For Quick Alerts
ALLOW NOTIFICATIONS  
For Daily Alerts

ನೀವು ತಲೆ ಬಾಚಲು ಪ್ಲಾಸ್ಟಿಕ್‌ ಬಾಚಣಿಕೆ ಬಳಸುತ್ತಿದ್ದೀರಾ? ಹಾಗಾದರೆ ಈ ಲೇಖನ ನಿಮಗಾಗಿ...

|

ನಿಮ್ಮ ಕೂದಲಿನ ಆರೋಗ್ಯಕ್ಕೆ ಬಾಚಣಿಕೆ ಕೂಡ ಅಷ್ಟೇ ಮುಖ್ಯ ಎಂಬುವುದು ಗೊತ್ತೇ? ಹೌದು ನೀವು ನಿಮ್ಮ ಕೂದಲನ್ನು ಬಾಚಲು ಯಾವ ಬಗೆಯ ಬಾಚಣಿಕೆ ಬಳಸುತ್ತೀರಿ ಎಂಬುವುದು ಕೂಡ ಮುಖ್ಯವಾಗುತ್ತದೆ, ಕೆಲವೊಂದು ಬಾಚಣಿಕೆಯಲ್ಲಿ ಬಾಚಿದಾಗ ತಲೆ ಬುಡಕ್ಕೆ ನೋವಾಗುತ್ತದೆ, ಸ್ವಲ್ಪ ಉದ್ದ ಕೂದಲು ಉದ್ದರೆ ಬಾಚಣಿಕೆ ಸಿಕ್ಕಿ ಹಾಕಿಕೊಳ್ಳುತ್ತದೆ. ಇನ್ನು ಕೆಲವು ಬಾಚಣಿಕೆ ಬಳಸಿದರೆ ತಲೆ ಬುಡಕ್ಕೆ ತಾಗುವುದೇ ಇಲ್ಲ. ರೀತಿಯ ಯಾವ ಬಾಚಣಿಕೆ ಬಳಸಬೇಡಿ.

Reasons why wooden comb best for your hair in kannada

ನಿಮ್ಮ ಕೂದಲಿನ ದಪ್ಪ ಹಾಗೂ ಗುಣಕ್ಕೆ ಹೊಂದುವ ಬಾಚಣಿಕೆ ಬಳಸಿ, ಅದರಲ್ಲೂ ಈಗ ಮರದ ಬಾಚಣಿಕೆ ತುಂಬಾನೇ ಟ್ರೆಂಡ್‌ ಆಗಿದೆ. ನೀವು ಪ್ಲಾಸ್ಟಿಕ್‌ ಬಾಚಣಿಕೆಗಿಂತ ಮರದ ಬಾಚಣಿಕೆ ಬಳಸುವುದು ಒಳ್ಳೆಯದೇ, ಏಕೆ? ನೋಡೋಣ ಬನ್ನಿ:

ಏಕೆ ಮರದ ಬಾಚಣಿಕೆ ಒಳ್ಳೆಯದು?

ಇದರ ಹಿಂದಿರುವ ವೈಜ್ಞಾನಿಕ ದೃಷ್ಟಿಕೋನ ನೋಡುವುದಾದರೆ ನಿಮ್ಮ ಕೂದಲಿನಲ್ಲಿನೆಗೆಟಿವ್‌ ಚಾರ್ಜ್ ಇರುತ್ತದೆ, ಪ್ಲಾಸ್ಟಿಕ್‌ ಅಥವಾ ಮೆಟಲ್‌ ಬಾಚಣಿಕೆಯಲ್ಲಿ ಪಾಸಿಟಿವ್‌ ಚಾರ್ಜ್ ಇರುತ್ತದೆ, ಆದ್ದರಿಂದಲೇ ನೀವು ಪ್ಲಾಸ್ಟಿಕ್‌ ಬಾಚಣಿಕೆ ಕೂದಲ ಬಳಿ ತೆಗೆದುಕೊಂಡು ಹೋದಾಗ ಅವು ಆಕರ್ಷಿಸುವುದು.
ಅದೇ ಮರದ ಬಾಚಣಿಕೆಯಲ್ಲೂ ನೆಗೆಟಿವ್ ಚಾರ್ಜ್‌ ಇರುವುದರಿಂದ ಇದನ್ನು ಬಳಸಿದಾಗ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು, ಅಲ್ಲದೆ ಪರಿಸರಕ್ಕೂ ಒಳ್ಳೆಯದು.

ಮರದ ಬಾಚಣಿಕೆ ಪ್ರಯೋಜನಗಳು

ಇದರಲ್ಲಿ ನೆಗೆಟಿವ್‌ ಐಯಾನ್‌ಗಳಿವೆ

ಈ ಐಯಾನ್‌ಗಳು ಕೂದಲಿನ ರಕ್ಷಣೆ ಮಾಡುವುದು ಮಾತ್ರವ್ಲ, ಕೂದಲಿನ ಮಾಯಿಶ್ಚರೈಸರ್‌ ರಕ್ಷಣೆ ಮಾಡುತ್ತದೆ, ಅಲ್ಲದೆ ಕೂದಲು ಗಂಟಾಗುವುದನ್ನು ತಡೆಯುತ್ತದೆ.

ತಲೆ ಬುಡದ ಆರೈಕೆ ಮಾಡುತ್ತದೆ

ನೀವು ಮರದ ಬಾಚಣಿಕೆ ಬಳಸಿದಾಗ ತಲೆ ಬುಡಕ್ಕೆ ಚೆನ್ನಾಗಿ ತಾಗುವುದರಿಂದ ಆ ಭಾಗದಲ್ಲಿ ರಕ್ತ ಸಂಚಾರ ಚೆನ್ನಾಗಿ ನಡೆಯುತ್ತದೆ, ಇದರಿಂದ ಕೂದಲಿನ ಆರೋಗ್ಯ ಹೆಚ್ಚುತ್ತದೆ.

ಮರದ ಬಾಚಣಿಕೆಯಲ್ಲಿ ಕೂದಲು ಗಂಟು-ಗಂಟಾಗಲ್ಲ

ನಿಮ್ಮದು ಉದ್ದ ಕೂದಲು ಅದರಲ್ಲೂ ಗುಂಗುರು ಕೂದಲಾದರೆ ಕೂದಲು ತುಂಬಾ ಗಂಟು-ಗಂಟಾಗುವುದು, ನೀವು ಮರದ ಬಾಚಣಿಕೆ ಬಳಸಿ ನೋಡಿ, ಆ ಸಮಸ್ಯೆ ತಡೆಗಟ್ಟುವುದು.

ಇವುಗಳನ್ನು ಬಳುವುದು ಆರೋಗ್ಯಕರ

ಪ್ಲಾಸ್ಟಿಕ್‌ ಬಾಚಣಿಕೆಗಿಂತ ಮರದ ಬಾಚಣಿಕೆ ತುಂಬಾನೇ ಒಳ್ಳೆಯದು, ಅಲ್ಲದೆ ಈ ಬಗೆಯ ಬಾಚಣಿಕೆ ಬಳಸುವುದರಿಂದ ನೀವು ಪರಿಸರಕ್ಕೆ ಪ್ಲಾಸ್ಟಿಕ್‌ ಸೇರುವುದನ್ನು ತಪ್ಪಿಸಬಹುದು.

English summary

Reasons why wooden comb best for your hair in kannada

Wooden Comb: Why wooden comb is better than plastic comb read on....
Story first published: Friday, November 25, 2022, 10:42 [IST]
X
Desktop Bottom Promotion