್‌ ಪ್ರಾಡಕಕ್ಸ್ಟ್‌ ಕ್ಯಾನ್ಸರ್‌ ಅಪಾಯ ಹೆಚ್ಚಿಸುತ್ತಾ..?
ಅಧ್ಯಯನಗಳ ಪ್ರಕಾರ ಹೇರ್‌ ರಿಲ್ಯಾಕ್ಸ್‌ ಮತ್ತು ಲೀವ್‌ ಇನ್‌ ಕಂಡೀಷನರ್‌, ಹೇರ್‌ ಆಯಿಲ್‌ಗಳು ಈಸ್ಟ್ರೋಜೆನ್‌ ಅಥವಾ ಈಸ್ಟ್ರೋಜೆನ್‌ಗೆ ಅಡಚಣೆಯನ್ನುಂಟು ಮಾಡುವ ರಾಸಾಯನಿಕ ಸಂಯುಕ್ತಗಳನ್ನು ಹೊಂದಿರುತ್ತವೆ ಎನ್ನಲಾಗುತ್ತದೆ. ಈ ಸಂಯುಕ್ತವು ಕಾಸ್ಮೆಟಿಕ್‌ ಉತ್ಪನ್ನಗಳಲ್ಲಿ ಸಂರಕ್ಷವಾಗಿ ಬಳಸಲಾಗುವಂತಹ ಪ್ಯಾರಾಬೆನ್‌ನಲ್ಲಿ ಕಂಡುಬರುತ್ತದೆ.

ಈ ರಾಸಾಯನಿಕ ಮತ್ತು ಕ್ಯಾನ್ಸರ್‌ ನಡುವೆ ನೇರವಾದ ಸಂಪರ್ಕ ಇದೆ ಎಂದು ಖಡಾಖಂಡಿತವಾಗಿ ಸಾಬೀತು ಪಡಿಸಲಾಗದಿದ್ದರೂ, ಈ ರಾಸಾಯನಿಕ ಸಂಯುಕ್ತವು ಮನುಷ್ಯನ ದೇಹದಲ್ಲಿನ ಹಾರ್ಮೋನ್‌ಗಳ ಮೇಲೆ ಪರಿಣಾಮ ಬೀರುತ್ತವೆ. ಇದು ಸ್ತನ, ಪ್ರಾಸ್ಟೇಟ್‌ ಮತ್ತು ಅಂಡಾಶಯದ ಕ್ಯಾನ್ಸರ್‌ಗಳಂತಹ ಹಾರ್ಮೋನ್‌ ಸಂಬಂಧಿ ಕ್ಯಾನ್ಸರ್‌ಗಳಿಗೆ ಒಂದು ಕಾರಣವಾಗಬಹುದು. ಹಾಗಾಗಿ ಈ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸದಿರುವುದೇ ಉತ್ತಮ.

ಹೇರ್‌ಕೇರ್‌ ಪ್ರಾಡಕ್ಟ್‌ಗಳಲ್ಲಿರುವ ಹಾನಿಕಾರಕ ರಾಸಾಯನಿಕಗಳು
ಪ್ಯಾರಾಬೆನ್ಸ್
ಪ್ಯಾರಾಬೆನ್‌ಗಳನ್ನು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಸಂರಕ್ಷಕವಾಗಿ ಬಳಸಲಾಗುತ್ತದೆ. ಅಂದರೆ ಉತ್ಪನ್ನಗಳು ದೀರ್ಘಕಾಲದವರೆಗೂ ಕೆಡದಂತಿರಲು ಈ ರಾಸಾಯನಿಕವನ್ನು ಬಳಸುತ್ತಾರೆ. ಪ್ಯಾರಾಬೆನ್ ದೇಹದಲ್ಲಿನ ಸಂತಾನೋತ್ಪತ್ತಿ ಹಾರ್ಮೋನುಗಳನ್ನು ಅಡ್ಡಿಪಡಿಸುತ್ತದೆ, ಫಲವತ್ತತೆ ಮತ್ತು ಸಂತಾನೋತ್ಪತ್ತಿ ಅಂಗಗಳಿಗೆ ಹಾನಿ ಮಾಡುತ್ತದೆ, ಇದು ಗರ್ಭಧಾರಣೆಯ ಫಲಿತಾಂಶಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಕೆಲವು ಅಧ್ಯಯನಗಳು ಕಂಡುಹಿಡಿದಿದೆ.

ಬೆಂಜೀನ್
ಅನೇಕ ಜನಪ್ರಿಯ ಬ್ರಾಂಡ್‌ಗಳ ಏರೋಸಾಲ್ ಡ್ರೈ ಶಾಂಪೂದಲ್ಲಿ ಕಂಡುಬರುವ ಬೆಂಜೀನ್ ಅನ್ನು ಕಾರ್ಸಿನೋಜೆನ್ ಎಂದು ಹೇಳಲಾಗುತ್ತದೆ, ಇದು ಲ್ಯುಕೇಮಿಯಾ ಮತ್ತು ರಕ್ತ ಕಣಗಳ ಇತರ ಕ್ಯಾನ್ಸರ್‌ಗಳಿಗೆ ಕಾರಣವಾಗುವ ಹಲವಾರು ಅಪಾಯಕಾರಿ ಅಂಶಗಳಿಗೆ ಕಾರಣವಾಗಬಹುದು.

ಫಾರ್ಮಾಲ್ಡಿಹೈಡ್
ಹೇರ್‌ ಸ್ಟ್ರೈಟ್ನಿಂಗ್‌ ಹಾಗೂ ಕೆಲವು ಸ್ಮೂತಿಂಗ್‌ ಉತ್ಪನ್ನಗಳು ಫಾರ್ಮಾಲ್ಡಿಹೈಡ್ ಅನ್ನು ಹೊಂದಿರುತ್ತವೆ. ಹೆಚ್ಚು ಫಾರ್ಮಾಲ್ಡಿಹೈಡ್‌ಯುಕ್ತ ಉತ್ಪನ್ನಗಳನ್ನು ಬಳಸುವ ವೃತ್ತಿಪರರು ಸಾಮಾನ್ಯ ಜನರಿಗಿಂತ ಲ್ಯುಕೇಮಿಯಾ ಮತ್ತು ಮೆದುಳಿನ ಕ್ಯಾನ್ಸರ್‌ನ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಸಮೀಕ್ಷೆಗಳು ಹೇಳುತ್ತವೆ.

1,4-ಡಯಾಕ್ಸೇನ್
ವಾಷಿಂಗ್ಟನ್ ಮೂಲದ ಎನ್ವಿರಾನ್ಮೆಂಟಲ್ ವರ್ಕಿಂಗ್ ಗ್ರೂಪ್ (EWG), 27,000 ಕ್ಕೂ ಹೆಚ್ಚು ಉತ್ಪನ್ನಗಳಲ್ಲಿರುವ ಪದಾರ್ಥಗಳ ವ್ಯಾಪಕ ಅಧ್ಯಯನವನ್ನು ಮಾಡಿದ ನಂತರ ಎಲ್ಲಾ ಸೆಲ್ಫ್‌ಕೇರ್‌ ಉತ್ಪನ್ನಗಳಲ್ಲಿ 28 ಪ್ರತಿಶತದಷ್ಟು 1,4-ಡಯಾಕ್ಸೇನ್ ಎಂದು ಕರೆಯಲ್ಪಡುವ ಕಾರ್ಸಿನೋಜೆನ್ ಅನ್ನು ಕಂಡುಹಿಡಿದಿದೆ.

ಈ ರೀತಿಯ ಹೇರ್‌ಕೇರ್‌ ಪ್ರಾಡಕ್ಟ್‌ಗಳನ್ನು ಬಳಸದಿರಿ
ನ್ಯಾಷನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ರಾಸಾಯನಿಕ ಹೇರ್ ಸ್ಟ್ರೈಟ್‌ನರ್‌ಗಳನ್ನು ಬಳಸದ 1.6 ಪ್ರತಿಶತ ಮಹಿಳೆಯರು 70 ನೇ ವಯಸ್ಸಿನಲ್ಲಿ ಗರ್ಭಾಶಯದ ಕ್ಯಾನ್ಸರ್‌ಗೆ ಒಳಗಾದರೆ , ಆದರೆ ಅಂತಹ ಉತ್ಪನ್ನಗಳನ್ನು ನಿಯಮಿತವಾಗಿ ಬಳಸುವ 4 ಪ್ರತಿಶತ ಮಹಿಳೆಯರು ಗರ್ಭಾಶಯದ ಕ್ಯಾನ್ಸರ್‌ಗೆ ಒಳಗಾಗಿದ್ದಾರೆ. ಇದಕ್ಕೆ ಹೇರ್‌ಕೇರ್‌ ಪ್ರಾಡಕ್ಟ್‌ಗಳಲ್ಲಿನ ರಾಸಾಯನಿಕಗಳು ಹಾರ್ಮೋನ್‌ಗಳ ಮೇಲೆ ಬೀರುವ ಅಡ್ಡಪರಿಣಾಮವೂ ಕಾರಣವಾಗಿರಬಹುದು. ಈ ಬಗ್ಗೆ ಹೆಚ್ಚಿನ ಸಂಶೋಧನೆಯ ಅಗತ್ಯವಿದ್ದರೂ, ಯಾವುದೇ ಸೌಂದರ್ಯವರ್ಧಕವಾಗಲಿ ಅದರಲ್ಲಿ ಬಳಸಲಾಗಿರುವ ಉತ್ಪನ್ನಗಳ ಬಗ್ಗೆ ಖರೀದಿಸುವಾಗಲೇ ತಿಳಿದುಕೊಳ್ಳುವುದು ಉತ್ತಮ.

ಇಂದು ಹೇರ್‌ ಪ್ರಾಡಕ್ಟ್ಸ್‌ ಮಾತ್ರವಲ್ಲ ಇತರ ಸ್ಕಿನ್‌ ಕೇರ್‌ ಪ್ರಾಡಕ್ಟ್‌ನಲ್ಲಿಯೂ ಇಂತಹ ರಾಸಾಯನಿಕಗಳು ಕಂಡುಬರುತ್ತದೆ. ವಿಶೇಷವಾಗಿ ಈ ರೀತಿಯ ರಾಸಾಯನಿಕಗಳು ಮತ್ತು ಟಾಕ್ಸಿನ್‌ಗಳಿಗೆ ಒಡ್ಡಿಕೊಳ್ಳುವುದು ಕ್ಯಾನ್ಸರ್ ಸಂಭಾವ್ಯತೆ ಹೆಚ್ಚಿಸಬಹುದು ಮತ್ತು ಹಾನಿಕಾರಕವೂ ಹೌದು. ಕೂದಲಿನ ಆರೈಕೆಗಾಗಿ ಲಭ್ಯವಿರುವ ಉತ್ಪನ್ನಗಳ ಪ್ರಕಾರಗಳು ಮತ್ತು ಅವು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ತಿಳಿದಿರುವುದು ಅವಶ್ಯಕ. ಸೌಂದರ್ಯವನ್ನು ಹೆಚ್ಚಿಸಲು ಈ ರೀತಿಯ ಪ್ರಾಡಕ್ಟ್‌ಗಳನ್ನು ಬಳಸುವುದು ಅಲ್ಪಾವಧಿಗೆ ತೃಪ್ತಿ ನೀಡಿದರೂ, ಅದರಿಂದ ದೀರ್ಘಾವಧಿಯ ದುಷ್ಪರಿಣಾಮವನ್ನು ಎದುರಿಸಬಹುದು. ಉತ್ತಮ ಆರೋಗ್ಯಕರ ಆಹಾರ ಸೇವನೆಯೊಂದಿಗೆ ಉತ್ತಮ ಜೀವನಶೈಲಿಯನ್ನು ರೂಪಿಸಿಕೊಂಡರೆ ಈ ರೀತಿಯ ಪ್ರಾಡಕ್ಟ್‌ಗಳನ್ನು ಬಳಸುವ ಸಂದರ್ಭವೇ ಬರದು.

English summary

These ingredients in your hair care products can increase cancer risk in kannada

Study says If our hair care products have these ingredients may increase the risk of cancer
Story first published: Sunday, December 25, 2022, 18:30 [IST]
X
Desktop Bottom Promotion