Just In
- 46 min ago
ಆರೋಗ್ಯ, ಸಂಪತ್ತು ವೃದ್ಧಿಗಾಗಿ ನಿಮ್ಮ ಸಹೋದರನ ರಾಶಿಗೆ ತಕ್ಕ ರಾಖಿ ಕಟ್ಟಿ
- 3 hrs ago
ನೀವು ಕೂದಲನ್ನ ಪ್ರೀತಿಸುವವರಾಗಿದ್ರೆ, ಈ ತಪ್ಪುಗಳನ್ನು ಮಾಡಬೇಡಿ
- 7 hrs ago
Today Rashi Bhavishya: ಮಂಗಳವಾರದ ದಿನ ಭವಿಷ್ಯ: ಕರ್ಕ, ತುಲಾ, ಕುಂಭ ರಾಶಿಯವರು ಆರೋಗ್ಯದ ಬಗ್ಗೆ ಜಾಗರೂಕರಾ
- 15 hrs ago
Raksha Bandhan Horoscope 2022: ರಕ್ಷಾ ಬಂಧನದ ದಿನ ಯಾವ ರಾಶಿಗೆ ಅದೃಷ್ಟವಿದೆ, ಯಾರೆಲ್ಲಾ ಎಚ್ಚರಿಕೆಯಿಂದಿರಬೇಕು?
Don't Miss
- News
ಇಂಗ್ಲೆಂಡ್ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್ ಗೆಲುವಿಗಾಗಿ ಹೋಮ-ಹವನ
- Education
CLAT Exam 2023 Registration : ಅರ್ಜಿ ಸಲ್ಲಿಕೆ, ಪ್ರಮುಖ ದಿನಾಂಕಗಳು, ಪರೀಕ್ಷಾ ಮಾದರಿ ಮತ್ತು ಅರ್ಹತೆಗಳ ವಿವರ ಇಲ್ಲಿವೆ
- Automobiles
ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ 2022ರ ಆಡಿ ಕ್ಯೂ3 ಎಸ್ಯುವಿ
- Technology
ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ 'ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 4' ಫೋನ್!
- Sports
ಏಷ್ಯಾಕಪ್ 2022: ಟೀಂ ಇಂಡಿಯಾ ಸ್ಕ್ವಾಡ್ ಆಯ್ಕೆ, ಆಯ್ಕೆ ಸಮಿತಿಯ ಐದು ಎಡವಟ್ಟು!
- Finance
ಪ್ರತಿದಿನ 238 ರೂ. ಹೂಡಿಕೆ ಮಾಡಿ 54 ಲಕ್ಷ ರೂ. ಪಡೆಯುವುದು ಹೇಗೆ?
- Travel
ಇತಿಹಾಸ ಮತ್ತು ಪ್ರಕೃತಿಯ ಮಿಶ್ರಣ ನಂದಿ ಬೆಟ್ಟಗಳು
- Movies
ದರ್ಶನ್ ಬೆದರಿಕೆ ಹಾಕಿಲ್ಲ, ಅದು ನಕಲಿ ಆಡಿಯೋ: ನಟ ಧ್ರುವನ್
ಮಳೆಯಲ್ಲಿ ನೆನೆಯೋದು ತ್ವಚೆ ಹಾಗೂ ಕೂದಲಿಗೆ ಹಾನಿಕಾರಕವೇ?
ಮಳೆಯಲ್ಲಿ ನೆನೆಯೋದಂದ್ರೆ ಹೆಚ್ಚಿನವರಿಗೆ ಇಷ್ಟ. ಜಿಟಿಜಿಟಿ ಮಳೆಯಲ್ಲಿ ನೆನೆದು, ಆಡುವ ಖುಷಿಯೇ ಬೇರೆ. ಬಿಸಿಲ ಬೇಗೆಯಿಂದ ಬಳಲಿರುವ ಮನಸ್ಸು ಮಳೆಯ ತಂಪಿಗೆ ಸಹಜವಾಗಿಯೇ ಖುಷಿ ಅನುಭವಿಸುತ್ತದೆ. ಆದ್ರೆ ಮಳೆಯಲ್ಲಿ ನೆನೆಯುವುದು ನಿಮ್ಮ ಚರ್ಮ ಹಾಗೂ ಕೂದಲಿಗೆ ಹಾನಿಕಾರಕವೇ? ಇದರಿಂದ ಏನಾದರೂ ಸಮಸ್ಯೆಗಳು ಉಂಟಾಗುವುದೇ ಎಂದು ಎಂದಾದರೂ ಯೋಚಿಸಿದ್ದೀರಾ? ಹಾಗಾದ್ರೆ ಬನ್ನಿ ಈ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.
ಮಳೆಯಲ್ಲಿ ನೆನೆಯುವುದು ತ್ವಚೆ ಹಾಗೂ ಕೂದಲಿಗೆ ಹಾನಿಕಾರಕವೇ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮಳೆ ನೀರು ತ್ವಚೆ ಹಾಗೂ ಕೂದಲಿಗೆ ಪರಿಣಾಮ ಬೀರಬಹದು ಎನ್ನಲು ಕಾರಣವೇನು?
ಮಳೆಯಿಂದ ನಮಗೆ ನಿರಾಳತೆ ಸಿಗುವುದು ಸಹಜ. ಅದರೆ ನಾವಿಂದು ಬದುಕುತ್ತಿರುವುದು ಮಾಲಿನ್ಯದ ಜಗತ್ತಿನಲ್ಲಿ.. ವಾಹನಗಳಿಂದ ಬರುವ ಹೊಗೆ ಮತ್ತು ಕೈಗಾರಿಕಾ ಪ್ರದೇಶಗಳ ಕಾರಣದಿಂದಾಗಿ ಹೈಡ್ರೋಜನ್ ಸಲ್ಫೈಡ್ (H2S) ನಂತಹ ವಿಷಕಾರಿ ರಾಸಾಯನಿಕಗಳು ತುಂಬಿಹೋಗಿವೆ. ಆದ್ದರಿಂದ, ಮಳೆಹನಿಗಳು ಸಹಜವಾಗಿಯೇ ಈ ಅಪಾಯಕಾರಿ ಪದಾರ್ಥಗಳನ್ನು ಒಳಗೊಳ್ಳುತ್ತದೆ. ಇದು ಮಳೆನೀರನ್ನು ಆಮ್ಲೀಯ, ಕೊಳಕು ಮತ್ತು ಕಲುಷಿತವಾಗಿಸುವುದು. ಇದು ಕೆಟ್ಟದ್ದಾಗಿರುವುದರಿಂದ ಮಳೆಯಲ್ಲಿ ನೆನೆಯುವ ಮುನ್ನ ಯೋಚಿಸಬೇಕು.

ಮಳೆಯಲ್ಲಿ ನೆನೆಯುವುದು ತ್ವಚೆ ಹಾಗೂ ಕೂದಲಿಗೆ ಹಾನಿಕಾರಕವೇ?
1. ನೀವು ಸೂಕ್ಷ್ಮ ಚರ್ಮವನ್ನು ಹೊಂದಿದ್ದರೆ, ಮಳೆಗಾಲದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಏಕೆಂದರೆ ಮಳೆಯ ನೀರು ನಿಮ್ಮ ಚರ್ಮವನ್ನು ಹಾನಿಗೊಳಿಸುತ್ತದೆ.
2. ಮೊದಲ ಮಳೆಯಲ್ಲಿ ನೆನೆಯುವುದರಿಂದ ಅಥವಾ ಸ್ನಾನ ಮಾಡುವುದರಿಂದ, ತಲೆಹೊಟ್ಟು, ಬೆವರು ಸಾಲೆ ಅಥವಾ ಮೊಡವೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ ಎಂಬ ತಪ್ಪು ಕಲ್ಪನೆಯಲ್ಲಿ ಹಲವರಿದ್ದಾರೆ. ಆದರೆ, ವಾಸ್ತವವಾಗಿ ನೋಡುವುದಾದರೆ, ಈ ನೀರಿನಲ್ಲಿ ಹೆಚ್ಚಿನ ಪ್ರಮಾಣದ ಮಾಲಿನ್ಯಕಾರಕಗಳು ಇರುವುದರಿಂದ, ಇದು ಹೆಚ್ಚು ತೀವ್ರವಾದ ಮೊಡವೆಗಳು, ಚರ್ಮದ ಸೋಂಕುಗಳು ಮತ್ತು ಚರ್ಮ ಸಮಸ್ಯೆಗಳು ಉಂಟಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
3. ಮಳೆಯಲ್ಲಿ ಒದ್ದೆಯಾದ ನಂತರ ನಿಮ್ಮ ಚರ್ಮವು ಹೆಚ್ಚು ತುರಿಕೆ ಅನುಭವಿಸಬಹುದು ಮತ್ತು ನಿಮ್ಮ ಕೂದಲು ಜಿಗುಟಾಗಿ, ಒರಟಾಗಬಹುದು.
4. ಮಳೆ ನೀರಿನಲ್ಲಿರುವ ಹೆಚ್ಚಿನ pH ಮಟ್ಟಗಳು ಚರ್ಮದ ಊತ ಹಾಗೂ ಚರ್ಮದ ಹೊರಪೊರೆಯ ಹಾನಿಯನ್ನು ಉಂಟುಮಾಡಬಹುದು. ಜೊತೆಗೆ ಇದು ಒಣ ಕೂದಲಿಗೆ ಕಾರಣವಾಗಬಹುದು.
5. ಹೆಚ್ಚಿದ ತೇವಾಂಶದಿಂದಾಗಿ ಕೂದಲಿನಲ್ಲಿ ಹೇನಿನಂತಹ ಪರೋಪಕಾರಿ ಜೀವಿಗಳ ಬೆಳವಣಿಗೆ ಹೆಚ್ಚಾಗುತ್ತದೆ.
ಹಾಗಿದ್ದಲ್ಲಿ ಮಳೆನೀರಿನಲ್ಲಿ ನೆನೆಯಬಾರದೇ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಒಂದು ವೇಳೆ ನಿಮಗೆ ಮಳೆಯಲ್ಲಿ ನೆನಯುವ ಅನುಭವ ಕಳೆದುಕೊಳ್ಳಲು ಇಷ್ಟವಿಲ್ಲದಲ್ಲಿ, ಮಳೆಯಲ್ಲಿ ನೆನಯುವಾಗ ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.

ಮಳೆಯಲ್ಲಿ ನೆನೆಯುವವರು ತಮ್ಮ ಸೌಂದರ್ಯ ಆರೈಕೆಗಾಗಿ ಈ ವಿಚಾರಗಳನ್ನು ಗಮನದಲ್ಲಿರಿಸಿ
ಮಳೆಯಲ್ಲಿ ನೆನೆಯಲು ಅಥವಾ ಸ್ನಾನ ಮಾಡಲು ಬಯಸಿದರೆ, ನೀವು ಮನೆಗೆ ಬಂದ ನಂತರ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಲು ಮರೆಯದಿರಿ.
ನಿಮ್ಮ ಚರ್ಮದ ಮೇಲ್ಮೈಯಲ್ಲಿರುವ ಕಲ್ಮಶಗಳನ್ನು ತೆಗೆದುಹಾಕಲು ಸೌಮ್ಯವಾದ ಫೇಸ್ ವಾಶ್ ಬಳಸಿ.
ಶಾಂಪೂ ನಂತರ ಕಂಡೀಷನರ್ ಬಳಸಲು ಮರೆಯಬೇಡಿ. ಇದು ಕೂದಲಿನ ತೇವಾಂಶವನ್ನು ಸಂರಕ್ಷಿಸುತ್ತದೆ ಮತ್ತು ಅದನ್ನು ನಯವಾಗಿ, ಮೃದುವಾಗಿ ಮಾಡುತ್ತದೆ.
ಸೋಂಕುಗಳನ್ನು ತಪ್ಪಿಸಲು ಬಟ್ಟೆಗಳನ್ನು ಧರಿಸುವ ಮೊದಲು ನಿಮ್ಮ ದೇಹವನ್ನು ಸಂಪೂರ್ಣವಾಗಿ ಒರೆಸಿಕೊಳ್ಳಿ.