For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಹೀಗೆ ಮಾಡಿದರೆ ಕೂದಲು ಉದುರುವುದು

Monsoon season is here and so are all the hair problems that it brings. Monsoon season is harsh on the hair, you must know. All that humidity in the hair can make your skin frizzy and damaged.

|

ಮಳೆಗಾಲ ಶುರುವಾಗಿದೆ, ಈ ಸಮಯದಲ್ಲಿ ಕೂದಲಿಗೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗಿಯೇ ಕಂಡು ಬರುತ್ತದೆ, ಕೂದಲು ಒದ್ದೆಯಾಗುವುದರಿಂದ ಸಿಕ್ಕಾಗುವುದು, ಕೂದಲಿಗೆ ಹಾನಿತಾಗುವ ಸಾಧ್ಯತೆ ಹೆಚ್ಚು.

ಮಳೆಗಾಲದಲ್ಲಿ ಈ ರೀತಿ ಮಾಡಿದರೆ ಕೂದಲು ಉದುರುವುದು | Boldsky Kannada
Monsoon Hair Care Mistakes That Makes Hair Fall

ಇನ್ನು ಕೂದಲು ಸರಿಯಾಗಿ ಒಣಗದಿದ್ದರೆ ಕೂದಲು ದುರ್ವಾಸನೆ ಬೀರುವುದು ಅಲ್ಲದೆ ತಲೆಹೊಟ್ಟಿನ ಸಮಸ್ಯೆ ಹೆಚ್ಚಾಗುವುದು. ಕೆಲವೊಂದು ಸಣ್ಣ ಪುಟ್ಟ ಸಮಸ್ಯೆಗಳಿಂದಾಗಿ ಈ ರೀತಿ ಉಂಟಾಗಿರುತ್ತದೆ. ಇಲ್ಲಿ ನಾವು ಮಳೆಗಾಲದಲ್ಲಿ ಸಾಮಾನ್ಯವಾಗಿ ಮಾಡುವ ತಪ್ಪುಗಳ ಬಗ್ಗೆ ಹೇಳಿದ್ದೇವೆ, ಈ ತಪ್ಪುಗಳಿಂದ ಕೂದಲು ಉದುರುವುದು, ಆದ್ದರಿಂದ ಕೂದಲಿನ ಆರೈಕೆಯಲ್ಲಿ ಈ ತಪ್ಪುಗಳನ್ನು ಮಾಡದಿರಿ:

ಒದ್ದೆಯಾದ ಕೂದಲನ್ನು ತಕ್ಷಣವೇ ತೊಳೆಯದಿರುವುದು

ಒದ್ದೆಯಾದ ಕೂದಲನ್ನು ತಕ್ಷಣವೇ ತೊಳೆಯದಿರುವುದು

ಮಳೆ ನೀರು ತಲೆಗೆ ಬಿದ್ದರೆ ಕೂದಲಿಗೆ ಅಷ್ಟು ಒಳ್ಳೆಯದಲ್ಲ, ಇದು ತಲೆ ಬುಡ ತುರಿಸುವಂತೆ ಮಾಡುವುದು. ಮಳೆಯಲ್ಲಿ ನೆನೆದರೆ ಕೂಡಲೇ ತಲೆಯನ್ನು ತೊಳೆದು ಒಣಗಿಸಿ, ಇಲ್ಲದಿದ್ದರೆ ಅನೇಕ ಕೂದಲಿನ ಸಮಸ್ಯೆ ಉಂಟಾಗುವುದು ಹಾಗೂ ತಲೆ ತುರಿಕೆ, ತಲೆ ಹೊಟ್ಟು ಸಮಸ್ಯೆ ಬರುವುದು.

ದಿನಾ ತಲೆ ತೊಳೆಯುವುದು

ದಿನಾ ತಲೆ ತೊಳೆಯುವುದು

ಮಳೆಗಾಲದಲ್ಲಿ ದಿನಾ ಕೂದಲನ್ನು ತೊಳೆಯಬೇಡಿ. ದಿನಾ ತಲೆ ತೊಳೆಯುವುದರಿಂದ ಕೂದಲಿನ ಬುಡ ಹಾಳಾಗುವುದು, ಕೂದಲು ಒರಟಾಗುವುದು ಅಲ್ಲದೆ ಕೂದಲು ಉದುರುವ ಸಮಸ್ಯೆ ಕಂಡು ಬರುವುದು. ವಾರದಲ್ಲಿ 2-3 ಬಾರಿ ತಲೆ ತೊಳೆದರೆ ಸಾಕು.

ಕೂದಲಿಗೆ ಹೀಟ್- ಸ್ಟೈಲಿಂಗ್ ವಸ್ತುಗಳನ್ನು ಬಳಸುವುದು

ಕೂದಲಿಗೆ ಹೀಟ್- ಸ್ಟೈಲಿಂಗ್ ವಸ್ತುಗಳನ್ನು ಬಳಸುವುದು

ಮಳೆಗಾಲದಲ್ಲಿ ತಲೆ ತೊಳೆದರೆ ಕೂದಲು ಸರಿಯಾಗಿ ಒಣಗುವುದು ಕಷ್ಟ, ಆದರೆ ಕೂದಲನ್ನು ಯಾವುದೇ ಕಾರಣಕ್ಕೆ ಬಿಸಿ ಮಾಡಿ ಒಣಗಿಸುವ ವಸ್ತುಗಳನ್ನು ಬಳಸಬೇಡಿ. ಇವುಗಳನ್ನು ಪ್ರತಿನಿತ್ಯ ಬಳಸುವುದರಿಂದ ಕೂದಲು ಹಾಳಾಗುವುದು. ಇನ್ನು ಹೇರ್‌ ಸ್ಟ್ರೈಟ್ನಿಂಗ್ ಮಾಡುವುದು, ಫ್ಯಾನ್ ಹಾಕಿ ಕೂದಲು ಒಣಗಿಸುವುದು ಇವೆಲ್ಲಾ ಮಾಡಬೇಡಿ.

ಕೂದಲಿಗೆ ಬಳಸುವ ಶ್ಯಾಂಪೂ, ಕಂಡೀಷನರ್ ಬದಲಾಯಿಸುವುದು

ಕೂದಲಿಗೆ ಬಳಸುವ ಶ್ಯಾಂಪೂ, ಕಂಡೀಷನರ್ ಬದಲಾಯಿಸುವುದು

ನೀವು ನಿಮ್ಮ ಕೂದಲಿಗೆ ಬಳಸುವ ಶ್ಯಾಂಪೂ, ಕಂಡೀಷನರ್‌ ಬದಲಾಯಿಸುವ ಆಲೋಚನೆ ಇದ್ದರೆ ಅದಕ್ಕೆ ಮಳೆಗಾಲ ಸೂಕ್ತವಲ್ಲ, ನೀವು ಏನು ಮಾಡುತ್ತಿದ್ದೀರಾ ಅದನ್ನೇ ಮುಂದುವರೆಸಿ. ಕೆಲವರು ಮಳೆಗಾಲದಲ್ಲಿ ಕೂದಲಿಗೆ ಬಳಸುವ ಸೆರಮ್, ಎಣ್ಣೆ, ಶ್ಯಾಂಪೂ, ಕಂಡೀಷನರ್ ಎಲ್ಲಾ ಬದಲಾಯಿಸಿ, ನಂತರ ಪಶ್ಚಾತಾಪ ಪಡುತ್ತಾರೆ. ಹಾಗೆ ಮಾಡಲು ಹೋಗಬೇಡಿ. ನೀವು ಬಳಸುವ ಹೊಸ ವಸ್ತುಗಳು ನಿಮಗೆ ಸೂಟ್‌ ಆಗುತ್ತದೆಯೇ, ಇಲ್ಲವೇ ಎಂದು ತಿಳಿಯಲು ಮಳೆಗಾಲದಲ್ಲಿ ಪ್ರಯೋಜ ಸೂಕ್ತವಲ್ಲ.

ಕೂದಲಿಗೆ ರಾತ್ರಿ ಎಣ್ಣೆ ಹಚ್ಚಿ ಬಿಡುವುದು

ಕೂದಲಿಗೆ ರಾತ್ರಿ ಎಣ್ಣೆ ಹಚ್ಚಿ ಬಿಡುವುದು

ಕೂದಲಿಗೆ ಎಣ್ಣೆ ಒಳ್ಳೆಯದು ಎಂದು ತುಂಬಾ ಹೊತ್ತು ಹಚ್ಚಿ ಬಿಡುವುದು ಒಳ್ಳೆಯದಲ್ಲ. ಏಕೆಂದರೆ ರಾತ್ರಿ ಪೂರ್ತಿ ಕೂದಲಿಗೆ ಎಣ್ಣೆ ಹಚ್ಚಿ ಬಿಡುವುದರಿಂದ ಕೂದಲಿನ ಬುಡಗಳು ದುರ್ಬಲವಾಗುತ್ತದೆ ಇದರಿಂದ ಕೂದಲು ಉದುರುವ ಸಮಸ್ಯೆ ಕಂಡು ಬರುವುದು.

ಕಂಡೀಷನರ್‌ ಬಳಸದೆ ಇರುವುದು

ಕಂಡೀಷನರ್‌ ಬಳಸದೆ ಇರುವುದು

ಮಳೆಗಾಲದಲ್ಲಿ ಕೂದಲು ಒರಟಾಗುವುದನ್ನು ತಡೆಯಬೇಕೆಂದರೆ ಕಂಡೀಷನರ್ ಬಳಸಲೇಬೇಕು. ಆದ್ದರಿಂದ ಕೂದಲು ತೊಳೆಯಲು ಕಂಡೀಷನರ್ ಬಳಸಲು ಮಿಸ್‌ ಮಾಡದಿರಿ. ಮಳೆಯಲ್ಲಿ ಒದ್ದೆಯಾದ ಕೂದಲಿನ ಆರೈಕೆಯಲ್ಲಿ ಕಂಡೀಷನರ್ ಸಹಾಯಕಾರಿ.

 ಕೂದಲನ್ನು ಫ್ರೀ ಹೇರ್ ಆಗಿ ಬಿಡುವುದು

ಕೂದಲನ್ನು ಫ್ರೀ ಹೇರ್ ಆಗಿ ಬಿಡುವುದು

ಮಳೆಗಾಲದಲ್ಲಿ ಕೂದಲನ್ನು ಫ್ರೀ ಬಿಡುವುದು ಉತ್ತಮವಲ್ಲ, ಏಕೆಂದರೆ ಕೂದಲು ಬೇಗನೆ ಒದ್ದೆಯಾಗಿ ಹಾಳಾಗುವುದು. ಮಳೆಗಾಲದಲ್ಲಿ ನೀವು ತುರುಬು, ಜಡೆಯಲ್ಲೊ ಹೇರ್‌ ಸ್ಟೈಲ್ ಮಾಡುವುದೇ ಸೂಕ್ತ. ಆಕರ್ಷಕ ವಿನ್ಯಾಸದ ತುರುಬು, ಜಡೆ ಹಾಕಿ ಸಕತ್‌ ಸ್ಟೈಲಿಷ್ ಆಗಿ ಕಾಣಿ.

Read more about: hair monsoon
English summary

Monsoon Hair Care Mistakes That Makes Hair Fall

Monsoon season is here and so are all the hair problems that it brings. Monsoon season is harsh on the hair, you must know. All that humidity in the hair can make your skin frizzy and damaged.
Story first published: Saturday, June 13, 2020, 16:35 [IST]
X
Desktop Bottom Promotion